Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಮೊಬೈಲ್ ವಿಚಾರದಲ್ಲಿ, ಆಕೆಯ ರಂಪ ರಾದ್ಧಾಂತವೇ ಜಾಸ್ತಿ...
ಮಾಯ ಪೆಟ್ಟಿಗೆ ಎಂದು ಕರೆಯಲ್ಪಡುವ ಮೊಬೈಲ್ ನಲ್ಲಿ ಇಂದಿನ ದಿನಗಳಲ್ಲಿ ಹಲವಾರು ರೀತಿಯ ಮಾಯೆಗಳಿರುವುದು. ಹುಟ್ಟಿದ ದಿನಾಂಕದಿಂದ ಹಿಡಿದು ಆಧಾರ್ ಕಾರ್ಡ್ ಸಂಖ್ಯೆ ತನಕ, ಬ್ಯಾಂಕ್ ಖಾತೆಯ ಆ್ಯಪ್ ನಿಂದ ಹಿಡಿದು ಹಣವನ್ನು ಹೇಗೆ ಖರ್ಚು ಮಾಡುತ್ತಿದ್ದೀರಿ ಎಂದು ತೋರಿಸುವ ಆ್ಯಪ್ ತನಕ ಪ್ರತಿಯೊಂದು ಮೊಬೈಲ್ ನಲ್ಲಿರುತ್ತದೆ. ಯಾರಿಗಾದರೂ ಹಣ ಬೇಕಾದಾಗ ಕೇವಲ ಬೆರಳಿನಿಂದಲೇ ಅದನ್ನು ಕಳುಹಿಸುವಂತಹ ಕಾಲ ಇದಾಗಿದೆ.
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಇನ್ನಿತರ ಗೌಪ್ಯ ಪಾಸ್ ವರ್ಡ್‌ಗಳು ಮೊಬೈಲ್‌ನಲ್ಲಿ ಶೇಖರಣೆಗೊಂಡಿರುತ್ತದೆ. ಇಂತಹ ಮೊಬೈಲ್‌ನ್ನು ಯಾರಾದರೂ ಕಿತ್ತುಕೊಂಡರೆ ಅದನ್ನು ನಾವು ತಕ್ಷಣ ವಾಪಸ್ ಪಡೆಯುತ್ತೇವೆ. ನಮ್ಮ ಗೌಪ್ಯತನವನ್ನು ಕಾಪಾಡಲು ಹೀಗೆ ಮಾಡುವುದು ಸಹಜ. ಇಂತಹ ನಡವಳಿಕೆಗಳು ಸಂಬಂಧಗಳನ್ನು ಮುರಿದು ಹಾಕಬಹುದು. ಒಬ್ಬರ ಮೇಲೆ ಮತ್ತೊಬ್ಬರಿಗೆ ಸಂಶಯ ಉಂಟಾಗಬಹುದು.
ಆದರೆ ಈ ಲೇಖನದಲ್ಲಿ ನಿಮ್ಮ ಪ್ರಿಯತಮೆ ಮೊಬೈಲ್ ಅನ್ನು ಮುಟ್ಟಲು ಬಿಡದಿರಲು ಕಾರಣಗಳೇನು ಎಂದು ಚರ್ಚಿಸುವ. ಇಲ್ಲಿ ಕೊಟ್ಟಿರುವ ಕಾರಣಗಳು ವ್ಯಕ್ತಿಯೊಬ್ಬ ತನ್ನ ಮೊಬೈಲ್ ಮತ್ತು ಆತನ ಖಾಸಗಿತನದ ಬಗ್ಗೆ ಏನು ಯೋಚಿಸುತ್ತಾನೆ ಎಂದು ತಿಳಿಯುವ. ಇದನ್ನು ತಿಳಿದುಕೊಳ್ಳಲು ಮುಂದಕ್ಕೆ ಓದಿ...

ಫೋಟೋಗಳು
ಫೋಟೋ ತೆಗೆಯುವುದು ಎಂದರೆ ಹುಡುಗಿಯರಿಗೆ ತುಂಬಾ ಇಷ್ಟ. ಆದರೆ ಕೆಲವೊಂದು ಫೋಟೋಗಳನ್ನು ಅವರು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸದಿರಬಹುದು. ಆಕೆ ತೆಗೆದ ಕೆಲವು ಫೋಟೋಗಳಲ್ಲಿ ಆಕೆ ಚೆನ್ನಾಗಿ ಕಾಣಿಸದೆ ಇರಬಹುದು. ಈ ಕಾರಣದಿಂದ ಮೊಬೈಲ್‌ನ್ನು ನಿಮ್ಮಿಂದ ದೂರವಿಡಬಹುದು.

ಹ್ಯಾಕಿಂಗ್ ಭೀತಿ
ಏನಾದರೊಂದನ್ನು ಆಕೆ ನಿಮ್ಮಿಂದ ಮುಚ್ಚಿಡಲು ಪ್ರಯತ್ನಿಸುತ್ತಿರಬಹುದು. ಇದು ಚಾಟಿಂಗ್ ಅಥವಾ ಮೆಸೇಜ್ ಆಗಿರಬಹುದು. ತನ್ನ ಬಾಯ್ ಫ್ರೆಂಡ್ ಈ ಎಲ್ಲಾ ಮೆಸೇಜ್‌ಗಳನ್ನು ನೋಡಬಹುದು ಎನ್ನುವ ಭೀತಿ ಇರಬಹುದು. ಇದರಿಂದ ಆಕೆಯ ಮೊಬೈಲ್ ಮುಟ್ಟಲು ನಿಮಗೆ ಅವಕಾಶ ನೀಡದಿರಬಹುದು.

ಮೊಬೈಲ್ ದುರ್ಬಳಕೆ
ಇದು ಯಾವತ್ತೂ ನಡೆಯುವುದಿಲ್ಲ. ಆದರೆ ನಿಮ್ಮ ಜತೆಗಾರನಿಗೆ ಪ್ರೀತಿ ಇಲ್ಲವೆಂದಾದರೆ ಆತ ಫೇಸ್ ಬುಕ್ ವಾಲ್ ನಲ್ಲಿ ಏನಾದರೂ ಬರೆಯಬಹುದು. ಇದರಿಂದ ನಿಮಗೆ ಕಿರಿಕಿರಿ ಉಂಟಾಗಬಹುದು. ಇದರಿಂದ ನಿಮ್ಮ ಹುಡುಗಿ ಮೊಬೈಲ್ ಮುಟ್ಟಲು ಬಿಡದಿರಬಹುದು.

ನೀವು ದ್ವೇಷಿಸುತ್ತಿರುವ ವ್ಯಕ್ತಿಯೊಂದಿಗೆ ಮಾತುಕತೆ
ಇದು ಆಕೆಯ ಹಿಂದಿನ ಬಾಯ್ ಫ್ರೆಂಡ್ ಅಥವಾ ನೀವು ಅತಿಯಾಗಿ ದ್ವೇಷಿಸುತ್ತಿರುವ ವ್ಯಕ್ತಿಯಾಗಿರಬಹುದು. ಆತನೊಂದಿಗೆ ಸುಖಸಮಾಚಾರ ಮಾತನಾಡಿದರೂ ನಿಮಗೆ ಇಷ್ಟವಿಲ್ಲವೆಂದಾದರೆ ಆಕೆಯ ಮೊಬೈಲ್ ಮುಟ್ಟಲು ನಿಮ್ಮನ್ನು ಬಿಡಲ್ಲ.

ಬಿಎಫ್ ಎಫ್ ಮಾತುಗಳು
ಹುಡುಗಿಯರು ತಮ್ಮ ಅತ್ಯಂತ ಗೌಪ್ಯ ವಿಚಾರಗಳನ್ನು ಬಿಎಫ್ ಎಫ್ ನೊಂದಿಗೆ ಹಂಚಿಕೊಂಡಿರಬಹುದು. ಇದನ್ನು ಆಕೆ ತನ್ನ ಹುಡುಗನಿಗೆ ತಿಳಿಸಲು ಬಯಸದೆ ಇರಬಹುದು. ಇದು ಏನೂ ಆಗಿರಬಹುದು. ಇದನ್ನು ಹಂಚಿಕೊಳ್ಳಲು ಆಕೆ ಇಷ್ಟಪಡದೇ ಇರಬಹುದು.



Click it and Unblock the Notifications
