ಆಹಾ ಘಮ ಘಮ, ಅಂತಿದೆ 'ತರಕಾರಿ ಬಿರಿಯಾನಿ'

By: Hemanth
Subscribe to Boldsky

ಇರಾನ್‍ನಿಂದ ಬಂದಂತಹ ಬಿರಿಯಾನಿ ಇಂದು ಭಾರತದೆಲ್ಲೆಡೆ ವ್ಯಾಪಿಸಿಕೊಂಡಿದೆ. ಬಿರಿಯಾನಿ ಎಂದ ತಕ್ಷಣ ಬಾಯಿಯಲ್ಲಿ ನೀರು ಬರುವುದು ಸಹಜ. ಯಾಕೆಂದರೆ ಬಿರಿಯಾನಿಯ ರುಚಿಯೇ ಹಾಗೆ. ಅದರಲ್ಲೂ ಹೈದರಾಬಾದ್‌ನಲ್ಲಿ ಸಿಗುವಂತಹ ಬಿರಿಯಾನಿಯ ರುಚಿ ನೋಡದೆ ಇದ್ದರೆ ಜೀವನ ಸಾರ್ಥಕವಲ್ಲವೆನ್ನಬಹುದು. ಬಿರಿಯಾನಿ ಪ್ರತಿಯೊಬ್ಬರಿಗೂ ಇಷ್ಟ. ಯಾವುದೇ ಹಬ್ಬವಾಗಲಿ ಅಥವಾ ಕಾರ್ಯಕ್ರಮವೇ ಆಗಲಿ ಬಿರಿಯಾನಿ ಮಾಡದೇ ಇರುವ ಕಾರ್ಯಕ್ರಮವೇ ಇಲ್ಲ. ಬಾಸುಮತಿ ಅಕ್ಕಿ ತರಕಾರಿ ಬಿರಿಯಾನಿ

ಈದ್, ಕ್ರಿಸ್ಮಸ್ ಹಾಗೂ ಕೆಲವೊಂದು ಹಿಂದೂ ಹಬ್ಬಗಳಿಗೂ ಈಗೀಗ ಬಿರಿಯಾನಿ ತಯಾರಿಸುತ್ತಾರೆ. ಬಿರಿಯಾನಿ ಎಂದರೆ ಮಾಂಸಾಹಾರವೇ ಆಗಬೇಕೆಂದಿಲ್ಲ. ಸಸ್ಯಾಹಾರಿಗಳು ಕೂಡ ಬಿರಿಯಾನಿಯ ರುಚಿಯನ್ನು ಸವಿಯಬಹುದಾಗಿದೆ. ಇದಕ್ಕಾಗಿಯೇ ವೆಜ್(ತರಕಾರಿ) ಬಿರಿಯಾನಿ ಕೂಡ ತಯಾರಿಸಲಾಗುತ್ತದೆ... ಹಾಗಾದರೆ ತಡವೇತಕ್ಕೆ? ಮುಂದೆ ಓದಿ....

ಆರು ಮಂದಿಗೆ ಬಡಿಸಬಹುದು

*ಸಮಯ-15 ನಿಮಿಷ

*ಅಡುಗೆ ಮಾಡುವ ಸಮಯ-25 ನಿಮಿಷ

ಮಾಡಲು ಬೇಕಾಗುವ ಸಾಮಗ್ರಿಗಳು

*ಲವಂಗದ ಎಲೆ-1

*ಲವಂಗ-1

*ದಾಲ್ಚಿನ್ನಿ ಚಕ್ಕೆ-1

*ಏಲಕ್ಕಿ-1

*ಅಕ್ಕಿ-2 ಕಪ್(ನೆನೆಸಿ ತೆಗೆದಿರುವುದು)

*ಉಪ್ಪು ರುಚಿಗೆ ತಕ್ಕಷ್ಟು ಬೇಗ ಮಾಡಬಹುದು ಬೇಬಿ ಕಾರ್ನ್ ಪಲಾವ್

ತರಕಾರಿ ರಸಕ್ಕೆ

*ಬೇಯಿಸಿದ ತರಕಾರಿಗಳು 2 ಕಪ್(ಕ್ಯಾರೆಟ್, ಬಟಾಟೆ, ಬೀನ್ಸ್, ಹೂಕೋಸ್, ಬಟಾಣಿ ಇತ್ಯಾದಿ)

*ಎಣ್ಣೆ-2 ಚಮಚ

*ಪನ್ನೀರ್ ¼ ಕಪ್( ಸಣ್ಣ ತುಂಡುಗಳಾಗಿ ಕತ್ತರಿಸಿರುವುದು)

*ಜೀರಿಗೆ ಕಾಳುಗಳು-1/2 ಚಮಚ

*ಈರುಳ್ಳಿ-3/4 ಕಪ್(ಕತ್ತರಿಸಿರುವುದು)

*ಅರಿಶಿನ ಹುಡಿ-1/4 ಚಮಚ

*ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್ 2 ಚಮಚ

*ಗರಂ ಮಸಾಲ ½ ಚಮಚ

*ಕೊತ್ತಂಬರಿ ಹುಡಿ 2 ಚಮಚ

*ಹಾಲು ¼ ಕಪ್

*ಮೆಣಸಿನ ಹುಡಿ 1 ಚಮಚ

*ಟೊಮೆಟೊ 1 ಕಪ್( ಕತ್ತರಿಸಿರುವುದು)

*ಉಪ್ಪು ರುಚಿಗೆ ತಕ್ಕಷ್ಟು

*ಸ್ವಲ್ಪ ಸಕ್ಕರೆ

*ಮೊಸರು ¼ ಕಪ್

*ಕೊತ್ತಂಬರಿ ಸೊಪ್ಪು ¼ ಕಪ್

*ಖಾದ್ಯ ಕೇಸರಿ ಬಣ್ಣ -ಕೆಲವು ಹನಿ

*ಬೆಣ್ಣೆ- 2 ಚಮಚ

*ಕ್ರೀಮ್-1 ಚಮಚ

ವಿಧಾನ

*ಅಕ್ಕಿಯನ್ನು ಅರ್ಧ ಗಂಟೆ ಕಾಲ ನೀರಿನಲ್ಲಿ ನೆನೆಸಿಟ್ಟು ನೀರು ತೆಗೆಯಿರಿ. ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಲು ಇಡಿ. ಲವಂಗ, ದಾಲ್ಚಿನ್ನಿ, ಏಲಕ್ಕಿ ಮತ್ತು ಲವಂಗ ಎಲೆಯನ್ನು ನೀರಿಗೆ ಹಾಕಿ.

ತರಕಾರಿ ಬಿರಿಯಾನಿ

*ಈ ನೀರಿಗೆ ನೆನೆಸಿ ತೆಗೆದ ಅಕ್ಕಿಯನ್ನು ಹಾಕಿ ಹತ್ತು ನಿಮಿಷ ಕಾಲ ಬೇಯಿಸಿ. ಅಕ್ಕಿಯನ್ನು ಹೆಚ್ಚು ಬೇಯಿಸಿದರೆ ಅದು ಅಂಟಿಕೊಳ್ಳಬಹುದು. ಅಕ್ಕಿ ಬೆಂದ ಬಳಿಕ ನೀರು ಸೋಸಿಕೊಂಡು ಬದಿಗಿಡಿ.

ತರಕಾರಿ ಬಿರಿಯಾನಿ

*ಈಗ ತರಕಾರಿ ರಸವನ್ನು ತಯಾರಿಸುವುದು. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಜೀರಿಗೆ ಕಾಳುಗಳನ್ನು ಹಾಕಿ.

*ಇನ್ನು ಜೀರಿಗೆ ಕಾಳುಗಳು ಸಿಡಿಯಲು ಆರಂಭಿಸಿದಾಗ ಅದಕ್ಕೆ ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿ. ಈರುಳ್ಳಿ ತಿಳಿಕಂದು ಬಣ್ಣಕ್ಕೆ ತಿರುಗುವ ತನಕ ಕರಿಯಿರಿ. ಬಳಿಕ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನ ಪೇಸ್ಟ್, ಅರಶಿನ, ಕೊತ್ತಂಬರಿ ಹುಡಿ, ಮೆಣಸಿನ ಹುಡಿ, ಗರಂ ಮಸಾಲ ಹುಡಿ ಮತ್ತು ಟೊಮೆಟೋ ಹಾಕಿ.

ತರಕಾರಿ ಬಿರಿಯಾನಿ

*ಮಸಾಲೆಯಲ್ಲಿ ಟೊಮೆಟೋ ಸರಿಯಾಗಿ ಬೇಯಲು ಬಿಡಿ. ಟೊಮೆಟೋ ಸರಿಯಾಗಿ ಬೇಯಲು ಎರಡು ಚಮಚ ನೀರು ಹಾಕಿಕೊಂಡು ಅದನ್ನು ಸರಿಯಾಗಿ ಬೇಯಿಸಿ.

ತರಕಾರಿ ಬಿರಿಯಾನಿ

*ಈಗ ಕತ್ತರಿಸಿಕೊಂಡಿರುವ ತರಕಾರಿ, ಪನ್ನೀರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ಇದನ್ನು ಸರಿಯಾಗಿ ತಿರುಗಿಸಿ. ಈಗ ಹಾಲು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಸಕ್ಕರೆ ಮತ್ತು ಕ್ರೀಮ್ ಹಾಕಿ ರಸ ದಪ್ಪ ಮಾಡಿಕೊಳ್ಳಿ.

ತರಕಾರಿ ಬಿರಿಯಾನಿ

*ರಸವು ದಪ್ಪ ಆದಾಗ ತರಕಾರಿ ಬೆಂದಿದೆ ಎಂದು ಹೇಳಬಹುದು. ಇದನ್ನು ತೆಗೆದು ಬದಿಗಿಟ್ಟ ಬಳಿಕ ಬೇಯಿಸಿದ ಅನ್ನವನ್ನು ಇದಕ್ಕೆ ಸೇರಿಸಿಕೊಳ್ಳಿ. ಇದಕ್ಕೆ ಮೊದಲು ಅನ್ನದ ಮಿಶ್ರಣ ಮಾಡಬೇಕು.

*ಮೊಸರು, ಕತ್ತರಿಸಿಕೊಂಡಿರುವ ಕೊತ್ತಂಬರಿ ಸೊಪ್ಪು ಮತ್ತು ಕೇಸರಿ ಬಣ್ಣವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಅನ್ನಕ್ಕೆ ಹಾಕಿಕೊಂಡು ಬೆರೆಸಿಕೊಳ್ಳಿ. ಸರಿಯಾಗಿ ಮಿಶ್ರಣ ಮಾಡಿದರೆ ಅರ್ಧ ಕೇಸರಿ ಮತ್ತು ಅರ್ಧ ಬಿಳಿ ಅನ್ನವು ಕಾಣಸಿಗುವುದು.

ತರಕಾರಿ ಬಿರಿಯಾನಿ

*ಒಂದು ದೊಡ್ಡ ಪಾತ್ರೆ ತೆಗೆದುಕೊಂಡು ತಯಾರಿಸಿದ ಅನ್ನದ ಪದರವನ್ನು ರಚಿಸಿ. ಮೇಲ್ಭಾಗದಲ್ಲಿ ನೀವು ತಯಾರಿಸಿದ ತರಕಾರಿ ರಸವನ್ನು ಹಾಕಿಕೊಳ್ಳಿ. ಇದನ್ನು ಸಮತಟ್ಟು ಮಾಡಿಕೊಂಡು ಅನ್ನದ ಮತ್ತೊಂದು ಪದರವನ್ನು ಅದರ ಮೇಲೆ ಹಾಕಿ. ಇದರ ಮೇಲೆ ಬೆಣ್ಣೆ ಅಥವಾ ಹಾಲು ಹಾಕಿ.

ತರಕಾರಿ ಬಿರಿಯಾನಿ

*ಪಾತ್ರೆಯನ್ನು ಸರಿಯಾಗಿ ಮುಚ್ಚಿಕೊಳ್ಳಿ. ಗ್ಯಾಸ್ ಮೇಲೆ ತವಾ ಇಟ್ಟು ಅದರ ಮೇಲೆ ಈ ಪಾತ್ರೆಯನ್ನು ಇಟ್ಟು ಬಿಡಿ. ಇದರಿಂದ ಬಿರಿಯಾನಿ ಸುಡುವುದಿಲ್ಲ. ಸುಮಾರು ಅರ್ಧ ಗಂಟೆ ಕಾಲ ಬಿರಿಯಾನಿಯನ್ನು ಬೇಯಿಸಿ ಬಳಿಕ ಬಡಿಸಿ.

English summary

Step By Step Procedure For Vegetable Biryani

Whenever you hear the word 'Biryani' you feel celebratory. When the rice mixes with the spicy meat and the aroma of different spices soothes your senses, you feel like grabing a bite of it that instant.
Please Wait while comments are loading...
Subscribe Newsletter