For Quick Alerts
ALLOW NOTIFICATIONS  
For Daily Alerts

ಹೊಸ ಸರಕಾರದ ಬಾಯಿಗೆ ಬಾದಾಮಿ ಹಲ್ವಾ!

By ಅರ್ಚನಾ ಹೆಬ್ಬಾರ್, ಬೆಂಗಳೂರು
|

ಹೊಸ ಸರಕಾರಕ್ಕೂ ಬಾದಾಮಿ ಹಲ್ವಾಗೂ ಏನು ಸಂಬಂಧ ಅಂತ ಯೋಚಿಸುದ್ದೀರಾ? ಹಾಗೇನೂ ಇಲ್ಲ ಸೋಮವಾರ (ನ.12) ಅಧಿಕಾರ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪಕ್ಷದ ಕಾರ್ಯಕರ್ತರಿಗೆ ಬಾದಾಮಿ ಹಲ್ವಾ ತಿಂದಷ್ಟು ಸಂತೋಷವಾಗಿದೆ. ಹಾಗಾಗಿ ನೀವೂ ಅಷ್ಟೆ ಪಕ್ಷಭೇದ ಮರೆತು ಬಾದಾಮಿ ಹಲ್ವಾ ಮೆಲ್ಲಿ!

ಬೇಕಾಗುವ ಸಾಮಗ್ರಿಗಳು:

ಬಾದಾಮಿ 100 ಗ್ರಾಮ್
ಸಕ್ಕರೆ : ಒಂದುವರೆ ಲೋಟ
ಹಾಲು : ಅರ್ಧ ಲೋಟ
ತುಪ್ಪ : 2-3 ಚಮಚ

ಮಾಡುವ ವಿಧಾನ:

ಮೊದಲು ಬಾದಾಮಿಯನ್ನು ಬಿಸಿನೀರಿನಲ್ಲಿ ಒಂದು ಘಂಟೆ ಕಾಲ ನೆನೆ ಹಾಕಿ. ಆ ಬಳಿಕ ಬಾದಾಮಿ ಸಿಪ್ಪೆ ಸುಲಿಯಿರಿ. ಕೈಯಲ್ಲಿ ಒಂದಿಷ್ಟು ಬಾದಾಮಿ ತೆಗೆದುಕೊಂಡು ಜೋರಾಗಿ ಉಜ್ಜಿದರೆ ಸಿಪ್ಪೆ ಸುಲಭವಾಗಿ ಬೇರ್ಪಡುತ್ತದೆ. ಸಿಪ್ಪೆ ಸುಲಿದಾದ ಮೇಲೆ ಬಾದಾಮಿಯನ್ನು ಹಾಲಿನ ಜತೆ ನುಣ್ಣನೆ ರುಬ್ಬಿ.

ರುಬ್ಬಿದ ಬಾದಾಮಿ, ಸಕ್ಕರೆ ಇವುಗಳನ್ನು ಒಂದು ಕಡಾಯಿಯಲ್ಲಿ ಹಾಕಿ, ಒಲೆಯ ಮೇಲೆ ಇಟ್ಟು ಸುಮಾರು 30-40 ನಿಮಿಷ ಮಂದ ಉರಿಯಲ್ಲಿ ಕಲಕುತ್ತಾ ಇರಿ.

ಬಾದಾಮ್ ಸಕ್ಕರೆ ಮಿಶ್ರಣವು ಪಾತ್ರೆಯ ಬದಿಯನ್ನು ಬಿಡುತ್ತಿದ್ದಂತೆ 2-3 ಚಮಚ ತುಪ್ಪ ಹಾಕಿ. ಮಿಶ್ರಣವು ಗಟ್ಟಿಯಾಗುತ್ತಾ ಬಂದಂತೆ ಅದನ್ನು ಒಲೆಯಿಂದ ಕೆಳಗಿರಿಸಿ.

ಇದೀಗ ರುಚಿಯಾದ ಬಾದಾಮ್ ಹಲ್ವಾ ತಯಾರು!!

X
Desktop Bottom Promotion