For Quick Alerts
ALLOW NOTIFICATIONS  
For Daily Alerts

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

By Staff
|

ಪ್ರೀತಿಸಿದ ಯಾರನ್ನೂ ಬೇಕಾದರೂ ಕೇಳಿ ನೋಡಿ ಪ್ರೀತಿಯ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹೊಂದಿರುತ್ತಾರೆ. ಒಬ್ಬರು ಹೇಳಿದ ಉತ್ತರವನ್ನು ಮತ್ಯಾರೂ ಹೇಳುವುದಿಲ್ಲ. ಎಲ್ಲರ ಮನಸ್ಸಲ್ಲೂ ಪ್ರೀತಿ ತನ್ನದೇ ಆದ ರೀತಿಯಲ್ಲಿ ಮನೆ ಮಾಡಿರುತ್ತದೆ. ಪ್ರೀತಿಸದವರ ಮನಸ್ಸಲ್ಲೂ ಪ್ರೀತಿಗಾಗಿ ಹಂಬಲಿಸುತ್ತಿರುವವರ ಮನಸ್ಸಲ್ಲೂ ಪ್ರೀತಿಯಲ್ಲಿ ಗೆಲ್ಲದವರ ಮನಸ್ಸಲ್ಲೂ. ಆದರೆ ಪ್ರೀತಿ ಮಾಡಿದ ನಂತರ ಹೇಗಿರುತ್ತದೆ. ನಿಮ್ಮದು ನಿಜವಾದ ಪ್ರೀತಿಯೇ? ಪ್ರೀತಿಸುತ್ತಿದ್ಧೇನೆ ಎಂಬ ಭ್ರಮೆಯೇ? ಹೀಗೆಲ್ಲಾ ಪ್ರಶ್ನೆಗಳು ನಿಮ್ಮಲ್ಲಿದ್ದರೆ ನಿಮ್ಮನ್ನು ಬಿಡದೆ ಕಾಡುತ್ತಿದ್ದರೆ ಒಮ್ಮೆ ಇಲ್ಲಿ ಕಣ್ಣು ಹಾಯಿಸಿ.

ಪ್ರೀತಿ ಒಂದು ವಿಶೇಷ ಅನುಭವ. ಇಲ್ಲಿ ವಿಶೇಷ ಅನ್ನುವುದರ ಅರ್ಥ ಪ್ರೀತಿಸಿದವರಿಗೆ ಮಾತ್ರ ಅರ್ಥ ಆಗುತ್ತದೆ. ಇಲ್ಲಿಯತನಕ ಈ ಮಧುರ ಅನುಭವವನ್ನು ಪಡೆಯದವರು ನಮಗೂ ಇದೇನೆಂದು ತಿಳಿಯಬೇಕು ಎಂದು ಕಾತರದಿಂದ ಕಾಯುತ್ತಿರುತ್ತಾರೆ. ಪ್ರೀತಿಸಿದವರಲ್ಲಿ ಹೆಚ್ಚಿನ ಭಾಗ ಜನರು ಪ್ರೀತಿಯಲ್ಲಿ ಖುಷಿಯಾಗಿರುತ್ತಾರೆ. ಆದರೆ ಇನ್ನೂ ಕೆಲವು ಪ್ರೇಮಿಗಳು ಪ್ರೀತಿಯಲ್ಲಿ ಖುಷಿಯಾಗಿರುವುದಿಲ್ಲ. ಪ್ರೀತಿಸುವ ಮೊದಲು ಕೆಲವು ವಿಷಯಗಳು ತಮಗೆ ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ತೊಳಲಾಡುತ್ತಾರೆ. ನೀವು ಪ್ರೀತಿಸಿದ ನಂತರ ಹೀಗೆ ಬೇಸರ ಪಡಬಾರದು ದುಃಖ ಪಡಬಾರದು ಎಂದು ನೀವು ಪ್ರೀತಿಸುವ ಮೊದಲು ತಿಳಿದಿರಬೇಕಾದ ಹತ್ತು ವಿಷಯಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಮೊದಲ ವಿಷಯಗಳು ಮೊದಲ ಸ್ಥಾನದಲ್ಲಿ. ನಮ್ಮ ಸಂಬಂಧದಲ್ಲಿ ಗೆಳೆತನದ ಸ್ವಲ್ಪವಾದರೂ ಅಂಶವಿರದ ಸಂಬಂಧ ಇರದು. ಹಾಗಾಗಿ ಪ್ರೀತಿಯೂ ಹೀಗೆ ಮೊದಲು ಗೆಳೆತನದಿಂದಲೇ ಆರಂಭವಾಗುತ್ತದೆ ಎಂದು ನೆನಪಿಡಿ. ಹಾಗಾಗಿ ಗೆಳೆತನದ ಕೈ ಚಾಚುವಾಗ ಜಾಗರೂಕರಾಗಿರಿ. ಬಹಳ ಸಾವಧಾನವಾಗಿ ಗೆಳೆಯರನ್ನು ಆರಿಸಿಕೊಳ್ಳಿ.

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಹೆಚ್ಚಿನ ಜನ ಪ್ರೀತಿ ಎಂದು ಹೇಳುವುದು ಒಂದು ಆಕರ್ಷಣೆಯಷ್ಟೇ. ಹೀಗಾದ ಆಕರ್ಷಣೆಯನ್ನೇ ಪ್ರೀತಿ ಎಂದು ತಪ್ಪು ಭಾವಿಸುವವರು ಬಹಳ ಮಂದಿ ಇದ್ದಾರೆ. ಹೀಗೆ ಬರೀ ಆಕರ್ಷಣೆಯನ್ನೇ ನೆಚ್ಚಿ ಇದನ್ನೇ ಪ್ರೀತಿ ಎಂದುಕೊಂಡು ಸಂಬಂಧದಲ್ಲಿ ಮುಂದುವರಿಯುವುದು ನಿಮ್ಮನ್ನು ನಿರಾಸೆಯ ಕೂಪಕ್ಕೆ ತಳ್ಳುವುದು ಖಂಡಿತ. ಹಾಗಾಗಿ ಆಕರ್ಷಣೆ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸವನ್ನು ಮೊದಲು ಅರಿಯಿರಿ.

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ನಂಬಿಕೆ ಬರಿ ಪ್ರೀತಿಯಷ್ಟೇ ಅಲ್ಲ ಯಾವುದೇ ಸಂಬಂಧದಲ್ಲೂ ಆದ್ಯತೆಯ ಮೇರೆಗೆ ಇರಬೇಕು. ಮತ್ತು ಪ್ರೀತಿಯ ವಿಷಯದಲ್ಲಂತೂ ಇದು ಬೇಕೇ ಬೇಕು. ಹೀಗಾಗಿ ಮೊದಲು ಒಬ್ಬರು ಇನ್ನೊಬ್ಬರನ್ನು ಪೂರ್ತಿಯಾಗಿ ನಂಬುತ್ತೀರೋ ಇಲ್ಲವೋ ನೋಡಿಕೊಳ್ಳಬೇಕು. ನಿಮಗೆ ಒಬ್ಬ ವ್ಯಕ್ತಿಯ ಮೇಲೆ ನಂಬಿಕೆ ಇಲ್ಲದಿದ್ದರೆ ಅಥವಾ ಸಂದೇಹಗಳು ಹುಟ್ಟಿಕೊಳ್ಳಲು ಆರಂಭವಾದರೆ ಆ ವ್ಯಕ್ತಿಯ ಜೊತೆಗಿನ ಭಾವನಾತ್ಮಕವಾದ ಸಂಬಂಧ ಅಪಾಯ. ಮುಂದೆ ಆಗುವ ಆಘಾತದಿಂದ ಈಗಲೇ ದೂರವಾಗುವ ನೋವು ಎಷ್ಟರ ಮಟ್ಟಿಗೂ ಆಗಬಹುದು.

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ನಿಮಗೆ ಒಬ್ಬ ವ್ಯಕ್ತಿಯನ್ನು ಆರಿಸಿ ಅಥವಾ ಆಯ್ಕೆಪಟ್ಟು ಇಷ್ಟಪಡುತ್ತೀರೋ ಅಥವಾ ಅದೃಷ್ಟವೇ ನಿಮಗೆ ಸರಿಯಾದ ವ್ಯಕ್ತಿಯ ಆಯ್ಕೆ ಮಾಡುತ್ತದೋ ಹೇಳಲಾಗದು. ಆದರೆ ನಿಮ್ಮ ಒಡನಾಟ ಹೆಚ್ಚಿದಂತೆ ಮತ್ತು ಪ್ರೀತಿ ಗೆಳೆತನದಲ್ಲಿರುವ ಸ್ವಾತಂತ್ರ್ಯದಿಂದ ಹೆಚ್ಚು ಮಹತ್ವವಾದದ್ದು ಮತ್ತು ಆಕರ್ಷಣೆಗಿಂತ ಹೆಚ್ಚು ಪವಿತ್ರವಾದುದು ಎಂದು ನಿಮಗೇ ಅರ್ಥವಾಗುತ್ತದೆ. ಆಯ್ಕೆ, ಅದೃಷ್ಟ ಇವೆಲ್ಲವನ್ನೂ ನೀವು ಮರೆತು ಎಂದೆಂದೂ ಬೇರ್ಪಡದ ಒಂದು ಬಂಧವಾಗಿ ಬದಲಾಗುತ್ತದೆ.

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ನೀವು ಒಬ್ಬ ವ್ಯಕ್ತಿಯ ಜೊತೆ ಗೆಳೆತನದ ಸಂಬಂಧದಲ್ಲಿರುವಾಗ ನಿಮಗೆ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ. ನಿಮಗೆ ನಿಮ್ಮದೇ ಆದ ಬೇರೇಯೇ ಬದುಕಿರುತ್ತದೆ. ಆದರೆ ಪ್ರೀತಿಯಲ್ಲಿ ಈ ಸಂಬಂಧ ಮಾರ್ಪಟ್ಟಾಗ ನೀವು ಭಾವನಾತ್ಮಕವಾಗಿ ಆ ವ್ಯಕ್ತಿಯ ಜೊತೆ ಸಂಬಂಧ ಹೊಂದುವ ಕಾರಣ ಈ ಎಲ್ಲವೂ ಕಡಿಮೆಯಾಗಿ ಒಬ್ಬರು ಇನ್ನೊಬ್ಬರ ಬಗ್ಗೆ ಹೆಚ್ಚಿನ ಜವಾಬ್ದಾರಿ ಹೊಂದಿರುತ್ತೀರಿ. ನೀವು ಹೆಚ್ಚಿನ ಪ್ರೀತಿ, ಕಾಳಜಿ ತೋರಬೇಕು ಹಾಗೂ ಹೆಚ್ಚಿನ ವಿವೇಚನೆಯಿಂದ ವರ್ತಿಸಬೇಕು ಎಂಬ ನಿರೀಕ್ಷೆ ಹೆಚ್ಚುತ್ತದೆ. ನೀವು ಒಬ್ಬ ವ್ಯಕ್ತಿಯನ್ನು ನಿಜವಾಗಿಯೂ ಪ್ರೀತಿಸದಿದ್ದರೆ ಇವೆಲ್ಲವೂ ಒಂದು ದೊಡ್ಡ ಸಮಸ್ಯೆಯಂತೆ ಹಾಗೂ ಹೆಚ್ಚಿನ ಹೊರೆಯಂತೆ ನಿಮಗನ್ನಿಸುತ್ತದೆ.

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ??

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ??

ಪ್ರೀತಿ ಬಲವಾಗಲು ಸಮಯ ತೆಗೆದುಕೊಳ್ಳುತ್ತದೆ. ಹಾಗೂ ಇದೊಂದು ಎಂದೂ ಮುಗಿಯದ ಪ್ರಕ್ರಿಯೆಯಾಗಿದೆ. ಇದು ನೀವು ಹೆಚ್ಚು ಪ್ರೌಢರಾದಂತೆ ಹೆಚ್ಚುತ್ತದೆ. ನೀವು ಸಮಯ ಕಳೆದಂತೆ ನೀವು ಪ್ರೀತಿಸುವ ವ್ಯಕ್ತಿಯ ಸಾಮರ್ಥ್ಯ ಮತ್ತು ಕೆಲವು ಗುಣಗಳನ್ನು ಇಷ್ಟಪಡಲು ಆರಂಭಿಸುತ್ತೀರಿ. ಇಬ್ಬರ ವ್ಯಕ್ತಿತ್ವಗಳು ಒಬ್ಬರು ಇನ್ನೊಬ್ಬರಿಗೆ ಅರ್ಥವಾಗತೊಡಗುತ್ತವೆ ಹಾಗೂ ಎರಡೂ ಜೀವಗಳು ಒಂದಾಗಲು ಆರಂಭವಾಗುತ್ತದೆ.

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಇಬ್ಬರು ವ್ಯಕ್ತಿಗಳ ನಡುವಿನ ಬಂಧ ಹೆಚ್ಚು ಗಾಢ ಮತ್ತು ಗಟ್ಟಿಯಾದಂತೆ ಪ್ರೀತಿಯೂ ಹೆಚ್ಚುತ್ತದೆ. ಹೀಗೆ ಪ್ರೀತಿ ಹೆಚ್ಚಾದಂತೆ ನೀವು ಆ ವ್ಯಕ್ತಿಯ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತೀರಿ. ಇಂತಹ ಸಂದರ್ಭದಲ್ಲಿ ಅಭಿಪ್ರಾಯ ಭೇದ ಸಾಧ್ಯತೆಗಳಿವೆ. ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಇವು ಪ್ರೀತಿಸುವ ರೀತಿಯ ಮೇಲೆ, ನಿಮ್ಮ ನಿರೀಕ್ಷೆಗಳ ಮೇಲೆ ಮತ್ತು ಭಾವನೆಗಳ ಮೇಲೆ ಆಗಿರುತ್ತವೆ.

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಪ್ರೀತಿ ಎಂದರೆ ಕೆಲವರಿಗೆ ಕೇವಲ ಜೊತೆಗೆ ಮಲಗುವುದಾಗಿದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ದೈಹಿಕ ಸಂಬಂಧ ಹೊಂದುವುದಾಗಿದೆ. ಇದು ಖಂಡಿತ ನಿಜವಾದ ಪ್ರೀತಿಯಲ್ಲ. ಪ್ರೀತಿ ಎಲ್ಲಾ ತರಹದಲ್ಲೂ ಶುದ್ಧವಾಗಿರಬೇಕು. ಭಾವ, ಸಂಬಂಧ ಎಲ್ಲವೂ. ಇದು ಖಂಡಿತ ದೈಹಿಕ ಸಂಬಂಧವಲ್ಲ. ದೈಹಿಕ ಸಂಬಂಧವೂ ಸಂಬಂಧದ ಒಂದು ಭಾಗವಾಗಿರಬಹುದು ಆದರೆ ಪ್ರೀತಿ ಎಂದರೆ ಕೇವಲ ದೈಹಿಕ ಸಂಬಂಧ ಹೊಂದುವುದು ಎಂಬ ಕಲ್ಪನೆಯನ್ನು ಮನಸ್ಸಿನಿಂದ ತೆಗೆದುಹಾಕುವುದು ಅಗತ್ಯ.

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ನೀವು ಗೆಳೆಯರಾಗಿದ್ದಾಗ 'ಈಗ ಸಮಯವಿಲ್ಲ' ಎಂಬ ಮಾತು ಸರಿಯೆನ್ನಿಸಬಹುದು. ಆದರೆ ಗೆಳೆತನ ಪ್ರೀತಿಯಾದ ಬಳಿಕ ಈ ಉತ್ತರ ಯಾರಿಗೂ ರುಚಿಸದು, ಇದು ಸರಿಯೂ ಅಲ್ಲ. ಹೇಗಾದರೂ ಮಾಡಿ ಸಮಯ ಹೊಂದಿಸಿಕೊಳ್ಳಬೇಕಾದ್ದು ಅಗತ್ಯ. ನಿಮ್ಮ ದಿನನಿತ್ಯದ ಸಮಯವಿರದ ದಿನಚರಿಯ ನಡುವೆಯೂ ಸ್ವಲ್ಪ ಸಮಯ ನೀವು ಪ್ರೀತಿಸುವ ವ್ಯಕ್ತಿಯ ಜೊತೆ ಕಳೆಯಲೇ ಬೇಕು. ಸಮಯವೇ ಪ್ರೀತಿ, ಹುಡುಗಿಯ ಬಗೆಗಿನ ಭಾವನೆಗಳ ಅರ್ಥ ಮಾಡಿಕೊಳ್ಳುವುದು ಹಾಗೂ ಶ್ರದ್ಧೆ. ನೀವು ನಿಮ್ಮ ಪ್ರೀತಿ ಪಾತ್ರರಾದವರ ಜೊತೆಗೆ ಹೆಚ್ಚಿನ ಸಮಯ ಕಳೆದಂತೆ ಅವರ ಬಗೆಗಿನ ಭಾವನೆ ಮತ್ತು ಪ್ರೀತಿ ಇನ್ನೂ ಹೆಚ್ಚಾಗುತ್ತಾ ಹೋಗುತ್ತದೆ.

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಪ್ರೀತಿಸುವ ಮುನ್ನ ಇವೆಲ್ಲಾ ಬೇಕಾ?

ಪ್ರೀತಿ ಎಂದರೆ ಕೇವಲ ಸುಖವಲ್ಲ ಅದು ತನ್ನದೇ ಆದ ನೋವನ್ನೂ ಹೊಂದಿರುತ್ತದೆ. ನೀವಿದನ್ನು ಎದುರಿಸಲು ತಯಾರಿರಬೇಕು. ಹಲವು ಬಾರಿ ನೀವು ಈ ಹಿಂದೆ ಎಂದೂ ಹೊಂದಿರದ ನೊವನ್ನು ಎದುರಿಸಬೇಕಾಗಬಹುದು. ಆದರೆ ನಿಮ್ಮ ಪ್ರೀತಿ ನಿಜವಾದರೆ ಇದು ಇಂತಹ ನೋವಲ್ಲೇ ತನ್ನ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ನಿಮ್ಮ ಸಂಗಾತಿ ನಿಮ್ಮ ಜೊತೆಗಿರುತ್ತಾನೆ/ಳೆ. ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ನೋವನ್ನು ಎದುರಿಸಬೇಕು. ಆದರೆ ಇಂತಹ ಸಂದರ್ಭದಲ್ಲಿ ನಿಮ್ಮ ಪ್ರೇಮಿ ನಿಮ್ಮ ಜೊತೆಗಿಲ್ಲ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತಾನೆ/ಳೆ ಎಂದಾದರೆ ಬೇರ್ಪಡುವುದೇ ಸರಿಯಾದ ದಾರಿ ಎಂದು ನಿರ್ಧರಿಸಲು ತಡಮಾಡದಿರಿ.

English summary

10 Things you wish you knew before Falling in Love

There are majority of people who are happy with their love life, but there are also others who are not really very happy and always think about how wonderful it would have been had they knew beforehand how it would be to fall in love. Because we don’t want you to repent after you take the plunge, we have listed here top 10 things you should know before falling in love.
X
Desktop Bottom Promotion