Just In
Don't Miss
- Movies
ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?
- News
ಭೂತಾನ್ಗೆ 1.5 ಲಕ್ಷ ಕೋವಿಶೀಲ್ಡ್ ಲಸಿಕೆಯನ್ನ ಉಡುಗೊರೆ ನೀಡಿದ ಭಾರತ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ ಮತ್ತು ಬೆಂಗಳೂರು ತಂಡಗಳ ಅದೃಷ್ಟ ಪರೀಕ್ಷೆ
- Automobiles
ಎಂಜಿ ಜೆಡ್ಎಸ್ ಪೆಟ್ರೋಲ್ ಕಾರಿನ ಮೊದಲ ಇಂಟಿರಿಯರ್ ಚಿತ್ರಗಳು ಬಹಿರಂಗ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ರುಚಿ: ಫಟಾಫಟ್ ತಯಾರಿಸಿ ಚಿಪ್ಸ್ ಚಾಟ್ ಮಸಾಲ
ದಿನದ ಚಟುವಟಿಕೆಯಿಂದ ಮನೆಗೆ ಹಿಂದಿರುಗಿದ ಬಳಿಕ ಆರಾಮವಾಗಿ ಕುಳಿತು ಟೀವಿ ನೋಡುತ್ತಾ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ತಿನ್ನಲೆಂದೇ ಇಂದು ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಪ್ಯಾಕೆಟ್ಟುಗಳಿರುವ ಕುರುಕು ತಿಂಡಿಗಳು ಲಭ್ಯವಿವೆ. ಪಾಪ್ ಕಾರ್ನ್, ಚಿಪ್ಸ್, ಚಾಟ್, ಮೊದಲಾದವುಗಳು ಸಾಮಾನ್ಯವಾಗಿವೆ. ಆದರೆ ನಿತ್ಯವೂ ಇವೇ ರುಚಿಗಳನ್ನು ಸವಿದೂ ಜಡ್ಡುಹಿಡಿದ ನಾಲಿಗೆಗೆ ಬೇರೆ ರುಚಿಯನ್ನು ನೀಡಿದರೆ ಹೇಗೆ?
ಇಂದು ಕೊಂಚ ಭಿನ್ನವಾದುದನ್ನು ಆಲೋಚಿಸೋಣ. ಕೊಂಚ ಚಾಟ್, ಕೊಂಚ ಚಿಪ್ಸ್ ಮಿಶ್ರಣಗೊಳಿಸಿ ಚಿಪ್-ಚಾಟ್ ಮಾಡಿದರೆ ಹೇಗೆ? ಉತ್ತಮ ಕಲ್ಪನೆ ಅಲ್ಲವೇ? ಬನ್ನಿ ಇಂದು ಚಿಪ್ಸ್ ಚಾಟ್ ಮಾಡುವ ಬಗೆಯನ್ನು ಕಲಿಯೋಣ. ಇದಕ್ಕಾಗಿ ಬೇಕಾಗಿರುವುದು ಹೆಸರೇ ಸೂಚಿಸುವಂತೆ ಚಿಪ್ಸ್ ಮತ್ತು ಚಾಟ್‌ಗೆ ಸೇರಿಸುವ ಕೆಲವು ಮಸಾಲೆಗಳು ಮಾತ್ರ. ಮಕ್ಕಳ ಜೊತೆಗೇ ಹಿರಿಯರೂ ಈ ಹೊಸರುಚಿಯನ್ನು ಹೇಗೆ ಸ್ವಾಗತಿಸಿ ನಿಮ್ಮ ಗುಣಗಾನ ಮಾಡುತ್ತಾರೆ ಎಂಬುದನ್ನು ಕಣ್ಣಾರೆ ನೋಡಿ ಆನಂದಿಸಿ. ಸಂಜೆಗೆ ಸ್ಪೆಷಲ್-ಆಲೂ ಟಿಕ್ಕಿ ಚಾಟ್
ಪ್ರಮಾಣ: ಇಬ್ಬರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು:
*ಆಲುಗಡ್ಡೆ ಚಿಪ್ಸ್ - 500ಗ್ರಾಂ
*ಸೇವ್ ಪುರಿ - 1 ಕಪ್
*ಹಸಿರು ಮೆಣಸಿನ ಪೇಸ್ಟ್ - 1/2 ಚಿಕ್ಕ ಚಮಚ
*ಬೆಲ್ಲದ ಪೇಸ್ಟ್ (ಅಥವಾ ಜೋನಿಬೆಲ್ಲ) - 1/2 ಚಿಕ್ಕ ಚಮಚ
*ಹುರಿದ ಶೇಂಗಾಬೀಜ- 1/2 ಚಿಕ್ಕ ಚಮಚ
*ಕೆಂಪು ಮೆಣಸಿನ ಪುಡಿ - 1/2 ಚಿಕ್ಕ ಚಮಚ
*ಕ್ಯಾರೆಟ್ - 1/2 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಈರುಳ್ಳಿ - 1/2 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಸೌತೆಕಾಯಿ- 1/2 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಲಿಂಬೆರಸ - 1/2 ಚಿಕ್ಕ ಚಮಚ
*ಕೊತ್ತಂಬರಿ ಸೊಪ್ಪು - ನಾಲರಿಂದ ಐದು ಎಸಳು (ಚಿಕ್ಕದಾಗಿ ಹೆಚ್ಚಿದ್ದು)
*ಉಪ್ಪು: ರುಚಿಗನುಸಾರ ಚಾಟ್ಸ್ ಸೇವ್ ಮನೆಯಲ್ಲಿಯೆ ಮಾಡಬಹುದು!
ವಿಧಾನ:
1) ಮೊದಲು ಆಲುಗಡ್ಡೆ ಚಿಪ್ಸ್ ಅನ್ನು ಚಿಕ್ಕ ಚಿಕ್ಕದಾಗಿ ತುಂಡರಿಸಿಕೊಳ್ಳಿ. ಇವನ್ನು ಒಂದು ದೊಡ್ಡ ಬೋಗುಣಿಯಲ್ಲಿ ಹಾಕಿ.
2) ಇದಕ್ಕೆ ಹಸಿಮೆಣಸಿನ ಪೇಸ್ಟ್, ಬೆಲ್ಲದ ಪೇಸ್ಟ್, ಶೇಂಗಾಬೀಜ, ಕೆಂಪುಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
3) ಬಳಿಕ ಕ್ಯಾರೆಟ್, ಈರುಳ್ಳಿ ಮತ್ತು ಸೌತೆ ಹಾಕಿ ಚೆನ್ನಾಗಿ ತಿರುವಿ. ಕೊನೆಯಲ್ಲಿ ಲಿಂಬೆರಸ ಸೇರಿಸಿ
4) ಈ ಮಿಶ್ರಣವನ್ನು ತಟ್ಟೆಯಲ್ಲಿ ಹರಡಿ ಇದರ ಮೇಲೆ ಕೊತ್ತಂಬರಿ ಸೊಪ್ಪಿನ ತುಣುಕುಗಳನ್ನು ಪಸರಿಸಿ ಅಲಂಕರಿಸಿ. ಎಲ್ಲಕ್ಕೂ ಮೇಲೆ ಸೇವ್ ಪುರಿಯನ್ನು ಸಿಂಪಡಿಸಿ. ಈ ರೆಸಿಪಿ ಹೇಗೆನಿಸಿತು ಎಂಬುದನ್ನು ನಮಗೆ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.