For Quick Alerts
ALLOW NOTIFICATIONS  
For Daily Alerts

ಇನ್ನೊಂದು ಪ್ಲೇಟ್‌ ಎಗ್‌ ಫ್ರೆೃಡ್‌ರೈಸ್‌ ಪ್ಲೀಸ್‌!

By Super
|

ದಿನಕ್ಕೊಂದು ಮೊಟ್ಟೆ ತುಂಬುವುದು ನಿಮ್‌ ಹೊಟ್ಟೆ ಅನ್ನೋ ಮಾತು ನಿಮಗೆ ಗೊತ್ತುಂಟಾ? ಮೊಟ್ಟೆ ಪ್ರಿಯರಿಗಾಗಿ...

  • ಉಮಾ ರಾವ್‌

ಬೇಕಾಗುವ ಸಾಮಗ್ರಿಗಳು :

ಬೇಯಿಸಿದ ಮೊಟ್ಟೆಗಳು -5
ತುರಿದ ಹಸಿ ಕೊಬ್ಬರಿ -ಅರ್ಧ ಕಪ್‌
ಈರುಳ್ಳಿ-1
ಹಸಿ ಶುಂಠಿ ಮತ್ತು ಬೆಳ್ಳುಳ್ಳಿ
ಬಾಸುಮತಿ ಅಕ್ಕಿ -2 ಕಪ್‌
ಚೆಕ್ಕೆ, ಲವಂಗ, ಗಸಗಸೆ
ಹಸಿ ಮೆಣಸಿನಕಾಯಿ -5
ಯಾಲಕ್ಕಿ
ಧನಿಯಾ ಪುಡಿ
ಜೀರಿಗೆ ಪುಡಿ
ಅರಿಶಿಣನ ಪುಡಿ 1/4 ಟೀ ಚಮಚ

ಮಾಡುವ ವಿಧಾನ :

1.ಒಲೆಯ ಮೇಲೆ ಬಾಣಲೆಯಿಟ್ಟು ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ. ಮೊದಲೇ ಹೆಚ್ಚಿಕೊಂಡಿದ್ದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಅದರಲ್ಲಿ ಹುರಿಯಿರಿ.

2.ಹುರಿದ ಮೇಣಸಿನಕಾಯಿ, ಈರುಳ್ಳಿ, ತುರಿದ ಹಸಿ ಕೊಬ್ಬರಿ, ಶುಂಠಿ, ಬೆಳ್ಳುಳ್ಳಿ, ಅರಿಶಿಣ ಪುಡಿ, ಧನಿಯಾ ಪುಡಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ರುಬ್ಬುವಾಗ ಅಗತ್ಯವೆನ್ನಿಸಿದರೇ ಸ್ವಲ್ಪ ನೀರು ಸೇರಿಸಬಹುದು.

3.ಬಾಣಲೆಗೆ ಎರಡು ಟೀ ಚಮಚ ಎಣ್ಣೆಯನ್ನು ಹಾಕಿ. ಸ್ವಲ್ಪ ಕಾದ ನಂತರ ಜೀರಿಗೆ, ಯಾಲಕ್ಕಿ(ಸಿಪ್ಪೆ ತೆಗೆಯಬೇಡಿ), ಚಕ್ಕೆ, ಸುವಾಸನಾ ಪತ್ರೆಯನ್ನು ಸೇರಿಸಿ. ಕೆಲವು ನಿಮಿಷಗಳ ಕಾಲ ಎಲ್ಲವನ್ನು ಹುರಿದುಕೊಳ್ಳಿ. ಮೊದಲೇ ರುಬ್ಬಿಟ್ಟಿದ್ದ ಮಸಾಲೆ ಪದಾರ್ಥಗಳಿಗೆ ಇದನ್ನು ಸೇರಿಸಿ.

4.ಪಾತ್ರೆಯಾಂದಕ್ಕೆ ಬಾಸುಮತಿ ಅಕ್ಕಿಗೆ ಮತ್ತು ನೀರನ್ನು ಹಾಕಿ ಅನ್ನವನ್ನು ಸಿದ್ಧಪಡಿಸಿ. ಎಲ್ಲಾ ಮಸಾಲೆಯನ್ನು ಅದಕ್ಕೆ ಸೇರಿಸಿ ಹದಿನೈದು ನಿಮಿಷ ಒಲೆಯ ಮೇಲಿಡಿ. ಮೊದಲೇ ಬೇಯಿಸಿಟ್ಟಿದ್ದ ಮೊಟ್ಟೆಯನ್ನು ಚಿಕ್ಕಚಿಕ್ಕ ಹೋಳುಗಳಾಗಿ ಕತ್ತರಿಸಿ ಪಾತ್ರೆಗೆ ಸೇರಿಸಿ. ಆಮೇಲೆ ತಟ್ಟೆಗೆ ಎಗ್‌ ಫ್ರೆೃಡ್‌ ರೈಸ್‌ ಬಡಿಸಿಕೊಂಡು ರುಚಿ ನೋಡಿ!

X
Desktop Bottom Promotion