For Quick Alerts
ALLOW NOTIFICATIONS  
For Daily Alerts

ಪುರುಷರು ಮಹಿಳೆಯರಲ್ಲಿ ಹೇಳಲು ಹಿಂಜರಿಯುವ 10 ವಿಷಯಗಳು

By Poornima Heggade
|

ಅನೇಕ ಸಂದರ್ಭದಲ್ಲಿ ಪುರುಷರು ತಮ್ಮ ಮಹಿಳೆಯರಿಗೆ ಸತ್ಯ ಹೇಳಲು ಸಾಧ್ಯವಾಗದೇ ಕೆಲವು ವಿಚಿತ್ರ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವುದು ಸರ್ವೇ ಸಾಮಾನ್ಯ. ಇಂತಹ ಸಂದರ್ಭಗಳೇ ಇಲ್ಲದ ಸಂಬಂಧಗಳೇ ಇಲ್ಲ! ಕೆಲವು ಆತಂಕದ ಪ್ರಶ್ನೆಗಳನ್ನು ಎದುರಿಸುವ ಸಾಧ್ಯತೆಗಳೂ ಹೆಚ್ಚು. ಪುರುಷರು ವಿವಿಧ ಕಾರಣಗಳಿಂದಾಗಿ ಮಹಿಳೆಯರಿಗೆ ಕೆಲವು ವಿಷಗಳನ್ನು ಹೇಳಲು ಹಿಂದೇಟು ಹಾಕುತ್ತಾರೆ. ಇದು ನಕಲಿ ಅಭಿನಂದನೆ ಹೇಳುವುದು ಅಥವಾ ತಮ್ಮ ಮಾಜಿ ಪ್ರೀತಿಯ ಬಗ್ಗೆ ಇರುವ ಸುಳ್ಳಾಗಿರಬಹುದು, ಇಂತಹ ಹಲವಾರು ವಿಷಯಗಳನ್ನು ಸಾಮಾನ್ಯವಾಗಿ ಪುರುಷರು ತಮ್ಮ ತಂಗಾತಿಗಳ ಮುಂದೆ ವ್ಯಕ್ತಪಡಿಸಲು ಹಿಂದೇಟು ಹಾಕುತ್ತಾರೆ.

ಕೆಲವೊಮ್ಮೆ ತಮ್ಮ ಸಂಗಾತಿ, ಯಾವುದೇ ಸಮಾರಂಭಕ್ಕೆ ಹೊರಟಾಗ ಅವರಿಗೆ ಸೂಕ್ತವಲ್ಲದ ಅಥವಾ ಅತೀ ಸ್ಟೈಲಿಶ್ ಆಗಿ ಸಿದ್ಧವಾಗಿರಬಹುದು. ಇಂತಹ ಸಂದರ್ಭದಲ್ಲಿ ತಮಗೆ ಇಷ್ಟವಿಲ್ಲದಿದ್ದರೂ ಸಂಗಾತಿಯ ಉಡುಪಿನ ಬಗ್ಗೆ ಧೈರ್ಯವಾಗಿ ಹೇಳಲಾಗದೇ ಸುಳ್ಳು ಹೊಗಳಿಕೆಯನ್ನು ಕೊಡುವಂತಹ ಸಂದರ್ಭಗಳು ಎದುರಾಗಬಹುದು. ಸಾಕಷ್ಟು ಸಮಯದವರೆಗೆ ಸಂಗಾತಿ ಸಿದ್ಧಳಾಗುವವರೆಗೆ ಕಾದು ಈ ರೀತಿಯ ಅಭಿನಂದನೆ/ ಹೊಗಳಿಕೆಯನ್ನು ನೀಡುವುದಕ್ಕೆ ಕಷ್ಟವಾಗಿ ಅವರಿಗೆ ಮುಖಾಮುಖಿಯಾಗಿ ಮಾತನಾಡಲಾಗದೇ ಕಸಿವಿಸಿಯಾಗಬಹುದು.

10 things men hesitate to tell women

ಕೆಲವೊಮ್ಮೆ ಪುರುಷರಿಗೆ ಒಂದು ಅಪರಿಚಿತ ಸುಂದರ ಹುಡುಗಿಯನ್ನು ನೋಡಿದಾಗ ಅವರ ಸೌಂದರ್ಯವನ್ನು ಹೊಗಳಲು ಅಥವಾ ಅಭಿನಂದಿಸಲು ಧೈರ್ಯ ಸಾಲುವುದಿಲ್ಲ. ಹೀಗೆ ಅತ್ಯಂತ ಆಕರ್ಷಕ ಅಥವಾ ಸುಂದರವಾದ ಮಹಿಳೆಯನ್ನು ಹೊಗಳಿದರೆ ಸಂಗಾತಿಗಳೊಂದಿಗೆ ಮನಸ್ಥಾಪ ಉಂಟಾಗಬಹುದು. ತಮ್ಮ ಹಿಂದಿನ ಡೇಟಿಂಗ್ ಹಾಗೂ ಮೊದಲಿನ ಸಂಬಂಧದ ಬಗ್ಗೆ ಈಗಿನ ಸಂಗಾತಿಗಳ ಜೊತೆ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ಇಷ್ಟಪಡದ ಗುಣವಾದ ತನ್ನ ಹಿಂದಿನ ಸಂಬಂಧವನ್ನು ಹೊಗಳುವ ಗಂಡಸರನ್ನು ಇಷ್ಟಪಡುವುದಿಲ್ಲ. ಆದ್ದರಿಂದಲೇ ಹೆಚ್ಚಿನ ಪುರುಷರು ಸಾಮಾನ್ಯವಾಗಿ ತಮ್ಮ ಮನಸ್ಸಿಗೆ ಹತ್ತಿರವಾದ ಇಂತಹ ವಿಷಯಗಳನ್ನು, ಸತ್ಯವನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಾರೆ.

1. ಸಂಬಳದ ಅಂಕಿಅಂಶಗಳು
ಸಾಮಾನ್ಯವಾಗಿ ಪುರುಷರು ತಮ್ಮ ಸಂಬಳದ ಬಗ್ಗೆ ಹೇಳಲು ಹಿಂಜರಿಯುತ್ತಾರೆ. ಅವರ ಸಂಬಳ ಕಡಿಮೆಯಾಗಿದ್ದರೆ ಅದನ್ನು ಹೇಳಿಕೊಳ್ಳಲು ಕೀಳಿರಿಮೆ ಉಂಟಾಗಿ ಅವರು ನಿಮ್ಮಿಂದ ಈ ವಿಷಯವನ್ನು ಮುಚ್ಚಿಡಬಹುದು.

2. ಪ್ರಶ್ನೆಗಳು
ಪುರುಷರು ಇಷ್ಟಪಡದ ಒಂದು ಅತ್ಯಂತ ಮುಖ್ಯ ವಿಷಯ ಪ್ರಶ್ನೆಗಳಿಗೆ ಉತ್ತರ ನೀಡುವುದು. ಅವರು ಯಾವುದೇ ಪ್ರಶ್ನೆಗಳಿಗೂ ಉತ್ತರವನ್ನು ನೀಡಲು ಹಿಂಜರಿಯುತ್ತಾರೆ. ಅಥವಾ ತನ್ನನ್ನು ಕೇಳಿದ ಪ್ರಶ್ನೆಗಳ್ನ್ನು ಇತರರಿಗೆ ಹಸ್ತಾಂತರಿಸುತ್ತಾರೆ!

3. ವೃತ್ತಿ ಸ್ಥಾನ
ಮಹಿಳೆಯರು ತನ್ನ ಸಂಗಾತಿ ಉತ್ತಮ ಸ್ಥಾನದಲ್ಲಿರಬೇಕು ಎಂದುಕೊಳ್ಳುವುದು ಸಾಮಾನ್ಯ. ಆದ್ದರಿಂದ ಪುರುಷರು ತಾವು ಸಣ್ಣ ಕೆಲಸಗಳಲ್ಲಿದ್ದರೆ, ಅವರು ತಮ್ಮ ವೃತ್ತಿಯ ಹೆಸರು ಅಥವಾ ಅವರ ಸ್ಥಾನವನ್ನು ಸಂಗಾತಿಗೆ ಹೇಳಿಕೊಳ್ಳುವುದರಲ್ಲಿ ಹಿಂಜರಿಯುತ್ತಾರೆ.

4. ಓದುವ ಹವ್ಯಾಸ
ಎಲ್ಲಾ ಪುರುಷರು ಸಾಹಸ ಅಥವಾ ರಹಸ್ಯ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಲು ಇಷ್ಟಪಡುವುದಿಲ್ಲ. ಆದರೆ ಮಹಿಳೆಯರು ಇಷ್ಟಪಡುವುದು ಅದನ್ನೇ! ಹೀಗಾಗಿ ಮಹಿಳೆಯರ ಬಗ್ಗೆ ಅಥವಾ ಪ್ರಣಯದ ಬಗ್ಗೆ ಓದುತ್ತಿದ್ದರೂ ಅದನ್ನು ತನ್ನ ಸಂಗಾತಿಗೆ ತಿಳಿಯದಂತೆ ಮುಚ್ಚಿಡುತ್ತಾರೆ.

5. ಮಹಿಳೆಯರ ಬಗ್ಗೆ ಹೇಳುವುದು
ಇದು ತಮ್ಮ ಸಂಗಾತಿಯೊಂದಿಗೆ ಹೇಳಿಕೊಳ್ಳಲು ಪುರುಷರು ಹೆದರುವ ಒಂದು ಪ್ರಮುಖ ಅಂಶ. ತನಗೆ ಇಷ್ಟವಾದ ನಟಿ ಅತಹ್ವಾ ಅತ್ಯಂತ ಸಂದರವಾದ ಹುಡುಗಿಯನ್ನು ಭೇಟಿ ಮಾಡಿದರೆ ಅದನ್ನು ತಮ್ಮ ಸಂಗಾತಿಯ ಬಳೆ ಹೇಳಿಕೊಳ್ಳದೇ ಮುಚ್ಚಿಡುತ್ತಾರೆ.

6. ಅತಿಯಾದ ಹೊಗಳುವಿಕೆ
’ನೀವು ಸುಂದರವಾಗಿ ಕಾಣುತ್ತೀ’ ಎಂದು ತಮ್ಮ ಸಂಗಾತಿಗೆ ಪುರುಷರು ಹೇಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ತಮ ಸಂಗಾತಿಯನ್ನು ಅತಿರೇಕವಾಗಿ ಹೊಗಳಬೇಕಾದಾಗ, ಅವರ ಸೌಂದರ್ಯವನ್ನು ಅವರಿಗೆ ಇಷ್ಟವಾಗುವ ರೀತಿಯಲ್ಲಿ ಪ್ರಶಂಸೆಯನ್ನು ಮಾಡಬೇಕಾದಾಗ ಹಿಂಜರಿಯುವ ಸಾಧ್ಯತೆಗಳು ಹೆಚ್ಚು.

7. ನಿರಂತರ ಗಮನ
ಸಂಗಾತಿಯು ತನ್ನ ಬಗ್ಗೆ ಅಥವಾ ಯಾವುದೇ ವಿಷಯಗಳ ಬಗ್ಗೆ ನಿರಂತರವಾಗಿ ಗಮನವನ್ನು ನೀಡಲು ಬಯಸಿದರೆ ಪುರುಷರು ಅದರಿಂದ ಹೊರಗುಳಿಯಲು ಪ್ರಯತ್ನಿಸುತ್ತಾರೆ. ಮತ್ತು ಅನಿವಾರ್ಯವಾಗಿ ಗಮನವಹಿಸುವಂತೆ ನಟಿಸುತ್ತಾರೆಯೇ ಹೊರತು ಮನಃಪೂರ್ವಕವಾಗಿ ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ.

8. ಹಿಂದಿನ ವಿಷಯಗಳು
ತಮ್ಮ ಹಿಂದಿನ ಸಂಬಂಧಗಳ ಬಗ್ಗೆ ತಾವು ಮುಂದೆ ಜೀವನ ನಡೆಸುವವರೊಂದಿಗೆ, ಹೊಸ ಜೀವನವನ್ನು ನಡೆಸುವಾಗ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ತಮ್ಮ ಸಂಗಾತಿ ತಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ ಎಂಬ ಅಂಜಿಕೆಯಿಂದ ತಮ್ಮ ಜೀವನದ ಹಿಂದಿನ ಘಟನೆಗಳನ್ನು ಹೇಳಿಕೊಳ್ಳುವುದೇ ಇಲ್ಲ.

9. ಅಸಮ್ಮತ
ಮಹಿಳೆ ಯಾವ ವಿಷಯದಲ್ಲಿ ದುರ್ಭಲರಾಗಿದ್ದರೂ, ಸಂಬಂಧಗಳ ವಿಷಯದಲ್ಲಿ ಸಾಕಷ್ಟು ಅಧಿಕಾರಯುತವಾಗಿರುತ್ತಾರೆ. ಅವರಿಗೆ ಇಷ್ಟವಾದದ್ದನ್ನು ಪುರುಷ ಮಾಡಲೇಬೇಕಾಗುತ್ತದೆ. ಉದಾಹರಣೆಗೆ ಆಕೆಗೆ ಸಾಕುಪ್ರಾಣಿಗಳು ಇಷ್ಟವಾದರೆ ಪುರುಷರು ಅದನ್ನು ಮನೆಗೆ ತರಲು ಇಷ್ಟಪಡುವುದಿಲ್ಲ. ಆದರೆ ಇದನ್ನು ವ್ಯಕ್ತಪಡಿಸದೇ ಇರಬಹುದು. ಆದಾಗ್ಯೂ ಅವರು ಮಹಿಳೆಯರ ಮಾತನ್ನು ಒಪ್ಪಲು ಹಿಂಜರಿಯುತ್ತಾರೆ.

10. ಅಂಕಗಳು
ಸಾಮಾನ್ಯವಾಗಿ ಪುರುಷರು ತಾನು ತನ್ನ ಸಂಗಾತಿಯೊಂದಿಗಿರುವ ಸಮಯಕ್ಕೆ ಅಂಕಗಳನ್ನು ನೀಡುತ್ತಿರುತ್ತಾರೆ. ಆದರೆ ತನ್ನ ಮನಸ್ಸಿನಲ್ಲಿ ಅವರ ಬಗ್ಗೆ, ಅವರ ಸನಿಹದ ಬಗ್ಗೆ ತಮಗಿರುವ ಭಾವನೆ, ತೃಪ್ತಿಯನ್ನು ಹೇಳಲು ಹಿಂಜರಿಯುತ್ತಾರೆ!

English summary

10 things men hesitate to tell women

There are moments in any relationship where men are caught up in a situation where they cant tell the truth to their women
Story first published: Thursday, January 9, 2014, 10:52 [IST]
X
Desktop Bottom Promotion