Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಯುಗಾದಿಗಾಗಿ ನೀರೂರಿಸುವ 10 ಸಿಹಿ ಖಾದ್ಯಗಳು!
ಯುಗಾದಿ ವರ್ಷದ ಪ್ರಾರಂಭ ಸಂಕೇತ. ಕರ್ನಾಟಕ ಹಾಗೂ ಆಂಧ್ರದ ಜನತೆಗೆ ಯುಗಾದಿ ತುಂಬಾ ವಿಶೇಷವಾದ ಹಬ್ಬವಾಗಿದೆ. ಹೊಸ ಯುಗದ ಪ್ರಾರಂಭಕ್ಕಾಗಿ ಹೊಸ ಕಾರ್ಯಗಳನ್ನು ಮಾಡುತ್ತೇವೆ ಈ ಸಮಯದಲ್ಲಿ ಇದನ್ನು ಸಿಹಿಯಿಂದ ಆಚರಿಸುವುದು ವಾಡಿಕೆ. ಆದ್ದರಿಂದಲೇ ಯುಗಾದಿಯ ಮೆನು ಪಟ್ಟಿಯಿಂದ ಸಿಹಿಯನ್ನು ನಮಗೆ ಕೈಬಿಡಲಾಗುವುದಿಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯುಗಾದಿಗಾಗಿ ರುಚಿಯಾದ ಚನ್ನಾ ಉಸಾಲ್ ರೆಸಿಪಿ
ಈ ಯುಗಾದಿಗಾಗಿ ವಿಭಿನ್ನವಾಗಿ ಹಬ್ಬವನ್ನು ಆಚರಿಸಲು ಬೋಲ್ಡ್ ಸ್ಕೈ 10 ವಿಧದ ಸಿಹಿಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದೆ. ಆಂಧ್ರ ಹಾಗೂ ಕರ್ನಾಟಕದ ಎರಡೂ ರಾಜ್ಯಗಳ ವಿಶೇಷ ಸಿಹಿಯನ್ನು ಈ ಯುಗಾದಿಗಾಗಿ ನಾವು ತಂದಿದ್ದು ಪ್ರತಿಯೊಂದರ ಸಿಹಿಯೂ ವಿಭಿನ್ನ ಮತ್ತು ಸ್ವಾದಪೂರ್ಣವಾಗಿದೆ.
ವಿವಿಧ ಬಗೆಯ ಪಾಯಸ, ಕೀರು, ನೀರೂರಿಸುವ ಮೈಸೂರು ಪಾಕು, ಒಬ್ಬಟ್ಟು ಮುಂತಾದ ಸಿಹಿಗಳು ನಿಮ್ಮ ನಾಲಗೆಯನ್ನು ತಣಿಸಲಿದೆ. ಹಾಗಿದ್ದರೆ ಇನ್ನೇಕೆ ತಡ? ಈ ಪಟ್ಟಿ ಮಾಡಿರುವ 10 ಸಿಹಿ ತಿಂಡಿಗಳನ್ನು ಈ ಯಗಾದಿಗಾಗಿ ವಿಶೇಷವಾಗಿ ತಯಾರಿಸಿ. ಮತ್ತು ವರ್ಷದ ಪ್ರಾರಂಭವನ್ನು ಸಿಹಿಯೊಂದಿಗೆ ಆರಂಭಿಸಿ!
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಾವ್! ಮಜ್ಜಿಗೆ ಹುಳಿ: ಯುಗಾದಿ ಸ್ಪೆಶಲ್

ತೆಂಗಿನಕಾಯಿ ಹೂರಣ ಹೋಳಿಗೆ:
ತೆಂಗಿನ ತುರಿಯೊಂದಿಗೆ ಬೆಲ್ಲವನ್ನು ಕರಗಿಸಿ ಮಿಶ್ರ ಮಾಡಿ ಸ್ಟಫ್ಫಿಂಗ್ ರೀತಿಯಲ್ಲಿ ಈ ಹೋಳಿಗೆಯನ್ನು ತಯಾರಿಸುತ್ತಾರೆ.ಈ ತೆಂಗಿನ ಕಾಯಿಯ ಹೂರಣ ಹೋಳಿಗೆಯು ನಿಮ್ಮ ಯುಗಾದಿ ಹಬ್ಬವನ್ನು ನೆನಪಿನಲ್ಲಿರುವಂತೆ ಮಾಡುವುದು ಖಂಡಿತ.

ಹೆಸರು ಬೇಳೆ ಪಾಯಸ:
ಯುಗಾದಿಗಾಗಿ ಸಿದ್ಧಪಡಿಸಲೇಬೇಕಾದ ಡಿಶ್ ಆಗಿದೆ ಹೆಸರು ಬೇಳೆ ಪಾಯಸ. ಹೆಸರು ಬೇಳೆ ಹಾಗೂ ಖರ್ಜೂರದೊಂದಿಗೆ ಇದನ್ನು ತಯಾರಿಸಬಹುದು.

ಮೈಸೂರ್ ಪಾಕ್:
ಶುದ್ಧವಾದ ತಪ್ಪು ಹಾಗೂ ಕಡಲೆಹಿಟ್ಟಿನ ಸಮಪಾಕ ಮೈಸೂರ್ ಪಾಕ್‌ನ ರುಚಿಯನ್ನು ನಿಮ್ಮ ಬಾಯಲ್ಲಿ ಉಳಿಯುವಂತೆ ಮಾಡುತ್ತದೆ.

ಒಬ್ಬಟ್ಟು:
ಒಬ್ಬಟ್ಟು ಹೆಸರಾಂತ ಯುಗಾದಿ ಸಿಹಿತಿಂಡಿಯಾಗಿದೆ. ಸರಳವಾಗಿ ತಯಾರಿಸಬಹುದಾದ ಈ ಸಿಹಿತಿಂಡಿಯಲ್ಲಿ ಬೆಲ್ಲ ಅತಿ ಮುಖ್ಯ. ಕ್ಯಾಲೋರಿ ರಹಿತ ಪದಾರ್ಥವಾದ ಬೆಲ್ಲ ನಿಮ್ಮ ತೂಕ ಏರಿಕೆ ಚಿಂತೆಯನ್ನು ದೂರಮಾಡುತ್ತದೆ.

ಅವಲಕ್ಕಿ ಪಾಯಸ:
ಈ ಮುಖ್ಯವಾದ ದಿನದಂದು ಪಾಯಸವನ್ನು ಸಿಹಿಯಾಗಿ ತಯಾರಿಸಲೇಬೇಕು. ಅಕ್ಕಿ, ಸೇಮಿಗೆ ಅಥವಾ ಅವಲಕ್ಕಿಯಿಂದ ಕೂಡ ಪಾಯಸವನ್ನು ತಯಾರಿಸಬಹುದು.

ಬೂರೇಲು:
ಯುಗಾದಿಗಾಗಿ ತಯಾರಿಸುವ ಸಿಹಿಖಾದ್ಯವಾಗಿದೆ ಬೂರೇಲು. ಕಡಲೆ ಹಿಟ್ಟು, ಬೆಲ್ಲ ಅಥವಾ ಸಕ್ಕರೆಯಿಂದ ತೆಂಗಿನ ತುರಿ ಬೆರೆಸಿ ಇದನ್ನು ಸಿದ್ಧಪಡಿಸುತ್ತಾರೆ.

ಸೇಮಿಗೆ ಪಾಯಸ:
ಪಾಯಸ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿರುವ ಮತ್ತು ಹಾಲಿನಿಂದ ತಯಾರುಮಾಡಲಾದ ಸಿಹಿತಿಂಡಿಯಾಗಿದೆ. ಸೇಮಿಗೆ ಪಾಯಸವನ್ನು ಕೂಡ ಯುಗಾದಿಗೆ ವಿಶೇಷವಾಗಿ ತಯಾರಿಸುತ್ತಾರೆ.

ಅರಿಸೇಲು:
ಆಂಧ್ರ ಹಾಗೂ ಕರ್ನಾಟಕದಲ್ಲಿ ಯುಗಾದಿ ಹಬ್ಬಕ್ಕಾಗಿ ತಯಾರುಮಾಡಲಾಗುವ ಸಿಹಿ ಖಾದ್ಯವಾಗಿದೆ ಅರಿಸೇಲು. ಕಜ್ಜಾಯ, ಅತಿರಸಂ ಮೊದಲಾದ ಹೆಸರುಗಳಿಂದ ಇದನ್ನು ಕರೆಯುತ್ತಾರೆ. ಅಕ್ಕಿ ಹಿಟ್ಟು ಮತ್ತು ಬೆಲ್ಲ ಈ ಖಾದ್ಯ ತಯಾರಿಗೆ ಅತ್ಯವಶ್ಯಕ ಸಾಮಾಗ್ರಿಗಳು.

ಪೆಸರಪ್ಪು ಪಾಯಸ:
ಇದು ಮೂಲತಃ ದಕ್ಷಿಣ ಭಾರತದ ಸಿಹಿಯಾಗಿದ್ದು ಪಾಯಸ ಅಥವಾ ಖೀರ್‌ನಿಂದ ಚಿರಪರಿಚಿತ. ಇದನ್ನು ಹೆಸರುಬೇಳೆಯಿಂದ ತಯಾರಿಸುತ್ತಾರೆ. ಆದ್ದರಿಂದ ಹಳದಿ ಬಣ್ಣವನ್ನು ಈ ಪಾಯಸ ಹೊಂದಿದೆ.

ಡ್ರೈ ಫ್ರುಟ್ಸ್ ಕೇಸರಿ:
ರವೆ, ಅಕ್ಕಿ ಮತ್ತು ಕೇಸರಿಯಿಂದ ತಯಾರು ಮಾಡಲಾಗುವ ವಿಶೇಷ ಸಿಹಿಯಾಗಿದೆ ಡ್ರೈ ಫ್ರುಟ್ಸ್ ಕೇಸರಿ. ಕೇಸರಿ ಬಾತ್ ಎಂಬ ಉಪನಾಮವೂ ಈ ಖಾದ್ಯಕ್ಕಿದೆ.



Click it and Unblock the Notifications