For Quick Alerts
ALLOW NOTIFICATIONS  
For Daily Alerts

ಹೆಸರು ಬೇಳೆಯ ಮೋದಕ ರೆಸಿಪಿ

|

ಗಣೇಶನ ಹಬ್ಬಕ್ಕೆ ಬಗೆ-ಬಗೆಯ ಮೋದಕ ರೆಸಿಪಿಗಳನ್ನು ಮಾಡಲಾಗುವುದು. ನೈವೇದ್ಯಕ್ಕಂತೂ ಮೋದಕವನ್ನು ಇಟ್ಟೇ ಇಡುತ್ತಾರೆ. ಗಣೇಶನಿಗೆ ಪ್ರಿಯವಾದ ಈ ತಿಂಡಿ ಮನೆ-ಮಂದಿಗೂ ತುಂಬಾ ಇಷ್ಟದ ಸಿಹಿ ತಿಂಡಿಯಾಗಿರುವುದು ಮೋದಕದ ಮತ್ತೊಂದು ವಿಶೇಷ.

ಈಗಾಗಲೇ ಹಲವಾರು ಬಗೆಯ ಮೋದಕದ ರೆಸಿಪಿ ನೀಡಿದ್ದೇವೆ, ಇಲ್ಲಿ ನಾವು ಹೆಸರು ಬೇಳೆಯಿಂದ ತಯಾರಿಸುವ ಮೋದಕದ ರೆಸಿಪಿ ನೀಡಿದ್ದೇವೆ ನೋಡಿ:

Moong Dal Modak Recipe

ಬೇಕಾಗುವ ಸಾಮಾಗ್ರಿಗಳು
ಅಕ್ಕಿ ಅರ್ಧ ಕಪ್
ಹೆಸರು ಬೇಳೆ 1/4 ಕಪ್
ಬೆಲ್ಲ 3/4 ಕಪ್
ತುಪ್ಪ 1 ಚಮಚ
ತೆಂಗಿನ ತುರಿ 1/4 ಕಪ್
ಏಲಕ್ಕಿ ಅರ್ಧ ಚಮಚ
ನೀರು ಒಂದೂವರೆ ಕಪ್

ತಯಾರಿಸುವ ವಿಧಾನ:

* ಹೆಸರು ಬೇಳೆಯನ್ನು ರೋಸ್ಟ್ ಮಾಡಿ ತರಿ-ತರಿಯಾಗಿ ಪುಡಿ ಮಾಡಿ.

* ಅಕ್ಕಿಯನ್ನು ಕೂಡ ತರಿ -ತರಿಯಾಗಿ ಪುಡಿ ಮಾಡಿ.

* ನಂತರ ಈ ಎರಡು ಮಿಶ್ರಣವನ್ನು ಬಟ್ಟಲಿನಲ್ಲಿ ಹಾಕಿ.

* ಈಗ ಪ್ಯಾನ್ ಗೆ ಒಂದೂವರೆ ಕಪ್ ನೀರು ಹಾಕಿ ಕುದಿಸಿ, ನಿರು ಕುದಿಯಲು ಪ್ರಾರಂಭಿಸಿದಾಗ ಮೆಲ್ಲನೆ ಅಕ್ಕಿ ಮತ್ತು ಬೇಳೆಯ ಪುಡಿಯನ್ನು ಉದುರಿಸಿ, ಹೀಗೆ ಉದುರಿಸುವಾಗ ಸೌಟ್ ನಿಂದ ಆಡಿಸಿ, ಇಲ್ಲದಿದ್ದರೆ ಮಿಶ್ರಣ ಉಂಡೆ ಕಟ್ಟುತ್ತದೆ.

* ಈಗ ತುಪ್ಪ ಸೇರಿಸಿ ಚೆನ್ನಾಗಿ ತಿರುಗಿಸಿ, ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ.

* ನಂತರ ತುರಿದ ಬೆಲ್ಲ ಮತ್ತು ತೆಂಗಿನಕಾಯಿ ಹಾಕಿ, ಏಲಕ್ಕಿ ಹಾಕಿ ಮಿಕ್ಸ್ ಮಾಡಿ, ನೀರಿನಂಶ ಆವಿಯಾಗುವವರೆಗೆ ಸೌಟ್ ನಿಂದ ಆಡಿಸುತ್ತಾ ಬೇಯಿಸಿ, ನಂತರ ಉರಿಯಿಂದ ಇಳಿಸಿ, ತಣ್ಣಗಾಗಲು ಇಡಿ.
* ನಂತರ ಉಂಡೆ ಕಟ್ಟಿ ಆವಿಯಲ್ಲಿ10 ನಿಮಿಷ ಬೇಯಿಸಿದರೆ ಹೆಸರು ಬೇಳೆಯ ಮೋದಕ ರೆಡಿ.

English summary

Moong Dal Modak Recipe

Modak is favourite food for Lord Ganesh. So here we have given the moong dal modak recipe, have a look.
Story first published: Saturday, September 7, 2013, 15:14 [IST]
X
Desktop Bottom Promotion