For Quick Alerts
ALLOW NOTIFICATIONS  
For Daily Alerts

ಬಾಯಿ ನೀರೂರಿಸುವ ಮಸಾಲ ಪಕೋಡ

|
Masala pakoda
ಈ ಚಳಿಯಲ್ಲಿ ಏನಾದ್ರೂ ಬಿಸಿ ಬಿಸಿ ಚಾಟ್ ತಿನ್ನಬೇಕು ಅನ್ನೋ ಆಸೆ, ಆದರೆ ಹೊರಗೆ ಹೋಗೋದಕ್ಕೆ ಬೇಜಾರು. ಹೀಗಿದ್ದ ಸಮಯದಲ್ಲಿ ಇಲ್ಲೊಂದು ರೆಸಿಪಿ ಇದೆ. ಮನೆಯಲ್ಲೇ ಈ ಸ್ಪೈಸಿ ಪಕೋಡಾ ತಯಾರಿಸಿ ತಿಂದರೆ ಖಂಡಿತ ನಿಮಗೆ ಇಷ್ಟ ಆಗೇ ಆಗುತ್ತೆ. ಸಾದಾ ಪಕೋಡಾ ತರಹ ಇಲ್ಲದೆ ಮಸಾಲ ಬೆರೆಸಿ ಗೋಬಿ ಮಂಚೂರಿಯಂತೆ ತಯಾರಾಗೊ ಈ ಪಕೋಡಾ ತಿಂದರೆ ಬಾಯಿಗೆ ರುಚಿಯ ಹುಚ್ಚು ಹಿಡಿಯೋದು ಗ್ಯಾರಂಟಿ.

ಬೇಕಾಗುವ ಪದಾರ್ಥಗಳು:
* 1 ಚಮಚ ಸಾಸಿವೆ
* 2 ಚಮಚ ಜೀರಿಗೆ ಪುಡಿ
* 2 ಕಪ್ ಮೊಸರು
* 1\2 ಕಪ್ ಈರುಳ್ಳಿ, ಪುದೀನಾ ಎಲೆ
* 1 ಕಪ್ ಅಕ್ಕಿ ಹಿಟ್ಟು, 1 ಕಪ್ ಕಡಲೆ ಹಿಟ್ಟು
* 2 ಚಮಚ ಕಡಲೆ ಬೇಳೆ, 1 ಚಮಚ ಸೋಂಪು
* ಸ್ವಲ್ಪ ಸೋಡಾ, ಎಣ್ಣೆ

ಮಾಡುವ ವಿಧಾನ: ಮೊದಲು ಅಕ್ಕಿ ಹಿಟ್ಟು, ಕಡಲೆಹಿಟ್ಟು, ಸ್ವಲ್ಪ ಮೊಸರು, ಸೋಡಾ, ಸೋಂಪು, ಕಡಲೆಬೇಳೆ, ಕತ್ತರಿಸಿದ ಈರುಳ್ಳಿ, ಪುದೀನಾ ಎಲೆ ಮತ್ತು ಉಪ್ಪನ್ನು ಮಿಶ್ರಣ ಮಾಡಿ 2 ಗಂಟೆಗಳ ಅವಧಿ ಹಾಗೇ ಇಡಬೇಕು. ನಂತರ ಎಣ್ಣೆಯನ್ನು ಕಾಯಿಸಿ ಈ ಮಿಶ್ರಣವನ್ನು ಪಕೋಡಾದಂತೆ ಕೆಂಪಗೆ ಬೇಯಿಸಬೇಕು.

ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ ಹಾಕಬೇಕು. ಅದು ಸಿಡಿಯಲು ಆರಂಭಿಸಿದ ನಂತರ 2 ಕಪ್ ಮೊಸರು ಹಾಕಿ ಕಲೆಸಬೇಕು. ಈ ಮುಂಚೆ ತಯಾರು ಮಾಡಿಟ್ಟುಕೊಂಡಿದ್ದ ಪಕೋಡಾವನ್ನು ಮೊಸರಿನ ಮಿಶ್ರಣಕ್ಕೆ ಹಾಕಿ 3 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಬೇಕು. ಕೊನೆಯಲ್ಲಿ ಜೀರಿಗೆ ಪುಡಿಯನ್ನು ಬೆರೆಸಬೇಕು. ಟೇಸ್ಟಿಂಗ್ ಪೌಡರ್ ಇದ್ದರೆ ಸ್ವಲ್ಪ ಬೆರೆಸಬಹುದು.

ಈಗ ಡಿಫರೆಂಟ್ ಆದ ಮಸಾಲಾ ಪಕೋಡಾ ರೆಡಿಯಾಗಿದೆ.

English summary

Pakoda recipe | Special masala pakoda recipe | ಪಕೋಡಾ ಖಾದ್ಯ | ಸ್ಪೆಷಲ್ ಮಸಾಲಾ ಪಕೋಡಾ

Pakoda is an all time special snack. Here is a different pakoda which is made up with masala mix and curd. Take a look to know how to go about with the Special Pakoda Recipe.
Story first published: Tuesday, August 9, 2011, 17:59 [IST]
X
Desktop Bottom Promotion