For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೆ ಗೋಬಿ ಮಂಚೂರಿ ಮಾಡುವ ವಿಧಾನ

By Staff
|

ಗೋಬಿ ಮಂಚೂರಿ ಅಂದರೆ ಸಾಕು ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಇಷ್ಟ ಪಟ್ಟು ತಿನ್ನುವ ಸ್ನ್ಯಾಕ್ಸ್ ಆಗಿದೆ. ಆದರೆ ಇದನ್ನು ಹೊರಗಡೆ ಹೋಗಿ ತಿನ್ನುವುದಕ್ಕಿಂತ ಮನೆಯಲ್ಲಿಯೆ ಮಾಡಿ ತಿನ್ನುವುದರಿಂದ ಆರೋಗ್ಯಕರವಾಗಿ ಇರುತ್ತದೆ.

ಗೋಬಿ ಮಂಚೂರಿಮಾಡಲು ಬೇಕಾಗುವ ಸಾಮಗ್ರಿಗಳು: ಎಲ್ಲರಿಗೂ ಇಷ್ಟಾರಿ ಗೋಬಿ ಮಂಚೂರಿ

1. ಹೂಕೋಸು 1
2. ಕತ್ತರಿಸಿದ ಈರುಳ್ಳಿ 2
3. ಕತ್ತರಿಸಿದ ದುಂಡು ಮೆಣಸು 2
4. ವಸಂತದ ಈರುಳ್ಳಿ 6-7
5. ಟೊಮೆಟೊ
6. ಕಡಲೆ ಹಿಟ್ಟು 1


7. ಧಾನ್ಯಗಳ ಹಿಟ್ಟು 1/2 ಕಪ್
8. ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
9. ಕತ್ತರಿಸಿದ ಹಸಿಮೆಣಸು 8
10. ಕೊತ್ತಂಬರಿ ಸೊಪ್ಪು
11. ಬೆಳ್ಳುಳ್ಳಿ ಎಸಳು 6
12. ಕರಿಮೆಣಸು 2 ಚಮಚ
13. ಸೋಯಾ ಸಾಸ್ 2 ಚಮಚ
14. ಅಜಿನೊಮೊಟೊ 1 ಚಿಟುಕು
15. ಎಣ್ಣೆ ಬಾಣಲೆಯಲ್ಲಿ ಅರ್ಧ
16. ಉಪ್ಪು ರುಚಿಗೆ ತಕ್ಕಷ್ಟು ಗೋಬಿ 65 ರೆಸಿಪಿ: ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ..!!

ಗೋಬಿ ಮಂಚೂರಿಮಾಡುವ ವಿಧಾನ:

1. ಕತ್ತರಿಸಿದ ಹೂಕೋಸನ್ನು ಉಪ್ಪು ಹಾಕಿ ಬೇಯಿಸಬೇಕು. ಬೇಯಿಸುವಾಗ ಪಾತ್ರೆಯ ಬಾಯಿಯನ್ನು ಮುಚ್ಚಿ ಬೇಯಿಸಬೇಕು.
2. ನೀರನ್ನು ಬಸಿದು ಹೂಕೋಸನ್ನು ಅಗಲವಾದ ಪಾತ್ರೆಯಲ್ಲಿ ಆರಲು ಇಡಬೇಕು ಇದರಿಂದ ಹೂಕೋಸಿನಲ್ಲಿ ನೀರು ಆವಿಯಾಗುತ್ತದೆ.
3. ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಕಟಲೆಹಿಟ್ಟು, ಜೋಳದ ಹಿಟ್ಟು, ಕತ್ತರಿಸಿದ ಮೆಣಸಿನಲ್ಲಿ ಅರ್ಧ, ಕರಿಮೆಣಸು, ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ , ನೀರು ಹಾಕಿ ಗಟ್ಟಿಯಾಗಿ ಕಲಿಸಬೇಕು.
4.
ನಂತರ ಅರ್ಧ ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕುದಿಯುವಾಗ ಅದರಲ್ಲಿ ಹೂಕೋಸನ್ನು ಹಿಟ್ಟಿನೊಂದಿಗೆ ಬೆರೆಸಿ ಹಾಕಬೇಕು. ನಂತರ ಉರಿಯನ್ನು ಕಡಿಮೆಮಾಡಿ ಅದನ್ನು ಎಣ್ಣೆಯಲ್ಲಿ ಮತ್ತಷ್ಟು ಹುರಿಯುವಂತೆ ಮಾಡಬೇಕು .
5.
ಹುರಿದ ಹೂಕೋಸನ್ನು ತೆಗೆದು ಪೇಪರಿನಲ್ಲಿ ಇಡಬೇಕು ಇದರಿಂದಾಗಿ ಅಧಿಕ ೆಣ್ಣೆಯನ್ನು ಪೇಪರ್ ಹೀರಿಕೊಳ್ಳುವುದು.
6.
ನಂತರ ಮತ್ತೊಂದು ಬಾಣಲೆಯನ್ನು ತೆಗೆದು ಅದಕ್ಕೆ ಸ್ಲ್ಪ ಎಣ್ಣೆ ಹಾಕಿ ಅದು ಬಿಸಿಯಾದಗ ಕತ್ತರಿಸಿದ ಈರುಳ್ಳಿಯನ್ನು ಹಾಕಬೇಕು. ಅದು ಕಂದು ಬಣ್ಣಕ್ಕೆ ತಿರುವಾಗ ಬೆಳ್ಳುಳ್ಳಿ ಮತ್ತು ಕರಿಮೆಣಸು ಹಾಕಿ ಬಿಸಿ ಮಾಡಬೇಕು.
7.
ಹೀಗೆ ಹುರಿಯತ್ತಾ ವಸಂತದ ಈರುಳ್ಳಿ ಬೆರೆಸಿ ಮತ್ತೂ 2 ನಿಮಿಷ ಹುರಿಯಬೇಕು.
8.
ಅದಕ್ಕೆ ಟೊಮೆಟೊ ಹಾಕಿ, ಕತ್ತರಿಸಿದ ಉಳಿದ ಮೆಣಸು ಮತ್ತು ದುಂಡು ಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.
9. 3-4 ನಿಮಿಷ ಬೇಯಿಸಿದ ನಂತರ ಅಜಿನೊಮಿಟೊ ಮತ್ತು ಸೋಯಾ ಸಾಸ್ ಹಾಕಿ ಮಿಕ್ಸ್ ಮಾಡಿ, ಅದಕ್ಕೆ 3/4 ನೀರು ಹಾಕಿ ಕುದಿಸಬೇಕು.
10.
ಗ್ರೇವಿ ಬಿಸಿಯಾಗಿ ಗುಳ್ಳೆಗಳು ಬರಲಾರಭಿಸಿದಾಗ ಹುರಿದ ಮಂಚೂರಿ ಹಾಕಿ 5 ನಿಮಿಷ ಕಾಯಿಸಬೇಕು.
ಈಗ ಅದಕ್ಕೆ ಕೊತ್ತಂಬರಿ ಸೊಪ್ಪುವಿನಿಂದ ಅಲಂಕಾರ ಮಾಡಿದರೆ ರುಚಿರುಚಿಯಾದ ಗೋಬಿ ರೆಡಿ.

English summary

Recipe For Gobi Manchurian

Gobi manchurian is a dish that is an absolute favourite of everybody; be it street food or a posh restaurant gobi manchurian is a recipe tried in many variations.Take a look.
X
Desktop Bottom Promotion