For Quick Alerts
ALLOW NOTIFICATIONS  
For Daily Alerts

ಗೆಳೆಯ ಮದುವೆಯಾಗದೇ ಕೈ ಕೊಡಬಹುದು, ಜೋಕೆ!

By Super
|

ಮರಿಯಾಗಿದ್ದಾಗ ಕತ್ತೆಯೂ ಮುದ್ದಾಗಿಯೇ ಇರುತ್ತದೆ. ಪ್ರೀತಿಯಲ್ಲಿದ್ದಾಗಲೂ ಅಷ್ಟೇ, ಈಗ ತಾನೇ ಮೊಳೆಯುತ್ತಿರುವ ಪ್ರೀತಿಯಲ್ಲಿದ್ದಾಗ ಎಲ್ಲವೂ ಸುಂದರ, ಸತ್ಯ ಎಂದೇ ತೋರುತ್ತದೆ. ಈ ಭರದಲ್ಲಿ ಪ್ರೇಮಿಗಳು ಒಬ್ಬರಿಗೊಬ್ಬರು ನೀಡುವ ಆಣೆ ಭಾಷೆಗಳು ಜೀವಮಾನದಾದ್ಯಂತ ಪಾಲಿಸುವ ಮಾತುಗಳಾಗುತ್ತವೆ.

ಆದರೆ ಕೆಲ ಕಾಲ ಕಳೆದಂತೆ ಪ್ರೀತಿ ಪ್ರೇಮದ ಅಮಲು ಇಳಿಯುತ್ತಿದ್ದ ಹಾಗೇ ನಿಜಜೀವನಕ್ಕೆ ಹೆಚ್ಚು ಹೆಚ್ಚು ಎದುರಾಗುತ್ತಿದ್ದಂತೆ ಈ ಆಣೆ ಭಾಷೆಗಳೆಲ್ಲಾ ಎಷ್ಟು ನಿರರ್ಥಕ ಎಂದು ಅರಿವಾಗಿತ್ತದೆ. ಪ್ರೀತಿಯ ಭರದಲ್ಲಿ ನೀಡಿದ ಭರವಸೆ ಹುಸಿಯಾದರೆ ಪ್ರೇಮದ ಕಂಭಗಳು ಉರುಳುತ್ತಾ ಕಡೆಗೆ ಸಂಬಂಧವೇ ಹಳಸುವ ಅಪಾಯವಿರುತ್ತದೆ.

ಈ ಅಪಾಯವನ್ನು ಮನಗಂಡ ವಿವಾಹತಜ್ಞರು ಈ ತಹರದ ಹುಸಿಪ್ರಮಾಣಗಳಿಂದ ದೂರವಿರುವಂತೆ ಎಚ್ಚರಿಸುತ್ತಾರೆ. ಅದರಲ್ಲಿ ಹೆಚ್ಚಿನವು ಕೇವಲ ಬಣ್ಣಗಳ ಕನಸು ಮೂಡಿಸುವುದು ಮಾತ್ರವೇ ಹೊರತು ನಿಜಜೀವನದಲ್ಲಿ ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಸಂಗಾತಿಯಿಂದ ಸಾಧ್ಯವಾಗಬಹುದಾದುಷ್ಟನ್ನೇ ಅಪೇಕ್ಷಿಸಿದರೆ ಸಿಗುವ ನೆಮ್ಮದಿ ನಿಜವಾದ ಸುಖವಾಗಿದೆ.

Is He Afraid Of Commitment?

ಒಂದು ವೇಳೆ ನಿಮ್ಮ ಜೀವನಸಂಗಾತಿಯಾಗುವವರು ಇಂತಹ ಭರವಸೆಗಳನ್ನು ನೀಡಿದ್ದರೆ ಅದು ಎಷ್ಟರ ಮಟ್ಟಿಗೆ ನಿಜವಾಗಬಹುದು ಅಥವಾ ಈ ಬಗ್ಗೆ ಅವರು ಎಷ್ಟು ಕಾಳಜಿ ವಹಿಸುತ್ತಾ ಬಂದಿದ್ದಾರೆ ಎಂಬ ನಿಜದ ಮೇಲೆ ನಿಮ್ಮ ಆಯ್ಕೆ ಸರಿಯೋ ತಪ್ಪೋ ಎಂದು ಗೊತ್ತಾಗುತ್ತದೆ. ಹೆಣ್ಣಿನ ಮನಸ್ಸನ್ನು ಅರ್ಥೈಸಿಕೊಳ್ಳುವುದು ಸುಲಭದ ಮಾತಲ್ಲ!

ಆದರೆ ಎಲ್ಲಾ ಪುರುಷರು ತಾವು ಹೇಳಿದ್ದನ್ನು ಮಾಡುವುದಿಲ್ಲ. ಏಕೆಂದರೆ ಮಹಿಳೆಯರನ್ನು ಮಾತಿನಲ್ಲಿ ಒಲಿಸಿಕೊಳ್ಳುವುದು ಸುಲಭ ಎಂದು ಕೆಲವರು ತಿಳಿದುಕೊಂಡಿರುತ್ತಾರೆ. ನಿಮ್ಮ ಜೀವನಸಂಗಾತಿಯಾಗುವವರೂ ಈ ಪಟ್ಟಿಯಲ್ಲಿ ಸೇರುತ್ತಾರೆಯೇ ಎಂಬುದನ್ನು ಒರೆಹಚ್ಚಲು ಕೆಳಗಿನ ನೀಡಲಾಗಿರುವ ಮಾಹಿತಿ ನಿಮಗೆ ನೆರವಾಗಲಿದೆ:

ತನ್ನ ಪ್ರೀತಿಯನ್ನು ಎಂದು ಆತ ಸ್ಪಷ್ಟವಾಗಿ ಹೇಳುವುದಿಲ್ಲ
ಒಂದು ವೇಳೆ ಆತ ನಿಮ್ಮನ್ನು ಬಾಳಸಂಗಾತಿಯಾಗಿ ಸ್ವೀಕರಿಸಲು ಗಂಭೀರವಾಗಿಲ್ಲದಿದ್ದರೆ ಆತನ ಮಾತುಗಳಲ್ಲಿ ನಿಮ್ಮ ಪ್ರೀತಿಯ ಕುರಿತಾದ ಮಾತುಗಳು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿರುತ್ತದೆ. ಆತನ ಮಾತುಗಳು ಎಂದಿಗೂ ಸ್ಪಷ್ಟವಾಗಿರುವುದಿಲ್ಲ. ಆತ ಎಂದಿಗೂ ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳುವುದಿಲ್ಲ. ಬದಲಿಗೆ "ನಿನಗಿರುವಷ್ಟೇ ಪ್ರೀತಿ ನನಗೂ ಉಂಟು", "ನಿನ್ನಿಂದ ದೂರ ಇರಲಿಕ್ಕಾಗುತ್ತದೆಯೇ", "ನಿನಗೆ ಮೋಸ ಮಾಡುತ್ತೇನೆಯೇ" ಎಂಬ ದ್ವಂದ್ವಾರ್ಥದ ಮಾತುಗಳನ್ನಾಡಿದರೆ ನಿಮ್ಮೊಂದಿಗೆ ಬದ್ದತೆಯ ಬಗ್ಗೆ ಅನುಮಾನ ಹುಟ್ಟಿಸುತ್ತದೆ.

ನಿಮ್ಮಿಂದ ಹಲವು ವಿಷಯಗಳನ್ನು ಮುಚ್ಚಿಡುತ್ತಾನೆ
ಪ್ರೇಮದಲ್ಲಿರುವವರು ತಮ್ಮ ಖಾಸಗಿ ವಿಷಯಗಳನ್ನೂ ತಮ್ಮ ಸಂಗಾತಿಯಾಗುವವರಿಗೆ ಹಂಚಿಕೊಳ್ಳಲಿಚ್ಛಿಸುತ್ತಾರೆ. ಒಂದು ವೇಳೆ ನಿಮ್ಮ ಪ್ರಿಯತಮ ನಿಮ್ಮೊಂದಿಗೆ ತನ್ನ ಖಾಸಗಿ ವಿಷಯಗಳನ್ನು ತಿಳಿಸದೇ ಮೂರನೇ ವ್ಯಕ್ತಿಯಿಂದ ತಿಳಿದುಕೊಳ್ಳಬೇಕಾಗಿ ಬಂದಾಗ ಮನಸ್ಸಿಗೆ ನೋವಾಗುವುದು ಮಾತ್ರವಲ್ಲ, ಆತನ ಬದ್ದತೆಯ ಬಗ್ಗೆ ಅನುಮಾನವೂ ಮೂಡುತ್ತದೆ. ತನ್ನ ಎಷ್ಟೋ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿಲ್ಲವೆಂದರೆ ಆತ ನಿಮ್ಮೊಂದಿಗೆ ಬದ್ಧತೆಗೆ ಇನ್ನೂ ಸಿದ್ಧನಿಲ್ಲವೆಂದರ್ಥ!

ಆತ ನಿಮ್ಮನ್ನೆಂದೂ ತನ್ನ ಕುಟುಂಬಕ್ಕೆ ಪರಿಚಯಿಸುವುದಿಲ್ಲ
ಒಂದು ವೇಳೆ ನಿಮ್ಮಿಬ್ಬರ ಪ್ರೇಮ ನಿಜವಾದದ್ದೇ ಆದರೆ ಇಬ್ಬರೂ ಮೊದಲು ಮಾಡುವ ಕೆಲಸವೆಂದರೆ ನಿಮ್ಮ ನಿಮ್ಮ ಕುಟುಂಬದವರಿಗೆ ಹೇಳಿ ಅವರನ್ನು ಒಪ್ಪಿಸಲು ಓಲೈಸುವುದು. ಬಳಿಕ ಎರಡೂ ಮನೆಯವರ ಆಶೀರ್ವಾದ ಮತ್ತು ಒಪ್ಪಿಗೆಯ ಮೂಲಕ ಮುಂದಿನ ಮಾತು.

ಆದರೆ ಒಂದು ವೇಳೆ ಆತ ತನ್ನ ಕುಟುಂಬವನ್ನು ನಿಮಗೆ ಪರಿಚಯಿಸಲೇ ಹಿಂದು ಮುಂದು ನೋಡುತ್ತಿದ್ದರೆ ಆತನ ಕುರಿತಾದ ನಿಮ್ಮ ಭಾವನೆಗಳಿಗೆ ಕೊಂಚ ತಡೆ ನೀಡುವುದು ಉತ್ತಮ.

ಪತಿಯ ನಡವಳಿಕೆಯಲ್ಲಿ ಬದಲಾವಣೆಯಾಗುತ್ತಿದೆಯೇ?
ತಾನು ಯಾವಾಗಲೂ ವ್ಯಸ್ತ ಎಂದು ತಪ್ಪಿಸಿಕೊಳ್ಳುತ್ತಾನೆ ಒಂದು ವೇಳೆ ನೀವು ಈ ಸಂಬಂಧದಲ್ಲಿ ಮುಂದುವರೆಯುವ ಬಗ್ಗೆ ಮಾತನಾಡಿದಾಗಲೆಲ್ಲಾ ತಾನು ಅತಿ ವ್ಯಸ್ತನಿರುತ್ತೇನೆಂದೂ, ತನಗೀಗ ಸಮಯವಿಲ್ಲವೆಂದೂ ಸಬೂಬೂ ಹೇಳುತ್ತಿದ್ದರೆ ಆತನ ಬದ್ದತೆಯ ಬಗ್ಗೆ ಅನುಮಾನ ದಟ್ಟವಾಗುತ್ತಾ ಹೋಗುತ್ತದೆ.

English summary

Is He Afraid Of Commitment?

Most of us assume a lot of things. At least when we are in relationships, we tend to assume that the special someone would be committed forever. Well, some things are too good to be true. Relationship experts warn us of such illusions. It is always good to keep your expectations to the minimum as far as relationships are concerned.
Story first published: Wednesday, July 29, 2015, 10:17 [IST]
X
Desktop Bottom Promotion