For Quick Alerts
ALLOW NOTIFICATIONS  
For Daily Alerts

ಕೋಸಿನ ಪಲ್ಯ

By Super
|

ಚಪಾತಿಗೆ ಪಲ್ಯ ಹಾಕಿ ರೋಲ್‌ ಮಾಡಿ ಕೊಟ್ಟರೆ ಮಕ್ಕಳು ಇಷ್ಟಪಡುತ್ತಾರೆ. ಬ್ರೆಡ್‌ಗೆ ಪಲ್ಯ ಹಾಕಿ ಟೋಸ್ಟ್‌ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ.

  • ಸುನಂದಾ ಅರುಣ್‌ಕುಮಾರ್‌, ಯುಎಸ್‌ಎ

ಬೇಕಾಗುವ ಪದಾರ್ಥಗಳು :

ಕೋಸು(ಮಧ್ಯಮ ಪ್ರಮಾಣದಲ್ಲಿ ಹೆಚ್ಚಿರುವುದು)
5 ಹಸಿಮೆಣಸಿನಕಾಯಿ(ಹೆಚ್ಚಿದ್ದು)
ಅಡುಗೆ ಎಣ್ಣೆ
ಸಾಸಿವೆ
ಕಡಲೇಬೇಳೆ
ಕರಿಬೇವು
ಅರಿಶಿನ
ಉಪ್ಪು
ಕೋತಂಬರಿ

ಮಾಡುವ ವಿಧಾನ :

ಬಾಣಲೆಗೆ ಪ್ರಮಾಣ ಬದ್ಧವಾಗಿ ಅಡುಗೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದರಲ್ಲಿ ಕಡಲೇಬೇಳೆ, ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಹಾಗೂ ಕೋಸನ್ನು ಹಾಕಿ. ನೀರು ಹಾಕದೆ ಹಾಗೇ ಹುರಿಯುತ್ತಿರಿ. ಅದು ಬೆಂದ ಮೇಲೆ ಅರಿಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್‌ ಮಾಡಿ. ಕೊನೆಗೆ ಕೋತಂಬರಿ ಸೊಪ್ಪು ಹಾಕಿ. ಬೇಕಾದರೆ ಕಾಯಿತುರಿ ಹಾಕಿಕೊಳ್ಳಬಹುದು. ಈಗ ಕೋಸು ಪಲ್ಯ ರೆಡಿ.

  • ಹೀಗೇ ಕ್ಯಾರೆಟ್‌, ಗೆಡ್ಡೆಕೋಸು, ಬೀಟ್‌ರೂಟ್‌, ಸೀಮೆ ಬದನೇಕಾಯಿ ತುರಿದು ಮಾಡಬಹುದು.
  • ಬೀನ್ಸ್‌, ಹೀರೇಕಾಯಿ, ಇವುಗಳನ್ನು ಸಣ್ಣಗೆ ಹೆಚ್ಚಿ ಮಾಡಬೇಕು(ಇದಕ್ಕೆ ಸ್ವಲ್ಪ ನೀರು ಹಾಕಬೇಕು).
  • ಈರುಳ್ಳಿ ಹಾಗೂ ಕಾಯಿತುರಿ ಹಾಕಿದರೆ ತುಂಬಾ ಚೆನ್ನಾಗಿರುತ್ತದೆ.
  • ಚಪಾತಿಗೆ ಪಲ್ಯ ಹಾಕಿ ರೋಲ್‌ ಮಾಡಿ ಕೊಟ್ಟರೆ ಮಕ್ಕಳು ಇಷ್ಟಪಡುತ್ತಾರೆ.
  • ಬ್ರೆಡ್‌ಗೆ ಪಲ್ಯ ಹಾಕಿ ಟೋಸ್ಟ್‌ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ.
X
Desktop Bottom Promotion