For Quick Alerts
ALLOW NOTIFICATIONS  
For Daily Alerts

ಪಾಕ ಪ್ರವೀಣರಾಗಲು ತಿಳಿದಿರಲಿ ಈ ಉಪಾಯಗಳು

|
Cookery Tips For Best Cooking
ಅಡುಗೆ ಮಾಡುವುದು ರಾಕೆಟ್ ವಿಜ್ಞಾನವಲ್ಲ ಅಂತ ಹೇಳುತ್ತೇವೆ. ಆದರೆ ಅಡುಗೆ ಮಾಡುವ ರೀತಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ತಿನ್ನುವುದು ಕಷ್ಟವಾಗುತ್ತದೆ. ಅಡುಗೆ ಮಾಡಲು ಗೊತ್ತಿದ್ದರೆ ಸಾಲದು. ಅಡುಗೆಯನ್ನು ಮತ್ತಷ್ಟು ರುಚಿಕರವಾಗಿ ಮತ್ತು ಸುಲಭವಾಗಿ ತಯಾರಿಸುವ ವಿಧಾನದ ಬಗ್ಗೆ ತಿಳಿದಿರುವುದು ಒಳ್ಳೆಯದು. ಈ ಕೆಳಗ್ಗೆ ಕೆಲ ಅಡುಗೆ ಟಿಪ್ಸ್ ಕೊಡಲಾಗಿದೆ. ಅವುಗಳು ಅಡುಗೆಯಲ್ಲಿ ನಿಮ್ಮನ್ನು ಮತ್ತಷ್ಟು ಪರಿಣತರಾಗಿ ಮಾಡಲು ಸಹಕಾರಿಯಾಗುವುದು.

ಅಡುಗೆಗೆ ಕೆಲ ಸಲಹೆಗಳು:

1. ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೀರಿನಲ್ಲಿ ನೆನೆ ಹಾಕಿ ನಂತರ ತೊಳೆದು ಅರೆಯುವುದಕ್ಕಿಂತ, ಚೆನ್ನಾಗಿ ತೊಳೆದು ನಂತರ ನೀರಿನಲ್ಲಿ ನೆನೆ ಹಾಕಿದರೆ ರುಬ್ಬುವಾಗ ಅದೇ ನೀರನ್ನು ಬಳಸಬಹುದು. ಏಕೆಂದರೆ ಅಕ್ಕಿ, ಕಾಳುಗಳನ್ನು ನೆನೆ ಹಾಕಿದ ನೀರನಲ್ಲಿ ವಿಟಮಿನ್ ಗಳಿರುತ್ತವೆ. ತೊಳೆಯದಿದ್ದರೆ ಆ ನೀರು ಬಿಸಾಡುವುದರಿಂದ ವಿಟಮಿನ್ ಗಳು ನಷ್ಟವಾಗುತ್ತದೆ.

2. ಅಡುಗೆಯಲ್ಲಿ ಉಪ್ಪು ಜಾಸ್ತಿಯಾಗಿದ್ದರೆ ಆಲುಗೆಡ್ಡೆ ಅಥವಾ ಟೊಮೆಟೊ ಕತ್ತರಿಸಿ ಆ ಅಡುಗೆಗೆ ಹಾಕಿದರೆ ಅಥವಾ ಒಂದು ಚಮಚ ಸಕ್ಕರೆ ಸೇರಿಸಿದರೆ ಉಪ್ಪು ಕಡಿಮೆಯಾಗುತ್ತದೆ.

3. ವಡೆ ಮಾಡುವಾಗ ಹಿಟ್ಟು ನೀರಾಗಿದ್ದರೆ ಎಣ್ಣೆಯಲ್ಲಿ ಹಾಕುವಾಗ ಸಿಡಿಯುತ್ತದೆ. ಆದ್ದರಿಂದ ಈ ರೀತಿ ಉಂಟಾದಾಗ ಸ್ವಲ್ಪ ತುಪ್ಪ ಸೇರಿಸಿದರೆ ಸಿಡಿಯುವುದಿಲ್ಲ.

4. ಮಾಂಸಾಹಾರ ಮಾಡುವಾಗ ಮಾಂಸ ಸ್ವಲ್ಪ ಬೆಂದ ಮೇಲೆ ಉಪ್ಪು ಹಾಕಿ, ಅದರಲ್ಲೂ ಉಪ್ಪು ಸ್ವಲ್ಪ ಕಮ್ಮಿ ಹಾಕಬೇಕು. ಬೆಂದ ನಂತರ ಉಪ್ಪು ನೋಡಿ ಬೇಕಿದ್ದರೆ ಸ್ವಲ್ಪ ಸೇರಿಸಬೇಕು.

5. ಗಟ್ಟಿಯಾದ ಗ್ರೇವಿ ಅಥವಾ ಸೂಪ್ ಸ್ವಲ್ಪ ಗಟ್ಟಿಯಾಗಿ ಮಾಡುವುದಾದರೆ ಸ್ವಲ್ಪ ಜೋಳದ ಹಿಟ್ಟು ಸೇರಿಸಬೇಕು. ಇದನ್ನು ಹಾಗೇ ಹಾಕುವುದಕ್ಕಿಂತ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ ನಂತರ ಹಾಕುವುದು ಒಳ್ಳೆಯದು.

6. ಪಾಸ್ತಾ ತಯಾರಿಸುವಾಗ ಬೇಯಿಸುವ ನೀರಿಗೆ ಉಪ್ಪು ಹಾಕಿದರೆ ಒಳ್ಳೆಯದು. ಈ ರೀತಿ ಮಾಡಿದರೆ ಮಾತ್ರ ಪಾಸ್ತಾಕ್ಕೆ ಸ್ವಲ್ಪ ಉಪ್ಪು ಹಿಡಿಯುತ್ತದೆ. ನೀರು ಕುದಿ ಬಂದ ನಂತರ ಉಪ್ಪು ಸೇರಿಸಬೇಕು. ಮೊದಲೇ ಸೇರಿಸಿದರೆ ನೀರು ಕುದಿ ಬರಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.

7. ಅನ್ನ ಬೆಂದ ನಂತರ ಬಿಡಿಬೊಡಯಾಗಿ ಇರಬೇಕೆಂದರೆ ಅಕ್ಕಿಯನ್ನು ತೊಳೆದು 10 ನಿಮಿಷ ನೀರಿನಲ್ಲಿ ನೆನೆಹಾಕ ಬೇಕು. ನಂತರ ಬೇಯಿಸಬೇಕು. ಅನ್ನ ಬೇಯಿಸುವಾಗ ಒಂದು ಚಮಚ ಎಣ್ಣೆ ಹಾಕಿದರೆ ಅನ್ನ ಒಂದಕ್ಕೊಂದು ಅಂಟುವುದಿಲ್ಲ.

8. ಕರಿದ ತಿಂಡಿಗಳನ್ನು ತಯಾರಿಸುವಾಗ ಎಣ್ಣೆ ತುಂಬಾ ನೊರೆ ಬಂದು ಬಾಣಲೆಯಿಂದ ಹೊರಚೆಲ್ಲದಂತೆ ತಡೆಯಲು ಎಣ್ಣೆ ಕುದಿಯುವಾಗ ಸ್ವಲ್ಪ ಹುಣಸೆ ಹಣ್ಣು ಹಾಕಿದರೆ ಸಾಕು.

9. ಮೃದುವಾದ ಇಡ್ಲಿ ಬೇಕೆಂದರೆ ಕಲೆಸಿಟ್ಟ ಹಿಟ್ಟನ್ನು ಪಾತ್ರೆಗೆ ಹಾಕಿ ಬೇಯಿಸುವ ಮೊದಲು ಮತ್ತೊಮ್ಮೆ ಕದಡಬಾರದು. ಏಕೆಂದರೆ ಇಡ್ಲಿ ಹಿಟ್ಟನ್ನು ಕಲೆಸಿ 8-10 ಗಂಟೆ ಇಟ್ಟಾಗ ಹಿಟ್ಟಿನಲ್ಲಿ ಗುಳ್ಳೆಗಳಲ್ಲಿ ಗಾಳಿ ಸೇರಿಕೊಂಡಿರುತ್ತದೆ. ಆದ್ದರಿಂದ ಹಿಟ್ಟನ್ನು ಕದಡದೆ ಪಾತ್ರೆಗೆ ಹಾಕಿ ಬೇಯಿಸಿದರೆ ಹಿಟ್ಟು ಮೃದುವಾಗುತ್ತದೆ.

10. ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬರದಿರಲು ಈರುಳ್ಳಿಯನ್ನು ನೀರಿನಲ್ಲಿ ಹಾಕಿ ಅಥವಾ ಫ್ರಿಜ್ ನಲ್ಲಿಟ್ಟು ಕತ್ತರಿಸಬೇಕು.

English summary

Cookery Tips For Best Cooking | ಅಡುಗೆಯಲ್ಲಿ ಪರಿಣಿತರಾಗಲು ಕೆಲ ಸಲಹೆಗಳು

In cooking cookery tips will helps more to prepare a good food. If you know cooking technique then cooking will become quite easy.
Story first published: Tuesday, May 29, 2012, 16:07 [IST]
X
Desktop Bottom Promotion