For Quick Alerts
ALLOW NOTIFICATIONS  
For Daily Alerts

ಕ್ರಿಸ್ಮಸ್ ವಿಶೇಷ: ಸೇಬು-ಜೇನಿನ ಕೇಕ್ ರೆಸಿಪಿ

By Arshad
|

ಇನ್ನೇನು ಕೆಲವೇ ದಿನಗಳಲ್ಲೆ ಕ್ರಿಸ್ಮಸ್ ಹಬ್ಬ ಆಗಮಿಸಲಿದೆ. ವಿಶ್ವದ ಅತಿ ಸಂಭ್ರಮದ ಹಬ್ಬದ ಉತ್ತುಂಗದ ದಿನಕ್ಕೆ ಕೆಲವೇ ದಿನಗಳು ಬಾಕಿ ಇವೆ. ಕ್ರಿಸ್ಮಸ್ ಎಂದರೆ ಸಾಂಟಾ ಕ್ಲಾಸ್, ಜಿಂಗಲ್ ಬೆಲ್ಸ್, ಕ್ರಿಸ್ಮಸ್ ಮರ, ಕ್ರಿಸ್ಮಸ್ ಕ್ಯಾರಲ್ಸ್ ಗೀತೆಗಳು, ತೂಗುದೀಪ ಮಾತ್ರವಲ್ಲ, ಸಿಹಿಯಾದ ಕೇಕ್ ಸಹಾ. ಈ ವಿಶೇಷ ಸಂದರ್ಭವನ್ನು ಇನ್ನಷ್ಟು ಹರ್ಷಮಯವಾಗಿಸಲು ವಿಶಿಷ್ಟ ಕೇಕ್ ಇರುವುದು ಅಗತ್ಯ. ಈ ಅಗತ್ಯವನ್ನು ಪೂರೈಸಲು ಬೋಲ್ಡ್ ಸ್ಕೈ ತಂಡ ಸಿಹಿಯಾದ, ರುಚಿಯಾದ ಸೇಬು-ಜೇನಿನ ಕೇಕ್ ರೆಸಿಪಿಯನ್ನು ಓದುಗರಿಗೆ ನೀಡುತ್ತಿದೆ.

ರುಚಿಯಾದ, ಬಾಯಲ್ಲಿ ಸುಲಭವಾಗಿ ಕರಗುವ ಈ ಕೇಕ್‌ನಲ್ಲಿ ಕೆಲವೇ ಸಾಮಾಗ್ರಿಗಳಿದ್ದು ಸುಲಭ ವಿಧಾನದಲ್ಲಿ ತಯಾರಿಸಬಹುದು. ಹೆಚ್ಚಿನ ಸಮಯವನ್ನು ಬಳಸದಿರುವ ಕಾರಣ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲು ಹೆಚ್ಚು ಸಮಯವನ್ನು ನಿಮಗೆ ನೀಡುತ್ತದೆ. ಬನ್ನಿ ಈಗ ಕೇಕ್ ತಯಾರಿಸುವ ವಿಧಾನವನ್ನು ಕಲಿಯೋಣ: ಕ್ರಿಸ್ಮಸ್ ಗೆ ಬಟರ್ ಸ್ಪಾಂಜ್ ವೆನಿಲ್ಲಾ ಕೇಕ್

Christmas special cake recipe

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಮೂವತ್ತು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಸೇಬು: ಎರಡು ಕಪ್ (ಸಿಪ್ಪೆ ಸುಲಿದು ಚಿಕ್ಕದಾಗಿ ತುಂಡರಿಸಿದ್ದು)
*ಮೊಟ್ಟೆ: ಮೂರು
*ಬೆಣ್ಣೆ: ಒಂದು ಕಪ್
*ಸಕ್ಕರೆ: ಒಂದು ಕಪ್
*ಮೈದಾ ಹಿಟ್ಟು: ಒಂದು ಕಪ್ (ಉಪ್ಪುರಹಿತ)
*ವೆನಿಲ್ಲಾ ಎಸೆನ್ಸ್: ಸುಮಾರು ನಾಲ್ಕು ಹನಿಗಳು
*ಜೇನು: ನಾಲ್ಕು ದೊಡ್ಡಚಮಚ
*ಅಡುಗೆ ಸೋಡಾ: ಅರ್ಧ ಚಿಕ್ಕ ಚಮಚ
*ಬಾದಾಮಿ ಪುಡಿ: ಒಂದು ಕಪ್

ವಿಧಾನ
1) ಒಂದು ಪಾತ್ರೆಯಲ್ಲಿ ಸಕ್ಕರೆ, ಮೊಟ್ಟೆ, ಬೆಣ್ಣೆ, ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಗೊಟಾಯಿಸಿ.
2) ಇದಕ್ಕೆ ಮೈದಾ, ಬಾದಾಮಿ ಪುಡಿ, ಜೇನು ಮತ್ತು ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ನಾದಿ.
3) ಎಲ್ಲಾ ಪರಿಕರಗಳು ಮಿಶ್ರಣಗೊಂಡಿವೆ ಎಂದು ಖಚಿತಪಡಿಸಿಕೊಂಡ ಬಳಿಕ ಸೇಬಿನ ತುಂಡುಗಳನ್ನು ಸೇರಿಸಿ ಹೆಚ್ಚಿನ ಒತ್ತಡ ಹೇರದೇ ಮಿಶ್ರಣ ಮಾಡಿ.
4) ಒಂಬತ್ತಿಂಚಿನ ಕೇಕ್ ಪಾತ್ರೆಯ ಒಳಭಾಗದಲ್ಲಿ ಕೊಂಚ ಬೆಣ್ಣೆಯನ್ನು ಸವರಿ ಮಿಶ್ರಣವನ್ನು ಒಳಭಾಗವನ್ನು ಆವರಿಸಿಕೊಳ್ಳುವಂತೆ ತುಂಬಿರಿ. ಹೆಚ್ಚು ಒತ್ತಡ ನೀಡಬೇಡಿ.
ಕೇಕ್ ಬೇಯಿಸಲು ಎರಡು ವಿಧಾನಗಳಿವೆ. ಎ) ಕುಕ್ಕರ್ ಉಪಯೋಗ ಬಿ) ಓವನ್ ಉಪಯೋಗ
5-a)ಕುಕ್ಕರ್ ಉಪಯೋಗ : ಉಪ್ಪು ಸೇರಿಸಿದ ಬಳಿಕ ಈ ಪಾತ್ರೆಯನ್ನು ಕುಕ್ಕರಿನ ಒಳಗೆ ಕೊಂಚವೇ ನೀರಿನಲ್ಲಿ ಮುಳುಗಿಸಿ ಪಾತ್ರೆಯನ್ನು ಒಂದು ತಟ್ಟೆಯಿಂದ ಮುಚ್ಚಿ
ಕುಕ್ಕರಿನ ಮುಚ್ಚಳ ಮುಚ್ಚಿ, ಆದರೆ ಸೀಟಿಯನ್ನು ಹಾಕದೇ ಮಧ್ಯಮ ಉರಿಯಲ್ಲಿ ಸುಮಾರು ಮೂವತ್ತು ನಿಮಿಷ ಬೇಯಿಸಿ.
b) ಓವನ್ ಉಪಯೋಗ: ಓವನ್ ಉಪಯೋಗಿಸುವುದಾದರೆ ಕೇಕ್ ಪಾತ್ರೆಯನ್ನು ಮೊದಲೇ 350 ಡಿಗ್ರಿ ತಾಪಮಾನದಲ್ಲಿ ಬಿಸಿ ಮಾಡಿಟ್ಟಿದ್ದ ಓವನ್ ಒಳಗೆ ಸುಮಾರು ನಲವತ್ತು ನಿಮಿಷ ಬೇಯಿಸಿ. ಬೆಂದ ಬಳಿಕ ಕೇಕ್ ಹೊರತೆಗೆದು ಕೊಂಚ ಕಾಲ ತಣಿಯಲು ಬಿಡಿ. ನಂತರ ಕತ್ತರಿಸಿ ಅತಿಥಿಗಳಿಗೆ ಬಡಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿ. ಈ ಕೇಕ್ ಹೇಗೆನಿಸಿತು ಎಂಬುದನ್ನು ನಮಗೆ ಬರೆದು ತಿಳಿಸಿ.

English summary

Christmas Special: Apple Honey Cake Recipe

Christmas is never complete without baking the cakes. Several varieties of cakes are prepared during the Christmas season. So, today, we shall share with you a recipe on how to prepare apple honey cake . Apple honey cake is a very different and yummiest cake recipe that you can try this Christmas season. So, why wait let's get ready to prepare apple honey cake, shall we?
Story first published: Thursday, December 17, 2015, 13:09 [IST]
X
Desktop Bottom Promotion