For Quick Alerts
ALLOW NOTIFICATIONS  
For Daily Alerts

ಖಾರ ಖಾರ ಧಾರವಾಡ ಮಿರ್ಚಿ ಬಜಿ

By Super
|
Dharwad mirchi bhaji
ಏನೇನು ಬೇಕು : ಕಡಲೆ ಹಿಟ್ಟು (ಒಂದು ಬಟ್ಟಲು), ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಚಿರೋಟಿ ರವೆ (ಇವೆಲ್ಲ ಸ್ವಲ್ಪ), ಅಡುಗೆ ಸೋಡಾ, ಜೀರಿಗೆ, ಅರಿಷಿಣ (ಚಿಟಿಕೆಯಷ್ಟು), ರುಚಿಗೆ ಉಪ್ಪು ಮತ್ತು ಕರಿಯಲು ಎಣ್ಣೆ. ಮಿರ್ಚಿ ಅಂದ್ರೆ ಹಚ್ಚ ಹಸಿರು ಮೆಣಸಿನ ಕಾಯಿ (ಬೆಂಗಳೂರು ಕಡೆ ಸಿಗುವ ತಿಳಿಹಸಿರು ಮೆಣಸಿನ ಕಾಯಿ ಅಲ್ಲ) ಮರೆತೀರಿ ಜೋಕೆ.

ಮಾಡುವ ರೀತಿ : ಮೊದಲಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಚಿರೋಟಿ ರವೆ ಮುಂತಾದವುಗಳನ್ನು ನೀರಿನೊಂದಿಗೆ ಕಲಿಸಿಟ್ಟುಕೊಳ್ಳಿ. ಅದಕ್ಕೆ ಅಡುಗೆ ಸೋಡಾ, ಉಪ್ಪು, ಜೀರಿಗೆ, ಬಣ್ಣಕ್ಕೆ ಅರಿಷಿಣ ಸೇರಿಸಿ ಕಲಿಸಿಟ್ಟುಕೊಳ್ಳಿ. ಈ ಮಿಶ್ರಣ ಬೋಂಡಾ ಮಾಡುವಾಗ ತಯಾರಿಸುವ ಹಿಟ್ಟಿನಷ್ಟು ಗಟ್ಟಿಯಾಗಿರಲಿ.

ಒಲೆ ಹತ್ತಿಸಿ ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಬಿಡಿ. ತುಸು ಕುದಿ ಬರುತ್ತಿದ್ದಂತೆ ಹಸಿ ಮೆಣಸಿನ ಕಾಯಿಯನ್ನು ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ತೇಲಿಬಿಡಿ. ಒಟ್ಟಿಗೆ ಮೂರ್ನಾಲ್ಕು ಹಾಕಿದರೂ ಆಯಿತು. ಮಿರ್ಚಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಝಾಲರಿಯಿಂದ ಹೊರತೆಗೆದು ನ್ಯೂಸ್ ಪೇಪರ್ ಮೇಲೆ ಹಾಕಿ ಎಣ್ಣೆ ಹೀರಿಕೊಳ್ಳಲು ಬಿಡಿ.

ಬಿಸಿ ಬಿಸಿ ಧಾರವಾಡ ಮಿರ್ಚಿ ತಿನ್ನುವಾಗ ಕಣ್ಣಲ್ಲಿ, ಮೂಗಲ್ಲಿ ನೀರು ಸೋರುತ್ತಿದ್ದರೂ ಫಿಲ್ಟರ್ ಕಾಫಿಯೊಡನೆ ಹೀರಿಕೊಳ್ಳಲು ಸಖತ್ತಾಗಿರುತ್ತದೆ. ಕಾಫಿ ಮಾಡುವುದರಲ್ಲಿ ಕೂಡ ನೈಪುಣ್ಯತೆ ಬೇಕು ಅಂದ್ರೆ ನೀವು ನಂಬಲೇಬೇಕು. ಕಾಫಿ ಮಾಡುವುದರಲ್ಲೂ ಅನೇಕ ವಿಧಾನಗಳಿವೆ.

X
Desktop Bottom Promotion