For Quick Alerts
ALLOW NOTIFICATIONS  
For Daily Alerts

ನಾಗರಪಂಚಮಿಗೆ ಇರಲಿ ತುಪ್ಪದ ಸ್ಪೆಷಲ್ ಮಿಠಾಯಿ

By Super
|
ಶ್ರಾವಣ ಎಂದರೆ ಹಬ್ಬಗಳ ಸೀಸನ್. ಹಬ್ಬಗಳಿಗೆ ವಿಧವಿಧವಾದ ಸಿಹಿ ತಿನಿಸುಗಳನ್ನು ಮಾಡಲೇಬೇಕು. ಆದರೆ ಯಾವಾಗಲೂ ಮಾಡಿದ್ದ ತಿಂಡಿಯನ್ನೇ ಈ ಬಾರಿಯೂ ಮಾಡಿದರೆ ಏನು ವಿಶೇಷ? ಆದ್ದರಿಂದ ಹಬ್ಬದ ತಿಂಡಿಗಳ ಪಟ್ಟಿಗೆ ಕಾಯಿ-ತುಪ್ಪದ ಮಿಠಾಯಿಯನ್ನೂ ಸೇರಿಸಿ ನೋಡಿ.

ಈ ಬಾರಿ ನಾಗರಪಂಚಮಿಗೆ ತಂಬಿಟ್ಟು, ಎಳ್ಳುಂಡೆಯೊಂದಿಗೆ ತುಪ್ಪದ ಮಿಠಾಯಿಯ ಸಿಹಿಯನ್ನೂ ಹಂಚಿರಿ

ಬೇಕಾಗುವ ಪದಾರ್ಥಗಳು:
* 2 ಕಪ್ ನೆನೆಸಿದ ಅಕ್ಕಿ
* 1 ತುರಿದ ತೆಂಗಿನಕಾಯಿ
* ಬೆಲ್ಲ ಅರ್ಧ ಕಪ್
* ತುಪ್ಪ, ಏಲಕ್ಕಿ ಪುಡಿ ಮತ್ತು ತುಪ್ಪ ಹಚ್ಚಿದ ತಟ್ಟೆ

ಮಾಡುವ ವಿಧಾನ: ಮೊದಲು ಅಕ್ಕಿಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಯಲು ಬಿಡಬೇಕು. ನಂತರ ಅದನ್ನು ತೆಂಗಿನ ತುರಿ ಮತ್ತು ಬೆಲ್ಲದೊಂದಿಗೆ ರುಬ್ಬಿಕೊಂಡು ಸ್ವಲ್ಪ ತೆಳ್ಳನೆಯ ಮಿಶ್ರಣವನ್ನಾಗಿ ಮಾಡಿಕೊಳ್ಳಿ. ( ಕಾಯಿಯನ್ನು ಪೂರ್ತಿ ನುಣ್ಣಗೆ ರುಬ್ಬಬಾರದು, ಸ್ವಲ್ಪ ತರಿತರಿಯಾಗಿರಲಿ ).

ಒಂದು ಬಾಣಲೆಗೆ ಇದನ್ನು ಸುರಿದುಕೊಂಡು ಸಣ್ಣ ಉರಿಯಲ್ಲಿ ನಿರಂತರವಾಗಿ ತಿರುಗಿಸುತ್ತಿರಬೇಕು. ಅದು ಕುದಿಯಲು ಆರಂಭಿಸಿದ ನಂತರ ಸ್ವಲ್ಪ ತುಪ್ಪ ಬೆರೆಸಿ ಇನ್ನೂ ತಿರುಗಿಸಬೇಕು. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗಲು ಆರಂಭಿಸುತ್ತಿದ್ದಂತೆ ಏಲಕ್ಕಿ ಪುಡಿ ಬೆರೆಸಿ ತುಪ್ಪ ಹಚ್ಚಿಟ್ಟ ತಟ್ಟೆಗೆ ಇದನ್ನು ಸುರಿಯಿರಿ. ಸ್ಟೀಲ್ ಕಪ್ ನಲ್ಲಿ ತಟ್ಟೆಗೆ ಸಮತಟ್ಟಾಗಿ ಇದನ್ನು ಎಲ್ಲೆಡೆ ಹರಡುವಂತೆ ಮಾಡಿ. ಅದರ ಮೇಲೆ ಸ್ವಲ್ಪ ತುಪ್ಪ ಹಾಕಿ.

ಅದು ತಣ್ಣಗಾಗುವ ತನಕ ಬಿಟ್ಟು ಸ್ವಲ್ಪವೇ ಸ್ವಲ್ಪ ತುಪ್ಪ ಕಾಯಿಸಿ ಅದಕ್ಕೆ ಗೋಡಂಬಿ ದ್ರಾಕ್ಷಿ ಹಾಕಿ ಉರಿದುಕೊಂಡು ಮಿಟಾಯಿಯ ಮೇಲೆ ಅಲಂಕಾರವಾಗಿ ಹಾಕಿ. ಆನಂತರ ಹಾಗೆ ತಟ್ಟೆಯಲ್ಲಿಯೇ ನಿಮಗೆ ಬೇಕಾದ ಆಕೃತಿಗೆ ಕತ್ತರಿಸಿಕೊಳ್ಳಿ. ಈಗ ಸ್ಟೆಷಲ್ ತುಪ್ಪದ ಮಿಠಾಯಿ ರೆಡಿಯಾಗಿದೆ. ಈ ಬಾರಿ ನಾಗರ ಪಂಚಮಿಗೆ ರುಚಿರುಚಿಯಾದ ತುಪ್ಪದ ಮಿಠಾಯಿಯನ್ನು ನಿಮ್ಮ ಪಕ್ಕದ ಮನೆಯವರಿಗೂ ಹಂಚಿ ನೋಡಿ.

English summary

Coconut and ghee sweet recipe | Special recipe for nagarapanchami | ನಾಗರಪಂಚಮಿಗೆ ವಿಶೇಷ ಸಿಹಿ ತಿಂಡಿ | ತುಪ್ಪ ಮತ್ತು ತೆಂಗಿನಕಾಯಿ ಸಿಹಿ ತಿಂಡಿ

Shravana is a season of festival. For this festivals, we offer sweets to god as naivaidyam. So for this nagarapanchami festival, you can try it out this new ghee-coconut combination delicious sweet this time. This will be very tasty. Take a look
X
Desktop Bottom Promotion