For Quick Alerts
ALLOW NOTIFICATIONS  
For Daily Alerts

ಸಂಕೋಚ ಸ್ವಭಾವದ ಹುಡುಗಿಯರು ಹೇಗಿರುತ್ತಾರೆ ನೋಡಿ

By Deepu
|

ಹುಡುಗಿಯರೆಂದರೆ ಸಾಕು ಸಂಕೋಚವಿರುವವರು ಎಂಬ ಅಭಿಪ್ರಾಯ ಹಲವರಲ್ಲಿ ಇದೆ. ಸಂಕೋಚವಿಲ್ಲದೆ ಇರುವ ಹುಡುಗಿಯರನ್ನು ಸಹ ಕಾಣಬಹುದು, ಆದರೆ ಸಂಕೋಚ ಮತ್ತು ನಾಚಿಕೆ ಸ್ವಭಾವದ ಹುಡುಗಿಯರಿಗೆ ಮನ್ನಣೆ ಹೆಚ್ಚು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಇತರರ ಜೊತೆಗೆ ಬೆರೆಯುವುದರಲ್ಲಿ, ಮಾತನಾಡುವುದರಲ್ಲಿ ಈ ಸಂಕೋಚ ಸ್ವಭಾವದ ಹುಡುಗಿಯರು ಹಿಂದೆ ಬೀಳುತ್ತಾರೆ. ಅದರಲ್ಲಿಯೂ ಪ್ರೀತಿ-ಪ್ರೇಮ ಎಂದು

ಹೋಗುವುದು ಇವರ ಸ್ವಭಾವಕ್ಕೆ ವಿರುದ್ಧವಾದ ಮಾತು. ಇಂತಹ ಹುಡುಗಿಯರು ನಿಜವಾಗಿ ಯಾರನ್ನಾದರು ಇಷ್ಟಪಡುತ್ತಾರೆಯೇ? ಎಂಬುದು ಹಲವಾರು ಗಂಡಸರ ಪ್ರಶ್ನೆ. ಅರೆ ಸ್ವಾಮಿ, ಅಸಲಿಗೆ ಇದು ಒಂದು ಪ್ರಶ್ನೆನಾ? ಅವರಿಗು ಸಹ ಮನಸ್ಸು, ಕನಸು ಎಲ್ಲವೂ ಇರುತ್ತದೆ. ಅವರು ಸಹ ಒಬ್ಬ ಹುಡುಗನ ಬಗ್ಗೆ ಕ್ರಶ್ ಇರಿಸಿಕೊಂಡಿರುತ್ತಾರೆ. ಆದರೆ ಅದನ್ನು ಬಾಯಿ ತೆರೆದು ಹೇಳುವುದಿಲ್ಲ ಅಷ್ಟೆ.

Do Shy Girls Have Crushes?

ಆದರೆ ನಿಮಗೆ ಹುಡುಗಿಯರ ಬಗ್ಗೆ ಸ್ವಲ್ಪ ಪರಿಚಯ ಇದ್ದಲ್ಲಿ, ಹುಡುಗಿಯರು ಕ್ರಶ್‌ ಇರಿಸಿಕೊಂಡಾಗ ಹೇಗೆ ವರ್ತಿಸುತ್ತಾರೆ ಎಂಬುದನ್ನು ಗ್ರಹಿಸಬಹುದು. ಆ ವರ್ತನೆಗಳ ಆಧಾರದ ಮೇಲೆ ಸಂಕೋಚವಿರುವ ಹುಡುಗಿಯರು ಯಾವ ಹುಡುಗನ ಮೇಲೆ ಕ್ರಶ್ ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು.

ಗಂಡಸಾಗಲಿ ಅಥವಾ ಹೆಂಗಸಾಗಲಿ ತಮ್ಮ ಅಕ್ಕ-ಪಕ್ಕದಲ್ಲಿ ಇರುವವರ, ಅಥವಾ ಒಡನಾಡುವವರಲ್ಲಿ ತಮಗೆ ಇಷ್ಟವಾದ ಗುಣಗಳು ಇದ್ದಲ್ಲಿ, ಅವರನ್ನು ಕಂಡು ಇಷ್ಟಪಡುವುದು ಸಹಜ ಪ್ರವೃತ್ತಿ. ಆ ವಿಚಾರದಲ್ಲಿ ಅವರು ಸುಮ್ಮನೆ ಇರುವುದಿಲ್ಲ. ಇಷ್ಟಪಡುವುದು ಅಷ್ಟೇ ಇಲ್ಲಿ ನಡೆಯುವ ಪ್ರಕ್ರಿಯೆ, ಸಂಕೋಚವಿರುವವರು ಅದನ್ನು ಹೇಳಿಕೊಳ್ಳುವುದಿಲ್ಲ. ಸಂಕೋಚವಿಲ್ಲದವರು ಅದನ್ನು ಹೇಳಿಕೊಳ್ಳುತ್ತಾರೆ. ಹೀಗೆ ಸಂಕೋಚವಿರುವ ಹುಡುಗಿಯರು ಸಹ ಯಾರಾದರು ಹುಡುಗನ ಮೇಲೆ ಕ್ರಶ್ ಇರಿಸಿಕೊಂಡಿರುತ್ತಾರೆ. ಅದಕ್ಕೆ ಕಾರಣಗಳು ಸಹ ಇವೆ. ಅವುಗಳನ್ನು ನೋಡೋಣ ಬನ್ನಿ. ಸಂಕೋಚ ಸ್ವಭಾವದ ಹುಡುಗಿಯರನ್ನು ಒಲಿಸಿಕೊಳ್ಳುವ ಬಗೆ ಹೇಗೆ?

ಸಂಕೋಚವಿರುವ ಹುಡುಗಿಯರು ತಮ್ಮ ಭಾವನೆಗಳನ್ನು ಹೇಳಿಕೊಳ್ಳುವುದಿಲ್ಲ. ಹಾಗಾಗಿ ಅವರು ತಮ್ಮ ಕ್ರಶ್ ಕುರಿತು ಸಹ ಇತರರಿಗೆ ತಿಳಿಸುವಿದಿಲ್ಲ. ಜೊತೆಗೆ ಅವರು ತಮ್ಮ ಆಪ್ತಸ್ನೇಹಿತರಿಗೆ ಸಹ ಹೇಳಿಕೊಳ್ಳಲಾಗದೆ ಇರುವ ಹಲವಾರು ವಿಚಾರಗಳು ಇರುತ್ತವೆ. ಕೆಲವೊಂದು ಸಂಕೋಚ ಸ್ವಭಾವದ ಹುಡುಗಿಯರು ಅಂತರ್ಮುಖಿಗಳು. ಹೀಗಾಗಿ ಅವರು ತಮ್ಮ ಕ್ರಶ್ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ.

ಇದಲ್ಲದೆ ಇವರು ಯಾವಾಗಲು ಏಕಾಂಗಿಯಾಗಿರಲು ಇಷ್ಟಪಡುತ್ತಾರೆ. ಗುಂಪುಗಳು, ಅಧಿಕ ಜನರು ಇವರಲ್ಲಿ ಅಭದ್ರತೆಯ ಮನೋಭಾವವನ್ನು ತುಂಬುತ್ತದೆ. ಹಾಗಾಗಿ ಯಾವಾಗಲು ಇವರು ಜನಜಂಗುಳಿಯಿಂದ ದೂರವಿರುತ್ತಾರೆ. ಕೆಲವೊಂದು ಸಂಕೋಚದ ಸ್ವಭಾವದ ಹುಡುಗಿಯರು ತಮ್ಮನ್ನು ಬೆಳೆಸಿರುವ ರೀತಿಯಿಂದಾಗಿ ಹಾಗೆ ಇರುತ್ತಾರೆ. ಡೇಟಿಂಗ್ ವಿಷಯದಲ್ಲಿ ಹುಡುಗಿಯರಿಗೆ ನಾಚಿಕೆ ಜಾಸ್ತಿಯಂತೆ!

ಹಲವಾರು ಹುಡುಗಿಯರಿಗೆ ಅವರ ಅಪ್ಪ-ಅಮ್ಮ ಷರತ್ತು ಹಾಕಿ, ಹೀಗೆಯೇ ಇರಬೇಕು ಎಂದು ಹೇಳಿರುತ್ತಾರೆ. ಹಾಗಾಗಿ ಅವರು ಒಂದು ನಿರ್ದಿಷ್ಟ ವಯಸ್ಸಿನವರೆಗೆ, ಹುಡುಗರು ಮತ್ತು ಪ್ರೀತಿಯ ವಿಚಾರಗಳಿಂದ ದೂರವಿರುತ್ತಾರೆ ಕೆಲವು ಸಂಕೋಚ ಸ್ವಭಾವದ ಹುಡುಗಿಯರಿಗೆ ಹಿಂದೆ ತಮ್ಮ ಜೀವನದಲ್ಲಿ ನಡೆದ ಒಂದು ಕೆಟ್ಟ ಅನುಭವದಿಂದಾಗಿ ಅವರು ಸಂಕೋಚ ಸ್ವಭಾವವನ್ನು ರೂಢಿಸಿಕೊಂಡಿರುತ್ತಾರೆ.


ಹೀಗೆ ಈ ಅನುಭವವು ಅವರ ಸುತ್ತ ಒಂದು ಅಗೋಚರ ಗೋಡೆಗಳನ್ನು ನಿರ್ಮಿಸಿರುತ್ತದೆ. ಅಲ್ಲದೆ ಇಂತಹ ಹುಡುಗಿಯರು ಅಂತಹ, ಅಗೋಚರ ಗೋಡೆಗಳ ಒಳಗೆ ಜೀವನ ನಡೆಸಲು ಇಷ್ಟಪಡುತ್ತಾರೆ.
English summary

Do Shy Girls Have Crushes?

Do shy girls have crushes? This is a question that torments most of the men. The answer is yes. Even shy girls do have crushes but they are not open about it. If you know how girls act around their crush then you can easy identify that a particular girl has a crush on a particular guy.
Story first published: Monday, January 11, 2016, 13:11 [IST]
X
Desktop Bottom Promotion