For Quick Alerts
ALLOW NOTIFICATIONS  
For Daily Alerts

ಆ ದಿನದ ಗುಟ್ಟು, ಎಂದೆಂದಿಗೂ ಗುಟ್ಟಾಗಿಯೇ ಇರಲಿ!

By Deepu
|

ಸಾಮಾನ್ಯವಾಗಿ, ಪ್ರತಿಯೊಬ್ಬರ ಮನೆಯಲ್ಲೂ ಸಂಗಾತಿಗಳ ನಡುವೆ ಯಾವುದೇ ರಹಸ್ಯಗಳು ಇರಬಾರದು ಎಂಬ ಅಲಿಖಿತ ನಿಯಮವೊಂದು ಜಾರಿಯಲ್ಲಿರುತ್ತದೆ. ಆದರೂ ಅವರ ನಡುವೆ ಹೇಳಲಾರದ ರಹಸ್ಯಗಳು ಸಹ ಚಾಲ್ತಿಯಲ್ಲಿರುತ್ತವೆ. ಅಸಲಿಗೆ ಸಣ್ಣ - ಪುಟ್ಟ ಮತ್ತು ದೊಡ್ಡ ರಹಸ್ಯಗಳು ಸಂಸಾರದ ಹಿತ ದೃಷ್ಟಿಯಿಂದ ರಹಸ್ಯವಾಗಿಯೇ ಇರುವುದು ಉತ್ತಮ ಎಂಬ ಅಭಿಮತ ಹಲವರಲ್ಲಿದೆ.

ಅದು ನಿಜ ನಮ್ಮಲ್ಲಿಯೇ ಉಳಿಯಬೇಕಾದ ಕೆಲವೊಂದು ರಹಸ್ಯಗಳು ಇರುತ್ತವೆ. ಅವುಗಳು ಉಳಿದವರಿಗೆ ಗೊತ್ತಾಗದೆ ಇರುವುದು ಒಳ್ಳೆಯದು. ಏಕೆಂದರೆ ಪ್ರತಿಯೊಂದು ವಿಷಯವನ್ನು ಎಲ್ಲರ ಜೊತೆಗೆ ಹಂಚಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಇರಿಸಿಕೊಳ್ಳುವುದು ಬಹುಮುಖ್ಯ. ಗಂಡ-ಹೆಂಡತಿಯ ನಡುವಿನ ಗುಟ್ಟು ಗುಟ್ಟಾಗಿಯೇ ಇರಲಿ!

ಹಾಗೆಂದು ಸಂಗಾತಿಯೊಂದಿಗೆ ಸಂಬಂಧವನ್ನು ಹಾಳು ಮಾಡುವಂತಹ ಕೆಲವೊಂದು ರಹಸ್ಯಗಳನ್ನು ಹೇಳಿಕೊಳ್ಳುವುದು ಎಷ್ಟು ಸೂಕ್ತ. ಅದು ನಿಮ್ಮ ಹೆಂಡತಿ ನಿಮ್ಮ ರಹಸ್ಯಗಳನ್ನು ಅಥವಾ ಗತ ಇತಿಹಾಸವನ್ನು ತಿಳಿದುಕೊಂಡು, ಅದಕ್ಕೆ ಪ್ರಬುದ್ಧತೆಯಿಂದ ಪ್ರತಿಕ್ರಿಯಿಸಿದರೆ ಪರವಾಗಿಲ್ಲ, ಅದನ್ನು ಬಿಟ್ಟು ಆಕೆ ಅದಕ್ಕೆ ಒಬ್ಬ ಸಾಮಾನ್ಯ ಮಹಿಳೆಯಂತೆ ಸ್ಪಂದಿಸಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ರಹಸ್ಯಗಳನ್ನು ತಿಳಿಸುವ ಮುನ್ನ ಎಚ್ಚರಿಕೆಯಿಂದಿರಿ. ಅಷ್ಟಕ್ಕೂ ನಾವು ಎಂತಹ ರಹಸ್ಯಗಳನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ ಒಮ್ಮೆ ನೋಡೋಣ ಬನ್ನಿ...

ನಿಮ್ಮ ಪ್ರಥಮ ಚುಂಬನ

ನಿಮ್ಮ ಪ್ರಥಮ ಚುಂಬನ

ಬಹುಶಃ ಹಲವರ ಜೀವನದಲ್ಲಿ ಆ ಪ್ರಥಮ ಚುಂಬನವು ತಾರುಣ್ಯದ ಅವಧಿಯಲ್ಲಿ, ಅದು ಯಾವುದೋ ರೂಪದಲ್ಲಿ ಬಂದಿರುತ್ತದೆ. ಕೆಲವರು ಇದನ್ನು ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಇದನ್ನು ಹೇಳಿಕೊಳ್ಳುವುದಿಲ್ಲ. ಈ ರಹಸ್ಯವು ಅವರೊಳಗೆ ಒಂದು ರೋಮಾಂಚನವಾಗಿ ಉಳಿದುಕೊಂಡು ಬಿಟ್ಟಿರುತ್ತದೆ.

ಆ ದಿನಗಳು.....

ಆ ದಿನಗಳು.....

ಆ ದಿನಗಳಲ್ಲಿ ತಾವು ಯಾರ ಯಾರ ಜೊತೆಗೆ ಸುತ್ತಾಡಿದೆವು ಎಂಬ ಅಂಶವನ್ನು ಯಾರೂ ತಮ್ಮ ಸಂಗಾತಿಗೆ ಹೇಳಿಕೊಳ್ಳುವುದಿಲ್ಲ. ಇದು ನಿಜಕ್ಕೂ ಸಂಬಂಧ ಮುರಿಯುವ ಸಂಗತಿ. ಓಡಾಡಿದರು ಎಂದ ಮಾತ್ರಕ್ಕೆ ತಪ್ಪಾಗಿ ಆ ಸಂಬಂಧವನ್ನು ದುರುಪಯೋಗಪಡಿಸಿಕೊಂಡರು ಎಂದರ್ಥವಲ್ಲ. ಆದರೆ ತಾರುಣ್ಯದ ಆ ದಿನಗಳ ಕುರಿತಾಗಿ ಕೆಲವಾದರು ರಹಸ್ಯಗಳು ಇದ್ದೇ ಇರುತ್ತವೆ. ಅದನ್ನು ತಮ್ಮ ಸಂಗಾತಿಯಿಂದ ಬಹುತೇಕ ಜನ ಮುಚ್ಚಿಡುತ್ತಾರೆ.

ಕೆಲವೊಂದು ಚಟಗಳು

ಕೆಲವೊಂದು ಚಟಗಳು

ಮನುಷ್ಯ ಮೊದಲು ಚಟಗಳನ್ನು ಮಾಡಿಕೊಳ್ಳುತ್ತಾನೆ. ಆಮೇಲೆ ಚಟಗಳು ಅವನನ್ನು ನಿಯಂತ್ರಿಸುತ್ತವೆ ಎಂಬ ನಾಣ್ಣುಡಿ ಇದೆ. ಆದರೆ ಸುಮಾರು ಜನ ತಮ್ಮ ಚಟಗಳನ್ನು ತಮ್ಮ ಸಂಗಾತಿಯ ಮುಂದೆ ತೋರಿಸದೆ ರಹಸ್ಯವಾಗಿ ಕಾಪಾಡಿಕೊಂಡಿರುತ್ತಾರೆ.

ಕೌಟುಂಬಿಕ ಸಮಸ್ಯೆಗಳು

ಕೌಟುಂಬಿಕ ಸಮಸ್ಯೆಗಳು

ಮನೆಯಲ್ಲಿ ಹೆಂಡತಿ ಬರುವ ಮುನ್ನ ಮತ್ತು ಬಂದ ಮೇಲೆ ಹಲವಾರು ಸಮಸ್ಯೆಗಳು ಕಾಣಿಸಿಕೊಂಡಿರುತ್ತವೆ. ಹಲವನ್ನು ಹೇಳುತ್ತಾರೆ ಮತ್ತು ಇನ್ನೂ ಹಲವನ್ನು ಮುಚ್ಚಿಡುತ್ತಾರೆ ಗಂಡಸರು. ಇದೇ ಮಾತು ಹೆಂಡತಿಯು ತನ್ನ ತವರು ಮನೆಯ ಕುರಿತಾಗಿ ಸತ್ಯ ಮಾಡುತ್ತಾಳೆ. ಇನ್ನೂ ಕೆಲವೊಮ್ಮೆ ಕೌಟುಂಬಿಕ ಜಗಳಗಳ ಕಾರಣವನ್ನು ಬಹುತೇಕ ಮಂದಿ ರಹಸ್ಯವಾಗಿ ಇಟ್ಟಿರುತ್ತಾರೆ.

ಹುಚ್ಚು ಹಂಬಲಗಳು

ಹುಚ್ಚು ಹಂಬಲಗಳು

ಕೆಲವೊಂದು ಹುಚ್ಚು ಹಂಬಲಗಳು ಇರುತ್ತವೆ. ಅದನ್ನು ಎಲ್ಲರೂ ಎಲ್ಲರಿಗೂ ಹೇಳಿ ಅರ್ಥ ಮಾಡಿಸಲು ಆಗುವುದಿಲ್ಲ. ಅದಕ್ಕಾಗಿ ಅವನ್ನು ರಹಸ್ಯವಾಗಿ ತಮ್ಮಲ್ಲಿಯೇ ಇರಿಸಿಕೊಂಡಿರುತ್ತಾರೆ. ಕೇಳಿದವರು ನಗಬಹುದು ಎಂಬ ಕಾರಣಕ್ಕೆ!. ಇದು ಕೆಟ್ಟದ್ದಾಗಿರುವುದಿಲ್ಲ, ಆದರೆ ಕೇಳಿದವರು ವಿಚಿತ್ರವಾಗಿ ನೋಡುವಂತಹ ವಿಕೃತ ಆಸೆಗಳಾಗಿರುತ್ತವೆ.

English summary

Secrets We Try To Hide From Our Partners

There are certain secrets we keep even from people close to our heart. Well, there is a reason for this. Not everything needs to be discussed with everyone. The other person should be mature enough to understand instead of judging you. But of course, trying to be honest in relationships helps. If there is any secret that will impact your relationship in the future, it is better to reveal it.
Story first published: Friday, February 5, 2016, 17:13 [IST]
X
Desktop Bottom Promotion