For Quick Alerts
ALLOW NOTIFICATIONS  
For Daily Alerts

ರುಚಿಗೆ ಸಾಟಿಯಿಲ್ಲದ ಗಸಗಸೆ ಬಿಸ್ಕೆಟ್

By Staff
|

ಇಂದು ಸ್ವಾತಂತ್ರ್ಯ ದಿನೋತ್ಸವ. ಸ್ವಾತಂತ್ರ್ಯ ದಿನೋತ್ಸವಕ್ಕೆ ಮನೆಯಲ್ಲಿ ಏನಾದರೂ ಡಿಫರೆಂಟ್ ಆಗಿ ರುಚಿಕರವಾದ ತಿಂಡಿ ತಯಾರಿಸಬೇಕು ಅಂತ ನೀವು ಅಂದುಕೊಂಡಿದ್ದರೆ ಇಂದು ಸಂಜೆ ನಿಮ್ಮ ಮನೆಯಲ್ಲಿ ಈ ಬಿಸ್ಕೆಟ್ ತಯಾರಿಸಿ ನೋಡಿ.

ಬಿಸ್ಕೆಟ್ ತಯಾರಿಸುವುದು ಅಷ್ಟೇನೂ ಕಷ್ಟವಲ್ಲ. ಬಿಸ್ಕೆಟ್ ಗಳನ್ನು ಮನೆಯಲ್ಲೇ ತಯಾರಿಸಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು, ತಿನ್ನಲೂ ರುಚಿಕರ. ಪ್ರೆಶರ್ ಕುಕ್ಕರ್ ಬಳಸಿಕೊಂಡು ರುಚಿ ರುಚಿಯಾದ ಗಸಗಸೆ ಬಿಸ್ಕೆಟ್ ಹೇಗೆ ತಯಾರಿಸಬಹುದು ಎಂದು ತಿಳಿದುಕೊಂಡು ಮಾಡಿ ಬಿಸ್ಕೆಟ್ ಹಂಚಿ ತಿನ್ನಿ..

ಗಸಗಸೆ ಬಿಸ್ಕೆಟ್ ಗೆ ಬೇಕಾಗುವ ಪದಾರ್ಥಗಳು:
* 1/2 ಕಪ್ ಗಸಗಸೆ
* 1 1/2 ಕಪ್ ಮೈದಾ
* 2 ಚಮಚ ಬೆಣ್ಣೆ
* 3/4 ಕಪ್ ಸಕ್ಕರೆ
* 1/2 ಬೇಕಿಂಗ್ ಪೌಡರ್
* ಸ್ವಲ್ಪ ಉಪ್ಪು, ಏಲಕ್ಕಿ ಪುಡಿ

ಗಸಗಸೆ ಬಿಸ್ಕೆಟ್ ತಯಾರಿಸುವ ವಿಧಾನ: ಗಸಗಸೆಯನ್ನು ಚೆನ್ನಾಗಿ ಹುರಿದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಈ ಗಸಗಸೆ ಪುಡಿಯನ್ನು ಮೈದಾ ಮತ್ತು ಬೇಕಿಂಗ್ ಪೌಡರ್ ನೊಂದಿಗೆ ಬೆರೆಸಿಕೊಳ್ಳಬೇಕು. ಬೆಣ್ಣೆಯೊಂದಿಗೆ ಸಕ್ಕರೆಯನ್ನು ಚೆನ್ನಾಗಿ ಕಲೆಸಿಕೊಳ್ಳಬೇಕು. ಈಗ ಮೈದಾ ಮಿಶ್ರಣವನ್ನು ಬೆಣ್ಣೆಗೆ ಬೆರೆಸಿ ಮೆತ್ತಗೆ ಹಿಟ್ಟಿನಂತೆ ಮಾಡಿಕೊಳ್ಳಬೇಕು. ನಿಮಗೆ ಬೇಕಾದ ಆಕಾರದಲ್ಲಿ ಹಿಟ್ಟನ್ನು ಕತ್ತರಿಸಿಕೊಂಡು ಇವುಗಳನ್ನು ಕುಕ್ಕರ್ ನಲ್ಲಿ ಇಟ್ಟು 5-10 ನಿಮಿಷ ಕುಕ್ಕರಿನ ವ್ಹೇಟ್ ಹಾಕದಂತೆಯೇ ಬೇಯಿಸಬೇಕು. ನಂತರ ಇದನ್ನು ತಣ್ಣಗಾಗಲು ಬಿಡಬೇಕು.
ಈಗ ರುಚಿರುಚಿಯಾದ ಗಸಗಸೆ ಬಿಸ್ಕೆಟ್ ತಿನ್ನಲು ರೆಡಿಯಾಗಿದೆ. ಇದರ ಮೇಲೆ ಬಾದಾಮಿ, ಪಿಸ್ತ, ಗೋಡಂಬಿಯಂತಹ ಒಣಹಣ್ಣುಗಳನ್ನು ಇಟ್ಟು ತಿಂದರೂ ಚೆಂದ.

English summary

Poppy seed | Poppy seed biscuit recipe | ಗಸಗಸೆ | ಗಸಗಸೆ ಬಿಸ್ಕೆಟ್

Today is independence day. If you are thinking about preparing a good item for this independence day, try this poppy seed biscuit. Making biscuits isn't a difficult task, you can try it at home as well. Baked biscuits are very healthy. Today, we shall see how to make the tasty poppy seed biscuits using a pressure cooker. Take a look.
X
Desktop Bottom Promotion