Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರಾಜಸ್ಥಾನಿ ಭಯ್ಯಾ ಹೇಳಿಕೊಟ್ಟ ರಾಖಿ ಸ್ಪೆಷಲ್
ಇವತ್ತು ನಾನು ಜಯನಗರದ 3ನೇ ಬ್ಲಾಕ್ ನಲ್ಲಿರುವ ಬೇಕರಿಗೆ ಹೋಗಿದ್ದೆ. ಬೇಕರಿ ಇಟ್ಟವರು ರಾಜಸ್ಥಾನದವರು. ಬೇಕರಿಯಲ್ಲಿ ಸುಮ್ಮನೆ ಕಣ್ಣಾಡಿಸುತ್ತಿರುವಾಗ ಒಂದು ಹಳದಿ ಬಣ್ಣದ ಸ್ವೀಟ್ ಕಣ್ಣಿಗೆ ಬಿತ್ತು.ಅದೇನು ಎಂದು ಅವರಲ್ಲಿ ಕೇಳಿದಾಗ ಬೇಕರಿ ಭಯ್ಯಾ "ಮಿಲ್ಕ್ ಘೇವರ್ ಸ್ವೀಟ್, ರಾಖಿ ಸ್ಪೆಷಲ್ ರಾಜಸ್ಥಾನದ ವಿಶೇಷ ತಿಂಡಿಗಳಲ್ಲಿ ಇದು ಕೂಡ ಒಂದು" ಎಂದನು. ಈ ಸಿಹಿತಿಂಡಿಯನ್ನು ಸ್ವಲ್ಪ ಟೇಸ್ಟ್ ಮಾಡಿದೆ ತುಂಬಾ ರುಚಿಯಾಗಿತ್ತು. ಅವರ ಹತ್ತಿರ ರೆಸಿಪಿ ಕೇಳಿದೆ. ಆ ರಾಜಸ್ಥಾನಿ ಭಯ್ಯಾ ನೀಡಿದ ಸ್ವೀಟ್ ರೆಸಿಪಿ ನಿಮಗೂ ಕೂಡ ತಿಳಿಸಿಕೊಡಲು ಇಷ್ಟಪಡುತ್ತೇನೆ. ಹೊಸ ರುಚಿ ಅಡುಗೆ ಕಲಿಯಲು ಆಸಕ್ತಿ ಇರುವವರು ಇದನ್ನು ಟ್ರೈ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು:
ಅರ್ಧ ಕಪ್ ಹಾಲು
ನೀರು ನಾಲ್ಕು ಕಪ್
ಘನೀಕರಿಸದ ತುಪ್ಪ ಒಂದು ಕಪ್
ಮೈದಾ ಹಿಟ್ಟು 3 ಕಪ್
ಫುಡ್ ಕಲರ್ (ಅರಿಶಿಣ ಬಣ್ಣದ್ದು) 1/4 ಚಮಚ
ಐಸ್ ಕ್ಯೂಬ್ 3
ಕೇವರ 5-6 ಹನಿ (Essence of Kewra)
ತುಪ್ಪ 1 ಕೆಜಿ
ಹಾಲಿಗೆ ಹಾಕಿದ ಕೇಸರ ಅರ್ಧ ಚಮಚ
ಏಲಕ್ಕಿ 1 ಚಮಚ
ಸಕ್ಕರೆ ಒಂದೂವರೆ ಕಪ್
ನೀರು ಒಂದು ಕಪ್
ತಯಾರಿಸುವ ವಿಧಾನ:
1. ಸಕ್ಕರೆ ಪಾಕ ಮಾಡಿಟ್ಟುಕೊಳ್ಳಬೇಕು.
2. ನಂತರ ಒಂದು ಬಟ್ಟಲು ತೆಗೆದುಕೊಂಡು ಸಕ್ಕರೆ ಪಾಕ ಅದರಲ್ಲಿ ಹಾಕಿ, ಅದಕ್ಕೆ ಘನೀಕರಿಸಿದ ತುಪ್ಪ ಮತ್ತು ಐಸ್ ಕ್ಯೂಬ್ ಹಾಕಿ ಒಂದಕ್ಕೊಂದು ಉಜ್ಜಬೇಕು. ಆಗ ಅವುಗಳ ಮಿಶ್ರಣ ಬಿಳಿ ಬಣ್ಣಕ್ಕೆ ತಿರುಗುತ್ತದೆ. ನಂತರ ಇದಕ್ಕೆ ಹಾಲು, ಮೈದಾ ಹಿಟ್ಟು ಮತ್ತು ಒಂದು ಕಪ್ ನೀರು ಸೇರಿಸಿ ಮಿಶ್ರಣವನ್ನು ರೆಡಿ ಮಾಡಬೇಕು.
3. ಈಗ ಫುಡ್ ಕಲರ್ ಸೇರಿಸಿ, ನಂತರ ಕೇವರ (Essence of Kewra) ವನ್ನು ಈ ಮಿಶ್ರಣಕ್ಕೆ ಸೇರಿಸಬೇಕು.
4. ಈ ಮಿಶ್ರಣಕ್ಕೆ ಸ್ವಲ್ಪ ನೀರು ಸೇರಿಸಿ ಮಿಶ್ರಣವನ್ನು ಸ್ವಲ್ಪ ನೀರು ಮಾಡಬೇಕು.
5. ನಂತರ ಸಿಲಿಂಡರ್ ಆಕಾರದ ಪಾತ್ರೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಬೇಕು. ನಂತರ ಕುದಿಯುತ್ತಿರುವ ತುಪ್ಪದಲ್ಲಿ ಮೇಲಿನ ಮಿಶ್ರಣವನ್ನು ಮುಕ್ಕಾಲು ಭಾಗ ಹಾಕಿ, ಈ ಮಿಶ್ರಣ ಮುಕ್ಕಾಲು ಭಾಗ ಗಟ್ಟಿಯಾದಾಗ ಪುನಃ ಉಳಿದ ಮಿಶ್ರಣವನ್ನು ಹಾಕಬೇಕು.
6. ಈ ಮಿಶ್ರಣ ಗಟ್ಟಿಯಾದಾಗ ತಯಾರಾದ ಘೇವರ್ ಅನ್ನು ಪಾತ್ರೆಯಿಂದ ಹೊರತೆಗೆದು ಅದರಿಂದ ಎಣ್ಣೆ ಅಂಶ ಹೋಗಲು ಸ್ವಲ್ಪ ಹೊತ್ತು ಒಂದು ತಂತಿಯಲ್ಲಿ ಚುಚ್ಚಿ ನೇತು ಹಾಕಿ.
7. ನಂತರ ಘೇವರ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ ಪುನಃ ಬಿಸಿಮಾಡಬೇಕು.ನಂತರ ಅದನ್ನು ಉರಿಯಿಂದ ತೆಗೆದು ಆರಲು ಬಿಡಿ.
8. ನಂತರ ಅದರಲ್ಲಿ ಕೇಸರಿಯನ್ನು ಮಿಶ್ರ ಮಾಡಿದ ಹಾಲನ್ನು ಚಿಮುಕಿಸಿ , ಏಲಕ್ಕಿ ಪುಡಿಯನ್ನು ಅದರ ಮೇಲೆ ಉದುರಿಸಬೇಕು. ಬೇಕಿದ್ದರೆ ಗೋಡಂಬಿ ಪುಡಿ ಮಾಡಿ ಮೇಲೆ ಹಾಕಬಹುದು. ಇಷ್ಟು ಮಾಡಿದರೆ ರಾಜಾಸ್ಥಾನದ ಸ್ಪೆಷೆಲ್ ಘೇವರ್ ರೆಡಿ.



Click it and Unblock the Notifications
