For Quick Alerts
ALLOW NOTIFICATIONS  
For Daily Alerts

ಅವಳು ಹೋದಳೆಂದು, ಹೀಗೆ ಮಾಡಬಹುದೇ?

|

ಎಲ್ಲದಕ್ಕಿಂತಂಲೂ ಅತ್ಯುತ್ತಮವಾದದ್ದು ಮನುಷ್ಯನ ಸಂಬಂಧ ಎನ್ನುತ್ತಾರೆ. ನಮ್ಮ ನಡುವೆ ಸಂಬಂಧಗಳಿಗೆ ಹೆಚ್ಚಿನ ಬೆಲೆ ನೀಡಲಾಗುತ್ತದೆ. ಆದರೆ ಒಂದು ಸುಂದರ ಸಂಬಂಧವನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ! ಹಲವಾರು ಕಾರಣಕ್ಕೆ ಹಲವರಿಂದ ಈ ಸಂಬಂಧಗಳಲ್ಲಿ ಹುಳಿ ಹಿಂಡುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಸಂಬಂಧಗಳು ನಮ್ಮ ಸುಪರ್ದಿಯಲ್ಲಿರುವಾಗ ಮಾತ್ರ ಸುಂದರವಾಗಿರುತ್ತವೆ. ಅದೇ ಸಂಬಂಧ ನಮ್ಮಿಂದ ದೂರವಾದಾಗ ಅಥವಾ ಆ ಸಂಬಂಧಗಳಲ್ಲಿ ನಂಬಿಕೆಯನ್ನು ಕಳೆದುಕೊಂಡಾಗ ಉಂಟಾಗುವ ನೋವು ಎಲ್ಲದಕ್ಕೂ ಮೀರಿದ್ದು!

ಅದರಲ್ಲೂ ಪ್ರೇಮಿಗಳು, ಗಂಡ ಹೆಂಡತಿ ಸಂಬಂಧ ಅತ್ಯಂತ ಅಮೂಲ್ಯವಾದದ್ದು ಹಾಗೂ ಅದನ್ನು ನಿಭಾಯಿಸುವುದೂ ಸಹ ಅಷ್ಟೇ ಮಹತ್ವವಾದ ಜವಾಬ್ದಾರಿ. ಈ ಸಂಬಂಧದಲ್ಲಿ ಯಾರೇ ಎಡವಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಮದುವೆಯವರೆಗೆ ಬಂದ, ನಿಶ್ವಿತಾರ್ಥವಾದ ಸಂಬಂಧಗಳೂ ಕೂಡ ಇದುವರೆಗೆ ಅರ್ಥವೇ ಇಲ್ಲದೇ ಮುರಿದುಬಿದ್ದಿರುವ ಉದಾಹರಣೆಗಳೂ ನಮ್ಮ ನಡುವೆ ಸಾಕಷ್ಟಿವೆ. ಈ ಸಂಬಂಧ ಮುರಿದುಬಿದ್ದಾಗ ಅದನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳದೇ ಸಕಾರಾತ್ಮಕವಾಗಿ ಸ್ವೀಕರಿಸಿದರೆ ಸಾಕಷ್ಟು ಸಮಸ್ಯೆಗಳನ್ನು ಅಲ್ಲಿಯೇ ಹತ್ತಿಕ್ಕಬಹುದು. ಬ್ರೇಕ್ ಅಪ್ ಆದರೆ ಹುಡುಗಿಯರಿಗಿಂತ, ಹುಡುಗರ ಮನಸ್ಥಿತಿ ತುಂಬಾ ಹದಗೆಡುವುದು. ಅವರಿಗೆ ವಾಸ್ತವನ್ನು ಜೀರ್ಣಿಸಿಕೊಳ್ಳುವುದು ಅಸಾಧ್ಯವಾಗುವುದು, ಆಗ ಹೆಚ್ಚಿನವರು ಕುಡಿತ, ತಕ್ಷಣ ಬೇರೆ ಹೆಣ್ಣಿನ ಸಹವಾಸಕ್ಕೆ ಬೀಳುವುದು, ಬಿಟ್ಟು ಹೋದವಳ ನೆನೆಪಿನಲ್ಲಿಯೇ ಕೊರಗುವುದು ಮಾಡುತ್ತಾರೆ. ಇದರಿಂದ ಮಾನಸಿಕ ವೇದನೆ ಮತ್ತಷ್ಟು ಹೆಚ್ಚಾಗುವುದು.

ಬ್ರೇಕ್ ಅಪ್ ನೋವಿನಿಂದ ಹೊರಬರುವುದು ಹೇಳಿದಷ್ಟು ಸುಲಭವಲ್ಲ ಅಂತ ನಮಗೂ ಗೊತ್ತು. ಆದರೆ ಅದರಿಂದ ಹೊರಬರುವುದು ಅನಿವಾರ್ಯ ಅಲ್ಲವೇ? ನಿಮ್ಮ ನೋವನ್ನು ಮರೆಯಲು, ಹೊಸ ಮನುಷ್ಯನಾಗಲು ಇಲ್ಲಿ ನೀಡಿರುವ ಸಲಹೆಗಳು ನಿಮಗೆ ಸಹಾಯಮಾಡಬಹುದು:

1.ಮುಂದೆ ಸಾಗಿ

1.ಮುಂದೆ ಸಾಗಿ

ಒಮ್ಮೆ ಮುರಿದು ಬಿದ್ದ ಸಂಬಂಧದ ಬಗ್ಗೆ ಯೋಚಿಸದೆ ಮುಂದುವರಿಯಿರಿ. ನಿಮಗಿಷ್ಟವಾದ ವಿಶೇಷ ಸ್ವಭಾವದವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಇಲ್ಲಿಗೆ ಜೀವನವೇ ಮುಗಿಯಿತು ಎನ್ನುವವರಂತೆ ತಲೆ ಮೇಲೆ ಕೈ ಹೊತ್ತು ಕುಳಿತರೆ ಯಾವ ಕಾರ್ಯವೂ ಸಾಧಿಸಲಾಗದು. ಆದ್ದರಿಂದ ನಿಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಕಳೆಯಲು ಬೇರೆಯವರೊಂದಿಗೆ ಹೆಚ್ಚೆಚ್ಚು ಬೆರೆತು ಹಳೆಯದೆಲ್ಲವನ್ನು ಮರೆತುಬಿಡಿ.

2.ನೆನಪುಗಳು ಭೂತಕಾಲವಾಗಲಿ

2.ನೆನಪುಗಳು ಭೂತಕಾಲವಾಗಲಿ

ಅವಳ ಬಗ್ಗೆ ಯೋಚಿಸುತ್ತ, ಇಬ್ಬರೂ ಒಟ್ಟಿಗೆ ಕಳೆದ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದರೆ ನಿಮಗೆ ಇನ್ನಷ್ಟು ನೋವುಂಟಾಗುವುದು ಸಹಜ. ಆದ್ದರಿಂದ ಇಂತಹ ನೆನಪುಗಳನ್ನು ನಿಮ್ಮ ಮನಸ್ಸಿನಿಂದ ದೂರ ಮಾಡಿ ನಿಮ್ಮ ಭವಿಷ್ಯದ ಬಗ್ಗೆ ಆಲೋಚಿಸಿ. ನಿಮ್ಮ ಮುಂದಿನ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವುದರ ಬಗ್ಗೆ ಗಮನವಹಿಸಿ.

3.ನಿಮ್ಮ ಗೆಳತಿಗೆ ಕರೆಮಾಡುವುದು ಇನ್ನೇಕೆ?

3.ನಿಮ್ಮ ಗೆಳತಿಗೆ ಕರೆಮಾಡುವುದು ಇನ್ನೇಕೆ?

ನಿಮ್ಮ ಬಳಿ ಅವಳ ಫೋನ್ ನಂಬರ್ ಇರಬಹುದು ಮೊದಲು ಅದನ್ನು ನಿಮ್ಮ ಮೊಬೈಲ್ ನಿಂದ ತೆಗೆದು ಹಾಕಿ. ಆಗ ನಿಮ್ಮ ಗೆಳತಿಯ ನೆನಪು ಹೆಚ್ಚು ನಿಮ್ಮನ್ನು ಕಾಡಿಸುವುದಿಲ್ಲ. ನೀವು ಮತ್ತೆ ಮತ್ತೆ ಅವಳಿಗೆ ಕರೆಮಾಡುವುದನ್ನು ತಪ್ಪಿಸಲು ಆಕೆಯ ನಂಬರ್ ನ್ನು ಡಿಲಿಟ್ ಮಾಡುವುದು ಅತ್ಯಂತ ಸೂಕ್ತ.

4.ಏಕಾಂತ

4.ಏಕಾಂತ

ಸ್ವಲ್ಪ ಸಮಯವನ್ನು ಒಬ್ಬಂಟಿಯಾಗಿಯೇ ಕಳೆಯುವುದು ಉತ್ತಮ. ಸರಿ ತಪ್ಪುಗಳ ಲೆಕ್ಕಾಚಾರ ಹಾಕಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲು ಏಕಾಂತ ಒಳ್ಳೆಯದು. ಆದಾಗ್ಯೂ ಅತೀಯಾದ ಏಕಾಂತ ಒಳ್ಳೆಯದಲ್ಲ. ಅಂತಹ ಸಂದರ್ಭದಲ್ಲಿ ನಿಮ್ಮ ಗೆಳೆಯ ಅಥವಾ ಕುಟುಂಬದವರೊಂದಿಗೆ ಸುತ್ತಾಡುವುದು ಒಳಿತು.

5.ಹೆಚ್ಚುವರಿ ತಿನ್ನುವಿಕೆ

5.ಹೆಚ್ಚುವರಿ ತಿನ್ನುವಿಕೆ

ಅತಿಯಾಗಿ ಚಾಕಲೇಟ್ ತಿನ್ನುವುದು, ಮಧ್ಯಪಾನ ಇವು ಹಳೆಯ ನೆನಪುಗಳನ್ನು ಮತ್ತೆ ಮತ್ತೆ ನೆನೆಪಿಸುತ್ತವೆ. ಆದ್ದರಿಂದ ಇಂತಹ ಚಟದ ದಾಸರಾಗಬೇಡಿ.ಇವುಗಳನ್ನು ಆದಷ್ಟು ದೂರಮಾಡಿ. ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳಿ

6.ಇನ್ನೊಬ್ಬಳೊಂದಿಗೆ ಸ್ನೇಹ

6.ಇನ್ನೊಬ್ಬಳೊಂದಿಗೆ ಸ್ನೇಹ

ಒಮ್ಮೆ ನಿಮ್ಮ ಮನಸ್ಸಿನಿಂದ ದೂರವಾದ ಹುಡುಗಿಯ ಜಾಗದಲ್ಲಿ ಬೇರೊಬ್ಬಳಿಗೆ ಜಾಗವನ್ನು ನೀಡುವುದು ಸುಲಭ. ಆದರೆ ಆಕೆ ನಿಮ್ಮ ಹಿಂದಿನ ಪ್ರೇಮಿಯ ಜಾಗವನ್ನು ನಿಮ್ಮ ಮನಸ್ಸಿನಲ್ಲಿ ತುಂಬಬೇಕು. ಇದಕ್ಕೆ ಯಾವುದೇ ಕಾರಣಕ್ಕೂ ದುಡುಕದೆ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬೇಕು.

7.ಸೆಕ್ಸ್ / ಲೈಂಗಿಕತೆ

7.ಸೆಕ್ಸ್ / ಲೈಂಗಿಕತೆ

ನಿಮ್ಮ ಮುರಿದು ಹೋದ ಸಂಬಂಧದ ನೆನಪಿನಿಂದ ಹೊರಬರಲು ತಕ್ಷಣ ಬೇರೆ ಹೆಣ್ಣಿನ ಸಹವಾಸ ಮಾಡಿ ಲೈಂಗಿಕ ಕ್ರಿಯೆ ನಡೆಸಬೇಡಿ. ಬದುಕಿನ ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಿ.

8.ಒಬ್ಬಂಟಿಯಾಗಿ ಸಮಯ ಕಳೆಯುವುದು

8.ಒಬ್ಬಂಟಿಯಾಗಿ ಸಮಯ ಕಳೆಯುವುದು

ಒಬ್ಬಂಟಿಯಾಗಿ ಹೆಚ್ಚು ಸಮಯವನ್ನು ಕಳೆದರೆ ನಿಮ್ಮಲ್ಲಿ ಆಕೆಯ ನೆನಪು ಮತ್ತೆ ಮತ್ತೆ ಮರುಕಳಿಸಬಹುದು. ಅವಳ ಫೋಟೋ ಅಥವಾ ಅವಳ ನೆನಪುಗಳು ನಿಮ್ಮ ನ್ನು ಅವಳಿಗೆ ಪುನಃ ಕರೆಮಾಡುವಂತೆ ಪ್ರೇರೇಪಿಸಬಹುದು. ಆದ್ದರಿಂದ ಹೆಚ್ಚಿನ ಸಮಯವನ್ನು ಇತರರೊಂದಿಗೆ ಕಳೆಯಿರಿ.

9.ಫೇಸ್ ಬುಕ್ ಪ್ರೋಫೈಲ್

9.ಫೇಸ್ ಬುಕ್ ಪ್ರೋಫೈಲ್

ಅವಳು ನಿಮ್ಮಿಂದ ದೂರವಾದ ಮೇಲೆ ಫೇಸ್ ಬುಕ್ ನಲ್ಲಿ ಆಕೆಯ ನಡವಳಿಕೆಯನ್ನು ಗಮನಿಸಿ. ಆಕೆ ನಿಮ್ಮೊಂದಿಗೆ ಮಾತನಾಡದೇ ಬೇರೆಯವರೊಂದಿಗೆ ಸಹಜವಾಗಿದ್ದರೆ ಇದು ನಿಮಗೆ ನೋವನ್ನುಂಟುಮಾಡಬಹುದು.

10.ಅವಳಿಂದ ಇನ್ನಷ್ಟು ದೂರ

10.ಅವಳಿಂದ ಇನ್ನಷ್ಟು ದೂರ

ಅವಳ ಸ್ನೇಹಿತರು ನಿಮಗೂ ಪರಿಚಯವಾಗಿರಬಹುದು. ಆದರೆ ಬ್ರೇಕ್ ಅಪ್ ಆದ ಮೇಲೆ ಅವಳ ಸ್ನೇಹಿತರಿಂದಲೂ ನೀವು ದೂರ ಉಳಿಯುವುದು ಉತ್ತಮ!

ಒಮ್ಮೆ ಸಂಬಂಧ ಮುರಿದರೆ ಅದನ್ನು ಜೋಡಿಸುವುದು ಕಷ್ಟಸಾಧ್ಯವಾದರೂ ಈ ಬಿಡುಗಡೆ ನಿಮ್ಮ ಜೀವನದ ಕೊನೆಯಲ್ಲ ಎಂಬುದು ನಿಮಗೆ ನನಪಿರಲಿ. ಆದ್ದರಿಂದ ಹಿಂದಿನದನ್ನು ಮರೆತು ಮುಂದಿನ ಜೀವನದ ಬಗ್ಗೆ ನಿಮ್ಮದೆ ಆದ ಕನಸನ್ನು ಕಾಣುತ್ತ ಅದನ್ನು ನನಸಾಗುವತ್ತ ದಿಟ್ಟ ಹೆಜ್ಜೆಯನ್ನಿಡಿ. "ನಿನ್ನೆಯದು ನಿನ್ನೆಗೆ ಇಂದಿನದು ಇಂದಿಗೆ" ಎಂಬ ಮಾತು ನಿಮ್ಮಲ್ಲಿ ಸದಾ ಗುನುಗುತ್ತಿರಲಿ!

English summary

10 Things Not To Do After A Break-Up

A break-up can be the most devastating phase of your life! Or, the most eye-opening! Surprised? It’s your perspective that will make you look at your break-up in a positive or negative manner.
X
Desktop Bottom Promotion