ಕ್ರಿಸ್‌ಮಸ್ ಪ್ಲಮ್ ಕೇಕ್ ರೆಸೆಪಿ

By: Manohar. V
Subscribe to Boldsky

ಕ್ರಿಸ್‌ಮಸ್ ಎಂದರೆ ಅಲ್ಲಿ ಕೇಕುಗಳು ಮತ್ತು ಇತರ ತಿಂಡಿ ತಿನಿಸುಗಳದ್ದೇ ಕಾರುಬಾರು. ಕ್ರಿಸ್‌ಮಸ್‌ನಲ್ಲಿ ಅತಿ ಜನಪ್ರಿಯವಾಗಿರುವ ಹಾಗೂ ಎಲ್ಲರ ಮನೆಗಳಲ್ಲಿ ತಯಾರಾಗುವ ಕೇಕ್ ಪ್ಲಮ್ ಕೇಕ್ ಆಗಿದೆ. ವಿವಿಧ ಡ್ರೈ ಫ್ರುಟ್‌ಗಳು ಮತ್ತು ಕೇಕ್ ಮೇಲ್ಭಾಗದಲ್ಲಿ ಚೆರ್ರಿಯಿಂದ ಅಲಂಕೃತವಾದ ಈ ಕೇಕ್ ಸ್ವಾದಿಷ್ಟ ಮತ್ತು ರುಚಿಕರ.

ಕ್ರಿಸ್‌ಮಸ್‌ಗಾಗಿ ಪ್ಲಮ್ ಕೇಕ್ ತಯಾರಿಯನ್ನು ನೀವು ಮಾಡಲು ಇಚ್ಛಿಸುತ್ತಿದ್ದರೆ ಈ ಕೇಕ್ ರೆಸೆಪಿಯನ್ನು ಪ್ರಯತ್ನಿಸಿ. ಮನೆಯಲ್ಲೇ ತಯಾರಿಸಬಹುದಾದ ಸರಳ, ಸುಂದರ ರುಚಿಕರ ಪ್ಲಮ್ ಕೇಕ್ ಇಲ್ಲಿದೆ, ಇದನ್ನು ತಯಾರಿಸಿ ಹಬ್ಬವನ್ನು ಖುಷಿಯಿಂದ ಆಚರಿಸಿ.

ಮನೆಯಲ್ಲೇ ತಯಾರಿಸಬಹುದಾದ ಪ್ಲಮ್ ಕೇಕ್ ರೆಸೆಪಿ:

ಸಿದ್ಧತೆ ಸಮಯ: 15 ನಿಮಿಷಗಳು

ತಯಾರಿ ಸಮಯ: 40 ನಿಮಿಷಗಳು

4 ಜನರಿಗೆ ಸಾಕಾಗುವಷ್ಟು ಪ್ಲಮ್ ಕೇಕ್‌ಗೆ ಬೇಕಾಗುವ ಸಾಮಾಗ್ರಿಗಳು:

1.ಮೈದಾ - 1 ಕಪ್

2. ವಾಲ್‌ನಟ್ಸ್ ಕತ್ತರಿಸಿದ್ದು - (2ಟೀ. ಸ್ಪೂನ್)

3. ಬೇಕಿಂಗ್ ಪೌಡರ್ - 1/2 ಟೀ ಸ್ಪೂನ್

4. ರೈಸಿನ್ಸ್ - 3 ಟೇ.ಸ್ಫೂನ್

5. ಬ್ರೌನ್ ಶುಗರ್- 1 ಕಪ್

6. ವೆನಿಲ್ಲಾ ಎಸೆನ್ಸ್ - 3 - 4 ಡ್ರಾಪ್ಸ್

7.ಮೊಟ್ಟೆಗಳು-3

8.ಬೆಣ್ಣೆ-1/2 ಕಪ್

9. ಲಿಂಬೆ ತಿರುಳಿನ ಹುಡಿ- 1 ಟೇ.ಸ್ಪೂನ್

10. ಚೆರ್ರಿ- ತುಂಡರಿಸಿದ್ದು ಅಲಂಕಾರಕ್ಕಾಗಿ

ಮಾಡುವ ವಿಧಾನ:

1. ಓವನ್ ಅನ್ನು 160 ಡಿಗ್ರಿ ಉಷ್ಣತೆಯಲ್ಲಿ ಬಿಸಿ ಮಾಡಿ.

2. ಮೈದಾ ಹಾಗೂ ಬೇಕಿಂಗ್ ಪೌಡರ್ ಅನ್ನು ಜರಡಿ ಹಿಡಿಯಿರಿ.

3. ಇದೀಗ ವಾಲ್‌ನಟ್‌ಗಳು, ರೈಸಿನ್ಸ್‌ಗಳನ್ನು ಚೆನ್ನಾಗಿ ಮಿಶ್ರ ಮಾಡಿ.

4. ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆ ಮತ್ತು ಬ್ರೌನ್ ಶುಗರ್ ಅನ್ನು ಚೆನ್ನಾಗಿ ಕಲಸಿಕೊಳ್ಳಿ. ವೆನಿಲ್ಲಾ ಎಸೆನ್ಸ್, ಮೊಟ್ಟೆಗಳು ಮತ್ತು ಲಿಂಬೆ ತಿರುಳಿನ ಹುಡಿಯನ್ನು ಸೇರಿಸಿ.

5. ಜರಡಿಯಾಡಿಸಿದ ಹುಡಿಯನ್ನು ನಿಧಾನವಾಗಿ ಹಾಕಿ ಮತ್ತು ಮಿಶ್ರ ಮಾಡಿ.

6. ಬಟರ್‌ನೊಂದಿಗೆ ಕೇಕ್ ಟಿನ್ ಅನ್ನು ಗ್ರೀಸ್ ಮಾಡಿ ನಂತರ ಮಿಶ್ರಣವನ್ನು ಅದಕ್ಕೆ ಹಾಕಿ.

7. 15-20 ನಿಮಿಷಗಳ ಕಾಲ ಬೇಯಿಸಿ. ನಂತರ ಆರಲು ಬಿಡಿ.

ಕ್ರಿಸ್‌ಮಸ್ ಪ್ಲಮ್ ಕೇಕ್ ತಿನ್ನಲು ಸಿದ್ಧವಾಗಿದೆ. ಕೇಕ್ ಅನ್ನು ತುಂಡುಗಳನ್ನಾಗಿ ಮಾಡಿ ಮತ್ತು ಕೇಕ್‌ನ ಮೇಲೆ ತುಂಡರಿಸಿದ ಚೆರ್ರಿಗಳನ್ನು ಆಲಂಕಾರಿಕವಾಗಿ ಬಳಸಿ. ಮಿಶ್ರಣವನ್ನು ತಯಾರಿಸುವಾಗ ಕೂಡ ನೀವು ಚೆರ್ರಿಗಳನ್ನು ಬಳಸಬಹುದು. ನೀವು ಮಿಶ್ರಣಕ್ಕೆ ಚೆರ್ರಿಗಳನ್ನು ಸೇರಿಸುತ್ತೀರಿ ಎಂದಾದರೆ, ಚೆರ್ರಿಗಳನ್ನು ಸಣ್ಣದಾಗಿ ತುಂಡರಿಸುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

English summary

Christmas Plum Cake Recipe

Christmas is all about cakes, muffins and other desserts. Plum cake is one of the most common Christmas cakes which is very popularly prepared in every household. Plum cake can be prepared with a variety of dry fruits and topped with cherries.
Subscribe Newsletter