Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ

ಹೀಗೆ ದಿನದಿಂದ ದಿನಕ್ಕೆ ನಮ್ಮ ಬೆಸುಗೆ ಗಟ್ಟಿ ಆಗ್ತಾ ಹೋಯಿತು. ಆದ್ರೆ ನಮ್ಮಿಬ್ಬರ ಮಾತಲ್ಲೂ ಪ್ರೀತಿಯೆಂಬ ಶಬ್ದ ಕೂಡ ಉಚ್ಚಾರ ಆಗ್ಲಿಲ್ಲ. ನನ್ನ ಅಮ್ಮನಿಗೂ ಸ್ನೇಹ ವೆಂದರೆ ತುಂಬ ಇಸ್ಟವೆಂದು ಆಕೆ ಆಗಾಗ ಹೇಳ್ತಾ ಇದ್ಲು. ಹೀಗೆ ನಾವು ಇಷ್ಟು ಸಲಿಗೆಯಿಂದ ಇರೋದು ಇಡಿ ಕಾಲೇಜ್‌ಗೆ ಗೊತ್ತಾಗಿಹೋಯಿತು. ಇದರ ಬಗ್ಗೆ ಯಾರ್ಯಾರು ಏನೇನಂದುಕೊಂಡರೋ ಗೊತ್ತಿಲ್ಲ. ಆಮೇಲೆ ಆಕೆ ಚೆನ್ನಾಗಿ ಮಾತಾಡಿದ್ರು ಕೂಡ ತನ್ನ ತುಂಟತನವನ್ನೆಲ್ಲ ನಿಲ್ಲಿಸಿದಳು. ಆಮೇಲೆ ನಾನೆನದ್ರು ಚಾಕ್ ಪೀಸ್ ಎಸೆದರೆ ಅಸಹನೆಯಿಂದ ತಿರುಗಿ ನೋಡ್ತಾ ಇದ್ಲು. ಸರಿ ಆಕೆಗೆ ಇಷ್ಟವಿಲ್ಲದ್ದು ನನಗು ಬೇಡ ಅಂತ ಆ ಅಭ್ಯಾಸ ನಿಲ್ಲಿಸಿ ಬಿಟ್ಟೆ .
ಅಂತು ಇಂಟರ್ನಲ್ ಎಕ್ಸಾಮ್ ಮುಗಿತು. ಪ್ರೇಮಿಗಳ ದಿನ ಹತ್ರ ಬಂತು. ನಮ್ಮ ಬ್ಯಾಚ್ ನ ಫೋಟೋ ಶೂಟ್ ಫೆ. 14ಕ್ಕೆ ಅಂದ್ರೆ ಪ್ರೇಮಿಗಳ ದಿನದಂದೇ ನಿರ್ಧಾರವಾಗಿತ್ತು. ಸಾಮಾನ್ಯವಾಗಿ ಆ ದಿನ ಒಳ್ಳೆ ಬಟ್ಟೆ ಧರಿಸಿ ಬರೋದು ವಾಡಿಕೆ. ನನ್ನಲ್ಲಿ ಕಾಲೇಜ್ ಡೇದು ಕಪ್ಪು ಪ್ಯಾಂಟ್ ಕೆಂಪು ಅಂಗಿ ಬಿಟ್ಟರೆ ಬೇರೆ ಒಳ್ಳೆ ಬಟ್ಟೆ ಇರ್ಲಿಲ್ಲ. ಅವತು ಕೆಂಪು ಬಟ್ಟೆ ಹಾಕಿದರೆ ಲವ್ ಇದೆಂಥ ಖಚಿತ ಆಗುತ್ತೆ . ಫ್ರೆನ್ಸ್ ಎಲ್ಲ ಹಾಗೇ ತಿಳ್ಕೊಳ್ತಾರೆ. ಬೇರೆ ವಿಧಿಯಿಲ್ಲ. ಸರಿ ಅದೇ ಬಟ್ಟೆ ಹಾಕಿ ಹೊರಟೆ. ಆದ್ರೆ ಆಕೆ ಆಕಾಶ ನೀಲಿ ಬಣ್ಣದ ಚೂಡಿದಾರ್ ಧರಿಸಿ ಬಂದಿದ್ದಳು. ಎದುರಿಗೆ ಸಿಕ್ಕಿದರು ಬರೆ ಹಾಯ್ ಮಾತ್ರ ಹೇಳಿದಳು. ನನಗೂ ಮನಸಿಗೆ ನೋವೆನಿಸಿತು.
ಆ ದಿನ ಏನೇ ಆಗಲಿ ನನ್ನ ಪ್ರೇಮ ನಿವೇದನೆ ಮಾಡ್ಬೇಕುಂತ ಗುಲಾಬಿ ಬಾಗ್ನಲ್ಲಿ ಹಾಕೊಂಡೆ ಬಂದಿದ್ದೆ. ಸಂಜೆ ಹೊತ್ತಿಗೆ ಕ್ಲಾಸಲ್ಲಿ ಆಕೆ ಒಬ್ಳೆ ಸಿಕ್ಕಿದರು ನಂಗೆ ಗುಲಾಬಿ ಕೊಟ್ಟು ಲವ್ ಯು ಅಂತ ಹೇಳೋ ಧೈರ್ಯ ಬರಲೇ ಇಲ್ಲ. ಯಾಕಂದ್ರೆ ಅವಳು ನಿರಾಕರಿಸಿ ಮತ್ತೆ ನನ್ನ ಫ್ರೆಂಡ್ ಶಿಪ್ಪೆ ಬೇಡ ಅಂದ್ರೆ. ಭಯ ಆಯಿತು. ಆದರು ಒಮ್ಮೆ ಬ್ಯಾಗಿಗೆ ಹು ತೆಗಯಲು ಕೈ ಹಾಕಿದೆ. ಇಲ್ಲ .. ಆಗ್ಲೇ ಇಲ್ಲ. ಆ ಹೊತ್ತು ಆಕೆ ನಾರ್ಮಲ್ ಆಗಿಯೇ ಒಂದೆರಡು ಮಾತಾಡಿ ಹೊರಟುಬಿಟ್ಟಳು .ಆ ದಿನ ನಂಗೆ ಆದ ನೋವನ್ನು ಎಣಿಸಲು ಸಾದ್ಯವಿಲ್ಲ. ನಂಗೆ ಅಳುವೇ ಬಂದಿತ್ತು. ಮನೆಗೆ ಹೋಗುವ ದಾರಿಯಲ್ಲಿ ಬ್ಯಾಗಲ್ಲಿದ್ದ ಗುಲಾಬಿಯನ್ನ ಹೊಸಕಿ ಬಿಸಾಡಿದೆ. ಒಂದು ವಾರ ನನ್ನನ್ನು ನಾನೇ ಕಳೆದುಕೊಂಡು ಬಿಟ್ಟಿದ್ದೆ. ಮಾತಿನ ಮಲ್ಲನಾಗಿದ್ದ ನಾನು ಮೌನಿಯಾದೆ. ಎದೆಯಲ್ಲಿ ನೋವು ಕರಗದಂತೆ ಬಿದ್ದಿತ್ತು .
ಈ ನಡುವೆ ಓರಗೆಯವವರ ಮಾತು ಕೇಳಿ ಆಕೆಗೂ ಗೊತ್ತಾಗಿ ಹೋಗಿರಬೇಕು ಹಾಗೇ ನನ್ನನು ದೂರ ಮಾಡ್ತಾ ಇದ್ದಳು. ಈ ಹೊತ್ತಿಗೆ ಆಕೆಗೆ ನಾನು ಒಂದು ಗಿಫ್ಟ್ ಕೊಟ್ಟೆ. ಆಕೆ ಗೆಳತಿ ಹೇಳ್ತಾ ಇದ್ಲು ಮನೆಯಲ್ಲಿ ಲವ್ ಬರ್ಡ್ಸ್ ಇದ್ರೆ ಚೆನ್ನಾಗಿರುತ್ತೆ. ಹಾಗೇ ನಾನು ಲವ್ ಬರ್ಡ್ಸ್ ನ ಆಕೆಗೆ ಗಿಫ್ಟ್ ಅಂಥ ಕೊಟ್ಟೆ. ಇದರಿಂದ ಆಕೆಗೆ ಖಚಿತವಾಗಿ ಹೋಯಿತು. ನಾನು ಆಕೇನ ಪ್ರೀತಿಸ್ತ ಇದ್ದೇನೆ ಅಂತ. ಆಮೇಲೆ ಅವಳ ಮಾತುಗಳು ತುಂಬ ಕಡಿಮೆ ಆದವು.



Click it and Unblock the Notifications
