For Quick Alerts
ALLOW NOTIFICATIONS  
For Daily Alerts

ಸಂಜೆ ಟೀ ಜೊತೆ ಸವಿಯಲು ಆಲೂ ಬೋಂಡಾ

|

ಸಂಜೆ ತಿಂಡಿಗೆ ಸುಲಭವಾಗಿ ಮಾಡಬಹುದಾದ ತಿಂಡಿಗಳೆಂದರೆ ಆಲೂಬೋಂಡಾ, ಪಕೋಡ, ಮೆಣಸಿನಕಾಯಿ ಬಜ್ಜಿ. ಬಿಸಿ-ಬಿಸಿಯಾದ ಟೀ ಜೊತೆ ಬಿಸಿಯಾದ ಬೋಂಡಾ, ಪಕೋಡ ತಿನ್ನುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ?

ಆದರೆ ಈ ರೀತಿಯ ತಿಂಡಿಗಳನ್ನು ಬೀದಿ ಬದಿಯಲ್ಲಿ ಕೊಂಡು ತಿನ್ನುವುದಕ್ಕಿಂತ, ಗುಣ ಮಟ್ಟದ ಎಣ್ಣೆ ಬಳಸಿ ಮನೆಯಲ್ಲಿ ಮಾಡಿ ತಿನ್ನುವುದು ಸೇಫ್. ಇವತ್ತು ನಾವು ಸಂಜೆ ಟೀ ಜೊತೆ ಸವಿಯಲು ಆಲೂಬೋಂಡಾದ ರೆಸಿಪಿ ನೀಡಿದ್ದೇವೆ ನೋಡಿ:

Potato Bonda Recipe

ಬೇಕಾಗುವ ಸಾಮಾಗ್ರಿಗಳು:
* ಬೇಯಿಸಿದ ಆಲೂಗಡ್ಡೆ3-4
* ಹಸಿ ಮೆಣಸಿನ ಕಾಯಿ 2
* 3/4 ಕಪ್ ಕಡಲೆ ಹಿಟ್ಟು ಮತ್ತು 1/4 ಕಪ್ ಸ್ವಲ್ಪ ಮೈದಾ
* ಗರಂ ಮಸಾಲ 1 ಚಮಚ
* ಅರಿಶಿಣ ಪುಡಿ 1/4 ಚಮಚ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕ ಉಪ್ಪು
* ಎಣ್ಣೆ(ಡೀಪ್ ಫ್ರೈಗೆ)

ತಯಾರಿಸುವ ವಿಧಾನ:

* ಆಲೂಗಡ್ಡೆಯನ್ನು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ, ಸ್ವಲ್ಪ ಉಪ್ಪು ಮತ್ತು ಬೇಯಲು ತಕ್ಕ ನೀರು ಹಾಕಿ ಬೇಯಿಸಿ.

* ಬೇಯಿಸಿದ ಆಲೂಗೆಡ್ಡೆಯ ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಬೇಕು, ಅದಕ್ಕೆ ರುಚಿಗೆ ತಕ್ಕ ಉಪ್ಪು, ಗರಂ ಮಸಾಲ, ಕತ್ತರಿಸಿದ ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.

2. ನಂತರ ಆಲೂ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಕಟ್ಟಿ.

3. ಈಗ ಮತ್ತೊಂದು ಪಾತ್ರೆಯಲ್ಲಿ ಮೈದಾ ಮತ್ತು ಕಡಲೆಹಿಟ್ಟು ಹಾಕಿ ಅದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮತ್ತು ನೀರು ಹಾಕಿ ಕಲೆಸಬೇಕು. ಮಿಶ್ರಣ ತುಂಬಾ ಗಟ್ಟಿಯಾಗಿರಬಾರದು, ನೀರು-ನೀರಾಗಿಯೂ ಇರಬಾರದು.

4. ಈಗ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಬೇಕು, ಆಲೂಗೆಡ್ಡೆ ಮಿಶ್ರಣದಿಂದ ಕಟ್ಟಿದ ಉಂಡೆಗಳನ್ನುಮೈದಾದಲ್ಲಿ ಅದ್ದಿ ಕುದಿಯುತ್ತಿರುವ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ರುಚಿಕರವಾದ ಅಲೂ ಬೋಂಡಾ ರೆಡಿ.
ರೆಡಿಯಾದ ಆಲೂಬೋಂಡಾವನ್ನು ಬಿಸಿ ಬಿಸಿ ಟೀ ಜೊತೆ ಸವಿಯಿರಿ.

English summary

Potato Bonda Recipe

If you love aloo, this is a must try Indian street food. The potato bonda is made out of rice flour and aloo sabji along with Indian spices which is mouth watering.
X
Desktop Bottom Promotion