For Quick Alerts
ALLOW NOTIFICATIONS  
For Daily Alerts

ಸ್ಟ್ರಾಬೆರಿ ಕೇಕ್ - ಇದನ್ನು ಮಾಡುವುದು ಈಗ ಸುಲಭಸಾಧ್ಯ

By Super
|

ಬೇಕರಿಗಳಲ್ಲಿ ಲಭ್ಯವಿರುವ ಹಲವು ಹಣ್ಣುಗಳಾಧಾರಿತ ಕೇಕುಗಳು ನೋಡುತ್ತಲೇ ಬಾಯಿಯಲ್ಲಿ ನೀರು ಬರಿಸುತ್ತವೆ. ಆದರೆ ದುಬಾರಿಯಾದ ಇವನ್ನು ಕೊಳ್ಳುವುದು ಎಲ್ಲರಿಗೆ ಸಾಧ್ಯವಾಗದು. ಅಲ್ಲದೇ ಮನೆಯಲ್ಲಿ ತಯಾರಿಸಲು ಇದರ ವಿಧಾನವೂ ತಿಳಿಯದು. ಈಗ ಈ ಕೊರತೆಯನ್ನು ಬೋಲ್ಡ್ ಸ್ಕೈ ತಂಡ ಪೂರ್ಣಗೊಳಿಸಿದೆ. ಇಂದು ರುಚಿಕರ ಸ್ಟ್ರಾಬೆರಿ ಹಣ್ಣುಗಳ ಕೇಕ್ ತಯಾರಿಸುವುದರ ರಹಸ್ಯವನ್ನು ಬಯಲುಮಾಡಿದೆ.

ಸ್ವಾದಿಷ್ಟ ಮತ್ತು ಆರೋಗ್ಯಕರವಾದ ಕೇಕ್ ತಯಾರಿಸಿ ಯಾವುದೇ ಹೊತ್ತಿನಲ್ಲಿಯಾದರೂ ಮಕ್ಕಳಿಗೆ, ಮನೆಯವರಿಗೆ ಮತ್ತು ಅತಿಥಿಗಳಿಗೆ ನೀಡಬಹುದು. ಮಕ್ಕಳಂತೂ ಒಂದು ತುಂಡಿಗೆ ತೃಪ್ತರಾಗದೇ ಎರಡನೇ ತುಂಡಿಗೆ ಬೇಡಿಕೆ ಇಡುವುದನ್ನು ಕಣ್ಣಾರೆ ಕಂಡು ಸಂಭ್ರಮಿಸಬಹುದು. ಅಷ್ಟೇ ಏಕೆ, ಹಸಿವಿನಿಂದ ಅರ್ಧರಾತ್ರಿಯಲ್ಲಿ ಎಚ್ಚರವಾದರೆ ಫ್ರಿಜ್ಜಿನಲ್ಲಿಟ್ಟ ಕೇಕ್ ತುಂಡನ್ನು ಹಾಗೇ ಸವಿದು ಪುನಃ ಕನಸಿನ ಲೋಕಕ್ಕೆ ಜಾರಬಹುದು...! ಆದರೆ ಇದರಲ್ಲಿ ಮೊಟ್ಟೆಯನ್ನು ಬಳಸಿರುವ ಕಾರಣ ಮೊಟ್ಟೆ ತಿನ್ನದವರಿಗೆ ಈ ಕೇಕ್ ಸೂಕ್ತವಲ್ಲ. ಇನ್ನುಳಿದಂತೆ ಎಲ್ಲರೂ ಇಷ್ಟಪಡುವ ಈ ಕೇಕ್ ಮತ್ತೆ ಮತ್ತೆ ತಯಾರಿಸಲು ನಿಮ್ಮನ್ನು ಪ್ರೇರೇಪಿಸುವುದು ಖಂಡಿತ.

ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಮೂವತ್ತು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು

Easy Strawberry Cake Recipe

ಅಗತ್ಯವಿರುವ ಸಾಮಾಗ್ರಿಗಳು:
*ಸ್ಟ್ರಾಬೆರಿ ಹಣ್ಣುಗಳು : ಹತ್ತು (ಚೆನ್ನಾಗಿ ಹಣ್ಣಾಗಿರುವುದು, ಉದ್ದಕ್ಕೆ ಸೀಳಿ ತೆಳುವಾಗಿ ಬಿಲ್ಲೆಗಳಾಗಿಸಿದ್ದು)
*ಮೊಟ್ಟೆ: ಗೊಟಾಯಿಸಿದ ಬಳಿಕ ಎರಡು ಕಪ್
*ಮೈದಾ ಹಿಟ್ಟು: ಒಂದು ಕಪ್
*ಸಕ್ಕರೆ: ಎರಡು ಕಪ್
*ಮೊಸರು: ಅರ್ಧ ಕಪ್
*ಬೆಣ್ಣೆ: ಒಂದು ಕಪ್
*ಕೋಕೋ ಪುಡಿ: ಎರಡು ದೊಡ್ಡ ಚಮಚ
*ಅಡುಗೆ ಸೋಡಾ - 1/2 ಚಿಕ್ಕ ಚಮಚ
*ವೆನಿಲ್ಲಾ ಎಸೆನ್ಸ್ - 1 ದೊಡ್ಡ ಚಮಚ
*ಬೇಕಿಂಗ್ ಪೌಡರ್ - 2 ದೊಡ್ಡ ಚಮಚ
*ಉಪ್ಪು - 1/2 ಕಪ್

ವಿಧಾನ:
1) ಒಂದು ಪಾತ್ರೆಯಲ್ಲಿ ಬೆಣ್ಣೆ, ಸಕ್ಕರೆ, ವೆನಿಲ್ಲಾ ಎಸೆನ್ಸ್, ಅಡುಗೆ ಸೋಡಾ, ಬೇಕಿಂಗ್ ಪೌಡರ್, ಮೈದಾಹಿಟ್ಟು, ಕೋಕೋಪುಡಿ ಮತ್ತು ಗೊಟಾಯಿಸಿದ ಮೊಟ್ಟೆ ಸೇರಿಸಿ ಚೆನ್ನಾಗಿ ಕಲಕಿ ಮಿಶ್ರಣ ಸಿದ್ಧಪಡಿಸಿ
2) ಚೆನ್ನಾಗಿ ಮಿಶ್ರಣಗೊಂಡ ಬಳಿಕ ಮೊಸರು ಸೇರಿಸಿ ಕಲಸಿ.
3) ಇನ್ನು ಒಂಬತ್ತು ಇಂಚಿನ ವ್ಯಾಸದ ಕೇಕ್ ಪಾತ್ರೆಯ ಒಳಭಾಗದಲ್ಲಿ ಬೆಣ್ಣೆಯನ್ನು ಸವರಿ
4) ಪಾತ್ರೆಯಲ್ಲಿ ಈ ಮಿಶ್ರಣವನ್ನು ಹಾಕಿ ಸಮನಾಗಿರುವಂತೆ ಹರಡಿ
5) ಇದರ ಮೇಲೆ ಸ್ಟ್ರಾಬೆರಿ ಹಣ್ಣುಗಳ ಬಿಲ್ಲೆಗಳನ್ನು ಅಂದವಾಗಿ ಹರಡಿ
6) ಕುಕ್ಕರಿನಲ್ಲಿ ಸುಮಾರು ಒಂದು ಲೀಟರ್ ನೀರು, ಅರ್ಧ ಕಪ್ ಉಪ್ಪು ಹಾಕಿ ಬಿಸಿಮಾಡಿ.
7) ಈ ನೀರು ಕುದಿಬರುತ್ತಿದ್ದಂತೆಯೇ ಕೇಕ್ ಪಾತ್ರೆಯನ್ನು ಕುಕ್ಕರಿನ ಒಳಗಿಟ್ಟು (ಪಾತ್ರೆಯ ತಳದಲ್ಲಿ ಇಡ್ಲಿ ಪಾತ್ರೆ ಇಡುವ ತಟ್ಟೆ ಅಥವಾ ಒಂದು ಚಿಕ್ಕ ಕಪ್ ಬೋರಲಿಡಿ) ಮುಚ್ಚಳ ಮುಚ್ಚಿ. ಸೀಟಿ ಹಾಕದೇ ಮಧ್ಯಮ ಉರಿಯಲ್ಲಿ ಸುಮಾರು ಮೂವತ್ತು ನಿಮಿಷ ಬೇಯಿಸಿ.
8) ಅರ್ಧಗಂಟೆಯ ಬಳಿಕ ಮುಚ್ಚಳ ತೆರೆದು ಕೇಕ್ ಪಾತ್ರೆಯನ್ನು ತಣಿಯಲು ಬಿಡಿ. ಕೊಂಚ ತಣಿದ ಬಳಿಕ ಚೌಕಾಕಾರದಲ್ಲಿ ಕತ್ತರಿಸಿ ತಟ್ಟೆಯಲ್ಲಿಟ್ಟು ಮಕ್ಕಳಿಗೆ ಮತ್ತು ಅತಿಥಿಗಳಿಗೆ ನೀಡಿ, ಪ್ರಶಂಸೆ ಪಡೆಯಿರಿ...

English summary

Easy Strawberry Cake Recipe

We all love a delicious piece of cake, don't we? However, of late cakes have become way too expensive. So, for a change, why don't you try a cake recipe at home? If you are ready for it, we shall share an awesome strawberry cake recipe with you today.
Story first published: Monday, December 21, 2015, 17:39 [IST]
X
Desktop Bottom Promotion