For Quick Alerts
ALLOW NOTIFICATIONS  
For Daily Alerts

ಮೂರು ವರ್ಷಗಳ ಬಳಿಕ ಅವಳಿಂದ ಕರೆ ಬಂತು

By Shami
|
Waged war Against Friendship
ಈ ನಡುವೆ ಕಾಲೇಜ್ ಟ್ರಿಪ್ ಇತ್ತು. ನಾನು ಹೋಗೋದು ಅಂತ ನಿರ್ಧಾರ ಮಾಡಿದ್ದೆ. ಆದ್ರೆ ಆಕೆ ಹೆಸರು ಲಿಸ್ಟಲ್ಲಿ ಇದ್ದದರಿಂದ ನಾನು ಹಿಂದೆ ಸರಿದೆ. ಅದೇ ನಾನು ಮಾಡಿದ ತಪ್ಪು. ಎಂಥ ಒಳ್ಳೆ ಅವಕಾಶವನ್ನು ಹಾಳು ಮಾಡಿದೆ. ಟ್ರಿಪ್ ಮರುದಿನ ಆಕೆ ತುಂಬ ಖುಷಿ ಆಗಿದ್ಲು. ನೀನ್ಯಾಕೆ ಬರ್ಲಿಲ್ಲ ಅಂತ ಸಾರಿ ಸಾರಿ ಕೇಳಿದಳು. ನೀನೆ ಕಾರಣ ಅಂತ ಹೇಳ್ಬೇಕು ಅಂದ್ಕೊಂಡೆ ಆದ್ರೆ ಮಾತೆ ಹೊರಗೆ ಬರ್ಲಿಲ್ಲ. ಫೈನಲ್ ಎಕ್ಸಾಮ್ ಹತ್ರ ಬಂತು. ಎಕ್ಷಮ್ ಮುಗ್ದು ಸಿಕ್ಕು ನಿಂಗೆ ಟ್ರೀಟ್ ಕೊಡ್ಬೇಕು ಅಂತ. ಆದ್ರೆ ಆಕೆ ಬರಲೇ ಇಲ್ಲ.

ಎಕ್ಸಾಮ್ ಮುಗಿತು. ಆಕೆ MBA ಮಾಡೋದು ಅಂತ ಮಂಗಳೂರಿಗೆ ಹೋದಳು. ಆಮೇಲೆ ನಾನು ಫೋನ್ ಮಾಡಿದ್ರುನು ರೆಸಿವ್ ಮಾಡ್ತಾ ಇರ್ಲಿಲ್ಲ. ಕೊನೆಗೊಮ್ಮೆ ಸಿಮ್ ಚೇಂಜ್ ಮಾಡಿದ್ಲು. ನಾನು ಅವಾಗ ಮಂಗಳೂರಿನಲ್ಲೇ ಇದ್ದೆ. ಹೀಗೆ 3 ವರ್ಷ ಆಯಿತು. ಆಮೇಲೆ ನಾನು ಬೆಂಗಳೂರಿಗೆ ಬಂದೆ. ಅದೇ ಸಮಯ ನನ್ನ ಡಿಗ್ರಿ ಫ್ರೆನ್ಸ್ ಜೊತೆ ಚಾಟ್ ಮಾಡ್ತಾ ಇದ್ದಾಗ ಅವನು ಹೇಳ್ದ. ನಿನ್ಹುಡುಗಿ ಬೆಂಗಳೂರಿನಲ್ಲೇ ಇದ್ದಾಳೆ. ನಂಗೆ ಫೋನ್ ಮಾಡಿದ್ಲು ಅಂತ. ನಾನು no ತಗೊಂಡು ಫೋನ್ ಮಾಡ್ದೆ . 3 ವರ್ಷದ ನಂತರ ಫೋನ್ ಮಾಡ್ದೆ. ಅವಳ ಧ್ವನಿ ಕೇಳಿ ಪುಳಕವಾಯಿತು.

ಸುಮಾರು ಅರ್ಧ ಗಂಟೆ ಮಾತಾಡಿದ್ವಿ . ಅದೇ ಕೊನೆ ಆಮೇಲೆ ಫೋನ್ ಮಾಡಿದ್ರುನು ಎತ್ತಿಲ್ಲ. sms ಗೆ ರಿಪ್ಲೈ ಇಲ್ಲ . ಅಂತು ಒಂದು ದಿನ ಆಕೆ ಕಾಲ್ ಬಂತು. ಒಂದು ವರ್ಷ ಕಳೆದ ಮೇಲೆ. ಅದೇನ್ ಗೊತ್ತ. 10 ತಿಂಗಳ ಹಿಂದೆ ನನ್ನ engagement ಆಯಿತು. ಮುಂದಿನ ತಿಂಗಳು ಮದುವೆ. ನೀನು ಬರಲೇ ಬೇಕು invitation ಮೇಲ್‌ಗೆ ಕಳಿಸ್ತೀನಿ ಅಂದ್ಲು. ಇದನ್ನ ಕೇಳಿ ನನ್ನ ಕಿವಿಗೆ ಕಾದ ಕಬ್ಬಿಣ ಸುರಿದ ಹಾಗೇ ಆಯಿತು. ಇದ್ದ ಕೊನೆ ಆಸೆ ಕೂಡ ಬತ್ತಿ ಹೋಯಿತು. ಹಮ್ ಅಂತ ನನ್ನ ಅಳು ದನಿಯ ಒಪ್ಪಿಗೆ ಆಕೆಗೆ ಕೇಳಿ ಆಕೆಗೂ ಒಂದು ಕ್ಷಣ ಬೇಜಾರಾಗಿರಬೇಕು. ಯಾಕಂದ್ರೆ ಅದು ಆಕೆಗೆ ಗೊತ್ತಿರುವ ವಿಷ್ಯನೇ .

ಹಾಂ ನಾನು ಆಕೆ ಮದ್ವೆಗೆ ಹೋಗಿಲ್ಲ. ಆಕೆ ಕೇಳಿದ್ದಕ್ಕೆ ಏನೋ ಸುಳ್ಳು ಹೇಳ್ದೆ. ಹೇಗೆ ಹೋಗೋದು ಹೇಳಿ? ನನ್ನ ಹೃದಯದ ಅರಗಿಣಿಗೆ ಇನ್ನೊಬ್ಬ ತಾಳಿ ಕಟ್ಟೋದು ನಾನು ಯಾವ ಕಣ್ಣಿಂದ ನೋಡಲಿ. ಭಾರವಾದ ಹೃದಯದಿಂದಲೇ ಆಕೆಗೆ ಶುಭ ಹಾರಯಿಸಿದೆ. ಆಕೆ ಎಲ್ಲಿದ್ದರು ಚೆನ್ನಾಗಿರಲಿ. ಆದರೆ ಆಕೆ ಮೇಲಿನ ನನ್ನ ಪ್ರೀತಿ ಇನ್ನು ಹೋಗಿಲ್ಲ. ಹಾಗಂತ ಅವಳ ಸಂಸಾರವನ್ನ ಹಾಳು ಮಾಡುವುದಿಲ್ಲ. ಕೊನೆಗೂ ಸ್ನೇಹವೇ ಗೆದ್ದಿತು. ಪ್ರೇಮ ಸೋತಿತು. ಬಹುಶಃ ನಾನು ಪ್ರೇಮ ನಿವೇದನೆ ಮಾಡಿದ್ದರೆ ಆಕೆ ಸ್ವೀಕರಿಸುತಿದ್ದಳೋ ಏನೋ ಗೊತ್ತಿಲ್ಲ. ಅದು ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.

English summary

Waged war Against Friendship | A love story | By Shishir in Puttur | ಪ್ರೀತಿಯೆದುರಲ್ಲಿ ಕೊನೆಗೂ ಗೆದ್ದದ್ದು ಸ್ನೇಹವೇ | ಶಿಶಿರ್ ಪುತ್ತೂರು

I waged a war against friendship, friendship won a love story by Shishir in Puttur. ಪ್ರೀತಿಯೆದುರಲ್ಲಿ ಕೊನೆಗೂ ಗೆದ್ದದ್ದು ಸ್ನೇಹವೇ
Story first published: Saturday, February 11, 2012, 17:49 [IST]
X
Desktop Bottom Promotion