For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿಗೆ ವಿಶೇಷ ಅಡುಗೆ

|
Krishna Janmashtmai Special Dish
ಕೃಷ್ಣ ಜನ್ಮಾಷ್ಟಮಿಗೆ ಅವಲಕ್ಕಿಯಿಂದ ವಿಶೇಷ ಅಡುಗೆಯನ್ನು ತಯಾರಿಸಲಾಗುವುದು. ಅವಲಕ್ಕಿಯಿಂದ ತಯಾರಿಸುವ ವಿಶೇಷ ಹಬ್ಬದ ಅಡುಗೆಗಳಲ್ಲಿ ಗೋಪಾಲ್‌ಕಲಾ ಒಂದು ಬಗೆಯ ಅಡುಗೆಯಾಗಿದೆ. ಇದನ್ನು ಉತ್ತರ ಭಾರತದಲ್ಲಿ ಹೆಚ್ಚಾಗಿ ತಯಾರಿಸಲಾಗುವುದು.

ತಿನ್ನಲು ತುಂಬಾ ರುಚಿಕರವಾಗಿರುವ ಈ ವಿಶೇಷ ಅಡುಗೆಯನ್ನು ಹತ್ತೇ ನಿಮಿಷದಲ್ಲಿ ತಯಾರಿಸಬಹುದಾಗಿದ್ದು ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

* ತೆಂಗಿನ ಕಾಯಿ ತುರಿ 2 ಕಪ್
* ಅವಲಕ್ಕಿ 1 ಕಪ್
* ಸಕ್ಕರೆ 3 ಚಮಚ
* ಮೊಸರು 1 ಕಪ್
* ಸೌತೆಕಾಯಿ 1
* 1 ಇಂಚಿನಷ್ಟು ದೊಡ್ಡದಿರುವ ಶುಂಠಿ
* ಹಸಿಮೆಣಸಿನ ಕಾಯಿ 4
* ಜೀರಿಗೆ 1 ಚಮಚ
* ತುಪ್ಪ 1 ಚಮಚ
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಅವಲಕ್ಕಿಯನ್ನು 5 ನಿಮಿಷ ನೀರಿನಲ್ಲಿ ನೆನೆಹಾಕಬೇಕು.

2. ಅವಲಕ್ಕಿಯನ್ನು ನೀರಿನಿಂದ ತೆಗೆದು, ಅದರಲ್ಲಿರುವ ಉಳಿದ ನೀರು ಸೋಸಿ ಹೋಗುವಂತಹ ಪಾತ್ರೆಯಲ್ಲಿ ಹಾಕಬೇಕು.

3. ಅವಲಕ್ಕಿಯಿಂದ ಸಂಪೂರ್ಣ ನೀರು ಹೋದ ಮೇಲೆ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಸಕ್ಕರೆ, ತೆಂಗಿನಕಾಯಿ ತುರಿ, ಮೊಸರು, ಕತ್ತರಿಸಿದ ಸೌತೆಕಾಯಿ ತುಂಡು, ಸ್ವಲ್ಪ ಉಪ್ಪು ಹಾಕಿ ಮಿಶ್ರಮಾಡಬೇಕು.

4. ನಂತರ ಮತ್ತೊಂದು ಪಾತ್ರೆಯಲ್ಲಿ ತುಪ್ಪವನ್ನು ಬಿಸಿಮಾಡಿ, ಜೀರಿಗೆ ಹಾಕಿ, ಜಜ್ಜಿದ ಶುಂಠಿ ಮತ್ತು ಕತ್ತರಿಸಿದ ಹಸಿಮೆಣಸಿನ ಕಾಯಿ ಹಾಕಿ 2 ನಿಮಿಷ ಹುರಿಯಬೇಕು. ನಂತರ ಇದನ್ನು ಅವಲಕ್ಕಿ ಮೇಲೆ ಸುರಿದು ಮಿಶ್ರ ಮಾಡಿದರೆ ತಿನ್ನಲು ರುಚಿಕರವಾದ ಗೋಪಾಲ್‌ಕಲಾ ರೆಡಿ.

English summary

Krishna Janmashtmai Special Dish | Festival Dish | ಕೃಷ್ಣ ಜನ್ಮಾಷ್ಟಮಿಗೆ ಸ್ಪೆಷಲ್ ಅಡುಗೆ | ಹಬ್ಬದ ಅಡುಗೆ

Gopalkala is a perfect dish to celebrate your Janmashtami. So, do tell us how you treated baby Krishna and your family with this tasty dessert.
X
Desktop Bottom Promotion