For Quick Alerts
ALLOW NOTIFICATIONS  
For Daily Alerts

ಪ್ರೇಮ ಸಂದೇಶ ಸಾರುವ ನಿಮ್ಮ ಬಟ್ಟೆಯ ಬಣ್ಣ

|
Symbolic Colour For V'day
ಪ್ರೇಮಿಗಳ ದಿನದಂದು ಬಟ್ಟೆಯ ಬಣ್ಣ ಪ್ರೀತಿ ಬಗ್ಗೆ ಅವರಿಗಿರುವ ಧೋರಣೆಯನ್ನು ತಿಳಿಸುತ್ತದೆ. ಈ ರೀತಿ ಬಣ್ಣಕ್ಕೆ ಪ್ರಾಮುಖ್ಯತೆ ಕಾಲೇಜು ಕನ್ಯೆ-ಕುವರರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕೆಲವರು ಪಾಪ! ಗೊತ್ತಿಲ್ಲದೆ ಈ ರೀತಿಯ ಪ್ರೇಮ ಸಂದೇಶವನ್ನು ಸಾರುವ ಬಟ್ಟೆ ಧರಿಸಿ ಬಂದು ಫ್ರೆಂಡ್ಸ್ ಗಳು ಚುಡಾಯಿಸುವಂತೆ ಆಗುತ್ತದೆ.

ಪ್ರೇಮದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಈ ಕೆಳಗಿನ ಬಣ್ಣಗಳು ತಿಳಿಸುತ್ತವೆ. ಅದನ್ನು ತಿಳಿಯಲು ಮುಂದೆ ಓದಿ.

1. ಗುಲಾಬಿ ಬಣ್ಣ: ಒಬ್ಬರನ್ನು ಇಷ್ಟ ಪಡುತ್ತಿದ್ದು ಅದನ್ನು ಪ್ರೇಮಿಗಳ ದಿನದಂದು ಹೇಳ ಬಯಸುವವರು ಗುಲಾಬಿ ಬಣ್ಣವನ್ನು ಧರಿಸಿದರೆ ನೀವು ಯಾರನ್ನೋ ಪ್ರಪೋಸ್ ಮಾಡಲಿರುವಿರಿ ಎಂದು ಹೇಳುತ್ತದೆ.

2. ಕಿತ್ತಳೆ ಬಣ್ಣ:
ಪ್ರೇಮಿಗಳ ದಿನಕ್ಕೆ ಕಿತ್ತಳೆ ಬಣ್ಣ ತುಂಬಾ ಸೇಫ್. ಇದು ನೀವು ಹೀಗಾಗಲೇ ಲವ್ ಮಾಡುತ್ತಿರುವವರು ಅಥವಾ ಯಾರೂ ಆ ದಿನ ಪ್ರಪೋಸ್ ಮಾಡಬಾರದಂದು ಬಯಸುವವರು ಧರಿಸಬಹುದು.

3. ನೀಲಿ ಬಣ್ಣ: ನಿಮ್ಮನ್ನು ಯಾರಾದರೂ ಲವ್ ಮಾಡಿದರೆ ಚೆನ್ನಾಗಿರುತ್ತೆ ಆದರೆ ಅವರೇ ಹೋಗಿ ಪ್ರಪೋಸ್ ಮಾಡಲು ಭಯವಿರುವವರು ನೀಲಿ ಬಣ್ಣದ ಡ್ರೆಸ್ ಹಾಕಬಹುದು.

4. ಕಪ್ಪು ಬಣ್ಣ: ಪ್ರೀತಿಸಬಾರದು ಅದು ಸಿಲ್ಲಿ ಎಂದು ಭಾವಿಸುವವರು ಕಪ್ಪು ಬಣ್ಣವನ್ನು ಧರಿಸಬಹುದು.

5. ಹಳದಿ ಬಣ್ಣ:
ಭಗ್ನ ಪ್ರೇಮಿಗಳಾಗಿದ್ದು ಅದನ್ನು ಎಲ್ಲರಿಗೆ ತಿಳಿಯ ಪಡಿಸಲು ಇಷ್ಟ ಪಡುವವರು ಹಳದಿ ಬಣ್ಣದ ಬಟ್ಟೆ ಧರಿಸಬಹುದು.

6. ಹಸಿರು: ಪ್ರೀತಿ ಇತ್ತೀಚಿಗಷ್ಟೇ ಶುರುವಾಗಿ ಅದನ್ನು ತಿಳಿಸಲು ಇಷ್ಟ ಪಡುವವರು ಹಸಿರು ಬಣ್ಣವನ್ನು ಧರಿಸಬಹುದು.

7. ಬಿಳಿ:ಲವ್ ಬಗ್ಗೆ ತಟಸ್ಥ ಮನಭಾವವಿರುವವರು ಬಿಳಿ ಬಣ್ಣದ ಡ್ರೆಸ್ ಧರಿಸಬಹುದು.

English summary

Symbolic Colour For V'day | V'day Special Story | ಪ್ರೇಮಿಗಳ ದಿನದಲ್ಲಿ ಸಂದೇಶ ನೀಡುವ ಬಣ್ಣಗಳು | ಪ್ರೇಮಿಗಳ ದಿನದ ಕತೆ

Tomorrow V'day. So you may think that which color code or dress code I have to wear on valentine's day ? Yes this article will give your answer.
Story first published: Monday, February 13, 2012, 17:39 [IST]
X
Desktop Bottom Promotion