For Quick Alerts
ALLOW NOTIFICATIONS  
For Daily Alerts

ಅಂದ ಹಾಗೆ ಎಷ್ಟು ಬಗೆಯ ಸಮೋಸ ಟೇಸ್ಟ್ ಮಾಡಿದ್ದೀರಾ?

|

ಬಿಸಿ-ಬಿಸಿ ಸಮೋಸವನ್ನು ನೋಡುವಾಗ ಅದನ್ನು ತಿನ್ನಬೇಕೆನಿಸುವುದು ಸಹಜ. ಎಲ್ಲರಿಗೂ ಫೇವರೆಟ್ ಸಮೋಸ ಅಂಗಡಿಯಂತೂ ಇದ್ದೇ ಇರುತ್ತದೆ. ವೆಜ್ ಸಮೋಸವನ್ನು 10 ಅಂಗಡಿಗಳಲ್ಲಿ ತಿಂದರೆ 10 ಬಗೆಯ ಸಮೋಸ ದೊರೆಯುತ್ತದೆ. ಅದಲ್ಲ ಇರಲಿ ಒಟ್ಟಿನಲ್ಲಿ ಸಮೋಸದಲ್ಲಿ ಎಷ್ಟು ಬಗೆಯ ಸಮೋಸ ಟೇಸ್ಟ್ ಮಾಡಿದ್ದೀರಾ?

ಸಮೋಸವನ್ನು 10ಕ್ಕೂ ಹೆಚ್ಚಿನ ಬಗೆಯಲ್ಲಿ ತಯಾರಿಸಬಹುದು. ಎಲ್ಲಾ ಸಮೋಸಗಳ ಆಕಾರ ಒಂದೇ ಆದರೂ ಅದರಲ್ಲಿ ಬಳಸುವ ಪದಾರ್ಥಗಳು ಬದಲಾದಂತೆ ರುಚಿಯೂ ಭಿನ್ನವಾಗಿರುತ್ತದೆ. ಇಲ್ಲಿ ನಾವು 8 ಬಗೆಯ ಸಮೋಸಗಳ ಬಗ್ಗೆ ಹೇಳಿದ್ದೇವೆ ನೋಡಿ:

ಮಶ್ರೂಮ್ ಸಮೋಸ

ಮಶ್ರೂಮ್ ಸಮೋಸ

ಮಶ್ರೂಮ್ ಅನ್ನು ಫ್ರೈ ಮಾಡಿ, ಇತರ ಮಸಾಲೆ ಸಾಮಾಗ್ರಿಗಳನ್ನು ಬಳಸಿ ಮಾಡುವ ಈ ಸಮೋಸ ರುಚಿಯಲ್ಲಿ ಸೂಪರ್ ಆಗಿರುತ್ತದೆ.

ಕೇಸರಿ ಸಮೋಸ

ಕೇಸರಿ ಸಮೋಸ

ಸಿಹಿ ತಿಂಡಿ ಇಷ್ಟ ಪಡುವವರಿಗೆ ಈ ಕೇಸರಿ ಸಮೋಸ ತುಂಬಾ ಇಷ್ಟವಾಗುವುದು. ಇದನ್ನು ರವೆ, ಜೇನು ಮತ್ತು ಇತರ ಡ್ರೈ ಫ್ರೂಟ್ಸ್ ಬಳಸಿ ತಯಾರಿಸಲಾಗುವುದು.

ಆಲೂ ಸಮೋಸ

ಆಲೂ ಸಮೋಸ

ಇದು ಸಾಮಾನ್ಯವಾಗಿ ಎಲ್ಲಾ ಚಾಟ್ ಅಂಗಡಿಗಳಲ್ಲಿ ದೊರೆಯುತ್ತದೆ. ಇದನ್ನು ಗ್ರೀನ್ ಚಟ್ನಿ ಜೊತೆ ತಿನ್ನಲು ಸೂಪರ್ ಆಗಿರುತ್ತದೆ.

ವೆಜಿಟೇಬಲ್ ಸಮೋಸ

ವೆಜಿಟೇಬಲ್ ಸಮೋಸ

ಆಲೂಗಡ್ಡೆ, ಬಟಾಣಿ, ಕ್ಯಾರೆಟ್, ಬೀನ್ಸ್ ಹೀಗೆ ತರಾವರಿ ತರಕಾರಿ ಬಳಸಿ ಈ ಸಮೋಸವನ್ನು ತಯಾರಿಸಲಾಗುವುದು. ಟೊಮೆಟೊ ಸಾಸ್ ಜೊತೆ ತಿನ್ನಲು ಈ ಸಮೋಸ ಸೂಪರ್.

ಚೆನ್ನಾ ಸಮೋಸ

ಚೆನ್ನಾ ಸಮೋಸ

ಈ ಚೆನ್ನಾ ಸಮೋಸವನ್ನು ಸ್ಪೆಷಲ್ ಮಸಾಲೆ ಬಳಸಿ ತಯಾರಿಸುವುದರಿಂದ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದುವರೆಗೆ ರುಚಿ ನೋಡಿಲ್ಲವೆಂದರೆ ಟೇಸ್ಟ್ ಮಾಡಲು ಮರೆಯಬೇಡಿ.

ಈರುಳ್ಳಿ

ಈರುಳ್ಳಿ

ಇದು ಕಾಮನ್ ಆಗಿ ದೊರೆಯುವ ಸಮೋಸವಾಗಿದ್ದು, ಇದನ್ನು ತಯಾರಿಸುವ ವಿಧಾನ ಕೂಡ ಸುಲಭವಾಗಿದೆ.

ಚಿಕನ್ ಖೀಮಾ ಸಮೋಸ

ಚಿಕನ್ ಖೀಮಾ ಸಮೋಸ

ರಂಜಾನ್ ತಿಂಗಳಿನಲ್ಲಿ ಈ ಸಮೋಸಕ್ಕೆ ತುಂಬಾ ಬೇಡಿಕೆ. ಖೀಮಾ ಚಿಕನ್ ಬಳಸಿ ಈ ಸಮೋಸವನ್ನು ತಯಾರಿಸಲಾಗುವುದು.

ಮಟನ್ ಸಮೋಸ

ಮಟನ್ ಸಮೋಸ

ಮಟನ್ ಪ್ರಿಯರು ಮಟನ್ ಸಮೋಸದ ರುಚಿ ನೋಡಬಹುದು. ಮಟನ್ ಅನ್ನು ಫ್ರೈ ಮಾಡಿ ಈ ಸಮೋಸ ತಯಾರಿಸಲಾಗುವುದು.

English summary

Types Of Samosas For An Evening Treat

If you want to try out these different types of samosas as an evening snack, take a look at some of the mouth watering samosas you can treat your tummy too.
X
Desktop Bottom Promotion