For Quick Alerts
ALLOW NOTIFICATIONS  
For Daily Alerts

ಕರ್ನಾಟಕದ ಕುರುಕಲು ತಿಂಡಿ: ಕೋಡುಬಳೆ

By Super
|

ಕರ್ನಾಟಕದ ಪ್ರಸಿದ್ಧ ಕುರುಕಲು ತಿಂಡಿ ಕೋಡು ಬಳೆ ವೃದ್ಧರಿಂದ ಹಿಡಿದು ಮಕ್ಕಳ ತನಕಇಷ್ಟವಾದ ತಿನಿಸು. ಕೋಡು ಬಳೆಯಲ್ಲಿ ನಾನಾ ವಿಧಾನಗಳಿವೆ. ಅಕ್ಕಿ , ಗೋಧಿ ಹಾಗೂ ಮೈದಾ ಹಿಟ್ಟನ್ನು ಬಳಸಿ ಕೋಡುಬಳೆ ತಯಾರಿಸುವುದನ್ನು ಇಲ್ಲಿ ತಿಳಿಸಲಾಗಿದೆ.

*ಶ್ರೀರಕ್ಷಾ, ಬೆಂಗಳೂರು

ಬೇಕಾಗುವ ಪದಾರ್ಥಗಳು

ಅಕ್ಕಿ ಹಿಟ್ಟು: 2 ಕಪ್ಪು
ಮೈದಾ: ' ಕಪ್ಪು
ಗೋಧಿ ಹಿಟ್ಟು: ' ಕಪ್ಪು
ಹುರಿಗಡಲೆ: ' ಕಪ್ಪು
ತುರಿದ ಒಣ ಕೊಬ್ಬರಿ: ' ಕಪ್ಪು
ತುಪ್ಪ: 1 ಟೇಬಲ್ ಚಮಚ
ಇಂಗು: ¼ ಟೀ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ: 1 ಟೇಬಲ್ ಚಮಚ
ಎಣ್ಣೆ: 2 ಕಪ್ಪು

ಮಾಡುವ ವಿಧಾನ

1. ಹುರಿಗಡಲೆ ಮತ್ತು ಒಣ ಕೊಬ್ಬರಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ
2. ಗೋಧಿ ಹಾಗೂ ಮೈದಾ ಹಿಟ್ಟನ್ನು ಒಟ್ಟಿಗೆ ಬಾಣಲೆಗೆ ಹಾಕಿ ಕಡಿಮೆ ಉರಿಯಲ್ಲಿ ಹೊಂಬಣ್ಣಕ್ಕೆ ಉರಿದುಕೊಳ್ಳಿ.
3. ಅಗಲವಾದ ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಹುರಿಗಡಲೆ ಹಾಗೂ ಉರಿದುಕೊಂಡ ಹಿಟ್ಟನ್ನು ಮಿಶ್ರಣ ಮಾಡಿಕೊಳ್ಳಿ.
4. ತುಪ್ಪ, ಇಂಗು, ಮೆಣಸಿನ ಪುಡಿ, ಉಪ್ಪುನ್ನು ಹಾಕಿ ನೀರಿನೊಂದಿಗೆ ಗಟ್ಟಿಯಾಗಿ ಚೆನ್ನಾಗಿ ನಾದಿಕೊಳ್ಳಬೇಕು.
5. ಬಾಣೆಲೆಗೆ ಹಾಕಿದ ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ.
6. ಕಲೆಸಿಕೊಂಡ ಹಿಟ್ಟನ್ನು ಬಳೆಯಾಕಾರದಲ್ಲಿ ಮಾಡಿಕೊಳ್ಳಿ(ಪೆನ್ಸಿಲ್ ಕಡ್ಡಿಯಷ್ಟು ದಪ್ಪ ಇರಬೇಕು).
7. ಈಗ ಒಟ್ಟಿಗೆ ಒಂದಷ್ಟು ಕೋಡು ಬಳೆಗಳನ್ನು ಎಣ್ಣೆಗೆ ಬಿಡಿ, ಆಗಾಗ ಜಾಲರಿಯಲ್ಲಿ ಕದಡುತ್ತಿರಿ.
8. ಕೋಡು ಬಳೆಗಳನ್ನು ಎಣ್ಣೆ ಹೀರಿಕೊಳ್ಳುವ ಕಾಗದ ಮೇಲೆ ಹಾಕಿ ಸ್ವಲ್ಪ ಸಮಯ ಬಿಡಿ.
9. ಈಗ ಗಾಳಿಯಾಡದ ಡಬ್ಬಿಯಲ್ಲಿ ಕೋಡುಬಳೆಗಳನ್ನು ಹಾಕಿ ಬೇಕೆಂದಾಗ ಸವಿಯಬಹುದು.

ಸೂಚನೆ: ಕೋಡು ಬಳೆಗಳನ್ನು ಎಣ್ಣೆಯಿಂದ ತೆಗೆದ ಬಳಿಕ ಒಲೆಯ ಬಿಸಿಯನ್ನು ಕಡಿಮೆ ಮಾಡಬೇಕು. ಹಾಗೆಯೇ ಕೋಡುಬಳೆಗಳನ್ನು ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸಬೇಕು.

X
Desktop Bottom Promotion