For Quick Alerts
ALLOW NOTIFICATIONS  
For Daily Alerts

ಈ ಮನಸ್ಸಿದ್ದರೆ ವಿಚ್ಛೇದನ ತಡೆಯಬಹುದು

By Super
|

ವಿಚ್ಛೇದನ ಮತ್ತು ಅದರಿಂದಾಗುವ ನೋವು ಮತ್ತು ವಿಚ್ಛೇದನದ ನಂತರ ಸಮಾಜವನ್ನು ಎದುರಿಸುವುದು ಸಾಕಷ್ಟು ಕಷ್ಟ. ನಿಮ್ಮ ಮದುವೆ ಜೀವನದಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಅದರ ಪರಿಹಾರದ ಬಗ್ಗೆ ಯೋಚಿಸುವುದು ಒಳಿತು. ಹೆಚ್ಚಿನ ದಂಪತಿಗಳು ಒಂದಲ್ಲ ಒಂದು ಬಾರಿ ಪ್ರಕ್ಷುಬ್ದ ಸ್ಥಿತಿಗೆ ಹೋಗಿಯೇ ಹೋಗುತ್ತಾರೆ. ಸಂಬಂಧಗಳ ಬಗ್ಗೆ ಕಾಳಜಿ ವಹಿಸಿದಲ್ಲಿ ಇಂತಹ ಸಮಸ್ಯೆ ಬರುವುದನ್ನು ತಡೆಗಟ್ಟಬಹುದು.

ನಿಮ್ಮ ಸಮಸ್ಯೆಗಳಲ್ಲಿ ಮಗು ಕೂಡ ಬಂದರೆ ಅದಕ್ಕೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವುದು ಒಳಿತು. ಪರಿಣಾಮಕಾರಿ ಪರಿಹಾರಕ್ಕಾಗಿ ಈ ಕೆಳಗೆ ಕೊಟ್ಟಿರುವ ಮಾರ್ಗಗಳನ್ನು ಅನುಸರಿಸಿ ನಿಮ್ಮ ಜೀವನದ ವೈವಾಹಿಕ ಅಪಶ್ರುತಿಯನ್ನು ತಡೆಯಿರಿ.

ವೈವಾಹಿಕ ಅಪಶ್ರುತಿಯ ಕಾರಣಗಳನ್ನು ನೋಡಿ

ವೈವಾಹಿಕ ಅಪಶ್ರುತಿಯ ಕಾರಣಗಳನ್ನು ನೋಡಿ

ನಿಮ್ಮಿಬ್ಬರ ನಡುವೆ ಜಗಳ ತರುತ್ತಿರುವ ಮತ್ತು ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಸಂಗತಿ ಯಾವುದು ಎನ್ನುವುದರ ಬಗ್ಗೆ ಮೊದಲು ಗಮನ ಹರಿಸಿ. ಆ ಜಗಳ ಸಣ್ಣದಿರುವಾಗಲೇ ಪರಿಹಾರ ಕಂಡುಕೊಳ್ಳಿ ಜಗಳ ಹೆಚ್ಚಾಗದಂತೆ ನೋಡಿಕೊಳ್ಳಿ. ಹೆಚ್ಚಿನ ಸಮಯದಲ್ಲಿ ಸಣ್ಣ ಪುಟ್ಟ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಇದರಿಂದ ವೈವಾಹಿಕ ಜೀವನ ಸುಂದರವಾಗಿರುತ್ತದೆ.

ವೈವಾಹಿಕ ಜೀವನಕ್ಕೆ ಸಮಯ ಮೀಸಲಿಡಿ

ವೈವಾಹಿಕ ಜೀವನಕ್ಕೆ ಸಮಯ ಮೀಸಲಿಡಿ

40 - 50 ವರ್ಷಗಳಿಂದ ವೈವಾಹಿಕ ಜೀವನ ನಡೆಸಿಕೊಂಡು ಬಂದವರನ್ನು ಕೇಳಿ ನೋಡಿ ಅವರು ಕುಟುಂಬಕ್ಕೋಸ್ಕರ ಸಾಕಷ್ಟು ಸಮಯ ಮೀಸಲು ಇಟ್ಟಿರುತ್ತಾರೆ. ಮದುವೆ ಅನ್ನುವುದು ಇನ್ನೊಂದು ಯೋಜನೆ,ನೀವು ಸಮಯ ನೀಡಿದರೆ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ.

ಇಲ್ಲದಿದ್ದರೆ ಆರಂಭದ ಮೊದಲೇ ಕುಸಿಯಲು ಪ್ರಾರಂಭಿಸುತ್ತದೆ.ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯ ಏಕಾಂತವಾಗಿ ಕಳೆಯುವುದರಿಂದ ನಿಮ್ಮ ಜೀವನ ಸುಂದರವಾಗಿರುತ್ತದೆ.

ಆರೋಗ್ಯಕರವಲ್ಲದ ಸಂಗತಿಗಳಿಂದ ಹೊರಬನ್ನಿ (ಬಿಟ್ಟುಬಿಡಿ)

ಆರೋಗ್ಯಕರವಲ್ಲದ ಸಂಗತಿಗಳಿಂದ ಹೊರಬನ್ನಿ (ಬಿಟ್ಟುಬಿಡಿ)

ಮದುವೆಯ ಪ್ರಾರಂಭದ ದಿನಗಳಲ್ಲಿ ಇವುಗಳ ಬಗ್ಗೆ ಸಂಪೂರ್ಣ ಗಮನ ಕೊಡಿ, ಇಷ್ಟವಾಗದ ಸಂಗತಿಗಳನ್ನು ಗಮನಿಸಿ ನಿವಾರಿಸಿಕೊಳ್ಳಿ. ನಿಮ್ಮ ಸಂಗಾತಿಯಿಂದ ಹೆಚ್ಚಿನ ಸಮಯ ದೂರ ಇರುತ್ತೀರ? ಸ್ನೇಹಿತರ ಜೊತೆ ಇದ್ದಾಗ ಹೆಂಡತಿಯನ್ನು ಸಂಪೂರ್ಣ ನಿರ್ಲಕ್ಷಿಸುತ್ತೀರಾ?

ಇವುಗಳು ಅನಾರೋಗ್ಯಕರ ವಿಷಯಗಳು,ಇವುಗಳು ಗೊತ್ತೋ ಗೊತ್ತಿಲ್ಲದೆಯೋ ನಿಮ್ಮ ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಇವುಗಳನ್ನು ಗಮನಿಸಿ ಹೀಗಾಗದಂತೆ ನೋಡಿಕೊಳ್ಳುವುದರಿಂದ ನಿಮ್ಮ ಜೀವನ ಸುಗಮವಾಗುತ್ತದೆ.

ನಿಮ್ಮ ಲವ್ ಲೈಫ್ ಮರುಕಳಿಸುವಂತೆ ಮಾಡಿ

ನಿಮ್ಮ ಲವ್ ಲೈಫ್ ಮರುಕಳಿಸುವಂತೆ ಮಾಡಿ

ಇದು ತುಂಬಾ ಮುಖ್ಯ,ನಿಮ್ಮ ಲವ್ ಲೈಫ್ ನ್ನು ನೆನಪಿಸಿಕೊಳ್ಳಿ ನಿಮ್ಮ ಸಂಗಾತಿಗೆ ನಿಮ್ಮ ಡೇಟಿಂಗ್ ಸಮಯದಲ್ಲಿ ನಡೆದ ಸಂತೋಷಕರ ಘಟನೆಗಳನ್ನು ನೆನಪಿಸಿ.ನಿಮ್ಮ ಸಂಗತಿಯನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಸರಳವಾಗಿ ತಿಳಿಸಿ.ಇದು ವೈವಾಹಿಕ ಜೀವನದ ಇನ್ನಿತರ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ

ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ

ಇಲ್ಲಿ ಯಾರೂ ಪರಿಪೂರ್ಣರಲ್ಲ ಎಂಬುದನ್ನು ತಿಳಿದುಕೊಳ್ಳಿ. ಪ್ರತಿ ಭಾರಿ ಜಗಳ ಮಾಡುವ ಬದಲು ನೀವೂ ಕೆಲವು ತಪ್ಪು ಮಾಡುತ್ತೀರಿ ಎಂದು ಒಪ್ಪಿಕೊಳ್ಳಿ.ಇದರಿಂದ ಪ್ರತಿ ಭಾರಿ ಅವರ ಮೇಲೆ ತಪ್ಪು ಹೊರೆಸುವುದು ತಪ್ಪುತ್ತದೆ ಮತ್ತು ಆ ತಪ್ಪು ಇನ್ನೊಮ್ಮೆ ಆಗದಂತೆ ಎಚ್ಚರವಹಿಸಿ ನಿಮ್ಮನ್ನು ನೀವೇ ತಿದ್ದಿಕೊಳ್ಳಿ.

ತಪ್ಪನ್ನು ಮನ್ನಿಸುವ ಗುಣ ನಿಮ್ಮದಾಗಿರಲಿ

ತಪ್ಪನ್ನು ಮನ್ನಿಸುವ ಗುಣ ನಿಮ್ಮದಾಗಿರಲಿ

ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಬೇಕು ಎಂದರೆ ತಪ್ಪನ್ನು ಮನ್ನಿಸುವ ಗುಣ ಇಟ್ಟುಕೊಳ್ಳಬೇಕು.ಆದರೆ ನಿಮ್ಮ ಸಂಗಾತಿಯನ್ನು ಸಂಪೂರ್ಣ ಕ್ಷಮಿಸುವುದು ಕೂಡ ಅಷ್ಟೇ ಮುಖ್ಯ ಕೇವಲ ನಾಟಕವಲ್ಲ. ಇದರಿಂದ ನಿಮ್ಮ ಜೀವನ ಸುಖವಾಗಿರುತ್ತದೆ.

ಪರಿವಾರದ ಇತರ ಸದಸ್ಯರನ್ನು ಅಥವಾ ಕೌನ್ಸಿಲರ್ ಅನ್ನು ಭೇಟಿ ನೀಡಿ ಮಾತನಾಡಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುವುದು ಕೂಡ ನಿಮ್ಮ ವೈವಾಹಿಕ ಜೀವನ ಸುಗಮವಾಗಿ ಮುಂದುವರೆಯಲು ಸಹಾಯಕವಾಗಬಹುದು.

English summary

Steps to Avoid Divorce

Most married couples go through periods of turbulence at some point or the other. Couples who work on their relationship tirelessly are the ones who come out strong.
X
Desktop Bottom Promotion