For Quick Alerts
ALLOW NOTIFICATIONS  
For Daily Alerts

ಕರುಕುರು ರಿಬ್ಬನ್ ಪಕೋಡ ರೆಸಿಪಿ

|

ಮಳೆಗಾಲದ ಸಮಯದಲ್ಲಿ ಚಕ್ಕುಲಿ, ಚಿಪ್ಸ್ ಹೀಗೆ ಸ್ವಲ್ಪ ಕರುಮುರು ತಿಂಡಿಗಳನ್ನು ತಿನ್ನಲು ಇಷ್ಟವಾಗುತ್ತದೆ. ಈ ತಿಂಡಿಗಳಲ್ಲದೆ ಬೇರೆ ರೀತಿಯ ಕರುಕುರು ತಿಂಡಿ ತಿನ್ನ ಬಯಸುವವರಿಗೆ ರಿಬ್ಬನ್ ಪಕೋಡದ ರುಚಿ ಇಷ್ಟವಾಗುವುದು. ಈ ರಿಬ್ಬನ್ ಪಕೋಡ ಮಾಡಲು ಸುಲಭವಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

Ribbon Pakoda Recipe

ಬೇಕಾಗುವ ಸಾಮಾಗ್ರಿಗಳು:
* ಅಕ್ಕಿ ಹಿಟ್ಟು 1/2 ಕಪ್
* ಕಡಲೆಹಿಟ್ಟು 1/2 ಕಪ್
* ಬೆಣ್ಣೆ 1 ಚಮಚ
* ಕೆಂಪು ಮೆಣಸಿನ ಹುಡಿ 1 ಚಮಚ
* ಕರಿಯಲು ಎಣ್ಣೆ
* ಬಿಸಿ ಎಣ್ಣೆ 1/4 ಸೌಟು
* ಚಿಟಿಕೆಯಷ್ಟು ಇಂಗು
* ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ:

1. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಕೆಂಪು ಮೆಣಸಿನ ಪುಡಿ, ಇಂಗು, ಬೆಣ್ಣೆ, ಬಿಸಿ ಎಣ್ಣೆ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಮಾಡಬೇಕು. ಈ ಮಿಶ್ರಣ ಚಕ್ಕುಲಿಯ ಅಚ್ಚಿನಲ್ಲಿ ಹಾಕಿದಾಗ ಸುಲಭವಾಗಿ ಒತ್ತಲಿಕ್ಕೆ ಬರುವ ಹಾಗೆ ಹದವಾಗಿ ಕಲೆಸಬೇಕು.

2. ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ, ಎಣ್ಣೆಯನ್ನು ಚೆನ್ನಾಗಿ ಕುದಿಸಿ, ಅದಕ್ಕೆ ಚಕ್ಕುಲಿ ಅಚ್ಚಿನಿಂದ ನೇರವಾಗಿ ಹಿಟ್ಟು ಒತ್ತಿ. ಆ ಹಿಟ್ಟು ಎಣ್ಣೆಯಲ್ಲಿ ಕರೆದು ಕಂದು ಬಣ್ಣಕ್ಕೆ ಬರುವಾಗ ತೆಗೆಯಬೇಕು. ಈ ರೀತಿ ಮಾಡಿದರೆ ರಿಬ್ಬನ್ ಪಕೋಡ ರೆಡಿ.

ಇದನ್ನು ಟೀ ಜೊತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.

ಸಲಹೆ:
* ಹಿಟ್ಟು ಕಲೆಸಿದ ಕೂಡಲೇ ಮಾಡಬೇಕು.
* ಇದನ್ನು ಒಂದು ವಾರದವರೆಗೆ ಇಡಬಹುದಾಗಿದೆ.

English summary

Ribbon Pakoda Recipe | Variety Of Snacks Recipe | ರಿಬ್ಬನ್ ಪಕೋಡ ರೆಸಿಪಿ | ಅನೇಕ ಬಗೆಯ ತಿಂಡಿಯ ರೆಸಿಪಿ

In rainy season we love to eat chakkuli type food, other than chakkuli if you want to something tasty snacks then you can try this ribbon pakoda recipe.
X
Desktop Bottom Promotion