For Quick Alerts
ALLOW NOTIFICATIONS  
For Daily Alerts

ಅಷ್ಟಕ್ಕೂ ಸುಖಿ ಸಂಸಾರದ ಹಿಂದಿರುವ ಯಶಸ್ಸಿನ ಗುಟ್ಟೇನು?

|

ಮದುವೆ ಎನ್ನುವುದು ಏಳೇಳು ಜನ್ಮಗಳ ಸಂಬಂಧ ಎಂದು ಹೇಳುತ್ತಾರೆ. ಆದರೆ ನಿಜವಾಗಿ ಹೇಳಬೇಕೆಂದರೆ, ನೀವು ಪ್ರಯತ್ನಪಟ್ಟರೆ ಮಾತ್ರ ಇದು ಜನ್ಮ ಜನ್ಮದ ಅನುಬಂಧವಾಗಿರುತ್ತದೆ. ಇದನ್ನು ನೀವು ಉದಾಸೀನ ಮಾಡಿದರೆ, ಅದರಿಂದ ನಿಮ್ಮ ಜೀವನ ಏರು-ಪೇರಾಗುವುದು ಸತ್ಯ. ಯಶಸ್ವಿ ಮದುವೆಗಳಿಗೆ ಕೆಲವೊಂದು ಹವ್ಯಾಸಗಳು ನೆರವಾಗುತ್ತವೆ ಎಂಬುದು ಸತ್ಯ.

ಈ ಹವ್ಯಾಸಗಳನ್ನು ನೀವು ಅಳವಡಿಸಿಕೊಂಡರೆ ಅದರಿಂದ ನಿಮ್ಮ ಜೀವನ ಸುಖಮಯವಾಗುವುದರಲ್ಲಿ ಸಂಶಯವಿಲ್ಲ. ನಿಮ್ಮ ಸಂಗಾತಿಯ ಜೊತೆಗೆ ನೀವು ಕಳೆಯುವ ಒಂದೊಂದು ದಿನವು ಸಹ ನಿಮ್ಮ ಜೀವನದಲ್ಲಿ ದುಪ್ಪಟ್ಟು ಸಂತೋಷವನ್ನು ನೀಡುತ್ತದೆ. ಇದರ ಜೊತೆಗೆ ಭಾಂದವ್ಯವು ಸಹ ನಿಮ್ಮ ಮದುವೆಯನ್ನು ಬಲಪಡಿಸುತ್ತದೆ.

6 Habits For A Successful Marriage

ಇದರ ಕುರಿತಾಗಿ ನೀವು ಎಷ್ಟು ಕಾಳಜಿ ವಹಿಸುತ್ತೀರೋ, ಅಷ್ಟು ನಿಮ್ಮ ವೈವಾಹಿಕ ಸಂಬಂಧವು ಖುಷಿಯಾಗಿರುತ್ತದೆ. ಬನ್ನಿ ಇನ್ನು ತಡಮಾಡದೆ ಯಶಸ್ವಿ ದಂಪತಿಗಳು ಹೊಂದಿರುವ 6 ಹವ್ಯಾಸಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಭಿನ್ನತೆಯನ್ನು ಒಪ್ಪಿಕೊಳ್ಳಿ. ಇದು ನಮ್ಮ ದಾಂಪತ್ಯ ಚೆನ್ನಾಗಿರಬೇಕೆಂದರೆ ನಾವು ಮಾಡಬೇಕಾದ ಮೊದಲ ಕೆಲಸ.

ಮದುವೆಯಾದ ನಂತರ ಎಲ್ಲರಿಗು ಅನುಭವಕ್ಕೆ ಬರುವ ಮೊದಲ ವಿಚಾರ ನಾವಿಬ್ಬರು ಬೇರೆ ಬೇರೆ ವ್ಯಕ್ತಿತ್ವಗಳನ್ನು ಹೊಂದಿದ್ದೇವೆ ಎಂಬುದು. ನಿಮ್ಮಿಬ್ಬರಿಗು ವಿಭಿನ್ನ ಹವ್ಯಾಸ ಮತ್ತು ಆಧ್ಯತೆಗಳು ಇರುತ್ತವೆ. ಹಾಗಾಗಿ ನಿಮ್ಮ ಸಂಗಾತಿಯ ಹವ್ಯಾಸ ಮತ್ತು ಆದ್ಯತೆಗಳು ನಿಮಗೆ ಇಷ್ಟವಾಗದಿದ್ದರು, ಅವುಗಳನ್ನು ಒಪ್ಪಿಕೊಳ್ಳಲು ಆರಂಭಿಸಿ. ಆದರೆ ಯಾವುದೇ ಕಾರಣಕ್ಕು ಆ ವಿಚಾರದಲ್ಲಿ ನಿಮ್ಮ ಸಂಗಾತಿಯನ್ನು ಬದಲಾಯಿಸಲು ಹೋಗಬೇಡಿ. ಆಗ ನಿಮ್ಮ ದಾಂಪತ್ಯ ಸುಖಿ ದಾಂಪತ್ಯವಾಗುತ್ತದೆ. ಗೋಮುಖ ವ್ಯಾಘ್ರನಂತೆ ವರ್ತಿಸುವ ಹುಡುಗರ ಬಗ್ಗೆ ಎಚ್ಚರದಿಂದಿರಿ!

ಸದಾ ಮುತ್ತುಗಳನ್ನು ವಿನಿಮಯ ಮಾಡಿಕೊಳ್ಳಿ. ಇದು ಸಹ ಸುಖೀ ದಾಂಪತ್ಯದ ಒಂದು ಹವ್ಯಾಸವಾಗಿದೆ. ಮಧುಚಂದ್ರದ ನಂತರ ದಂಪತಿಗಳು ತಮ್ಮದೇ ಆದ ಕಾರ್ಯಗಳಲ್ಲಿ ಮಗ್ನರಾಗಿ, ಪ್ರೀತಿ, ಪ್ರೇಮ ಮತ್ತು ಪ್ರಣಯಗಳನ್ನು ಮರೆತುಬಿಡುತ್ತಾರೆ! ಮದುವೆ ಎಂದರೆ ಕೇವಲ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದಲ್ಲ, ಪ್ರೀತಿ, ಪ್ರೇಮಕ್ಕು ಸಹ ಸ್ವಲ್ಪ ಅವಕಾಶ ಮಾಡಿಕೊಳ್ಳಿ. ಮುತ್ತು ನೀಡುವುದರಿಂದ ನೀವು ಮಾತುಗಳ ಅವಶ್ಯಕತೆಯಿಲ್ಲದೆ ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬಹುದು!

ನಿರ್ಧಾರ ತೆಗೆದುಕೊಳ್ಳುವ ಮೊದಲು ಚರ್ಚಿಸಿ
ಯಾವಾಗಲು ಏಕಮುಖವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಅದರಲ್ಲೂ ಮದುವೆಯಾದವರು ತಮ್ಮ ಸಂಗಾತಿಯೊಂದಿಗೆ ಚರ್ಚಿಸದೆ ಮುಂದೆ ಇಡುವುದು ಇನ್ನೂ ಒಳ್ಳೆಯದಲ್ಲ. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಿ. ಇದರಿಂದ ಮುಂದೆ ನಿಮಗೆ ಯಾವುದೇ ತಾಪತ್ರಯ ಬರುವುದಿಲ್ಲ.

ಪ್ರತಿದಿನ ಕೆಲಸವಾದ ನಂತರ ನಿಮ್ಮ ದಿನದ ಕುರಿತು ಮಾತನಾಡಿ
ಆಯಾದಿನ ಏನೆಲ್ಲಾ ನಡೆಯಿತು ಎಂಬುದನ್ನು ನಿಮ್ಮ ಸಂಗಾತಿಯ ಜೊತೆಗೆ ಹಂಚಿಕೊಳ್ಳುವುದರಿಂದ ಖಂಡಿತ ಅವರು ಸಹ ನಿಮ್ಮ ಜೀವನದ ಘಟನೆಗಳಿಗೆ ಕೇಳುಗ ಸಾಕ್ಷಿಗಳಾಗುತ್ತಾರೆ. ಇದರಿಂದ ಅವರು ಸಹ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿಮ್ಮ ಮುಂದಿನ ಕೆಲಸಗಳಿಗೆ ಸಲಹೆ ಸೂಚನೆಗಳನ್ನು ಒದಗಿಸಲು ಇದರಿಂದ ಸಹಾಯವಾಗಬಹುದು. ಜೊತೆಗೆ ನಿಮ್ಮ ಪ್ರತಿಯೊಂದು ನಡೆಯು ನಿಮ್ಮ ಸಂಗಾತಿಗೆ ಇದರಿಂದ ಗೊತ್ತಾಗುತ್ತದೆ. ಮದುವೆ ಬಗ್ಗೆ ಮಗಳಿಗೆ ತಾಯಿ ಹೇಳಲೇಬೇಕಾದ ಹತ್ತು ರಹಸ್ಯವೇನು?

ಆದ್ಯತೆಗಳನ್ನು ನೀಡಿ
ಇದು ಸಹ ಯಶಸ್ವಿ ದಂಪತಿಗಳ ಒಂದು ಹವ್ಯಾಸವಾಗಿರುತ್ತದೆ. ಒಂದು ವೇಳೆ ನೀವು ನಿಮ್ಮ ಮದುವೆಗೆ ಮೊದಲ ಆದ್ಯತೆಯನ್ನು ನೀಡಿದರೆ, ಇನ್ನುಳಿದವೆಲ್ಲ ಎರಡನೆಯ ಆದ್ಯತೆಗೆ ಹೋಗುತ್ತವೆ. ಆಗ ನಿಮ್ಮ ದಾಂಪತ್ಯವು ಯಾವುದೆ ಕುಂದು ಕೊರತೆಯಿಲ್ಲದೆ ನಿರಾತಂಕವಾಗಿ ಸಾಗುತ್ತದೆ.

ಕೃತಜ್ಞತೆ
ನಿಮ್ಮ ಸಂಗಾತಿಗೆ ಕೃತಜ್ಞತೆ ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಸತ್ಯಾಂಶವೇನೆಂದರೆ ಇದರಿಂದ ನಿಮ್ಮ ಸಂಬಂಧ ಗಟ್ಟಿಗೊಳ್ಳುತ್ತದೆ. ಇದು ಸಹ ಸುಖೀ ದಂಪತಿಗಳ ಒಂದು ಹವ್ಯಾಸವಾಗಿದೆ.

English summary

6 Habits For A Successful Marriage

You marry someone hoping that the bond will last forever. But frankly speaking, if you put in the efforts, the bond will surely last forever. If you ignore working on it, there my be ups and downs. There are some habits for a successful marriage. Every single day that is spent with your partner will add joy to your life.
Story first published: Monday, February 2, 2015, 17:37 [IST]
X
Desktop Bottom Promotion