ಕ್ರಿಸ್ಮಸ್ ವಿಶೇಷ: ಮನಸೆಳೆಯುವ ರಮ್ ಕೇಕ್ ರೆಸಿಪಿ

Posted By:
Subscribe to Boldsky

ವರ್ಷಾಂತ್ಯ ಸಮೀಪಿಸುತ್ತಿದೆ, ಅಂತೆಯೇ ಕ್ರಿಸ್ಮಸ್ ಮತ್ತು ಹೊಸವರ್ಷದ ಹುರುಪು ಸಹಾ. ಇದರೊಂದಿಗೇ ಆಗಮಿಸುತ್ತವೆ ರಂಗು ರಂಗಿನ, ರುಚಿ ರುಚಿಯಾದ ಕೇಕುಗಳು ಮತ್ತು ಸಿಹಿತಿಂಡಿಗಳು. ನಿಮ್ಮ ಬಂಧುಮಿತ್ರರೊಡನೆ ಕೇಕ್‌ಗಳನ್ನು ವಿನಿಮಯಮಾಡಿಕೊಳ್ಳುವಾಗ ನೀವು ನೀಡಿದ ಕೇಕ್ ಉತ್ತಮವಾಗಿರಬೇಕೆಂದು ನೀವು ಬಯಸುತ್ತೀರಿ ಅಲ್ಲವೇ. ಅಂತೆಯೇ ಬೇಕರಿಗಳಲ್ಲಿ ಭಾರೀ ಭರಾಟೆಯಲ್ಲಿ ವಿವಿಧ ರೂಪದ, ತರವೇತಾರಿ ಕೇಕ್ ಗಳು ಲಗ್ಗೆಯಿಡುತ್ತವೆ.

ಫ್ರೂಟ್ ಕೇಕ್, ಪ್ಲಮ್ ಕೇಕ್, ಬಾಳೆಹಣ್ಣಿನ ಕೇಕ್ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರ ಮನಸೆಳೆಯುವ ರಮ್ ಕೇಕ್ ನೆನೆಯುತ್ತಲೇ ನಾಲಿಗೆಯಲ್ಲಿ ನೀರೂರುವುದು ಸಹಜ. ಆದರೆ ಮನೆಯಲ್ಲಿಯೇ ನೀವು ಅಸ್ಥೆಯಿಂದ ತಯಾರಿಸಿದ ಕೇಕು ಮಾರುಕಟ್ಟೆಯ ಯಾವುದೇ ಕೇಕ್‌ಗೆ ಸಾಟಿಯಲ್ಲ. ಕ್ರಿಸ್ಮಸ್ ಹಬ್ಬದ ವಿಶೇಷ: ಮೊಟ್ಟೆ ರಹಿತ ರುಚಿಕರ ಕೇಕ್ ರೆಸಿಪಿ 

ಉತ್ಕೃಷ್ಟವಾದ ರಮ್ ಕೇಕ್ ಒಂದನ್ನು ನೀವು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು ಎಂದರೆ ಹುಬ್ಬು ಮೇಲೇರುತ್ತದೆ ಅಲ್ಲವೇ? ನಿಜ, ನೀವು ಕೊಂಚ ಶ್ರಮವಹಿಸಿದರೆ ಮಾರುಕಟ್ಟೆಯಲ್ಲಿ ದೊರಕುವುದಕ್ಕಿಂತಲೂ ಉತ್ತಮವಾದ ಕೇಕ್ ಮನೆಯಲ್ಲಿಯೇ ತಯಾರಿಸಬಹುದು. ಉತ್ಕೃಷ್ಟವಾದ ರಮ್ ಕೇಕ್ ತಯಾರಿಸಲು ಉತ್ಸುಕರಾಗಿದ್ದೀರಿ ಅಲ್ಲವೇ? ಇದನ್ನು ತಯಾರಿಸುವ ಬಗೆಯನ್ನು ಇಲ್ಲಿ ವಿವರಿಸಲಾಗಿದೆ.

*ಪ್ರಮಾಣ: ಸುಮಾರು ಆರು ಜನರಿಗೆ ಸಾಕಾಗುವಷ್ಟು

*ತಯಾರಿಕೆಗೆ ಬೇಕಾಗುವ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಾದ ಸಾಮಾಗ್ರಿಗಳು:

*ಬೆಣ್ಣೆ (ಸಾಮಾನ್ಯ ತಾಪಮಾನಕ್ಕೆ ತಂದಿರುವ) - ಒಂದೂವರೆ ಕಪ್

*ಸಕ್ಕರೆ ಪುಡಿ - ಒಂದೂವರೆ ಕಪ್

*ಲಿಂಬೆಹಣ್ಣಿನ ಸಿಪ್ಪೆ (ಚಿಕ್ಕದಾಗಿ ತುರಿದಿರುವುದು) - ಎರಡು ದೊಡ್ಡ ಚಮಚ

*ಮೊಟ್ಟೆಯ ಬಿಳಿಭಾಗ - ಮೂರು ಮೊಟ್ಟೆಗಳಿಂದ ಬೇರ್ಪಡಿಸಿರುವಷ್ಟು

*ಮೊಟ್ಟೆಯ ಹಳದಿಭಾಗ - ಒಂದು ಮೊಟ್ಟೆಯಿಂದ ಬೇರ್ಪಡಿಸಿರುವಷ್ಟು

*ವೆನಿಲ್ಲಾ ಸುಗಂಧ - ಎರಡು ಚಿಕ್ಕ ಚಮಚ

*ಗಾಢವಾದ ರಮ್ - ಅರ್ಧ ಕಪ್

*ಭಟ್ಟಿ ಇಳಿಸಿದ ಬಾಳೆಹಣ್ಣಿನ ದ್ರವ - ಕಾಲು ಕಪ್

*ಮೈದಾ ಹಿಟ್ಟು - ಮೂರು ಕಪ್

*ಬೇಕಿಂಗ್ ಪೌಡರ್ - ಎರಡು ಚಿಕ್ಕ ಚಮಚ

*ಬೇಕಿಂಗ್ ಸೋಡಾ - ಅರ್ಧ ಚಿಕ್ಕ ಚಮಚ

*ಉಪ್ಪು - ಒಂದು ಚಿಟಿಕೆ

*ವ್ಹಿಪ್ಡ್ ಕ್ರೀಂ - ಒಂದು ಕಪ್

*ಕೇಕ್ ಮಾಡಲು ಉಪಯೋಗಿಸುವ ಪಾತ್ರೆ

*ಕ್ರೀಂ - ಅಲಂಕಾರಕ್ಕೆ ಅಗತ್ಯವೆನಿಸಿದ್ದಷ್ಟು

ಸಿರಪ್‌ಗಾಗಿ ಅಗತ್ಯವಾದ ಸಾಮಾಗ್ರಿಗಳು

*ಬೆಣ್ಣೆ - ಅರ್ಧ ಕಪ್

*ಸಕ್ಕರೆ ಪುಡಿ - ಮುಕ್ಕಾಲು ಕಪ್

*ಭಟ್ಟಿ ಇಳಿಸಿದ ಬಾಳೆಹಣ್ಣಿನ ದ್ರವ - ಕಾಲು ಕಪ್

*ಗಾಢ ರಮ್ - ಕಾಲು ಕಪ್

*ಸಕ್ಕರೆಯ ಪುಡಿ- ಅಲಂಕಾರಕ್ಕಾಗಿ ಅಗತ್ಯವೆನಿಸಿದ್ದಷ್ಟು

ವಿಧಾನ:

1) ಒಂದು ಕಪ್ ಬೆಣ್ಣೆ, ಸಕ್ಕರೆ ಪುಡಿಗಳನ್ನು ಒಂದು ಪಾತ್ರೆಯಲ್ಲಿ ಚೆನ್ನಾಗಿ ಮಿಶ್ರಣಗೊಳ್ಳುವವರೆಗೆ ಚಮಚ ಉಪಯೋಗಿಸಿ ಬೆರೆಸಿಕೊಳ್ಳಿ.

2) ಈ ಮಿಶ್ರಣಕ್ಕೆ ಒಂದು ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ಬೆರೆಸುವುದನ್ನು ಮುಂದುವರೆಸಿ

3) ಈಗ ವೆನಿಲ್ಲಾ ಸುಗಂಧ, ಲಿಂಬೆಯ ತುರಿ ಮತ್ತು ಗಾಢ ರಮ್ ಸೇರಿಸಿ ಬೆರೆಸುವುದನ್ನು ಮುಂದುವರೆಸಿ.

4) ಈಗ ಭಟ್ಟಿ ಇಳಿಸಿದ ಬಾಳೆಹಣ್ಣಿನ ದ್ರವವನ್ನು ಸೇರಿಸಿ ಬೆರೆಸುವುದನ್ನು ಮುಂದುವರೆಸಿ. ಈಗ ಇದು ಕೊಂಚ ಮೊಸರು ಮೊಸರಾದಂತೆ ಕಾಣುತ್ತದೆ. ಇದು ಇನ್ನೂ ಚೆನ್ನಾಗಿ ಬೆರೆಯುವವರೆಗೆ ಮುಂದುವರೆಸಿ. ಉಳಿದ ಮೊಟ್ಟೆಯ ಬಿಳಿ ಮತ್ತು ಹಳದಿಭಾಗಗಳನ್ನು ಸೇರಿಸಿ.

5) ಈಗ ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಒಂದು ಚಮಚ ಮೈದಾ ಮತ್ತು ಉಪ್ಪು ಸೇರಿಸಿ ಬೆರೆಸುವುದನ್ನು ಮುಂದುವರೆಸಿ.

6) ಈಗ ವ್ಹಿಪ್ಡ್ ಕ್ರೀಂ ಮತ್ತು ಉಳಿದ ಮೈದಾ ಹಿಟ್ಟನ್ನು ಒಂದು ಬಾರಿ ಒಂದು ಚಮಚದಂತೆ ಬಾರಿಬಾರಿಯಾಗಿ ಸೇರಿಸಿ ಕಲಕುತ್ತಿರಿ. ಇದರಲ್ಲಿ ಗಂಟುಗಳಾಗದಂತೆ ನೋಡಿಕೊಳ್ಳಿ.

7) ಈಗ ಕೇಕ್ ಬೇಯಿಸುವ ಪಾತ್ರೆಯ ಒಳಭಾಗವನ್ನು ಉಳಿದ ಬೆಣ್ಣೆಯಿಂದ ಪೂರ್ಣವಾಗಿ ಆವರಿಸುವಂತೆ ಸವರಿಕೊಳ್ಳಿ. ಒಂದು ಚಮಚ ಮೈದಾ ಹಿಟ್ಟನ್ನು ಇದಕ್ಕೆ ತೆಳುವಾಗಿ ಲೇಪಿಸಿ.

8) ಈಗ ಮಿಶ್ರಣವನ್ನು ಈ ಪಾತ್ರೆಯೊಳಗೆ ನಿಧಾನವಾಗಿ ಸುರಿದು ಈ ಮೊದಲೇ ಪೂರ್ವಸಿದ್ಧತೆಗೊಳಿಸಿದ್ದ ಅವನ್ ನಲ್ಲಿ ಐವತ್ತೈದರಿಂದ ಅರವತ್ತು ನಿಮಿಷಗಳವರೆಗೆ ಬೇಯಿಸಿ. ಅವನ್ ನ ತಾಪಮಾನ 350 ಡಿಗ್ರಿ ಸೆಂಟಿಗ್ರೇಡ್ ಇರಲಿ.

9) ಅತ್ತ ಅವನ್ ನಲ್ಲಿ ಕೇಕ್ ಬೇಯುತ್ತಿರುವಾಗ ಇತ್ತ ಸಿರಪ್ ತಯಾರಿಸಲು ಒಂದು ಅಗಲವಾದ ಪಾತ್ರೆಯಲ್ಲಿ ಬೆಣ್ಣೆ, ಭಟ್ಟಿ ಇಳಿಸಿದ ಬಾಳೆಹಣ್ಣಿನ ದ್ರವ, ಗಾಢ ರಮ್ ಮತ್ತು ಸಕ್ಕರೆ ಪುಡಿ ಸೇರಿಸಿ ಸುಮಾರು ಐದರಿಂದ ಏಳು ನಿಮಿಷ ಕುದಿಸಿ.

10) ಬಳಿಕ ಒಲೆಯಿಂದ ಇಳಿಸಿ ತಣಿಯಲು ಬಿಡಿ

11) ಒಂದು ಘಂಟೆಯ ಬಳಿಕ ಅವನ್ ನಿಂದ ಕೇಕ್ ಹೊರತೆಗೆಯಿರಿ. ಕೇಕ್ ಮೇಲ್ಭಾಗದಿಂದ ತಳಕ್ಕೆ ತಗಲುವಂತೆ ಹಲ್ಲುಕಡ್ಡಿ ಅಥವಾ ಫೋರ್ಕ್ ಚಮಚವನ್ನು ಉಪಯೋಗಿಸಿ ತೂತುಗಳನ್ನು ಮಾಡಿ.

12) ಈಗ ತಣಿದ ಸಿರಪ್ ಅನ್ನು ನಿಧಾನವಾಗಿ ಈ ತೂತುಗಳಲ್ಲಿ ಸುರುವಿ ಸುಮಾರು ನಲವತ್ತೈದು ನಿಮಿಷಗಳ ಕಾಲ ಹಾಗೇ ಬಿಡಿ.

13) ಈಗ ಪಾತ್ರೆಯಿಂದ ಕೇಕ್ ಹೊರತೆಗೆದು ಸಕ್ಕರೆಪುಡಿಯನ್ನು ಚಿಮುಕಿಸಿ. ಅಗತ್ಯವೆನಿಸಿದರೆ ಪ್ಲಾಸ್ಟಿಕ್ಕಿನ ಶಂಕುವನ್ನು ಉಪಯೋಗಿಸಿ ಕ್ರೀಂ ಅಂಚುಗಳ ಮೇಲೆ ಬರುವಂತೆ ಅಲಂಕರಿಸಿ, ಶುಭಾಶಯದ ಸಂದೇಶವನ್ನು ಬರೆಯಿರಿ. ನಿಮ್ಮ ವಿಶೇಷ ರಮ್ ಕೇಕ್ ಸವಿಯಲು ಈಗ ಸಿದ್ಧವಾಗಿದೆ.

ಪೋಷಕಾ೦ಶ ಪ್ರಮಾಣ:

*ಚಳಿಗಾಲದಲ್ಲಿ ಶರೀರವನ್ನು ಬೆಚ್ಚಗಿಡಲು ಈ ಕೇಕ್ ಅತ್ಯುತ್ತಮವಾಗಿದೆ. ಚಳಿಯನ್ನು ಓಡಿಸಲು ಮತ್ತು ಸಿಹಿಯಾದ ಮತ್ತು ಅತ್ಯಂತ ಸೌಮ್ಯವಾದ ಕೇಕ್ ಸವಿಯಲು ಈ ರಮ್ ಕೇಕ್ ಗಿಂತ ಉತ್ತಮವಾದುದು ಬೇರೊಂದಿಲ್ಲ. ಇದರಲ್ಲಿ ಉತ್ತಮ ಪ್ರಮಾಣದ ಕ್ಯಾಲೋರಿಗಳಿವೆ ಮತ್ತು ಕೊಬ್ಬು ಸಹಾ ಅತಿ ಕಡಿಮೆ ಪ್ರಮಾಣದಲ್ಲಿದೆ. ಮೊಟ್ಟೆಯ ಹಳದಿಭಾಗವನ್ನು ನಿವಾರಿಸಿರುವುದರಿಂದ ಕೊಲೆಸ್ಟ್ರಾಲ್ ಸಹಾ ತುಂಬಾ ಕಡಿಮೆ ಇದೆ. ಈ ಕಾರಣದಿಂದ ಇದು ತೂಕ ಇಳಿಸುವವರಿಗೂ ಉತ್ತಮ ಆಯ್ಕೆಯಾಗಿದೆ.

English summary

Christmas Special: Classic Rum Cake Recipe

Christmas is the time for cakes. It is the time of the year when we all ditch our calorie count, sit backa and enjoy the cake season with full fervour. So, excited about baking your own rum cake this Christmas? Then take a look at this Christmas special recipe of classic rum cake and give it a shot.
Subscribe Newsletter