For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿಗೆ 5 ಸ್ವೀಟ್ ರೆಸಿಪಿ

|

ಕೃಷ್ಣ ಜನ್ಮಾಷ್ಟಮಿಯನ್ನು ಉತ್ತರ ಭಾರತದ ಕಡೆ ತುಂಬಾ ಸಡಗರ ಸಂಭ್ರಮದಿಂದ ಆಚರಿಸಲಾಗುವುದು, ದಕ್ಷಿಣ ಭಾರತದಲ್ಲಿಅಷ್ಟೇನು ವಿಜೃಂಭಣೆಯಿಂದ ಅಲ್ಲದಿದ್ದರೂ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿ, 1-2 ಸಿಹಿ ತಿಂಡಿಗಳನ್ನು ಮಾಡಿ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುವುದು.

ಇಲ್ಲಿ ನಾವು ಕೃಷ್ಣ ಜನ್ಮಾಷ್ಟಮಿಯ ವಿಶೇಷ ರೆಸಿಪಿಯಾಗಿ ಕೆಲವು ಸ್ವೀಟ್ ರೆಸಿಪಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ನೋಡಿ:

ಗೋಪಾಲ್‌ಕಲಾ

ಗೋಪಾಲ್‌ಕಲಾ

ಕೃಷ್ಣ ಜನ್ಮಾಷ್ಟಮಿಗೆ ಅವಲಕ್ಕಿಯಿಂದ ವಿಶೇಷ ಅಡುಗೆಯನ್ನು ತಯಾರಿಸಲಾಗುವುದು. ಅವಲಕ್ಕಿಯಿಂದ ತಯಾರಿಸುವ ವಿಶೇಷ ಹಬ್ಬದ ಅಡುಗೆಗಳಲ್ಲಿ ಗೋಪಾಲ್‌ಕಲಾ ಒಂದು ಬಗೆಯ ಅಡುಗೆಯಾಗಿದೆ. ಇದನ್ನು ಉತ್ತರ ಭಾರತದಲ್ಲಿ ಹೆಚ್ಚಾಗಿ ತಯಾರಿಸಲಾಗುವುದು. ತಿನ್ನಲು ತುಂಬಾ ರುಚಿಕರವಾಗಿರುವ ಈ ವಿಶೇಷ ಅಡುಗೆಯನ್ನು ಹತ್ತೇ ನಿಮಿಷದಲ್ಲಿ ತಯಾರಿಸಬಹುದಾಗಿದ್ದು ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ರಸಗುಲ್ಲ

ರಸಗುಲ್ಲ

ರಸಗುಲ್ಲ ಅನ್ನುತ್ತಿದ್ದ ಹಾಗೆ ಬಾಯಲ್ಲಿ ನೀರು ಒಸರುತ್ತೆ. ಸಿಹಿಯನ್ನು ಮೆಲ್ಲನೆ ಅಧರದ ತುಂಬಾ ತುಂಬುವ ರಸಗುಲ್ಲ ಎಂದರೆ ಎಂತವರ ಮನಸ್ಸೂ ಒಮ್ಮೆಯಾದರೂ ಚಂಚಲಗೊಳ್ಳುತ್ತೆ. ಬನ್ನಿ ಮಾಡುವುದು ಹೇಗೆ ಎಂದು ನೋಡೋಣ:

ಮಿಲ್ಕ್ ಘೇವರ್

ಮಿಲ್ಕ್ ಘೇವರ್

"ಮಿಲ್ಕ್ ಘೇವರ್ ಸ್ವೀಟ್" ರಾಜಾಸ್ಥಾನದ ವಿಶೇಷ ತಿಂಡಿಗಳಲ್ಲಿ ಒಂದಾಗಿದ್ದು ಇದನ್ನು ಮಾಡುವ ವಿಧಾನ ನೋಡಿ ಇಲ್ಲಿದೆ.

 ಕೇಸರಿ ಪೇಡ

ಕೇಸರಿ ಪೇಡ

ಹಾಲು ಬೆರೆಸಿದ ಕೇಸರಿ ಪೇಡ ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಂಡು ಹೊಸ ರುಚಿಯನ್ನು ನೀವೂ ಸವಿಯಬಹುದು.

 ರಬ್ರಿ

ರಬ್ರಿ

ಈ ರಬ್ರಿ ಸಿಹಿ ತಿಂಡಿಯನ್ನು ಉತ್ತರ ಭಾತದ ಕಡೆ ಹೆಚ್ಚಾಗಿ ಮಾಡಲಾಗುವುದು. ಈ ಅಡುಗೆಯನ್ನು ಮಾಡುವುದು ಸುಲಭ ಆದರೆ ರುಚಿ ಮಾತ್ರ ಸೂಪರ್ ಆಗಿರುತ್ತದೆ. ಕೃಷ್ಣ ಜನ್ಮಾಷ್ಟಮಿಗೆ ಇದನ್ನು ಬೇಕಾದರೂ ಟ್ರೈ ಮಾಡಬಹುದು.

English summary

Janmashtami Special Sweet Recipes

Boldsky brings you these mouthwatering sweet recipes in advance for Janmashtami so that you can start your preparations right from today to welcome Lord Krishna. Check out these exotic sweet recipes for Janmashtami and give it a try.
X
Desktop Bottom Promotion