For Quick Alerts
ALLOW NOTIFICATIONS  
For Daily Alerts

ರಕ್ಷಾ ಬಂಧನ ಸ್ಪೆಷಲ್: ಮಶ್ರೂಮ್ ರೈಸ್ ಬಾತ್

|

"ರಕ್ಷಾ ಬಂಧನ" ಹೆಸರೇ ಸೂಚಿಸುವಂತೆ ಸಹೋದರಿಯರು ತಮ್ಮನ್ನು ಸದಾ ರಕ್ಷಿಸುವಂತೆ ಕೋರಿ ತಮ್ಮ ಸಹೋದರರಿಗೆ ಮತ್ತು ಸಹೋದರ ಸಮಾನರಾದವರಿಗೆ ಕಟ್ಟುವ ಒಂದು ಪವಿತ್ರವಾದ ದಾರ ಅಥವಾ ಬಂಧನ.

ಭಾರತದ ಉತ್ತರದ ಕಡೆಗಳಲ್ಲಿ ತುಸು ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸಲಾಗುವ ಈ ಹಬ್ಬ ದಕ್ಷಿಣದ ಕಡೆಯಲ್ಲೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಬ್ಬದ ಮೆರುಗನ್ನು ಹೆಚ್ಚಿಸಲು ಹೊಸ ಉಡುಗೆ ಹಬ್ಬದ ವಾತಾವರಣಕ್ಕೆ ಹೇಗೆ ಮುಖ್ಯವೋ ಅದೇ ರೀತಿ ರುಚಿಯಾದ ಅಡುಗೆಗಳೂ ಕೂಡ ಅಷ್ಟೇ ಅತ್ಯವಶ್ಯಕವಾಗಿದೆ.

ಖಾದ್ಯಗಳು ರುಚಿಯಾಗಿದ್ದರೆ ಹಬ್ಬಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಬಂದೇ ಬರುತ್ತದೆ. ಇಂದಿನ ಲೇಖನದಲ್ಲಿ ಕೂಡ ನಾವು ಸರಳವಾದ ಮಶ್ರೂಮ್ (ಅಣಬೆ) ರೈಸ್ ಬಾತ್ ರೆಸಿಪಿಯನ್ನು ನಿಮಗೆ ಪರಿಚಯಿಸಿದ್ದು, ಪಾಕ ವಿಧಾನವನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ.

ರಕ್ಷಾಬಂಧನದ ಪವಿತ್ರ ದಿನದಂದು ತಯಾರಿಸುವ ಖಾದ್ಯಗಳು ಬಾಯಿಗೆ ರುಚಿಯನ್ನು ನೀಡುವುದರೊಂದಿಗೆ ನಿಮ್ಮ ಸಹೋದರ ವಾತ್ಸಲ್ಯದ ಬಾಂಧವ್ಯವನ್ನು ಇನ್ನು ಗಟ್ಟಿಮಾಡುತ್ತದೆ. ಹಾಗಿದ್ದರೆ ಇನ್ನೇಕೆ ತಡ, ಈ ಸ್ವಾದಿಷ್ಟ ಭಕ್ಷ್ಯದ ತಯಾರಿ ವಿಧಾನವನ್ನು ತಿಳಿದುಕೊಂಡು ಅದನ್ನು ಮಾಡಲು ಸಿದ್ಧರಾಗಿ. ಹಲ್ವಾದಷ್ಟೇ ಸಿಹಿಯಾಗಿರಲಿ ಅಣ್ಣ-ತಂಗಿಯರ ಅನುಬಂಧ

Mushroom Rice Recipe For Rakshabandhan

ಪ್ರಮಾಣ:
*ತಯಾರಿಕೆಗೆ ತಗುಲುವ ಸಮಯ: 20 ನಿಮಿಷಗಳು
*ಅಡುಗೆಗೆ ತಗುಲುವ ಸಮಯ : 25 ನಿಮಿಷಗಳು

ಅಗತ್ಯವಾಗಿರುವ ಪದಾರ್ಥಗಳು
*ಅನ್ನ - - 1 ½ ಕಪ್
*ಅಣಬೆ - 500 ಗ್ರಾಂ
*ಈರುಳ್ಳಿ - 1 (ಕತ್ತರಿಸಿದಂತಹುದು)
*ಮೆಣಸು - 2 ಟೀ.ಚಮಚ
*ಖಾರದಪುಡಿ - 1 ಟೀ.ಚಮಚ
*ಸಾಸಿವೆ ಪುಡಿ - 1 ಟೀ.ಚಮಚ
*ಕೊತ್ತಂಬರಿ ಪುಡಿ - 1 ಟೀ.ಚಮಚ
*ಹಸಿ ಮೆಣಸಿನಕಾಯಿಗಳು - 1 (sliced)
*ಬೆಣ್ಣೆ - 1 ಟೀ.ಚಮಚ
*ಎಣ್ಣೆ - 2 ಟೀ.ಚಮಚ
*ಉಪ್ಪು ರುಚಿಗೆ ತಕ್ಕಷ್ಟು

ವಿಧಾನ
*ಮೊದಲು ನೀವು ಅನ್ನವನ್ನು ಪ್ರತ್ಯೇಕವಾದ ತಯಾರಿಸಿಕೊಳ್ಳಬೇಕು. ಇದಾದ ಮೇಲೆ, ಬೆಂದ ಅನ್ನವನ್ನು ಪಕ್ಕದಲ್ಲಿ ಆರಲು ಬಿಡಿ.
*ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿಕೊಳ್ಳಿ. ಇದು ಕಾದ ಮೇಲೆ, ಇದಕ್ಕೆ ಕತ್ತರಿಸಿದ ಈರುಳ್ಳಿಗಳನ್ನು ಹಾಕಿ. ಅವುಗಳನ್ನು ಹೊಂಬಣ್ಣಕ್ಕೆ ಬರುವವರೆಗು ಮಧ್ಯಮ ಗಾತ್ರದ ಉರಿಯಲ್ಲಿ ಚೆನ್ನಾಗಿ ಉರಿಯಿರಿ. ನಂತರ ಅದಕ್ಕೆ ಹಸಿ ಮೆಣಸಿನ ಕಾಯಿಗಳನ್ನು ಹಾಕಿ.
*ಈ ಎರಡು ಪದಾರ್ಥಗಳನ್ನು ಎಣ್ಣೆಯೊಂದಿಗೆ 5 ನಿಮಿಷಗಳ ಕಾಲ ಚೆನ್ನಾಗಿ ಉರಿಯಿರಿ. ನಂತರ ಅದಕ್ಕೆ ಖಾರದ ಪುಡಿ, ಸಾಸಿವೆ ಪುಡಿ ಮತ್ತು ಕೊತ್ತಂಬರಿ ಪುಡಿಗಳನ್ನು ಬೆರೆಸಿ. ಈಗ ಎಲ್ಲಾ ಮಸಾಲೆಗಳನ್ನು ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳ ಜೊತೆಗೆ ಚೆನ್ನಾಗಿ ಉರಿಯಿರಿ.
*ಇದಕ್ಕೆ ಅಣಬೆಗಳನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸುತ್ತ ಚೆನ್ನಾಗಿ ಕಲೆಸಿಕೊಡಿ. ನಂತರ ಅಣಬೆಗಳ ಜೊತೆಗೆ ಪೆಪ್ಪರ್ ಪುಡಿಯನ್ನು ಹಾಕಿ, ಚೆನ್ನಾಗಿ ಕಲೆಸಿ ಕೊಡಿ.
*ಈ ಅನ್ನವು ಎಲ್ಲಾ ಪದಾರ್ಥಗಳ ಜೊತೆಗೆ ಸ್ವಲ್ಪ ಬೆರೆಯಲು ಬಾಣಲೆಯಲ್ಲಿಯೇ ಬಿಡಿ. ಅದಕ್ಕಾಗಿ ಒಂದು 10 ನಿಮಿಷ ಬೇಯಿಸಿ. ಇದು ಮುಗಿದ ಮೇಲೆ, ಈ ಪೆಪ್ಪರ್ ಮಶ್ರೂಮ್ ರೈಸ್ ಮೇಲೆ ಉಪ್ಪನ್ನು ಹಾಕಿ. ಈಗ ನಿಮ್ಮ ಮುಂದೆ ಪೆಪ್ಪರ್ ಮಶ್ರೂಮ್ ರೈಸ್ ರೆಸಿಪಿ ತಯಾರಾಗಿದೆ. ಅನ್ನದ ಮೇಲೆ ಬೆಣ್ಣೆಯನ್ನು ಹಾಕಿ, ನಿಮ್ಮ ಪ್ರೀತಿಯ ಆಣ್ಣನಿಗೆ ಸವಿಯಲು ನೀಡಿ.

English summary

Mushroom Rice Recipe For Rakshabandhan

Rakshabandhan is just round the corner and we are sure you are gearing up for the celebrations. Like all other Indian festivals, Rakshabandhan is also incomplete without the mention of good food. Mushroom Rice recipes are not very difficult to prepare. So, you can try out this special recipe for Rakshabandhan. 
Story first published: Saturday, August 29, 2015, 10:52 [IST]
X
Desktop Bottom Promotion