For Quick Alerts
ALLOW NOTIFICATIONS  
For Daily Alerts

ರುಚಿಕರವಾದ ರವೆ ಕಜ್ಜಾಯ ರೆಸಿಪಿ

|

ಆಂಧ್ರದ ಅನೇಕ ವಿಶೇಷ ಸಿಹಿ ತಿಂಡಿಗಳಲ್ಲಿ ಅರಿಸೆಲು ಕೂಡ ಒಂದು . ರವೆ ಅರಿಸೆಲು ಅನ್ನು ರವೆ ಕಜ್ಜಾಯ ಅಂತಲೂ ಕರೆಯಬಹುದು. ತಿನ್ನಲು ತುಂಬಾ ರುಚಿಕರವಾಗಿರುವ ಈ ತಿಂಡಿಯನ್ನು ಮನೆಯಲ್ಲಿ ಹಬ್ಬ ಹರಿದಿನ ಅಥವಾ ಇನ್ನಿತರ ವಿಶೇಷ ದಿನಗಳಲ್ಲಿ ತಯಾರಿಸಬಹುದು. ರವೆ ಕಜ್ಜಾಯವನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ಮಾಡುವ ವಿಧಾನ ನೋಡಿ.

ಬೇಕಾಗುವ ಸಾಮಾಗ್ರಿಗಳು:

* ರವೆ 1 ಕಪ್
* ಅಕ್ಕಿ ಹಿಟ್ಟು ಒಂದು ಕಪ್
* ತುರಿದ ಬೆಲ್ಲ ಒಂದೂವರೆ ಕಪ್
* ಹಾಲು ಅರ್ಧ ಕಪ್
* ಗಸೆಗಸೆ 2 ಕಪ್
* ಏಲಕ್ಕಿ ಅರ್ಧ ಚಮಚ
ಎಣ್ಣೆ

ತಯಾರಿಸುವ ವಿಧಾನ:

1. ರವೆಯನ್ನು ಕಂದು ಬಣ್ಣ ಬರುವವರೆಗೆ ಹುರಿಯಬೇಕು

2. ನಂತರ ಪಾತ್ರೆ ಇಟ್ಟು ಅದರಲ್ಲಿ 2 ಚಮಚ ಎಣ್ಣೆ ಹಾಕಿ ರವೆ ಮತ್ತು ಎರಡು ಕಪ್ ನೀರು ಹಾಕಿ ರವೆಯನ್ನು ಬೇಯಿಸಬೇಕು. ನಂತರ ತುರಿದ ಬೆಲ್ಲವನ್ನು ರವೆಗೆ ಹಾಕಿ ಬೆಲ್ಲ ಕರಗಿ ರವೆಯಲ್ಲಿ ಮಿಶ್ರವಾಗುವವರೆಗೆ ಬೇಯಿಸಬೇಕು.

3. ಈಗ ಈ ಮಿಶ್ರಣದ ಮೇಲೆ ಅಕ್ಕಿ ಹಿಟ್ಟು ಹಾಕಿ ಬೇಗನೆ ಮಿಶ್ರ ಮಾಡಿ ಗ್ಯಾಸ್ ಆಫ್ ಮಾಡಬೇಕು. ನಂತರ ಈ ಮಿಶ್ರಣದ ಪಾತ್ರೆಯ ಬಾಯಿಯನ್ನು ಮುಚ್ಚಿ ಸ್ವಲ್ಪ ಹೊತ್ತು ಇಡಬೇಕು. ಅಕ್ಕಿ ಹಿಟ್ಟು ರವೆ ಜೊತೆ ಚೆನ್ನಾಗಿ ಮಿಶ್ರವಾಗದಿದ್ದರೆ ಚಿಂತೆ ಮಾಡಬೇಡಿ, ಏಕೆಂದರೆ ಅಕ್ಕಿ ಹಿಟ್ಟು ಎಣ್ಣೆಯಲ್ಲಿ ಹಾಕಿದಾಗ ಬೇಯುತ್ತದೆ.

4. ನಂತರ ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಹಾಲು ಸೇರಿಸಿ ಚಪಾತಿಗೆ ಕಲೆಸುವ ರೀತಿಯಲ್ಲಿ ಕಲೆಸಬೇಕು

5. ನಂತರ ಇದಕ್ಕೆ ಗಸೆಗಸೆ ಮತ್ತು ಏಲಕ್ಕಿ ಹಾಕಿ ಮಿಶ್ರ ಮಾಡಿ ಸಣ್ಣ ಸಣ್ಣ ಉಂಡೆ ಮಾಡಿ ವಡೆಗೆ ತಟ್ಟುವ ರೀತಿಯಲ್ಲಿ ತಟ್ಟಬೇಕು.

6. ನಂತರ ದೊಡ್ಡ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ, ಎಣ್ಣೆ ಕುದಿಯುವಾಗ ಅದರಲ್ಲಿ ತಟ್ಟಿದ ರವೆ ಮಿಶ್ರಣವನ್ನು ಹಾಕಿ ಕರಿದರೆ ರುಚಿಯಾದ ರವೆ ಕಜ್ಜಾಯ ರೆಡಿ.

English summary

Rava Aresilu Kajjaya | Sweet Snacks Recipe | ರವೆ ಕಜ್ಜಾಯ ರೆಸಿಪಿ | ರುಚಿಕರವಾದ ಸಿಹಿ ತಿಂಡಿ ರೆಸಿಪಿ

Rava kjjaya one of the famous sweet dish in Andra Pradesh. If you want to prepare this you cam easily prepare. Here is a recipe try it.
X
Desktop Bottom Promotion