For Quick Alerts
ALLOW NOTIFICATIONS  
For Daily Alerts

ಸಿಹಿ ಪ್ರಿಯ ಗಣಪನಿಗೆ-ಬಗೆ ಬಗೆಯ ನೈವೇದ್ಯ!

By Jaya subramanya
|

ಗಣೇಶನ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಸಪ್ಟೆಂಬರ್ ತಿಂಗಳ ಐದನೆಯ ತಾರೀಕು ಈ ಬಾರಿ ಗಣಪ ಮನೆಮನೆಗೆ ಆಗಮಿಸಲಿದ್ದಾರೆ. ಮೂರ್ತಿಯನ್ನು ತಂದು ಅದನ್ನು ಪೂಜಿಸಿ ವಿಸರ್ಜಿಸುವ ಪದ್ಧತಿ ಹಿಂದೂ ಮನೆಗಳಲ್ಲಿ ಈಗಲೂ ನಡೆದುಕೊಂಡು ಬರುತ್ತಿರುವ ಕ್ರಮವಾಗಿದೆ. ಹಬ್ಬದ ಪ್ರಥಮ ದಿನ ಗೌರಿಯನ್ನು ಮನೆಗೆ ಆಮಂತ್ರಿಸುವ ಪದ್ಧತಿ ಇದ್ದರೆ ಎರಡನೆಯ ದಿನ ಗಣಪನನ್ನು ಆಮಂತ್ರಿಸುತ್ತಾರೆ. ಬೆಲ್ಲ, ಕೊಬ್ಬರಿಯ ಮೋದಕ ರೆಸಿಪಿ

ಹಬ್ಬದ ಸಮಯದಲ್ಲಿ ಸಿಹಿಯನ್ನು ಮಾಡಿದಾಗ ಅದನ್ನು ದೇವರ ಮುಂದಿರಿಸಿ ಸೇವಿಸುವುದು ಪೂಜೆಯ ಕ್ರಮವಾಗಿದೆ. ಮೋದಕ ಪ್ರಿಯನಾದ ಗಣಪನಿಗೆ ಸಿಹಿಯಲ್ಲಿ ಎರಡನೆಯ ಆಯ್ಕೆ ಲಾಡಾಗಿದೆ. ಇಷ್ಟಲ್ಲದೆ ಹುರಿಗಡುಬು, ಸಿಹಿ ತಿಂಡಿಗಳು ವಿಘ್ನವಿನಾಶಕನ ಅಚ್ಚುಮೆಚ್ಚಿನದ್ದಾಗಿದೆ. ಗಣೇಶ ಚತುರ್ಥಿ ವಿಶೇಷ; ಬಗೆ ಬಗೆಯ ತಿನಿಸುಗಳು

ಇಂದಿನ ಲೇಖನದಲ್ಲಿ ಕೂಡ ನಿಮ್ಮ ಬಂದು ಬಾಂಧವರಿಗೆ ಪ್ರಸಾದ ರೂಪದಲ್ಲಿ ನೀಡಿ ದೇವರಿಗೆ ನೈವೇದ್ಯವನ್ನು ಅರ್ಪಿಸಲು ಮಾಡಬಹುದಾದ ವಿಶೇಷ ನೈವೇದ್ಯ ರೆಸಿಪಿಗಳನ್ನು ಇಂದಿಲ್ಲಿ ತಿಳಿಸಿಕೊಡುತ್ತಿದ್ದೇವೆ.

ಪೂರಣ್ ಪೋಲಿ (ಹೂರಣ ಹೋಳಿಗೆ)

ಪೂರಣ್ ಪೋಲಿ (ಹೂರಣ ಹೋಳಿಗೆ) ಸಿಹಿಯನ್ನು ತಯಾರಿಸುವುದು ಸರಳವಾಗಿದ್ದು ಹಬ್ಬಕ್ಕಾಗಿ ಇದನ್ನು ವಿಶೇಷವಾಗಿ ತಯಾರಿಸಿಕೊಳ್ಳಬಹುದಾಗಿದೆ. ಬೇರೆ ಬೇರೆ ಬಗೆಯ ಹೂರಣ ಹೋಳಿಗೆ ರೆಸಿಪಿಯನ್ನು ನಿಮಗೆ ಪ್ರಯತ್ನಿಸಬಹುದಾಗಿದೆ. ಚತುರ್ಥಿಗಾಗಿ ಹೋಳಿಗೆಯನ್ನು ತಯಾರಿಸಲು ಲಿಂಕ್ ಕ್ಲಿಕ್ ಮಾಡಿ ಗಣೇಶ ಹಬ್ಬಕ್ಕೆ ಸಿಹಿ ಸಿಹಿ ಹೂರಣದ ಹೋಳಿಗೆ!

ಕಜ್ಜಾಯ


ದಕ್ಷಿಣ ಭಾರತದ ಪ್ರಮುಖ ಸಿಹಿ ಇದಾಗಿದೆ. ಕಜ್ಜಾಯವಯವನ್ನು ತಯಾರಿಸುವುದು ಕಷ್ಟವೆಂದೇ ಹಲವರ ಭಾವನೆಯಾಗಿದೆ. ಸರಿಯಾದ ವಿಧಾನವನ್ನು ನೀವು ಅನುಸರಿಸಿದಲ್ಲಿ ಇದನ್ನು ಸರಳವಾಗಿ ತಯಾರಿಸಿಕೊಳ್ಳಬಹುದಾಗಿದೆ. ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ರುಚಿಕರವಾದ ರವೆ ಕಜ್ಜಾಯ ರೆಸಿಪಿ

ತಂಬಿಟ್ಟು


ನೈವೇದ್ಯ ರೆಸಿಪಿಗಳಲ್ಲಿ ಒಂದಾಗಿರುವ ತಂಬಿಟ್ಟು ಮಾಡಲು ಹೆಚ್ಚು ಸರಳ ಎಂದೆನಿಸಿದೆ. ಹೆಚ್ಚು ಮೃದುವಾದ ಸಿಹಿ ತಿಂಡಿ ಇದಾಗಿದ್ದು ಅಕ್ಕಿ ಮತ್ತು ಗೋಧಿಯನ್ನು ಬಳಸಿ ಇದನ್ನು ಸಿದ್ಧಪಡಿಸಲಾಗುತ್ತದೆ. ಬೆಲ್ಲ, ನೀರು ಮತ್ತು ಹಿಟ್ಟು ಇದರಲ್ಲಿ ಪ್ರಧಾನ ಸಾಮಾಗ್ರಿಯಾಗಿದೆ. ನೈವೇದ್ಯಕ್ಕಾಗಿ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ಜೋಕಾಲಿ ಆಡೋಣ ಬನ್ನಿರೋ ತಂಬಿಟ್ಟು ತಿನ್ನೋಣ ಬನ್ನಿರೋ

ಸಿಹಿ ಪೊಂಗಲ್

ಸಂಕ್ರಾಂತಿಗಾಗಿ ತಯಾರಿಸುವ ಸಿಹಿ ಪೊಂಗಲ್ ಅನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಬಹುದಾಗಿದೆ. ಇದು ಹೆಚ್ಚು ಸರಳವಾಗಿ ತಯಾರಿಸಬಹುದಾದ ಸಿಹಿಯಾಗಿದೆ. ಹೆಸರು ಬೇಳೆ ಮತ್ತು ಬೆಲ್ಲವನ್ನು ಬಳಸಿ ತಯಾರಿಸುವ ಪೊಂಗಲ್ ಗಣೇಶ ಚತುರ್ಥಿಗೆ ಇದು ಅತ್ಯುತ್ತಮ ಸಿಹಿಯಾಗಿದೆ. ರೆಸಿಪಿಗಾಗಿ ಇಲ್ಲಿ ಕ್ಲಿಕ್ ಮಾಡಿ ಸಂಕ್ರಾಂತಿ ಹಬ್ಬಕ್ಕೆ ಸ್ಪೆಷೆಲ್ -ಸ್ವೀಟ್ ಪೊಂಗಲ್
English summary

Simple Naivedya Recipes For Ganesh Chaturthi

Ganesh Chaturthi is a very important and joyous festival. This year, the festival falls on September 5th. In many houses, especially in South India, the festival is celebrated for two days, the first day for welcoming Gowri (or the Gowri festival) and the next day for welcoming Ganesh ji, called Ganesh Chaturthi.
X
Desktop Bottom Promotion