For Quick Alerts
ALLOW NOTIFICATIONS  
For Daily Alerts

ಪ್ರೀತಿಯೆದುರಲ್ಲಿ ಕೊನೆಗೂ ಗೆದ್ದದ್ದು ಸ್ನೇಹವೇ

By .ಶಿಶಿರ್ ಪುತ್ತೂರು
|
Waged war Against Friendship
Dear Oneindia Kannada,

Please find below my 'love' story. If you do not consider this for the Valentines competition no probs. But I am requesting you to publish the story. It will give pleasure and solace to my broken heart.

Regards, Shishir Putturu.


ಯಾಕೋ ಗೊತ್ತಿಲ್ಲ. ಪ್ರತಿ ಸಲ ಪ್ರೇಮಿಗಳ ದಿನ ಬಂದಾಗ ನನ್ನೆದೆ ಬಡಿತ ಜೋರಾಗುತ್ತದೆ. ಹಾಗೇ ನನ್ನ ಮನದಲ್ಲಿ ನೋವು ಇನ್ನಿಲ್ಲದಂತೆ ಜಾಸ್ತಿ ಆಗುತ್ತಿದೆ. ಪ್ರೇಮ ಮತ್ತು ಸ್ನೇಹ ಎರಡೂ ಒಂದೇ ವೇಳೆ ನನ್ನೆದುರು ಬಂದು ನಿಂತವು. ಮನಸ್ಸು ತಲ್ಲಣಗೊಂಡಿತು. ನನಗೊತ್ತು . ನಾನು ಯಾವುದಾದರು ಒಂದನ್ನು ಆರಿಸಿ ಕೊಳ್ಳಬೇಕಿತ್ತು. ಸ್ನೇಹವನ್ನು ಕಳೆದು ಕೊಳ್ಳಲು ಇಷ್ಟವಿಲ್ಲ. ಹಾಗಂತ ಪ್ರೇಮವನ್ನು ಕಡೆಗಣಿಸಲು ಸಾಧ್ಯವಾಗಲಿಲ್ಲ .

ಪಿ .ಯು .ಸಿ . ಮುಗಿಸಿ ಪುತ್ತೂರಲ್ಲಿ ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ಬಿ.ಕಾಂಗೆ ಸೇರಿಕೊಂಡೆ. ಅವಾಗ ನನ್ನ ಆರ್ಥಿಕ ಪರಿಸ್ಥಿತಿ ಏನೂ ಉತ್ತಮವಾಗಿರಲಿಲ್ಲ. ಆವಾಗಲೇ ಈ ಸಂಪಿಗೆ ಮೂಗಿನ ಚೆಲುವೆ ಕಾಣಿಸಿದ್ದು. ಆಕೆ ಅದೇ ಕಾಲೇಜ್ ನಲ್ಲಿ ಪಿಯುಸಿ ಮುಗಿಸಿ ಡಿಗ್ರೀಗೆ ಸೇರಿಕೊಂಡಿದ್ದಳು. ಮೊದಲ ಸಲ ನೋಡಿದಾಗಲೇ ತುಂಬ ಆಕರ್ಷಣಿಯವಾಗಿ ಕಂಡಳು. ಪ್ರತಿ ದಿನ ತರಗತಿಗೆ ಬಂದಾಗ ಕಣ್ಣುಗಳು ತನ್ನಷ್ಟಕ್ಕೆ ಆ ಕಡೆ ಸೆಳೆಯುತಿದ್ದವು. ಅಷ್ಟು ಮುದ್ದಾದ ಮುಖ. ಹೀಗೆ ಆರೇಳು ತಿಂಗಳು ಕಳೆಯಿತು. ಕಾಲೇಜ್ ಕನ್ನಡ ಸಂಘಕ್ಕೆ ಆಸಕ್ತರನ್ನು ಸೇರಿಸುವ ಜವಾಬ್ದಾರಿ ನನ್ನದಾಗಿತ್ತು. ಹೀಗೆ ನಮ್ಮಿಬ್ಬರ ಮೊದಲ ಮಾತಿಗೆ ಅವಕಾಶ ಕೂಡಿ ಬಂದಿತ್ತು.

ನನ್ನ ಗೆಳೆಯನ ಮೂಲಕ ಆಕೆಯನ್ನು ಮಾತಾಡಿಸಿ ಆಕೆಯನ್ನು ಸಂಘಕ್ಕೆ ಸೇರಿಸಿದೆ. ಹೀಗೆ ಮುಂದುವರೆದ ಒಂದೆರಡು ಮಾತುಗಳು ನಮ್ಮಿಬ್ಬರನ್ನು ನಿಧಾನವಾಗಿ ಹತ್ತಿರಕ್ಕೆ ಸೇರಿಸಿತು. ಆದರು ನಂಗೆ ಒಳಗೊಳಗೇ ಏನೋ ಭಯ ಕಾಡ್ತಾ ಇತ್ತು. ಸೆಕೆಂಡ್ ಇಯರ್ ಬಿ.ಕಾಂನಲ್ಲಿ ನಮ್ಮ ಇಬ್ಬರ ಸ್ನೇಹ ಇನ್ನು ಗಟ್ಟಿ ಆಯಿತು. ನಾನು ಕಾಲೇಜ್ ನಲ್ಲಿ ಮಾತಾಡೋದು ಅಲ್ಲದೆ ಆಕೆಯ ಮನೆಗೆ ಫೋನ್ ಕೂಡ ಮಾಡ್ತಿದ್ದೆ. ಅವಳ ಅಮ್ಮ ಕೂಡ ನನ್ನ ಹತ್ತಿರ ಮಾತನಾಡುತಿದ್ದರು. ನನ್ನ ಬಗ್ಗೆ ಒಳ್ಳೆ ಅಭಿಪ್ರಾಯನೂ ಇತ್ತು ಎಂಬುದು ಅವರ ಮಾತುಗಳಲ್ಲೇ ಅರ್ಥವಾಗಿತ್ತು. ಅವಳು ಎಷ್ಟು ಸುಂದರವಾಗಿದ್ದಳೋ ಅಷ್ಟೇ ಗುಣವಂತೆ ಕೂಡ ಆಗಿದ್ದಳು. ಅವಳು ತೆಗೆದುಕೊಂಡ ಎಷ್ಟೋ ಪುಸ್ತಕಗಳನ್ನು ಆಕೆ ಓದದೆ ನನಗೆ ಕೊಟ್ಟು ಪುಣ್ಯ ಮಾಡಿದ್ದಳು. ಹಾಗೇ ನನ್ನ ನೋಟ್ಸ್ ಗಳನ್ನೂ ಕೂಡ ಬರೆದು ಕೊಟ್ಟಳು. ಇದಕ್ಕೆ ನಾನು ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಡಿಮೆಯೇ .

ಹೀಗೆ ನಮ್ಮಿಬ್ಬರ ಸ್ನೇಹ ನಮ್ಮ ಕಾಲೇಜ್ ನಲ್ಲಿ ಹೆಚ್ಚು ಕಡಿಮೆ ಎಲ್ಲರಿಗೂ ಗೊತ್ತಿತ್ತು. ನಂಗೆ ಆಕೆ ಮೇಲೆ ಪ್ರೀತಿ ಹುಟ್ಟಲು ಆಕೆಯೇ ಕಾರಣ. ಬಿ ಕಾಂ ಮೂರನೆ ವರ್ಷ. ಕಾಲೇಜ್ ಶುರುವಾಗಿ ಎರಡು ತಿಂಗಳು ಕಳೆದಿತ್ತು. ಅದೊಂದು ದಿವಸ ಮದ್ಯಾಹ್ನ ಊಟ ಮಾಡಿ ನಮ್ಮ ತರಗತಿಯ ಎದುರುಗಡೆ ನಿಂತುಕೊಂಡಿದ್ದೆ. ಆಗ್ಲೇ ನನ್ನ ಚೆಲುವೆ ನನ್ನೆದುರು ಬಂದಳು. ಅವಳು ಹಾಗೆ ಸಾಗಿ ತರಗತಿಗೆ ಹೋದವಳು ಹಿಂದೆ ತಿರುಗಿ ನನಗೆ ಲೈನ್ ಹೊಡೆದು ಬಿಟ್ಟಳು. ನನ್ನೆದೆಯಲ್ಲಿ ಮಿಂಚಿನ ಸಂಚಾರವಾಯಿತು. ಹಾಗೇ ನಕ್ಕು ಮುನ್ನಡೆದಳು. ಈ ದೃಶ್ಯ ಮತ್ತೆ ಮತ್ತೆ ನನ್ನ ಮನದಲ್ಲಿ ಹಾದು ಹೋಗುತ್ತ ಇತ್ತು. ಇತ್ತೇನು ಈಗಲೂ ಇದೆ.

English summary

Waged war Against Friendship | A love story | By Shishir in Puttur | ಪ್ರೀತಿಯೆದುರಲ್ಲಿ ಕೊನೆಗೂ ಗೆದ್ದದ್ದು ಸ್ನೇಹವೇ | ಶಿಶಿರ್ ಪುತ್ತೂರು

I waged a war against friendship, friendship won a love story by Shishir in Puttur. ಪ್ರೀತಿಯೆದುರಲ್ಲಿ ಕೊನೆಗೂ ಗೆದ್ದದ್ದು ಸ್ನೇಹವೇ
Story first published: Saturday, February 11, 2012, 19:33 [IST]
X
Desktop Bottom Promotion