Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ!
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 08 (March 08 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಅನುಕೂಲವಿದೆ. ನೀವು ಮಾಡಬೇಕಿದ್ದ ಕೆಲಸದಲ್ಲಿ ದೊಡ್ಡ ಯಶಸ್ಸು ಪಡೆಯಬಹುದು. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ. ಮಕ್ಕಳ ಖರ್ಚುಗಳ ಕುರಿತಾಗಿ ನಿಗಾ ಇಡುವುದು ಉತ್ತಮ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಅತ್ಯಂತ ಶುಭದಿನ. ನಿಮ್ಮ ಪ್ರಯಾಣಗಳು ಫಲಪ್ರದವಾಗುತ್ತಿವೆ. ಮನೆಯ ಆರ್ಥಿಕ ಸಮಸ್ಯೆಯೊಂದು ಬಗೆಹರಿಯುವ ಸಾಧ್ಯತೆ ಇದೆ. ದಿನದ ಅಂತ್ಯದಲ್ಲಿ ನಿಮಗೆ ದುಬಾರಿ ವಸ್ತುವೊಂದು ಕೈ ಸೇರಬಹುದು. ದಾಂಪತ್ಯ ಸುಖವಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡುವ ದಿನ. ಗೃಹಿಣಿಯರು ವಾಹನ ಸಂಬಂಧ ಎಚ್ಚರಿಕೆಯಿಂದಿರಿ. ಉದ್ಯೋಗಸ್ಥರು ತಮ್ಮ ಕೆಲಸ ಬದಲಾಯಿಸುವ ಕುರಿತು ಗಂಭಿರ ಆಲೋಚನೆಯಲ್ಲಿ ತೊಡಗಬಹುದು. ಬಹುಕಾಲದಿಂದ ಬಾಕಿ ಉಳಿಸಿಕೊಂಡ ಕೆಲಸ ಪೂರ್ಣ ಮಾಡುವಿರಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಈ ದಿನ ಮಿಶ್ರಫಲ ತರಲಿದೆ. ಯಾರಿಗಾದರು ಹಣ ನೀಡುವ ಸಂಬಂಧವಾಗಿ ಮಾತುಕತೆ ನಡೆಯಬಹುದು. ವೇತನ ಹೆಚ್ಚಳ ಅಥವಾ ವರ್ಗಾವಣೆ ಕುರಿತಾದ ವಿಚಾರವಾಗಿ ನೀವು ಮುಖ್ಯ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಈ ದಿನವು ಅನುಕೂಲಕರ ವಾತಾವರಣಕ್ಕೆ ಕಾರಣವಾಗಲಿದೆ. ನೀವು ಮಾಡುವ ಕೆಲಸಗಳಲ್ಲಿ ಶುಭವಾಗುತ್ತಿದೆ. ಅನೇಕರಿಗೆ ಈ ದಿನ ಪ್ರಯಾಣ ಮಾಡಬೇಕಾಗುತ್ತದೆ. ಹಣಕಾಸು ವಿಚಾರದಲ್ಲಿ ಧನಾತ್ಮಕ ದಿನ. ಸಾಲ ಮಾಡುವ ಆಲೋಚನೆಗೆ ಶುಭವಿದೆ.
ಕನ್ಯಾ ರಾಶಿ
ನಿಮ್ಮ ಕೆಲಸ ಬದಲಾಯಿಸುವ ಆಲೋಚನೆಗಳಿಗೆ ಹೊಸ ದಿಕ್ಕು ಸಿಗಲಿದೆ. ಪ್ರಮಾಣಿಕ ಪ್ರಯತ್ನಗಳಲ್ಲಿ ಶುಭಫಲ ಪಡೆಯುವಿರಿ. ಮನೆಗಾಗಿ ನೀವು ಖರ್ಚು ಮಾಡಬೇಕಾಗುತ್ತದೆ. ವ್ಯವಹಾರಗಳಲ್ಲಿ ನಿಮಗೆ ನೆಮ್ಮದಿ ದಿನ. ವ್ಯಾಪಾರಿಗಳು ಪ್ರಯಾಣ ಮಾಡಬೇಕಾಗುತ್ತದೆ.
ತುಲಾ ರಾಶಿ
ತುಲಾ ರಾಶಿ ಜನರಲ್ಲಿ ಇಂದು ಮಿಶ್ರಫಲವಿದೆ. ಯಾರಿಂದಾದರು ಹಣಕಾಸಿನ ನೆರವು ಪಡೆಯುವ ನಿಮ್ಮ ಬಯಕೆ ಮುಂದಕ್ಕೆ ಹೋಗಬಹುದು. ಸಹೋದರರೊಂದಿಗೆ ಕಲಹ ಇರಬಹುದು. ಆಸ್ಪತ್ರೆ ಸಂಬಂಧಿತ ವಿಚಾರವಾಗಿ ನೀವು ಹಣ ಖರ್ಚು ಮಾಡಬೇಕಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನವು ಉತ್ತಮ. ನಿಮ್ಮ ಹಣಕಾಸು ಸಂಬಂಧಿತ ವಿಚಾರವಾಗಿ ಉತ್ತಮ ದಿನ. ಹೊಸ ಆದಾಯ ಹುಡುಕುತ್ತಿದ್ದರೆ ಇಂದು ಉತ್ತಮ ಪ್ರತಿಫಲ ಪಡೆಯಲಿದ್ದೀರಿ. ನಿಮ್ಮ ದೂರ ದೃಷ್ಟಿಯ ಕಾರಣದಿಂದ ಉಳಿತಾಯ ಹೆಚ್ಚು ಮಾಡಿಕೊಳ್ಳುವಿರಿ.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನ ಬಹಳ ಅನುಕೂಲವಿದೆ. ಬಹುತೇಕ ಸಮಯ ನೀವು ಮನೆಯಲ್ಲಿ ಕಳೆಯುತ್ತೀರಿ. ಆಪ್ತರೊಬ್ಬರ ಭೇಟಿಗೆ ತೆರಳಬಹುದು. ಶುಭ ಕಾರ್ಯ ಸಂಬಂಧಿತ ಕೆಲಸದಲ್ಲೂ ನೀವು ತೊಡಗಬಹುದು. ಮನೆಗಾಗಿ ಹೊಸ ವಸ್ತು ಖರೀದಿಸಬಹುದು.
ಮಕರ ರಾಶಿ
ಮಕರ ರಾಶಿಯ ಜನರಿಗೆ ಈ ದಿನವು ಸಮಸ್ಯೆಗಳಿವೆ. ಆರೋಗ್ಯ ಸಂಬಂಧಿತ ಏರುಪೇರು ನಿಮಗೆ ಚಿಂತೆ ತರಲಿದೆ. ಮಕ್ಕಳ ವಿದ್ಯಾಭ್ಯಾಸ ಕುರಿತಾದ ವಿಚಾರದಲ್ಲಿ ನಿಮ್ಮ ಆಲೋಚನೆಗಳಿಗೆ ಅಡ್ಡಗಾಲು ಹಾಕಬಹುದು. ವ್ಯಾಪಾರಿಗಳು ಈ ದಿನ ದೊಡ್ಡ ಒಪ್ಪಂದಗಳ ಕುರಿತಾಗಿ ಎಚ್ಚರ ವಹಿಸಿ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಮಿಶ್ರಫಲ ತರಲಿದೆ. ಗೃಹಿಣಿಯರು ಪ್ರಯಾಣ ಮಾಡುವಾಗ ಎಚ್ಚರದಿಂದ ಇರುವುದು ಉತ್ತಮ. ತಂದೆ ತಾಯಿಯ ಆರೋಗ್ಯ ಸಂಬಂಧ ಎಚ್ಚರಿಕೆ ಬೇಕು. ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ವಿಚಾರದಲ್ಲಿ ಧನಾತ್ಮಕ ಚರ್ಚೆ ಇದೆ. ಉಳಿತಾಯ ಹೆಚ್ಚಿಸುವ ಕಡೆ ಗಮನವಿಡಿ.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನವು ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗಬೇಕಾಗುತ್ತದೆ. ನೀವು ಮಾಡಬೇಕಿದ್ದ ದೊಡ್ಡ ಕೆಲಸವೊಂದನ್ನು ಇಂದು ಪೂರ್ಣ ಮಾಡುವಿರಿ, ವಾಹನ ವಿಚಾರವಾಗಿ ತೆಗೆದುಕೊಂಡ ನಿರ್ಧಾರ ನಿಮಗೆ ಸಂತಸ ತರಲಿದೆ.



Click it and Unblock the Notifications