For Quick Alerts
ALLOW NOTIFICATIONS  
For Daily Alerts

ಹೋಳಿ ಹಬ್ಬದ ವಿಶೇಷ ರೆಸಿಪಿ ಪಿಸ್ತಾ ಬರ್ಫಿ

|

ಕೋಯಾದಿಂದ ತಯಾರಿಸಲ್ಪಡುವ ಒಂದು ವಿಶೇಷ ತಿನಿಸಾಗಿದೆ ಬರ್ಫಿ. ಯಾವುದೇ ಆಚರಣೆ, ಹಬ್ಬಕ್ಕೆ ಸೂಕ್ತವಾಗಿರುವ ಸಿಹಿ ಬರ್ಫಿಯಾಗಿದೆ. ಹೋಳಿ ಹಬ್ಬ ಹತ್ತಿರ ಬರುತ್ತಿದೆ ನಿಮ್ಮ ಅತಿಥಿಗಳನ್ನು ಸತ್ಕರಿಸಲು ವಿಶೇಷವಾದ ಸಿಹಿಯನ್ನು ನೀವು ಏಕೆ ಮಾಡಬಾರದು? ನಿಮ್ಮ ತಿನಿಸುಗಳ ಪಟ್ಟಿಯಲ್ಲಿ ಸಿಹಿ ಇರಲೇಬೇಕು. ಅದಕ್ಕಾಗಿ ನಾವಿಂದು ವಿಶೇಷವಾದ ಸಿಹಿಯನ್ನು ಈ ಹೋಳಿಗಾಗಿ ನಿಮಗಾಗಿ ನೀಡುತ್ತಿದ್ದೇವೆ. ಅದುವೇ ಪಿಸ್ತಾ ಬರ್ಫಿ!

ಪಿಸ್ತಾ ಬರ್ಫಿಯನ್ನು ಕೋಯಾ ಮತ್ತು ಮೃದುವಾದ ಸುವಾಸನೆಯನ್ನು ಒಳಗೊಂಡಿರುವ ಪಿಸ್ತಾದಿಂದ ತಯಾರಿಸಲಾಗುತ್ತದೆ. ನಿಮ್ಮ ಹೋಳಿ ಹಬ್ಬದ ಸಂದರ್ಭದಲ್ಲಿ ನಿಮ್ಮ ಮೆನು ಪಟ್ಟಿಯಲ್ಲಿ ಅಗತ್ಯವಾಗಿರುವ ಸಿಹಿಯಾಗಿದೆ ಪಿಸ್ತಾ ಬರ್ಫಿ. ನಿಮ್ಮ ಅತಿಥಿಗಳು ಈ ಬಾಯಲ್ಲಿ ನೀರೂರಿಸುವ ಪಿಸ್ತಾ ಬರ್ಫಿ ಸೇವಿಸಿ ನಿಮ್ಮನ್ನು ಪ್ರಶಸಿಂಸುವುದು ಖಂಡಿತ.

Holi Special Recipe: Pista Barfi

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: 10 ಬಗೆಯ ಸ್ವಾದಿಷ್ಟಕರ ಮೊಟ್ಟೆಯ ರೆಸಿಪಿ

ಹಾಗಿದ್ದರೆ ತಡ ಏಕೆ, ಪಿಸ್ತಾ ಬರ್ಫಿಯ ತಯಾರಿಗಾಗಿ ಸಾಮಾಗ್ರಿಗಳನ್ನು ಇಲ್ಲಿ ನೀಡಲಾಗಿದೆ. ಬರೆದುಕೊಳ್ಳಿ ಮತ್ತು ಟ್ರೈ ಮಾಡಿ

ಪ್ರಮಾಣ: 15-17 ಬರ್ಫಿ
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 45 ನಿಮಿಷಗಳು

ಸಾಮಾಗ್ರಿಗಳು:
.ಪಿಸ್ತಾ - 1 ಕಪ್
.ಸಕ್ಕರೆ 1 ಕಪ್
.ನೀರು 1/2 ಕಪ್
.ತುಪ್ಪ - 3/4 ಕಪ್
.ಕೋಯಾ/ ಮಾವಾ - 1/2 ಕಪ್
.ಏಲಕ್ಕಿ ಹುಡಿ - ಸ್ವಲ್ಪ
.ಹಸಿರು ಫುಡ್ ಕಲರ್ - ಕೆಲವು ಹನಿಗಳು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಐದೇ ನಿಮಿಷದಲ್ಲಿ ರೆಡಿ ಆಪಲ್ ಜಾಮ್

ಮಾಡುವ ವಿಧಾನ:
1.ಪಿಸ್ತಾವನ್ನು ನೀರಿನಲ್ಲಿ 5 ನಿಮಿಷಗಳವರೆಗೆ ಬಿಳುಚಿಸಿಕೊಳ್ಳಿ (ಬಿಳಿ ಬಣ್ಣವನ್ನಾಗಿಸುವುದು) ಉರಿಯನ್ನು ಆಫ್ ಮಾಡಿ ಮತ್ತು ಪಕ್ಕದಲ್ಲಿಡಿ.

2.ಜಾಗ್ರತೆಯಾಗಿ ಪಾತ್ರೆಯಿಂದ ಪ್ಲೇಟ್‌ಗೆ ಪಿಸ್ತಾವನ್ನು ವರ್ಗಾಯಿಸಿ. ಪಿಸ್ತಾದ ಸಿಪ್ಪೆ ತೆಗೆಯಿರಿ.

3.ಪಿಸ್ತಾವನ್ನು ತವಾದಲ್ಲಿ ಕ್ರಿಸ್ಪಿಯಾಗುವವರೆಗೆ ಹುರಿದುಕೊಳ್ಳಿ.

4.ಉರಿಯನ್ನು ಆಫ್ ಮಾಡಿ ಮತ್ತು ಪಿಸ್ತಾ ತಣ್ಣಗಾಗಲು ಬಿಡಿ.

5.ಈಗ ಹುರಿದ ಪಿಸ್ತಾವನ್ನು ಬ್ಲೆಂಡರ್‌ನಲ್ಲಿ ಹುಡಿ ಮಾಡಿಕೊಳ್ಳಿ

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎಳ್ಳು, ಕೊಬ್ಬರಿ ಹಾಕಿ ಮಾಡುವ ಲಡ್ಡು

6. ದಪ್ಪ ತಳದ ಪಾತ್ರೆಯಲ್ಲಿ ನೀರಿಟ್ಟು ಕುದಿಯಲು ಬಿಡಿ ನಂತರ ಅದಕ್ಕೆ ಸಕ್ಕರೆ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಇರಲಿ.

7.ಸಕ್ಕರೆ ಪಾಕ ರಚನೆಯಾಗುತ್ತಿದ್ದಂತೆ, ಹುಡಿ ಮಾಡಿದ ಪಿಸ್ತಾವನ್ನು ಅದಕ್ಕೆ ಸೇರಿಸಿ, ಇದೇ ಮಿಶ್ರಣಕ್ಕೆ ಹಸಿರು ಫುಡ್ ಕಲರ್ ಮತ್ತು ಕೋಯಾವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

8.ಮಧ್ಯಮ ಉರಿಯಲ್ಲಿ 15-20 ನಿಮಿಷ ಬೇಯಿಸಿ.

9.ನಿಧಾನವಾಗಿ ತುಪ್ಪ ಸೇರಿಸಿ, ಏಲಕ್ಕಿ ಹುಡಿಯನ್ನು ಹಾಕಿ ಮತ್ತು 8-10 ನಿಮಿಷಗಳ ಕಾಲ ಕದಡಿ.

10.ಮಿಶ್ರಣ ಪ್ಯಾನ್‌ನಿಂದ ಬಿಡುತ್ತಿದ್ದಂತೆ, ಉರಿಯನ್ನು ನಿಲ್ಲಿಸಿ.

11.ಒಂದು ತಟ್ಟೆಗೆ ತುಪ್ಪ ಸವರಿ ಮತ್ತು ಈ ಮಿಶ್ರಣವನ್ನು ಅದಕ್ಕೆ ಹಾಕಿ.

12.ಮಿಶ್ರಣವನ್ನು ಪ್ಲೇಟ್‌ಗೆ ದಪ್ಪನಾಗಿ ಹರಡಿಸಿ.

13.ತಣ್ಣಗಾಗಲು ಬಿಡಿ. ನಿಮಗೆ ಬೇಕಾದ ಆಕಾರದಲ್ಲಿ ಬರ್ಫಿಗಳನ್ನು ಕತ್ತರಿಸಿಕೊಳ್ಳಿ.

ಪಿಸ್ತಾ ಬರ್ಫಿ ಬಡಿಸಲು ತಯಾರಾಗಿದೆ. ಈ ರುಚಿಯಾದ ಸಿಹಿತಿಂಡಿಯನ್ನು ಹೋಳಿಯ ಸಂದರ್ಭದಲ್ಲಿ ನಿಮ್ಮ ಮನೆಯವರು ಮತ್ತು ಸ್ನೇಹಿತರೊಂದಿಗೆ ಸವಿಯಿರಿ.

English summary

Holi Special Recipe: Pista Barfi

Barfi is a special Indian sweet prepared with khoya. It is one sweet which is a perfect choice for any occasion. As the festival of Holi is nearing, you all must be gearing up with delicacies to serve your guests.
Story first published: Monday, March 10, 2014, 12:34 [IST]
X
Desktop Bottom Promotion