For Quick Alerts
ALLOW NOTIFICATIONS  
For Daily Alerts

ಸಿಹಿ ರೆಸಿಪಿಗಳ ಸರದಾರ 'ಬಾದುಷಾ'- ವಿಡಿಯೋ ನೋಡಿ....

By Hemanth
|

ನವರಾತ್ರಿ ಎಂದರೆ ಒಂಬತ್ತು ದಿನಗಳ ಕಾಲ ಸಡಗರ, ಸಂಭ್ರಮ. ಪ್ರತಿಯೊಂದು ಗಲ್ಲಿಗಲ್ಲಿಯಲ್ಲಿ ದುರ್ಗೆಯನ್ನು ಸಾರ್ವಜನಿಕವಾಗಿ ಪೂಜಿಸಲಾಗುತ್ತದೆ. ಕೆಲವು ಮನೆಗಳಲ್ಲೂ ದುರ್ಗೆಯನ್ನು ಪೂಜಿಸುತ್ತಾರೆ. ಇದಕ್ಕಾಗಿ ಮನೆಯನ್ನು ಸ್ವಚ್ಛ ಮಾಡಿ ಅಲಂಕಾರ ಮಾಡಲಾಗುತ್ತದೆ.

ದುರ್ಗೆಯು ಎಲ್ಲಾ ದುಷ್ಟಶಕ್ತಿಗಳನ್ನು ನಿವಾರಣೆ ಮಾಡಿ ಶಕ್ತಿಯನ್ನು ಒದಗಿಸುತ್ತಾಳೆ ಎನ್ನುತ್ತವೆ ಪುರಾಣಗಳು. ದುರ್ಗೆಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿಯು ನೆಲೆಸುವುದು. ಮನೆಯಲ್ಲಿ ನವರಾತ್ರಿಗಾಗಿಯೇ ಕೆಲವೊಂದು ಅಡುಗೆಗಳನ್ನು ಮಾಡಲಾಗುತ್ತದೆ. ದಿನಕ್ಕೊಂದು ರೀತಿಯ ಅಡುಗೆ ನವರಾತ್ರಿಯ ವಿಶೇಷಗಳಲ್ಲಿ ಒಂದಾಗಿದೆ. ದಸರಾ ಹಬ್ಬದ ಸ್ಪೆಷಲ್: ಸಿಹಿ ತಿನಿಸುಗಳ ರಸದೂಟ ರೆಡಿ!

ಅದರಲ್ಲೂ ಸಿಹಿತಿಂಡಿ ತಯಾರಿಸಿ ದುರ್ಗೆಗೆ ಅರ್ಪಿಸಿದ ಬಳಿಕ ಅದನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಬಾದುಷಾ ಎನ್ನುವ ಸಿಹಿತಿಂಡಿ ಮಾಡುವುದು ತುಂಬಾ ಕಷ್ಟಕರ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ನಾವು ಇದನ್ನು ತುಂಬಾ ಸರಳವಾಗಿ ಮಾಡುವಂತಹ ವಿಧಾನವನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ವೀಡಿಯೋವನ್ನು ನೋಡಿಕೊಂಡು ಇದನ್ನು ತಯಾರಿಸಬಹುದು ಅಥವಾ ಕೆಳಗೆ ಕೊಟ್ಟಿರುವ ವಿಧಾನವನ್ನು ಓದಿಕೊಂಡು ಇದನ್ನು ತಯಾರಿಸಿಕೊಳ್ಳಿ.

4 ಜನರಿಗೆ ಆಗುವಷ್ಟು
*ಬೇಕಾಗುವ ಸಮಯ-30 ನಿಮಿಷ
*ತಯಾರಿಸಲು ಬೇಕಾಗುವ ಸಮಯ-20 ನಿಮಿಷ

ಸಾಮಗ್ರಿಗಳು
*ಮೈದಾ- 1 ಕಪ್
*ಮೊಸರು-1/2 ಕಪ್
*ಬೆಣ್ಣೆ-2 ಚಮಚ
*ಅಡುಗೆ ಸೋಡಾ- ಒಂದು ಚಿಟಿಕೆ
*ಸಕ್ಕರೆ- 1 ಕಪ್
*ನೀರು- 1 ಕಪ್
*ಏಲಕ್ಕಿ ಹುಡಿ-1 ಚಿಟಿಕೆ
*ಕರಿಯಲು ಎಣ್ಣೆ

ಮಾಡುವ ವಿಧಾನ

1.ಒಂದು ಪಾತ್ರೆಗೆ ಮೊಸರು, ಬೆಣ್ಣೆ, ಅಡುಗೆ ಸೋಡಾ, ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.


2.ಅಗಲವಾದ ಬಾಯಿಯ ಪಾತ್ರೆಯಲ್ಲಿ ಮೈದಾ ಮತ್ತು ಮೊಸರಿನ ಮಿಶ್ರಣವನ್ನು ಹಾಕಿಕೊಂಡು ಹಿಟ್ಟಿನ ಹದಕ್ಕೆ ಬರಲು ಬಿಡಿ.


3.ಹತ್ತು ನಿಮಿಷಗಳ ಕಾಲ ಹಾಗೆ ಇರಲಿ.


4.ನೀರು ಹಾಗೂ ಸಕ್ಕರೆ ಹಾಕಿಕೊಂಡು ಸಕ್ಕರೆಯ ಸಿರಪ್ ಮಾಡಿಕೊಳ್ಳಿ.


5.ಮಧ್ಯಮ ಬೆಂಕಿಯಲ್ಲಿ ಇದನ್ನು ಕುದಿಸಿ ದಪ್ಪಗಿನ ಸಕ್ಕರೆ ಸಿರಪ್ ಪಡೆಯಿರಿ.


6.ಬೆಂಕಿ ನಂದಿಸಿದ ಬಳಿಕ ಸುವಾಸನೆಗಾಗಿ ಇದಕ್ಕೆ ಏಲಕ್ಕಿ ಹುಡಿಯನ್ನು ಹಾಕಿಕೊಳ್ಳಿ.


7.ಹತ್ತು ನಿಮಿಷದ ಬಳಿಕ ಮೈದಾದ ಹಿಟ್ಟನ್ನು ತೆಗೆದು ಪ್ಯಾಟೀಸ್ ರೀತಿಯಲ್ಲಿ ಮಾಡಿಕೊಳ್ಳಿ. ಇದನ್ನು ಮುಂದಕ್ಕೆ ಉರುಳಿಸಿಕೊಂಡು ಬಾದುಷಾದ ವಿನ್ಯಾಸವನ್ನು ಪಡೆಯಬಹುದು.


8.ಬಾಣಲೆಗೆ ಎಣ್ಣೆಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಅದರಲ್ಲಿ ಬಾದುಷಾವನ್ನು ಕರಿಯಿರಿ.


9.ಮಧ್ಯಮ ಬೆಂಕಿಯಲ್ಲಿಟ್ಟುಕೊಂಡು ಬಾದುಶಾವನ್ನು ಕರಿಯಿರಿ.


10.ಬಾದುಷಾವು ಕಂದು ಬಣ್ಣಕ್ಕೆ ತಿರುಗಿದಾಗ ಹೊರಗೆ ತೆಗೆದು 2-3 ನಿಮಿಷ ಹಾಗೆ ಇಡಿ.


11. ಬಾದುಷಾವನ್ನು ಸಕ್ಕರೆ ಸಿರಪ್‌ಗೆ ಹಾಕಿಕೊಂಡು ರಾತ್ರಿಯಿಡಿ ಅದರಲ್ಲಿ ನೆನೆಯಲು ಬಿಡಿ.


12.ಇದಕ್ಕೆ ಬಾದಾಮಿ, ಗೋಡಂಬಿಯ ಚೂರುಗಳನ್ನು ಹಾಕಿಕೊಳ್ಳಬಹುದು. ಇದು ನವರಾತ್ರಿಗೆ ಹೇಳಿ ಮಾಡಿಸಿದಂತಹ ಸಿಹಿ ತಿಂಡಿ.
English summary

Special Badusha Sweet Recipe For Navratri: Video

Today we'll share a simple and easy badusha sweet recipe that you could make for the occasion. While most of us think that badusha is quite difficult to be prepared, let us tell you the technique is actually quite simple. Take a look at the video and the step-wise method that is listed below to prepare this yummy treat!
X
Desktop Bottom Promotion