For Quick Alerts
ALLOW NOTIFICATIONS  
For Daily Alerts

ಚಳಿಗೆ ಸಾಥ್ ನೀಡುವ- ಗರಮಾ ಗರಂ ತಿಂಡಿ

By Manu
|

ಸಂಜೆಯ ಸಮಯದಲ್ಲಿ ಮರಗಟ್ಟಿಸುತ್ತಿರುವ ಚಳಿ ಒಂದೆಡೆಯಾದರೆ ಒಮ್ಮೆಲೇ ಧೋ ಎಂದು ಸುರಿಯುವ ಮಳೆ ನಮ್ಮನ್ನು ಒದ್ದೆಮುದ್ದೆಯಾಗಿಸುವುದು ಖಂಡಿತ. ಈ ಸಮಯದಲ್ಲಿ ಬಿಸಿ ಬಿಸಿ ಚಹಾದ ಜೊತೆಗೆ ಕುರುಕಲು ತಿಂಡಿಗಳ ನೆನಪಾಗುವುದು ಸಹಜವೇ ಬಿಡಿ..! ಇನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುವ ಎಣ್ಣೆ ತಿಂಡಿಗಳಂತೂ ಬಾಯಲ್ಲಿ ನೀರೂರಿಸುವಂತಿರುತ್ತದೆ. ಡಯಟ್, ಅನಾರೋಗ್ಯ ಎಂಬ ಮಾತುಗಳು ಈ ತಿಂಡಿಗಳನ್ನು ನೋಡುವಾಗ ಮನದಲ್ಲಿ ಸುಳಿಯುವುದೇ ಇಲ್ಲ.

ಅಪರೂಪಕ್ಕೆ ಒಂದೇ ಬಾರಿ ಅಲ್ಲವೇ ಎಂಬುದಾಗಿ ನಮಗೆ ನಾವೇ ಸಮಜಾಯಿಷಿಕೆ ನೀಡಿ ತಿಂಡಿಗಳತ್ತ ಮುಗಿಬೀಳುತ್ತೇವೆ. ಶೀತಲ ವಾತಾವರಣದಲ್ಲಿ ದೇಹ ಬೆಚ್ಚಗೆ ಮಾಡುವ ಈ ಸ್ವಾದಿಷ್ಟ ತಿನಿಸುಗಳನ್ನು ತಿನ್ನುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಸಂತಸ ಮನದಲ್ಲಿ ಮೂಡುತ್ತಿರುತ್ತದೆ. ಇದು ತಿನ್ನುತ್ತಾ ಹೋದಂತೆಲ್ಲಾ ನಿತ್ಯವೂ ಈ ತಿನಿಸು ಇನ್ನೂ ತಿನ್ನುವಂತಾಗಬೇಕು ಎಂಬ ಆಸೆ ಮನದಲ್ಲಿ ಮೂಡುವುದು ಸಹಜ.

ಆದರೆ ಎಣ್ಣೆ ತಿಂಡಿಗಳು ಕೊಬ್ಬೆಂಬ ವರಪ್ರಸಾದೊಂದಿಗೆ ಬಂದಿರುವುದರಿಂದ ನಿತ್ಯವೂ ತಿನ್ನುವ ಬಯಕೆಗೆ ನಾವು ಕಡಿವಾಣ ಹಾಕಲೇಬೇಕು. ಆದರೂ ಇದಕ್ಕೊಂದು ಪರಿಹಾರವಿದೆ. ಈ ತಿನಿಸುಗಳನ್ನು ಅಪರೂಪಕ್ಕೊಮ್ಮೆ ನಿಮ್ಮ ಮನೆಯಲ್ಲಿ ನೀವು ತಯಾರಿಸಿದಲ್ಲಿ ನಿಮ್ಮ ತಿನ್ನುವ ಇಚ್ಚೆಯನ್ನು ಪೂರೈಸಿಕೊಂಡಂತೆ ಮತ್ತು ಆರೋಗ್ಯಕರ ತಿನಿಸನ್ನು ತಿಂದಂತೆ. ಹಾಗಿದ್ದರೆ ತಡಮಾಡದೇ ಇಂದಿನ ಲೇಖನದಲ್ಲಿ ನಾವು ನಿಮಗೆ ನೀಡುತ್ತಿರುವ ಎಣ್ಣೆ ತಿಂಡಿಗಳ ರೆಸಿಪಿಯತ್ತ ಕಣ್ಣು ಹಾಯಿಸಿ...

ಆಲೂಗಡ್ಡೆಯ ಬಜ್ಜಿ

ಆಲೂಗಡ್ಡೆಯ ಬಜ್ಜಿ

ಬಜ್ಜಿ (ಉತ್ತರ ಕರ್ನಾಟಕದಲ್ಲಿ ಮೆಣಸಿನಕಾಯಿ ಎನ್ನುತ್ತಾರೆ) ಯಾರಿಗೆ ಗೊತ್ತಿಲ್ಲ. ಈರುಳ್ಳಿ ಬಜ್ಜಿ, ಆಲೂಗಡ್ಡೆ ಬಜ್ಜಿ, ಮೆಣಸಿನ ಕಾಯಿ ಬಜ್ಜಿ, ಈಗೀಗ ಬ್ರೆಡ್ ಬಜ್ಜಿ, ಕ್ಯಾಪ್ಸಿಕಂ ಬಜ್ಜಿ, ಮುಂತಾದವು ಆಹಾರ ಪ್ರಿಯರನ್ನು ಸಂಜೆ ಆರು ಗಂಟೆಯಾದ ಕೂಡಲೆ ಒಮ್ಮೆ ನೆನಪಿಸಿಕೊಳ್ಳುವಂತೆ ಮಾಡುವ ತಿಂಡಿಗಳು. ಬಹುಶಃ ಎಲ್ಲಾ ಕಡೆ ಇದನ್ನು ಮಾರುತ್ತಾರೆ. ಅದರಲ್ಲೂ ನಮ್ಮ ಕರಾವಳಿ ಕಡೆಗಳಲ್ಲಿ ಆಲೂಗಡ್ಡೆ ಹಾಗೂ ಮಂಗಳೂರು (ಗೋಳಿ ಬಜೆ) ಬಜ್ಜಿಯ ಭರಾಟೆ ತುಂಬಾ ಜೋರು. ನೀವು ಆಲೂಗಡ್ಡೆ ಬಜ್ಜಿ ಪ್ರಿಯರಾಗಿದ್ದಲ್ಲಿ, ಇಲ್ಲಿ ಕ್ಲಿಕ್ ಮಾಡಿ - ಸ೦ಜೆಯ ಚಹಾದ ಸ್ವಾದವನ್ನು ಹೆಚ್ಚಿಸುವ ಆಲೂಗಡ್ಡೆ ಬಜ್ಜಿ

ಬಾಳೆಕಾಯಿ ಬಜ್ಜಿ

ಬಾಳೆಕಾಯಿ ಬಜ್ಜಿ

ಬಾಳೆಕಾಯಿ ಟೀ ಜೊತೆ ಸವಿಯಿರಿ ತಾಜಾ ಬಾಳೆಕಾಯಿ ಬಜ್ಜಿ

ವೆಜ್ ಪಕೋಡ

ವೆಜ್ ಪಕೋಡ

ತರಕಾರಿಯ ಪಕೋಡ (ವೆಜ್ ಪಕೋಡ)... ಈ ಹೆಸರನ್ನು ಕೇಳಿಯೇ ಬಾಯಲ್ಲಿ ನೀರೂರತ್ತದೆಯಲ್ಲವೇ? ಅದರಲ್ಲೂ ಸ೦ಜೆಯ ಸಮಯದಲ್ಲಿ ಬಿಸಿಬಿಸಿಯಾದ ವೆಜ್ ಪಕೋಡ ಸವಿಯುತ್ತಿದ್ದರೆ, ಆಹಾ, ಸ್ವರ್ಗಕ್ಕೆ ಮೂರೇ ಗೇಣು..! ವೆಜ್ ಪಕೋಡ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ವೆಜ್ ಪಕೋಡ: ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ..!!

ಆಹಾ ಬಿಸಿಬಿಸಿ ಸಮೋಸ

ಆಹಾ ಬಿಸಿಬಿಸಿ ಸಮೋಸ

ತ್ರಿಭುಜಾಕಾರದಲ್ಲಿರುವ, ಆಲೂಗಡ್ಡೆಯ ಪಲ್ಯವನ್ನು ಒಡಲಲ್ಲಿ ಇರಿಸಿಕೊಂಡ, ಎಣ್ಣೆಯಲ್ಲಿ ಕರಿದ ಈ ತಿಂಡಿ ಯಾರಿಗೆ ಗೊತ್ತಿಲ್ಲ. ಭಾರತದ ಪ್ರತಿ ರಾಜ್ಯದಲ್ಲೂ ಇದರ ಪ್ರಸಿದ್ಧಿ ಬೀದಿ ಬೀದಿಗು ಚಾಚಿದೆ. ಅದರಲ್ಲೂ ಸಂಜೆಯ ಹೊತ್ತು ಬಿಸಿಬಿಸಿ ಸಮೋಸವನ್ನು ಸಾಸ್ ಜೊತೆ ಸವಿಯುತ್ತಿದ್ದರೆ ಆಹಾ, ಅದರ ಮಜಾನೇ ಬೇರೆ...! ಬನ್ನಿ ಸಮೋಸ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ... ಸ್ವಾದಿಷ್ಟ ರುಚಿಯುಳ್ಳ ಸಿಹಿ ಸಮೋಸ

ಬಿಸಿ ಬಿಸಿಯಾದ ಕ್ಯಾಪ್ಸಿಕಂ ಬೋಂಡಾ

ಬಿಸಿ ಬಿಸಿಯಾದ ಕ್ಯಾಪ್ಸಿಕಂ ಬೋಂಡಾ

ಚಳಿಗಾಲದಲ್ಲಿ ಬೋಂಡಾ, ಬಜ್ಜಿ, ಪಕೋಡ ಈ ರೀತಿಯ ತಿಂಡಿಗಳ ಕಡೆಗೆ ಸೆಳೆತ ಅಧಿಕವಾಗುವುದು ಸಹಜ. ಆದರೆ ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ಬೀದಿ ಬದಿಯ ಅಂಗಡಿಗಳಿಂದ ಕೊಂಡು ತಿನ್ನುವುದಕ್ಕಿಂತ ನಾವೇ ಮಾಡಿ ತಿಂದರೆ ಒಳ್ಳೆಯದು. ಅದರಲ್ಲೂ ಬಿಸಿ ಬಿಸಿಯಾದ ಕಾಫಿ ಹೀರುತ್ತಾ, ಗರಂ ಗರಂ ಕ್ಯಾಪ್ಸಿಕಂ ಬೋಂಡಾ ಮೆಲ್ಲಲು ಸಕತ್ ಖುಷಿ ಅನಿಸುವುದು ಅಲ್ವಾ? ಕ್ಯಾಪ್ಸಿಕಂ ಬೋಂಡಾ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಕ್ಯಾಪ್ಸಿಕಂ ಬೋಂಡಾದ ರೆಸಿಪಿ

ಮಸಾಲ ಪರುಪ್ಪು ವಡೆ

ಮಸಾಲ ಪರುಪ್ಪು ವಡೆ

ಕಡಲೆಬೇಳೆ ಮತ್ತು ಕೆಲವು ಮಸಾಲೆ ವಸ್ತುಗಳು ಪ್ರಧಾನವಾಗಿರುವ ಈ ವಡೆ ಬೆಳಗಿನ ತಿಂಡಿಯಾಗಿಯೂ ಸೈ, ಸಂಜೆಯ ಕುರುಕಲು ತಿಂಡಿಯಾಗಿಯೂ ಜೈ ಅನ್ನಿಸಿಕೊಳ್ಳುತ್ತದೆ. ಟೀ ಕಾಫಿಯೊಡನೆ ಉತ್ತಮ ಜೊತೆಯನ್ನೂ ನೀಡುತ್ತದೆ. ಮಸಾಲೆ ವಡೆಗಿಂತಲೂ ಮಸಾಲಾ ಪರುಪ್ಪು ವಡೆ ಎಂದೇ ಹೆಚ್ಚು ಜನಪ್ರಿಯವಾಗಿರುವ ಈ ರುಚಿಕರ ತಿಂಡಿಯನ್ನು ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ- ಮಸಾಲ ಪರುಪ್ಪು ವಡೆ


English summary

Variety styles of snacks Recipe in kannada

The variety types of Bajji are the hot favourite during winter season. We simply love to have different kinds of bajji with a piping hot cup of tea. Apart from that, vade, bonda, samosa, pakoda have their own charm during the winter season, So today boldsky share such kind of recipe have a look
X
Desktop Bottom Promotion