Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೋದಕ ಪ್ರಿಯ, ಮುದ್ದು ಗಣೇಶನಿಗೆ ಅರ್ಪಿಸಿ ಮೊಸರನ್ನ!
ಹಿಂದೂಗಳಿಗೆ ಹಬ್ಬಗಳು ಪವಿತ್ರವಾದುದು ಮತ್ತು ಅವುಗಳ ಆಚರಣೆಗೂ ಮಹತ್ವತೆಯನ್ನು ನೀಡುತ್ತಾರೆ. ಧಾರ್ಮಿಕ ನಂಬಿಕೆಗಳಿಂದ ಕೂಡಿರುವ ಹಬ್ಬಗಳ ಆಚರಣೆಗೆ ಅದರದ್ದೇ ಆದ ನಿಯಮಾವಳಿಗಳಿರುತ್ತವೆ. ಹಬ್ಬಗಳ ಆಚರಣೆಯಲ್ಲಿ ನಿಷ್ಟೆ, ನಿಯಮಗಳು ಪ್ರಧಾನ ಪಾತ್ರವನ್ನು ವಹಿಸುವುದರಿಂದ ಹಬ್ಬಗಳನ್ನು ಆಚರಿಸುವಾಗ ತಿನಿಸಿನಿಂದ ಹಿಡಿದು ಪೂಜೆಯನ್ನು ನೆರವೇರಿಸುವ ವಿಧಾನವನ್ನು ಕೂಡ ಶ್ರದ್ಧೆ ಭಕ್ತಿಯಿಂದ ಮಾಡುತ್ತೇವೆ.
ದೇವರ ಕೃಪಾಕಟಾಕ್ಷಕ್ಕೆ ನಾವು ಪಾತ್ರರಾಗಬೇಕೆಂಬ ತುಡಿತದಿಂದಲೇ ಹಬ್ಬಗಳು ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿವೆ. ಸಿದ್ಧಿವಿನಾಯಕ, ಮೋದಕ ಪ್ರಿಯ, ಗಜಮುಖ, ಲಂಬೋದರ ಹೀಗೆ ವಿವಿಧ ನಾಮಧೇಯಗಳಿಂದ ಪ್ರಸಿದ್ಧನಾಗಿರುವ ವಿಘ್ನ ವಿನಾಶಕ ಗಣಪತಿ ಹಬ್ಬಕ್ಕೆ ಇನ್ನೇನು ಬೆರಳೆಣಿಕೆಯ ದಿನಗಳು ಮಾತ್ರ.
ವಿಘ್ನವನ್ನು ನಿವಾರಿಸುವ ವಿನಾಯಕನ ಚತುರ್ಥಿಯನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ ಜೊತೆಗೆ ದೇವರನ್ನು ಸಂತೃಪ್ತಿಗೊಳಿಸುವ ಉದ್ದೇಶದಿಂದ ಘಮ ಘಮ ಪರಿಮಳದ ಅಡುಗೆಗಳೂ, ಖಾದ್ಯ, ಸಿಹಿತಿನಿಸುಗಳ ಭರಾಟೆ ಕೂಡ ಜೋರಾಗಿ ನಡೆಯುತ್ತವೆ, ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ವಿಶೇಷ ಮೊಸರು ಅನ್ನ ಪಾಕ ವಿಧಾನವನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ, ಮುಂದೆ ಓದಿ...
*ತಯಾರಿಕೆಗೆ ತಗುಲುವ ಸಮಯ: 5 ನಿಮಿಷ
*ಅಡುಗೆಗೆ ತಗುಲುವ ಸಮಯ: 15 ನಿಮಿಷ
ಬೇಕಾಗುವ ಪದಾರ್ಥಗಳು
*ಮೊಸರು - ½ ಕಪ್
*ಹಾಲು - ½ ಕಪ್
*ಬಾಸುಮತಿ ಅಕ್ಕಿ - 1 1/2 ಕಪ್‍ಗಳು
*ಈರುಳ್ಳಿ (ಕತ್ತರಿಸಿದಂತಹುದು) - 1 ಸಣ್ಣದು
*ಕರಿಬೇವು ಸೊಪ್ಪು - ಒಂದು ಹಿಡಿ
*ಸಾಸಿವೆ - ½ ಟೀ.ಚಮಚ
*ಜೀರಿಗೆ ಬೀಜಗಳು - ½ ಟೀ.ಚಮಚ
*ಕಡಲೆ ಬೇಳೆ / ಉದ್ದಿನ ಬೇಳೆ - ½ ಟೀ.ಚಮಚ
*ಜೀರಿಗೆ ಪುಡಿ - ½ ಟೀ.ಚಮಚ
*ಎಣ್ಣೆ - 1 ಟೀ.ಚಮಚ
*ಕತ್ತರಿಸಿದ ಕೆಂಪು ಒಣ ಮೆಣಸಿನಕಾಯಿ - 2
*ಹಸಿ ಮೆಣಸಿನಕಾಯಿ (ಎರಡು ಭಾಗಗಳಾಗಿ ಕತ್ತರಿಸಿ) - 2
*ಶುಂಠಿ (ಸಣ್ಣಗೆ ಕತ್ತರಿಸಿದಂತಹುದು) - 1 ಟೀ.ಚಮಚ
*ಕೊತ್ತಂಬರಿ ಸೊಪ್ಪು- ಅಲಂಕಾರಕ್ಕೆ
*ದಾಳಿಂಬೆ ಬೀಜ - ಒಂದು ಹಿಡಿ
*ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ
1. ಒಗ್ಗರೆಣ್ಣೆಗೆ: ಒಂದು ದಪ್ಪ ತಳವಿರುವ ಪಾತ್ರೆಯನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಕಾಯಿಸಿ, ಅದರಲ್ಲಿ ಕರಿಬೇವು ಸೊಪ್ಪನ್ನು ಹಾಕಿ. ಇದು ಕರಿಯಲ್ಪಟ್ಟಾಗ, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ. ಇದು ಸೀದು ಹೋಗದಂತೆ ಅಗಾಗ ಅದನ್ನು ತಿರುವಿಕೊಡಿ.
2. ಸಾಸಿವೆ ಬೀಜಗಳನ್ನು, ಕೆಂಪು ಮೆಣಸಿನಕಾಯಿ, ಜೀರಿಗೆ, ಕಡಲೆ ಬೇಳೆ/ಉದ್ದಿನ ಬೇಳೆ, ಶುಂಠಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ, ಒಂದು ನಿಮಿಷ ಉರಿಯಿರಿ. ನಂತರ ಇದಕ್ಕೆ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ.
3. ಕುಕ್ಕರಿನಲ್ಲಿ ಅಕ್ಕಿಯನ್ನು ತೊಳೆದು ಹಾಕಿ, ಚೆನ್ನಾಗಿ ಬೇಯಿಸಿ. ಎರಡು ವಿಷಲ್ ಬರುವವರೆಗೆ ಬಿಡಿ. ಇದು ಹೆಚ್ಚು ಬೇಯದೆ ಇರುವಂತೆ ಜಾಗರೂಕತೆಯನ್ನು ವಹಿಸಿ. ಇದಕ್ಕೆ ಉಪ್ಪನ್ನು ಬೆರೆಸಿ ತಣ್ಣಗಾಗಲು ಬಿಡಿ. ಇದಕ್ಕೆ ಅಗತ್ಯವಾಗಿರುವಷ್ಟು ಹಾಲನ್ನು ಹಾಕಿ, ತುಂಬಾ ನೀರು ನೀರಿನಂತೆ ಆಗಲು ಬಿಡಬೇಡಿ.
4. ಮೊಸರನ್ನು ಕಡೆಯಿರಿ. ಆ ಮೊಸರನ್ನು ಅನ್ನದ ಮೇಲೆ ಹಾಕಿ, ಕಲೆಸಿಕೊಡಿ.
5. ಅನ್ನಕ್ಕೆ ಒಗ್ಗರೆಣ್ಣೆಯನ್ನು ಬೆರೆಸಿ. ಚೆನ್ನಾಗಿ ಮಿಶ್ರಣ ಮಾಡಿ. ಇದರ ಮೇಲೆ ದಾಳಿಂಬೆ ಬೀಜ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ. ಅದರ ಮೇಲೆ ಜೀರಿಗೆ ಪುಡಿಯನ್ನು ಚಿಮುಕಿಸಿ. ಈಗ ನಿಮ್ಮ ಮುಂದೆ ರುಚಿಕರವಾದ ಮೊಸರನ್ನ ತಯಾರಾಗಿರುತ್ತದೆ.



Click it and Unblock the Notifications
