For Quick Alerts
ALLOW NOTIFICATIONS  
For Daily Alerts

ದೀಪಾವಳಿ ಸಂಭ್ರಮಕ್ಕೆ ಕಜ್ಜಾಯ ಇಲ್ಲದಿದ್ದರೆ ಹೇಗೆ?

By Super
|

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿರುವ ಗೃಹಿಣಿಯರು ಮನೆಮಂದಿಗೆಲ್ಲಾ ನವನವೀನ ತಿಂಡಿತಿನಿಸುಗಳನ್ನು ತಯಾರಿಸಿ ಉಣಬಡಿಸುವುದಕ್ಕೆ ಇದು ಸಕಾಲ. ಈ ಸಂತಸದ ಕ್ಷಣವನ್ನು ಇನ್ನಷ್ಟು ಸಿಹಿಯಾಗಿಸಲು ಬೆಂಗಳೂರಿನ ಎಸ್. ರಜನಿ ಗಿರಿಧರ ಅವರು ಕಜ್ಜಾಯ ಅಥವಾ ಸಿಹಿ ಸಮೋಸಾ ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದಾರೆ. ಸರಿ ಮತ್ಯಾಕೆ ತಡ, ನೀವು ಶುರು ಮಾಡಿ... ಕಜ್ಜಾಯ ಮಾಡಲು!

*ಎಸ್. ರಜನಿ ಗಿರಿಧರ, ಬೆಂಗಳೂರು

ಬೇಕಾಗುವ ಪದಾರ್ಥಗಳು
ಮೈದಾ - 1 ಕಪ್ಪು
ಸಣ್ಣ ರವೆ - ¼ ಕಪ್ಪು
ಉಪ್ಪು - ಒಂದು ಚಿಟಿಕೆ
ಎಣ್ಣೆ ಹಾಗೂ ವನಸ್ಪತಿ - ಕರಿಯಲು

ತುಂಬಲು ಮಿಶ್ರಣ
ಗೋಡಂಬಿ - ' ಕಪ್ಪು
ಕರಬೂಜ ಹಣ್ಣಿನ ಬೀಜಗಳು - 'ಕಪ್ಪು
ಸಕ್ಕರೆ ಪುಡಿ - 1 ಕಪ್ಪು
ಏಲಕ್ಕಿ - ಸ್ವಲ್ಪ

ತಯಾರಿಸುವ ವಿಧಾನ
ಮೈದಾ, ರವೆ, ಉಪ್ಪುಗಳನ್ನು ನೀರಿನೊಂದಿಗೆ ಬೆರಸಿ ಗಟ್ಟಿಯಾದ ಹಿಟ್ಟನ್ನು ತಯಾರಿಸಿ. ಇದನ್ನು ಒದ್ದೆಯ ಬಟ್ಟೆಯಿಂದ 1/2 ಗಂಟೆ ಮುಚ್ಚಿಡಿ. ಹಿಟ್ಟನ್ನು ಮೃದುವಾಗಿ, ಹಿಗ್ಗುವಂತೆ ಮಾಡಲು ಚೆನ್ನಾಗಿ ನಾದಿ. ಗೋಡಂಬಿ ಬೀಜಗಳು ಹಾಗೂ ಕರಬೂಜ ಹಣ್ಣಿನ ಬೀಜಗಳನ್ನು ಒಂದು ಗಂಟೆ ಬಿಸಿಲಿನಲ್ಲಿ ಒಣಗಿಸಿ. ಇವುಗಳನ್ನು ಬಿಡಿಯಾಗಿ ಪುಡಿ ಮಾಡಿ, ಸಕ್ಕರೆ ಪುಡಿ ಹಾಗೂ ಏಲಕ್ಕಿ ಪುಡಿಗಳೊಂದಿಗೆ ಬೆರೆಸಿ. ಮೈದಾ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಅವುಗಳನ್ನು ತೆಳುವಾದ ಚಪಾತಿಗಳಂತೆ ಒತ್ತಿಕೊಳ್ಳಿ. ಇದನ್ನು ಎಣ್ಣೆ ಸವರಿದ ಸಮೋಸಾ ಎರಕದ ಅಚ್ಚಿನ ಮೇಲೆ ಹಾಕಿ. ಇದರ ಮೇಲೆ ತುಂಬುವ ಮಿಶ್ರಣವನ್ನು ಸ್ವಲ್ಪವಾಗಿ ಹರಡಿ, ಅಂಚುಗಳನ್ನು ಒದ್ದೆ ಮಾಡಿ ಚೆನ್ನಾಗಿ ಅಂಟಿಸಿ. ಅಚ್ಚಿನಿಂದ ಸಮೋಸಾವನ್ನು ಹೊರತೆಗೆದು, ಸಣ್ಣ ಉರಿಯಲ್ಲಿ ಗರಿಗರಿಯಾಗುವವು.

ಹುರಿಗಡಲೆ ಮಿಶ್ರಣ
ಹುರಿಗಡಲೆ ಪುಡಿ, ಹುರಿದ ಒಣ ಕೊಬ್ರಿ, ಸ್ವಲ್ಪ ಗಸಗಸೆ, ಏಲಕ್ಕಿ ಪುಡಿ ಹಾಗೂ ಸಣ್ಣಗೆ ತುರಿದ ಬೆಲ್ಲವನ್ನು ಚೆನ್ನಾಗಿ ಬೆರೆಸಿ, ಕಜ್ಜಾಯಗಳಿಗೆ ತುಂಬಲು ಮಿಶ್ರಣದಂತೆ ಬಳಸಿ.

ಕಡ್ಲೆ ಹಿಟ್ಟು ಹಾಗೂ ಗೋಡಂಬಿ ಮಿಶ್ರಣ
ಸಮ ಅಳತೆಯ ಹುರಿಗಡಲೆ ಪುಡಿ ಹಾಗೂ ಸಕ್ಕರೆ ಪುಡಿಗಳನ್ನು ಕಲೆಸಿರಿ. ಇದಕ್ಕೆ ಗೋಡಂಬಿ, ಕರಬೂಜ ಹಣ್ಣಿನ ಬೀಜಗಳ, ಕೊಬ್ಬ್ಬರಿತುರಿ, ಗಸಗಸೆ, ಏಲಕ್ಕಿ ಪುಡಿಗಳನ್ನು ಸೇರಿಸಿ. ಇದನ್ನು ಯಾವ ಬಗೆಯ ಸಿಹಿ ಸಮೋಸಕ್ಕಾದರೂ ಮಿಶ್ರಣದಂತೆ ಬಳಿಸಿರಿ.

ಮತ್ತೊಂದು ವಿಧಾನ:ಗೋಧಿನ ಹಿಟ್ಟಿನ ಕಜ್ಜಾಯ
ಸಂಬಾ ಗೋಧಿ ಹಿಟ್ಟಿಗೆ ಒಂದು ಚಿಟಿಕೆ ಉಪ್ಪು, ಸಾಕಷ್ಟು ನೀರು ಸೇರಿಸಿ, ಬೆರೆಸಿ ಮೃದುವಾದ ಮುದ್ದೆಯನ್ನು ತಯಾರಿಸಿಕೊಳ್ಳಿ. ಒಂದು ಟೇಬಲ್ ಚಮಚ ಅಕ್ಕಿ ಹಿಟ್ಟು ಹಾಗೂ 3 ಟೇಬಲ್ ಚಮಚ ಕರಗಿದ ತುಪ್ಪ ಸೇರಿಸಿ, ಒಂದು ತಟ್ಟೆಯಲ್ಲಿ ಬೆಣ್ಣೆಯಂತೆ ಹೊಳಪು ಬರುವವರೆಗೆ ಉಜ್ಜಿರಿ. ಹಿಟ್ಟಿನಿಂದ ತೆಳುವಾದ ಚಪಾತಿಗಳನ್ನು ತಯಾರಿಸಿ. ಚಪಾತಿಗಳ ನಡುವೆ ಸ್ವಲ್ಪ ತುಪ್ಪದ ಪೇಸ್ಟ್ ಅನ್ನು ಸವರಿ 3 ಚಪಾತಿಗಳನ್ನು ಒಂದರ ಮೇಲೊಂದರಂತೆ ಪೇರಿಸಿ. ಇದನ್ನು ಚಾಪೆಯಂತೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುತ್ತಿಕೊಳ್ಳಿ. ನಂತರ ಇದನ್ನು ಅರ್ಧ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ, ಪ್ರತಿ ತುಂಡನ್ನು ಒಂದು ತೆಳುವಾದ ಚಪಾತಿಯಂತೆ ಸುತ್ತಿಕೊಳ್ಳಿ. ಹಿಂದಿನ ಅಡಿಗೆಯಲ್ಲಿ ತಿಳಿಸಿದಂತೆ ಯಾವುದಾದರೂ ಒಂದು ಮಿಶ್ರಣ ತುಂಬಿರಿ. ಅಂಚುಗಳನ್ನು ಒದ್ದೆ ಮಾಡಿ, ಒತ್ತಿ ಅಂಟಿಸಿರಿ. ಒತ್ತಿದ ಅಂಚುಗಳನ್ನು ಸಮೋಸಾ ಕಟ್ಟರ್ ಬಳಸಿ, ಅವು ವಂಕಿವಂಕಿಯಾಗಿ(ಜಿಗ್ ಜಾಗ್) ಬರುವಂತೆ ಕತ್ತರಿಸಿ. ಸಣ್ಣ ಉರಿಯ ಮೇಲೆ ಇವುಗಳನ್ನು ತುಪ್ಪ ಅಥವಾ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಗರಿಗರಿಯಾಗಿ ಕರಿಯಿರಿ.

X
Desktop Bottom Promotion