For Quick Alerts
ALLOW NOTIFICATIONS  
For Daily Alerts

ಗರಂ ಗರಂ ಬಾಳೇಕಾಯಿ ಚಿಪ್ಸ್ ತಿಂದು ನೋಡಿ

|
ಈ ಚಳಿಗೆ ಏನಾದರೂ ಬಿಸಿಯಾಗಿ ಗರಿಗರಿಯಾಗಿದ್ದನ್ನ ತಿನ್ನುತ್ತಲೇ ಇರಬೇಕು ಅನ್ನಿಸುತ್ತೆ. ಸಂಜೆ ಆಗುತ್ತಿದ್ದಾಗೆ ಬಾಯಿಗೆ ರುಚಿಕಟ್ಟಾಗಿ ಏನಾದರೂ ಬೇಕು ಅನ್ನಿಸುತ್ತೆ. ಅಂತಹ ಸಮಯದಲ್ಲಿ ಈ ಬಾಳೆಕಾಯಿ ಚಿಪ್ಸ್ ಅನ್ನು ತಯಾರಿಸಿ ನೋಡಿ, ಗರಂ ಗರಂ ಆದ ಬಾಳೆ ಕಾಯಿ ಚಿಪ್ಸನ್ನ ಮನೆ ಮಂದಿಯೆಲ್ಲಾ ತಿಂದು ಕೊಂಡಾಡೋದು ಖಂಡಿತ.

ಚಿಪ್ಸ್ ತಯಾರಿಸೋ ವಿಧಾನ ಕೂಡ ತುಂಬಾ ಸುಲಭ. ಚಟ್ ಪಟ್ ಅಂತ ಮಾಡಿ ಮುಗಿಸಿಬಿಡಬಹುದು. ಹೆಚ್ಚು ಸಾಮಾನುಗಳೂ ಬೇಕಾಗಿಲ್ಲ. ಈಗ ಚಿಪ್ಸ್ ಮಾಡೋದು ಹೇಗೆ ಅಂತ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:
* ಬಾಳೆಕಾಯಿ 5
* ಉಪ್ಪು ಮತ್ತು ಖಾರದ ಪುಡಿ.

ಮಾಡುವ ವಿಧಾನ:
ಮೊದಲು ಬಾಳೆಕಾಯಿಯ ಸಿಪ್ಪೆಯನ್ನು ತೆಗೆದು ಚಿಪ್ಸ್ ಮೇಕರ್ ನಿಂದ ತೆಳುವಾಗಿ ಕತ್ತರಿಸಿಕೊಳ್ಳಬೇಕು. ಕತ್ತರಿಸಿಟ್ಟ ಬಾಳೆಕಾಯಿಯನ್ನು 10 ನಿಮಿಷ ನೀರಿನಲ್ಲಿ ನೆನೆಹಾಕಬೇಕು. ನಂತರ ತೆಗೆದು ಚಾಪೆಯ ಮೇಲೆ ಹರಡಬೇಕು. ಒಣಗಿದ ನಂತರ ಎಣ್ಣೆಯಲ್ಲಿ ಕರಿಯಬೇಕು.

ಕರಿದ ಬಾಳೆಕಾಯಿ ಚಿಪ್ಸ್ ಗೆ ಉಪ್ಪು ಮತ್ತು ಒಂದು ಚಮಚ ಖಾರದ ಪುಡಿಯನ್ನು ಬೆರೆಸಿ ಸ್ವಲ್ಪ ಸ್ವಲ್ಪವೇ ಉದುರಿಸಬೇಕು. ನೀರಿನಲ್ಲಿ ನೆನೆಸಿ ಒಣಗಿಸಿಯೇ ಇದನ್ನು ಮಾಡಬೇಕು. ಇಲ್ಲದಿದ್ದರೆ ಬಾಳೆಕಾಯಿ ಬೇಗನೆ ಕಪ್ಪಗಾಗುತ್ತದೆ. ಈಗ ಗರಿಗರಿಯಾದ ಬಾಳೆಕಾಯಿ ಚಿಪ್ಸ್ ಅನ್ನು ಮಾಡಿ ನೋಡಿ.

English summary

Banana fruit | Banana hot chips | Banana for healthy body | ಬಾಳೆಹಣ್ಣು | ಬಾಳೆಕಾಯಿ ಚಿಪ್ಸ್ | ಆರೋಗ್ಯಕ್ಕೆ ದಿನಕ್ಕೊಂದು ಬಾಳೆ ಹಣ್ಣು

May be an Apple a day keeps a doctor' but Bananas can keep you healthy all your life, that's what the latest research says. For this monsoon, you can try a new banana hot chips. So take a look at how to prepare a banana chips in home.
Story first published: Thursday, July 28, 2011, 11:33 [IST]
X
Desktop Bottom Promotion