For Quick Alerts
ALLOW NOTIFICATIONS  
For Daily Alerts

ನಾಲಿಗೆಯ ರುಚಿತಣಿಸುವ ಹೆಸರುಬೇಳೆ-ಆಲೂಗಡ್ಡೆ ಕರಿ

|

ಬಹುತೇಕ ಮಂದಿಗೆ ಹೆಸರು ಬೇಳೆ ಅಚ್ಚು ಮೆಚ್ಚಿನದಾಗಿರುತ್ತದೆ. ಇಂತಹ ದಾಲ್‌ನಲ್ಲಿ ನಮ್ಮ ಆರೋಗ್ಯವನ್ನು ಸುಧಾರಿಸುವ ಅಧಿಕ ಪ್ರಮಾಣದ ವಿಟಮಿನ್‌ಗಳು ಮತ್ತು ಇನ್ನಿತರ ಪೋಷಕಾಂಶಗಳು ಇರುತ್ತವೆ. ಇಂದು ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಈ ಹೆಸರು ಬೇಳೆಯಲ್ಲಿ ತಯಾರಿಸಲಾಗುವ ಸುಲಭ ರೀತಿಯ ರೆಸಿಪಿಯನ್ನು ನಿಮ್ಮ ಮುಂದೆ ಇಡುತ್ತಿದೆ. ಇದನ್ನು ತಯಾರಿಸಲು ಕೇವಲ 20 ನಿಮಿಷ ಸಾಕು. ಅತ್ಯಂತ ರುಚಿಕರವಾದ ಈ ದಾಲ್ ಕರಿಯನ್ನು ಆಲುಗಡ್ಡೆ ಜೊತೆಗೆ ಮಾಡಿದರೆ ಮತ್ತಷ್ಟು ಪೋಷಕಾಂಶಭರಿತವಾಗುತ್ತದೆ.

ಇದರಲ್ಲಿ ಬಳಸುವ ಮಸಾಲೆ ಪದಾರ್ಥಗಳು ನಿಮ್ಮ ಮಧ್ಯಾಹ್ನದ ಊಟವನ್ನು ಮತ್ತಷ್ಟು ರುಚಿಕರ ಮಾಡುತ್ತವೆ. ಇದರ ಜೊತೆಗೆ ಬಿಳಿ ಅನ್ನಕ್ಕೆ ಹೆಸರು ಬೇಳೆ ಕರ್ರಿಯು ಹೇಳಿ ಮಾಡಿಸಿದ ಕಾಂಬಿನೇಷನ್. ಬಿಸಿ ಬಿಸಿ ಅನ್ನ, ಹಪ್ಪಳ, ಹೆಸರು ಬೇಳೆ ದಾಲ್, ಜೊತೆಗೆ ಒಂದು ಚಮಚ, ತುಪ್ಪ ಮತ್ತು ಮಾವಿನ ಕಾಯಿ ಉಪ್ಪಿನ ಕಾಯಿ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು ಎನ್ನುವಂತಹ ರುಚಿ ವೈಭೋಗವನ್ನು ನಿಮ್ಮ ಮುಂದೆ ಇಡುತ್ತದೆ. ಬಾಯಿಯಲ್ಲಿ ನೀರೂರುತ್ತಿದೆಯೇ, ಬನ್ನಿ ಅದನ್ನು ಹೇಗೆ ಮಾಡುವುದು ಎಂದು ತಿಳಿದುಕೊಂಡು ಬರೋಣ.

Simple Moong dal and Potato Recipe

ಮೂವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 18 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಹೆಸರು ಬೇಳೆ- 1 ಕಪ್ (ಬೇಯಿಸಿದಂತಹುದು)
*ಆಲೂಗಡ್ಡೆ - 2 (ಬೇಯಿಸಿದಂತಹುದು)
*ಟೊಮೇಟೊ - 3 (ಕತ್ತರಿಸಿದಂತಹುದು)
*ಹಸಿ ಮೆಣಸಿನ ಕಾಯಿ - 5 (ಕತ್ತರಿಸಿದಂತಹುದು)
*ಶುಂಠಿ - 1 ತುಂಡು (ಸಣ್ಣ ಸಣ್ಣ ತುಂಡುಗಳು)
*ಕರಿಬೇವು - ಸ್ವಲ್ಪ
*ಕೊತ್ತಂಬರಿ ಸೊಪ್ಪು - ಸ್ವಲ್ಪ
*ರುಚಿಗೆ ತಕ್ಕಷ್ಟು ಉಪ್ಪು
*ನೀರು - 1 ಕಪ್

ಒಗ್ಗರೆಣ್ಣೆಗೆ
*ಸಾಸಿವೆ ಬೀಜಗಳು - 1 ಟೀ.ಚಮಚ
*ಜೀರಿಗೆ - 1 ಟೀ.ಚಮಚ
*ಅರಿಶಿನ - 1/2 ಟೀ.ಚಮಚ
*ಎಣ್ಣೆ/ತುಪ್ಪ - 1/2 ಟೀ.ಚಮಚ

ತಯಾರಿಸುವ ವಿಧಾನ
*ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಜೊತೆಗೆ ಈ ಎಣ್ಣೆ ಕುದಿಯುವವರೆಗೆ ಕಾಯಿರಿ, ಆನಂತರ ಅದಕ್ಕೆ ಒಗ್ಗರೆಣ್ಣೆಗೆ ಬೇಕಾದ ಪದಾರ್ಥಗಳನ್ನು ಅದಕ್ಕೆ ಹಾಕಿ. 2-3 ನಿಮಿಷಗಳ ಕಾಲ ಕೈಯಾಡಿಸಿ.
*ಈಗ ಈ ಬಾಣಲೆಗೆ ಕತ್ತರಿಸಿದ ಟೊಮೇಟೊ, ಕತ್ತರಿಸಿದ ಹಸಿ ಮೆಣಸಿನಕಾಯಿಗಳನ್ನು, ಶುಂಠಿ, ಕೊತ್ತಂಬರಿ, ಕರಿಬೇವು, ಉಪ್ಪನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಉರಿಯಿರಿ.
*ಇನ್ನು ಬಾಣಲೆಗೆ ಈಗ ಬೇಯಿಸಿದ ಆಲೂಗಡ್ಡೆಗಳನ್ನು ಮತ್ತು ಬೇಯಿಸಿದ ಹೆಸರು ಬೇಳೆಯನ್ನು ಹಾಕಿ, ಇವೆರಡನ್ನು 10 ನಿಮಿಷ ಬೇಯಲು ಬಿಡಿ.
*ತದನಂತರ ಸ್ವಲ್ಪ ನೀರನ್ನು ಹಾಕಿ, ಯಾವಾಗೆಲ್ಲ ನೀರು ಕಡಿಮೆ ಎಂದು ನಿಮಗೆ ತೋರುತ್ತದೆಯೋ, ಆಗ ಮಾತ್ರ ಇದನ್ನು ಹಾಕಿ.

ಪೋಷಕಾಂಶದ ಸಲಹೆ
ಹೆಸರು ಬೇಳೆಯು ರಕ್ತದೊತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ, ಇದು ಮಧುಮೇಹಕ್ಕು ಒಳ್ಳೆಯದು ಮತ್ತು ಗರ್ಭಿಣಿ ಸ್ತ್ರೀಯರಿಗೆ ಅಗತ್ಯವಾದ ಕಬ್ಬಿಣಾಂಶ ಇದರಲ್ಲಿ ಇರುತ್ತದೆ.

ಸಲಹೆ
ಬೇಯಿಸುವಾಗ ಅಧಿಕ ಪ್ರಮಾಣದ ನೀರನ್ನು ಹಾಕದಂತೆ ಎಚ್ಚರವಹಿಸಿ. ಹೆಸರು ಬೇಳೆ ಮತ್ತು ಆಲೂಗಡ್ಡೆ ರೆಸಿಪಿ ಸ್ವಲ್ಪ ಗಟ್ಟಿಯಾಗಿದ್ದಷ್ಟು ರುಚಿ ರುಚಿಯಾಗಿರುತ್ತದೆ.

English summary

Simple Moong dal and Potato Recipe

Moong dal is a favourite among many. This type of dal is also rich in many vitamins and other nutrients which is good for health. So, make sure you have a heap of hot white rice and papad on the side. So, what are you waiting for? Take a look at this scrumptious recipe.
Story first published: Friday, April 3, 2015, 19:34 [IST]
X
Desktop Bottom Promotion