For Quick Alerts
ALLOW NOTIFICATIONS  
For Daily Alerts

ರೊಮ್ಯಾಂಟಿಕ್ ಆಗಿರುವುದು ಹೇಗೆ ?

By ಲೇಖಕ
|

'ಪ್ರಣಯ ಪ್ರವೃತ್ತಿ' ಯ ಅರ್ಥ ವ್ಯಕ್ತಿಯಿಂದ ವ್ಯಕ್ತಿಗೆ ವ್ಯಾಪಕವಾಗಿ ಬದಲಾಗುತ್ತಾ ಹೋಗುತ್ತದೆ. ಆದರೆ ಪ್ರಣಯವೆಂಬುದು ಪ್ರೀತಿಯನ್ನು ಅರ್ಥವತ್ತಾಗಿ ಅನಿರೀಕ್ಷಿತ ರೀತಿಯಲ್ಲಿ ವ್ಯಕ್ತಪಡಿಸುವ ಒಂದು ವಿಧಾನ / ದಾರಿ. ಕೆಲವೊಮ್ಮೆ ವ್ಯಕ್ತಿಯ ಪ್ರೀತಿಯಿಂದ ಸ್ಪೂರ್ತಿ ಪಡೆಯುವ ನೈಜ ಪ್ರಣಯಕ್ಕೆ ಸೃಜನಶೀಲತೆ ಹಗೂ ಪ್ರಾಮಾಣಿಕತೆ ಬೇಕು. ಯಾರಿಗಾದರೂ ಪ್ರೀತಿಯ ಆಶ್ರಯವನ್ನು ಕೊಡುವುದು ಸುಲಭವೆನಿಸಬಹುದು ಆದರೆ ಪ್ರಣಯದ ಅನುವಾದ ಅಷ್ಟು ಸುಲಭವಲ್ಲ. ಪುಸ್ತಕಗಳಲ್ಲಿ, ಸಿನಿಮಾಗಳಲ್ಲಿ ಅಷ್ಟೇ ಏಕೆ ಅಂತರ್ಜಾಲಗಳಲ್ಲಿಯೂ ಕೂಡಾ ಪ್ರಣಯದ ಬಗ್ಗೆ ಲಕ್ಷಾಂತರ ಕಲ್ವನೆಗಳಿವೆ ಆದರೆ ನಿಜವಾದ ಪ್ರಣಯ / ರೊಮಾನ್ಸ್ ಇವುಗಳನ್ನು ಒಳಗೊಂಡಿದೆ.

ಹಂತಗಳು :

1. ಪ್ರಣಯವನ್ನು ವೈಯಕ್ತಿಕವಾಗಿಟ್ಟುಕೊಳ್ಳಿ. ಪ್ರಣಯವು ಒಂದು ಗಾತ್ರಕ್ಕೆ ಸೂಕ್ತವಾದುದಲ್ಲ. ಪ್ರಣಯದ ಕೆಲವು ರೂಢಿಗತ ಚಿಹ್ನೆಗಳು (ಗುಲಾಬಿ, ಮೇಣದ ಬತ್ತಿ, ಚಾಕೊಲೇಟ್) ಮಾತ್ರ ನಮಗೆ ಗೊತ್ತಿದೆ. ಆದರೆ ನಿಜವಾಗಿಯೂ ಯಾವುದರಿಂದ ವಿಶೇಷವಾದವರು ಹರ್ಷಗೊಳ್ಳುತ್ತಾರೆ ಎಂಬುದರ ಬಗ್ಗೆ ಯೋಚಿಸಿ. ನಿಮ್ಮ ಸಂಗಾತಿಗೆ ಅಪೂರ್ವ ಎನ್ನುವಂತೆ ಮಾಡುವ ಹಾಗೂ ಅವರು ಮಾತ್ರ ಪ್ರಶಂಸೆ ಮಾಡುವ ವಸ್ತುಗಳನ್ನು ಹುಡುಕಿ.

How to Be Romantic

ಅವರ ಚಮತ್ಕಾರಿ ಆಸಕ್ತಿಗಳು, ಗೀಲು, ಕಲ್ಪನೆಗಳು ಯಾವವು? ಶಾಪಿಂಗ್ ಮಾಡುವಾಗ, ಸಿನಿಮಾ ನೋಡುವಾಗ ಅಥವಾ ಮಾತನಾಡುವಾಗ ಅವರ ಕಣ್ಣು ಯಾವ ವಿಷಯದ ಬಗ್ಗೆ ಆಸಕ್ತಿವಹಿಸುತ್ತದೆ ಎಂಬುದರ ಬಗ್ಗೆ ಸದಾ ಗಮನ ವಹಿಸಿ. ಪ್ರಣಯದಿಂದಿರುವುದು ಎಂದರೆ ವ್ಯಕ್ತಿ ಎಷ್ಟು ಮುಖ್ಯ ಎಂಬುದನ್ನು ಅರಿಯುವುದು. ಅಂದರೆ ನಿಮ್ಮ ಸಂಗಾತಿಯನ್ನು ಇತರರಿಗಿಂತ ಯಾವ ವಿಷಯ ಅನನ್ಯ ಮಾಡುತ್ತದೆ ಎಂಬುದು ನಿಮ್ಮನ್ನು ಬಿಟ್ಟು ಜಗತ್ತಿನಲ್ಲಿ ಬೇರೆ ಯಾರಿಗೂ ತಿಳಿದಿಲ್ಲ ಎಂಬುದು ಸಂಗಾತಿಗೂ ಅರ್ಥವಾಗಿರುವುದು.

2. ಪ್ರಣಯದ ಚೇಷ್ಟೆಗಳನ್ನು ಮುಂದುವರಿಸಿ. ನೀವು ಮೊದಲ ಬಾರಿಗೆ ಭೇಟಿಯಾದಂತೆ ಹಾಗೂ ಅವರು ನಿಮಗಾಗಿ ಹಂಬಲಿಸುವಂತೆ ನಟಿಸಿ (ಸನ್ನಿವೇಶ ಸೃಷ್ಟಿಸಿ) ನಿಮ್ಮ ಆಸಕ್ತಿಯೇನು ? ನೀವು ಅವರಿಮ್ದ ಏನನ್ನು ಬಯಸುತ್ತೀರಿ ನಿಮ್ಮ ನ್ನು ಅವರು ಹೇಗೆ ಪ್ರೀತಿಸಬೇಕು ಎಂಬೆಲ್ಲ ಅಂಶಗಳನ್ನು ಅವರ ಗಮನಕ್ಕೆ ತನ್ನಿ. ನಿಮ್ಮ ಸಂಗಾತಿಯನ್ನು ನಿಮ್ಮನ್ನು ಬಿಟ್ಟು ಅವರಿಗೆ ಬೇರೆ ಯಾರೂ ಇಲ್ಲ ಎಂಬಂತೆ ಅವರನ್ನು ಪ್ರೀತಿಸಿ ಹಾಗೂ ಅವರನ್ನು ನೋಡಿಕೊಳ್ಳಿ. ಆದರೆ ನಿಮ್ಮ ಪ್ರೀತಿಯೇ ನಟನೆ ಅನಿಸಬಾರದು.

3. ಏಕಾಂತವನ್ನು ದೂರಮಾಡಿ ಅನೇಕ ಜನರು ಸಂಬಂಧದ ಆರಂಭದಲ್ಲಿ ಉತ್ಸಾಹ ಹಾಗೂ ಸ್ಪೂರ್ತಿಯಿಂದ ಸಂಬಂಧದಲ್ಲಿ ಮುಂದುವರಿಯುತ್ತಾರೆ ಏಕೆಂದರೆ ಆಗ ಎಲ್ಲವೂ ಹೊಸದಾಗಿಯೇ ಇರುತ್ತದೆ. ಸಂಬಂಧಗಳು ವಿಕಾಸಗೊಳ್ಳುತ್ತ ಹೋದ ಹಾಗೆ ಭೇಟಿ ಯಾವಾಗ ? ನಾಳೆ ಮುಂದಿನ ವಾರ ಮುಂದಿನ ತಿಂಗಳು ಯಾವಾಗ ಮಾತನಾಡುತ್ತೇವೆ ಪರಸ್ಪರ ಸ್ಪರ್ಶಿಸುತ್ತೇವೆ ಎನ್ನುವ ಕುತೂಹಲವಿರುತ್ತದೆ. ಕೊನೆಗೆ ಸಂಬಂಧಗಳು ಬೆಳೆದಂತೆ ಭೇಟಿಯೂ ನಿತ್ಯದ ಕೆಲಸವಾಗಿ ಅದರಲ್ಲಿ ಹೊಸತೆಂಬುದು ಇರುವುದೇ ಇಲ್ಲ. ರೊಮ್ಯಾಂಟಿಕ್ ಆಗಿರಿ. ಕಳೆದುಹೋದ ಸಂಭ್ರಮವನ್ನು ಮತ್ತೆ ಬಳಕೆಗೆ ತನ್ನಿ.

4. ಸಣ್ಣ ಪುಟ್ಟ ವಿಷಯಗಳನ್ನೂ ಗಮನಿಸಿ. ಪ್ರಣಯದ ಅನುಭವವನ್ನು ಪ್ರತಿ ದಿನವೂ ನಿಮ್ಮದಾಗಿಸಿಕೊಳ್ಳಬಹುದು. ಇದೇನು ದುಬಾರಿಯಾದ ಕೊಂಡುಕೊಳ್ಳಬೇಕಾದ ವಸ್ತುವಿನಂತಲ್ಲ. ವಾಸ್ತವವಾಗಿ, ಕೆಲವೊಮ್ಮೆ ಅತ್ಯಂತ ರೋಮಾಂಚಕ ಕ್ಷಣಗಳು ಅತ್ಯಂತ ಸರಳವಾಗಿ ಸ್ವಾಭಾವಿಕವಾಗಿರುತ್ತವೆ. ಐ ಲವ್ ಯೂ ಅಥವಾ ನಿನ್ನನ್ನು ಸಂಗಾತಿಯನ್ನಾಗಿ ಪಡೆದ ನಾನು ಭಾಗ್ಯಶಾಲಿ ಎಂದೆಲ್ಲ ಹೇಳಲು ನಿಮಗೆ ಹಲವಾರು ದಾರಿಗಳಿವೆ.

5. ಪ್ರಾಮಾಣಿಕವಾಗಿರಿ. ನಿಮ್ಮ ಬಗ್ಗೆ ಮೆಚ್ಚಿಗೆ ಭಾವನೆಯನ್ನು ಬೆಳೆಸಿ. ನಿಮ್ಮ ಸಂಗಾತಿ ನಿಮ್ಮ ಬಾಳಿನಲ್ಲಿ ಇರುವುದಕ್ಕೆ ಕೃತಜ್ಞತೆ ಸಲ್ಲಿಸಿ.

ಒಟ್ಟಿನಲ್ಲಿ ನಿಮ್ಮ ಇಷ್ಟದವರೊಂದಿಗೆ ನಿಮ್ಮ ಜೀವನ ಇನ್ನಷ್ಟು ಕಲರ್ ಫುಲ್ / ವರ್ಣಮಯವಾಗಿರಲು ನಿಮ್ಮ ದಿನವನ್ನು ರೊಮ್ಯಾಂಟಿಕ್ ದಿನವನ್ನಾಗಿ ಪರಿವರ್ತಿಸಿಕೊಳ್ಳಿ !

English summary

How to Be Romantic | ರೊಮ್ಯಾಂಟಿಕ್ ಆಗಿರುವುದು ಹೇಗೆ ?

What "being romantic" means varies widely from person to person, but at its core, romance involves doing something to express affection in a meaningful yet unexpected way. A true act of romance requires creativity and sincerity, often inspired by love.
X
Desktop Bottom Promotion