For Quick Alerts
ALLOW NOTIFICATIONS  
For Daily Alerts

ಸಂತೋಷಪಡುವವರಿಗೆ ಸಿಹಿ ತಿನಿಸು ಚಂಪಾಕಲಿ

By Super
|
Sweet recipe Champakali
ತಮಗೆ ಗೊತ್ತುಂಟೋ ಇಲ್ಲವೋ? ಅಥವಾ ಎಲ್ಲೋ ಓದಿದ ಹಾಗಿದೆಯಲ್ಲಾ ಎನಿಸಲೂಬಹುದು? ಅಥವಾ ಎಲ್ಲಾ ಗೊತ್ತಿದೆ ಬಿಡ್ರೀ ಅಂದರೂ ಅನ್ನಬಹುದು. ಸಮಾಚಾರ ಏನೆಂದರೆ..

ಇವತ್ತು ಕರ್ನಾಟಕ ರಾಜ್ಯವನ್ನು ಆಳುತ್ತಿರುವ ಬಿಜೆಪಿ ಸರಕಾರ ನೆನೆನೆನೆಗುದಿಗೆ ಬಿದ್ದಿದೆ. ಸರಕಾರ ಇರತ್ತೋ ಬೀಳತ್ತೋ ಎನ್ನುವಂತಹ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಈ ಸನ್ನಿವೇಶವು ದೈನಂದಿನ ರಾಜಕೀಯ ಬೆಳವಣಿಗೆಯಲ್ಲಿ ಆಸಕ್ತಿಯಿರುವ ನಾನಾ ನಮೂನೆಯ ಜನಕ್ಕೆ ನಾನಾ ಬಗೆಯ ಪುಳಕ, ಛಳಕವನ್ನು ಹುಟ್ಟುಹಾಕಿದೆ. ಭಾಜಪ ಸರಕಾರ ಬೀಳದಿದ್ದರೆ ಸಾಕು, ಬಿದ್ದರೆ ಸಾಕು, ಎದ್ದರೆಷ್ಟು ಬಿದ್ದರೆಷ್ಟು, ಎನ್ನುವ ಮೂರು ಬಗೆಯ ಓಗುಗರಿಗಾಗಿ ಇವತ್ತು ಎಸ್ ಕೆ ಸಿ ಉಪಾಹಾರ ಮಾಡಲಾಗಿದೆ.

ಸಂತೋಷಪಡುವವರಿಗೆ ಚಂಪಾಕಲಿಯನ್ನೂ, ದುಃಖಪಡುವವರಿಗೆ ಖಾರದ ತಿಂಡಿಯನ್ನೂ ಎರಡೂ ಆಗದೆ ತಟಸ್ಥರಾಗಿರುವವರಿಗೆ ಜಸ್ಟ್ ಫಿಲ್ಟರ್ ಕಾಫಿಯನ್ನು ಸರ್ವ್ ಮಾಡಲಾಗುತ್ತಿದೆ.

ಚಂಪಾಕಲಿ

ಏನೇನು ಬೇಕು : ಅರ್ಧ ಕೆಜಿ ಮೈದಾಹಿಟ್ಟು. ಅರ್ಧ ಕೆಜಿ ಸಕ್ಕರೆ. ಅರ್ಧ ಬಟ್ಟಲು ಅಡುಗೆ ಎಣ್ಣೆ. ಚೂರು ಉಪ್ಪು. ಅಡಿಗೆಗೆ ಬಳಸುವ ಬಣ್ಣ ಚಿಟಿಕೆ. ಒಂದು ಬಟ್ಟಲು ತುಪ್ಪ.

ಮಾಡುವ ರೀತಿ : ಮೈದಾಹಿಟ್ಟಿಗೆ ಚೂರುಎಣ್ಣೆ , ಉಪ್ಪು ಹಾಕಿ ನೀರಿನಲ್ಲಿ ಕಲಸಿ ಇಡಬೇಕು. ಹಿಟ್ಟು ಮೆತ್ತಗಾಗುವಷ್ಟು, ಎಷ್ಟು ಬೇಕೋ ಅಷ್ಟು ನೀರು ಹಾಕಬೇಕು. ಒಟ್ಟಿನಲ್ಲಿ ಹಿಟ್ಟು ಗಟ್ಟಿಯಾಗಿ ಲಟ್ಟಣಿಗೆಯಲ್ಲಿ ಲಟ್ಟಿಸುವುದಕ್ಕೆ ಲಗತ್ತಾಗಿರಬೇಕು. ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಮುಳುಗುವಷ್ಟು ನೀರು ಹಾಕಿ ಒಲೆ ಮೇಲೆ ಇಟ್ಟು ಪಾಕಮಾಡಿಕೊಂಡಿರಿ.

ಉರುಳೆ ಮಾಡಿಕೊಂಡ ಹಿಟ್ಟನ್ನು ಚೆನ್ನಾಗಿ ಅಡುಗೆ ಕಟ್ಟೆಯ ಗ್ರಾನೈಟ್ ಕಲ್ಲಿನ ಮೇಲೆ ನಾದಿಕೊಳ್ಳಿರಿ. ಉರುಳೆ ಮಾಡುವಾಗ ಚಂಪಾಕಲಿಯ ಒಟ್ಟು ಆಕಾರ ಮನಸ್ಸಿನಲ್ಲಿರಲಿ. ಸಿದ್ದವಾದ ಉರುಳೆಗಳನ್ನು ಬೆರಳಿನಿಂದ ಎರಡು ಬಾರಿ ಹಿಂದಕ್ಕೆ ಮುಂದಕ್ಕೆ ಮಡಿಚಿ ನಂತರ ಮಧ್ಯೆ ಚಾಕುವುನಿಂದ ಹೊಟ್ಟೆ ಸೀಳುವ ಹಾಗೆ ಕೊಯ್ದುಕೊಳ್ಳಿ. ಮತ್ತೆ ಅದನ್ನು ಕೈ ಬೆರಳಲ್ಲಿ ಆಡಿಸುತ್ತಾ ಶಂಖಾಕಾರಕ್ಕೆ ಹೊರಳಿಸಿ, ಅರಳಿಸಿ.

ಹೂವಿನಾಕಾರಕ್ಕೆ ಬಂದ ಹಿಟ್ಟನ್ನು ಹಿಂದಕ್ಕೆ ಅರ್ಧ ಮಡಿಚಿ ಚೆನ್ನಾಗಿ ಬಿಸಿಯಾದ ತುಪ್ಪದ ಬಾಣಲೆಯಲ್ಲಿ ಹಾಕಿ. ಕರಿಯುವ ಅಗತ್ಯವಿಲ್ಲ. ಸ್ವಲ್ಪಹೊತ್ತು ಚಂಪಾ ಬೆಂದನಂತರ ಹೊರತೆಗೆದು ಸಿದ್ದವಾಗಿಟ್ಟುಕೊಂಡ ಸಕ್ಕರೆಪಾಕಕ್ಕೆ ಹಾಕಿ. ಸ್ವಲ್ಪಹೊತ್ತು ಸಕ್ಕರೆ ಪಾಕದಲ್ಲಿ ಮುಳುಗಿಸಿಟ್ಟ ಚಂಪಾಕಲಿಯನ್ನು ತೆಳುವಾದ ಇಕ್ಕಳದಿಂದ (ಬೈಸೆಪ್ಸ್) ತೆಗೆದು ತಟ್ಟೆಯ ಮೇಲಿಡಿ. ಚಂಪಾಕಲಿಯ ಕೆಳಗೆ ಸಣ್ಣ ಆಕೃತಿಗೆ ಕಟ್ ಮಾಡಿಟ್ಟುಕೊಂಡ ಪ್ಲಾಸ್ಟಿಕ್ ಹಾಳೆಗಳಿದ್ದರೆ ತೆಗೆದಿಡುವುದಕ್ಕೆ ಈಜಿ.

ಭಾಜಪ ಸಂಕಷ್ಟಕ್ಕೆ ಸಿಲುಕಿರುವುದರಿಂದ ಬೇಜಾರಾಗಿರುವವರು ಖಾರಾ ತಿಂಡಿಗೆ ಬನ್ನಿ. ಖಾರ ಅಂದ್ರೆ ಧಾರವಾಡ ಮಿರ್ಚಿ ಬಜಿಗಿಂತ ಖಾರವಾದ ತಿನಿಸು ಬೇರೇನಿದೆ. ಬನ್ನಿ ಧಾರವಾಡ ಮಿರ್ಚಿ ಬಜಿ ಹೇಗೆ ಮಾಡುವುದೆಂದು ತಿಳಿಯೋಣ.

X
Desktop Bottom Promotion